ರೈನ್‌ಕೋಟ್‌ ಹೆಚ್ಚಿದ ಬೇಡಿಕೆ

Team Udayavani, Jun 7, 2019, 5:50 AM IST

f-37

ಮಳೆಗಾಲ ಬಂತು. ಇನ್ನೇನಿದ್ದರೂ ರಸ್ತೆಗಳಲ್ಲಿ ಕಲರ್‌ಫ‌ುಲ್‌ ಕೊಡೆ, ರೈನ್‌ಕೋಟ್‌ಗಳದ್ದೇ ಹವಾ. ಎಲ್ಲಿ ನೋಡಿದರೂ ಕಣ್ಣಿಗೆ ಕಾಣುವುದು ಮಳೆಯಿಂದ ರಕ್ಷಿಸುವ ರಕ್ಷಾಕವಚಗಳೇ. ಪ್ರತಿವರ್ಷ ಮಳೆಗಾಲ ಬಂತೆಂದರೆ ಕೊಡೆ, ರೈನ್‌ಕೋಟ್‌ ಖರೀದಿದಾರರ ಸಂಖ್ಯೆ ಏರುತ್ತಲೇ ಹೋಗುತ್ತದೆ. ಇದಕ್ಕೆ ತಕ್ಕಂತೆಹೊಸಹೊಸ ವಿನ್ಯಾಸ, ಜನರನ್ನು ಸೆಳೆಯುವ ಆಕರ್ಷಕ ಕೊಡೆಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ.

ಹೊರಗಡೆ ದೋ ಎಂದು ಸುರಿಯುವ ಮಳೆ. ಅಗತ್ಯದ ಕೆಲಸಕ್ಕಾಗಿ ಮನೆ ಹೊರಗಡೆ ಕಾಲಿಡಬೇಕಾದ ಅನಿವಾರ್ಯ ಪರಿಸ್ಥಿತಿ. ಈ ವೇಳೆ ಎಲ್ಲರಿಗೂ ರಕ್ಷಾಕವಚವಾಗಿ ನಿಲ್ಲುವುದು ಕೊಡೆ ಅಥವಾ ರೈನ್‌ಕೋಟ್‌ಗಳು. ಉಳಿದ ದಿನಗಳಲ್ಲಿ ಮೂಲೆಗುಂಪಾಗುವ ಇವುಗಳು ಮಳೆಗಾಲ ಆರಂಭವಾದ ಕೂಡಲೇ ಹೊರ ಬಂದು ಎಲ್ಲೆಡೆ ರಾರಾಜಿಸುತ್ತದೆ. ಇದರಂತೆ ಪ್ರತಿ ವರ್ಷ ಹೊಸ ಕೊಡೆ, ರೈನ್‌ಕೋಟ್‌ಗಳ ಮೇಲಿನ ಬೇಡಿಕೆ ಕೂಡ ಅಷ್ಟೇ ಹೆಚ್ಚುತ್ತದೆ. ಬಟ್ಟೆ, ಮೊಬೈಲ್‌ ಮೊದಲಾದ ವಸ್ತುಗಳಲ್ಲಿ ಹೊಸತನ ಹುಡುಕುವ ಜನರು ಕೊಡೆ, ರೈನ್‌ಕೋಟ್‌ ವಿಷಯದಲ್ಲೂ ಹೊಸತನ ಬಯಸುತ್ತಾರೆ ಎಂಬುದಕ್ಕೆ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ, ವಿಶಿಷ್ಟ ವಿನ್ಯಾಸ ಕೊಡೆಗಳೇ ಸಾಕ್ಷಿ.

ಮಳೆಗಾಲ ಬಂತೆಂದರೆ ಕೊಡೆ, ರೈನ್‌ಕೋಟ್‌ಗಳ ವ್ಯಾಪಾರ ಬಹು ಜೋರು. ಶಾಲೆಗೆ ಹೊರಟ ಮಕ್ಕಳಿಂದ ಹಿಡಿದು, ವಾಕಿಂಗ್‌ ಹೋಗುವ ಹಿರಿಯರೂ ಹಳೆ ಕೊಡೆಗಳನ್ನು ಬಿಸಾಡಿ ಹೊಸ ಕೊಡೆಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಖರೀದಿದಾರರ ಅಭಿರುಚಿಗೆ ತಕ್ಕಂತೆ ರೈನ್‌ ಕೋಟ್‌, ಕೊಡೆಗಳು ಮಾರುಕಟ್ಟೆಗೆ ಎಂಟ್ರಿಯಾಗುತ್ತವೆ. ಕಿಸೆಯಲ್ಲಿ ಹಿಡಿಯುವಂತಹ ಕೊಡೆ, ಪಾರದರ್ಶಕ ಕೊಡೆ ಹಾಗೂ ರೈನ್‌ಕೋಟ್‌ಗಳಿಗಿಂದು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

ಪಾಕೆಟ್‌ ಅಂಬ್ರಲ್ಲಾ ಲಾಂಗ್‌ ಅಂಬ್ರಲ್ಲಾ ಹವಾ
ಪ್ರಸ್ತುತ ಮಾರುಕಟ್ಟೆಯಲ್ಲಿ ಪಾಕೆಟ್‌ ಅಂಬ್ರಲ್ಲಾ ಹಾಗೂ ಲಾಂಗ್‌ ಅಂಬ್ರಲ್ಲಾ ಹವಾ ಜೋರಾಗಿದೆ. ಪಾಕೆಟ್‌ ಅಂಬ್ರಲ್ಲಾ ಚಿಕ್ಕಗಾತ್ರದಾಗಿದ್ದು, ಕಿಸೆ ಒಳಗೆ ಇಟ್ಟು ಕೊಳ್ಳಬಹುದಾಗಿದೆ ಬ್ಯಾಗ್‌ನಲ್ಲಿ ಇರಿಸಲು ಸುಲಭ ಎಂಬ ಕಾರಣಕ್ಕಾಗಿ ಮಹಿಳೆಯರು ಈ ಕೊಡೆಗಳನ್ನು ಹೆಚ್ಚು ಕೊಂಡುಕೊಳ್ಳುತ್ತಾರೆ. ತ್ರಿ ಪೋಲ್ಡ್‌, ಡಬಲ್‌ ಲೇಯರ್‌ ಕೊಡೆಗಳಿಗೂ ಬೇಡಿಕೆ ಇದೆ.

ಪ್ರಿಂಟ್‌ ಕೊಡೆ
ಕೊಡೆಗಳಲ್ಲಿ ನ್ಯೂಸ್‌ ಪೇಪರ್‌ ಪ್ರಿಂಟ್‌ ಇರುವ, ಬಣ್ಣ ಬಣ್ಣದ ಚಿತ್ರಗಳಿರುವ ಕೊಡೆಗಳನ್ನು ು ಕೇಳುತ್ತಾರೆ. ಕಳೆದ ಬಾರಿ ಬಂದ ವಿನ್ಯಾಸದ ಕೊಡೆಗಳು ಬೇಡ ಈ ಬಾರಿಯ ಲೇಟೆಸ್ಟ್‌ ಕೊಡೆಗಳನ್ನು ತೋರಿಸಿ ಎನ್ನುತ್ತಾರೆ. ಕಪ್ಪು ಬಣ್ಣದ ಕೊಡೆಗಳ ಕಾಲ ಹೋಗಿದೆ. ಈಗ ಬಣ್ಣದ ಕೊಡೆಗಳಿಗೆ ಬೇಡಿಕೆ ಹೆಚ್ಚು . ಅದರಲ್ಲೂ ವಿಭಿನ್ನತೆಯನ್ನು ಬಯಸುವ ಯುವಕರು ರಿವರ್ಸ್‌ ಫೋಲ್ಡಿಂಗ್‌ ಕೊಡೆಗಳನ್ನು ಕೇಳುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ 500ರೂ.ನಿಂದ 2,000ರೂ. ವರೆಗಿನ ವಿವಿಧ ಬ್ರ್ಯಾಂಡ್‌ಗಳ ಕೊಡೆ ಮಾರುಕಟ್ಟೆಯಲ್ಲಿದೆ ಎಂದು ಅಂಗಡಿ ಮಾಲಕರು ಹೇಳುತ್ತಾರೆ.

ರೈನ್‌ ಕೋಟ್‌ಗಳಿಗೆ ಮೊದಲ ಸ್ಥಾನ
ರೈನ್‌ ಕೋಟ್‌ನಲ್ಲಿ ಹಲವಾರು ವಿನ್ಯಾಸಗಳಿರುತ್ತವೆ. ಯುವಕ , ಯುವತಿಯರು ಆಕರ್ಷಕ ವಿನ್ಯಾಸದ ರೈನ್‌ಕೋಟ್‌ಗಳನ್ನು ಖರೀದಿಸಿದರೇ, ಕೆಲಸಕ್ಕೆ ಹೋಗುವ ಪುರುಷರು, ಮಹಿಳೆಯರು ಸಿಂಪಲ್‌ ಆಗಿರುವ ವಿನ್ಯಾಸಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಪುರುಷರು ಹೆಚ್ಚಾಗಿ ಪ್ಯಾಂಟ್‌, ಶರ್ಟ್‌ ಖರೀದಿಸುತ್ತಾರೆ. ಮಕ್ಕಳು, ಮಹಿಳೆಯರು ಉದ್ದನೆಯ ರೈನ್‌ಕೋಟ್‌ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. . ಮಕ್ಕಳ ರೈನ್‌ ಕೋಟ್‌ 400ರೂ. ನಿಂದ 2,000ರೂ., ಮಹಿಳೆಯರ 800ರೂ.ನಿಂದ 3,500ರೂ., ಪುರುಷರ 900ರೂ.ನಿಂದ 4,000ರೂ. ವರೆಗಿನ ಬೆಲೆಯ ರೈನ್‌ಕೋಟ್‌ ಸದ್ಯ ಮಾರುಕಟ್ಟೆಯಲ್ಲಿದೆ.

ಆನ್‌ಲೈನ್‌ಗಳಲ್ಲೂ ಸದ್ದು
ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೆ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ಗಳಲ್ಲೂ ಕೊಡೆ, ರೈನ್‌ಕೋಟ್‌ ಮಾರಾಟಗಳು ಜೋರಾಗಿವೆ. ಒಂದೊಂದು ವೆಬ್‌ಸೈಟ್‌ಗಳಲ್ಲಿ ಆಫರ್‌ಗಳಲ್ಲಿ ಕೊಡೆಗಳು ಲಭ್ಯವಿದೆ. ಮಾರುಕಟ್ಟೆಗಳಿಗೆ ಹೋಗಿ ಖರೀದಿಸಲು ಸಮಯ ಇಲ್ಲದವರು ಆನ್‌ಲೈನ್‌ಗಳಲ್ಲಿ ಆರ್ಡರ್‌ ಮಾಡಿ ಇರುವಲ್ಲಿ ರೈನ್‌ಕೋಟ್‌, ಕೊಡೆಗಳನ್ನು ತರಿಸಿಕೊಳ್ಳುತ್ತಾರೆ.

ಪಾರದರ್ಶಕ ಆಕರ್ಷಕ
ಸಾಮಾನ್ಯವಾಗಿ ಕೊಡೆಗಳು ಕಪ್ಪು ಅಥವಾ ಬಣ್ಣಗಳಿಂದ ಕೂಡಿರುತ್ತವೆ. ಆದರೆ ಇತ್ತೀಚೆಗೆ ಪಾರದರ್ಶಕ ಕೊಡೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿವೆ. ಮಳೆಯ ಅಬ್ಬರ ಈ ಪಾರದರ್ಶಕಗಳಲ್ಲಿ ಸ್ಪಷ್ಟವಾಗಿ ಕಂಡರೆ, ರೈನ್‌ಕೋಟ್‌ಗಳಲ್ಲಿ ಜನರು ತೊಟ್ಟ ಬಟ್ಟೆಗಳು ಎದ್ದು ಕಾಣುತ್ತದೆ. ಇದರೊಂದಿಗೆ ಪಾಕೆಟ್‌ನಲ್ಲಿ ಇಡಬಹುದಾದ ಕೊಡೆಗಳು ಕೂಡ ಇಂದು ಯುವ ಜನತೆಯನ್ನು ಸೆಳೆಯುತ್ತಿವೆ.

-   ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.