ರಾಖಿ ದರ್ಬಾರ್, ಕಟ್ಟುವೆವು ನಾವು ಹೊಸ ರಕ್ಷೆಯೊಂದನು…
Team Udayavani, Aug 24, 2018, 2:30 PM IST
ರಾಖಿ ಕೇವಲ ಒಂದು ದಾರವಷ್ಟೇ ಅಲ್ಲ, ಅದು ಭದ್ರತೆಯ ಸಂಕೇತ, ಪ್ರೀತಿಯ ಪ್ರತೀಕ. ಸಹೋದರನ ಆಯಸ್ಸು, ಆರೋಗ್ಯ, ಸಮೃದ್ಧಿಗಾಗಿ ಆಶಿಸುತ್ತಾ, ಸೋದರಿ ಕಟ್ಟುವ ಆ ದಾರಕ್ಕೆ ವಿಶೇಷ ಮಹತ್ವವಿದೆ. ಕೆಂಪು ನೂಲನ್ನು ಕಟ್ಟುವುದರ ಮೂಲಕ ಆಚರಿಸಲ್ಪಡುತ್ತಿದ್ದ ರಕ್ಷಾ ಬಂಧನ ಹಬ್ಬ ಈಗ ವರ್ಣರಂಜಿತ ರಾಖಿಗಳಿಂದ ರಾರಾಜಿಸುತ್ತಿದೆ. ಸಣ್ಣ ತಮ್ಮನಿಗೆ ಛೋಟಾ ಭೀಮ್ ರಾಖಿ, ಆಫೀಸ್‌ಗೆ ಹೋಗೋ ಅಣ್ಣನಿಗೆ ಸಿಂಪಲ್ ರಾಖಿ, ಹೂವಿನ ರಾಖಿ, ಹೊಳೆಯುವ ರಾಖಿ… ಹೀಗೆ ನೂರಾರು ಬಣ್ಣ, ಡಿಸೈನ್‌ಗಳ ರಾಖೀಗಳು ಲಭ್ಯ ಇವೆ. ಆಗಸ್ಟ್ 26ರ ಈ ರಕ್ಷಾಬಂಧನದ ವೇಳೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಡಿಸೈನ್‌ಗಳು ಇಲ್ಲಿವೆ…
ಮ್ಯೂಸಿಕಲ್ ರಾಖಿ
ಕೈ ಮಣಿಕಟ್ಟನ್ನು ಪೂರ್ತಿಯಾಗಿ ಮುಚ್ಚುವಷ್ಟು ದೊಡ್ಡದಾಗಿರುವ ಈ ರಾಖಿ, ನೋಡಲೂ ಅಷ್ಟೇ ಆಕರ್ಷಕ. ಮುಟ್ಟಿದರೆ ಇಂಪಾದ ಸಂಗೀತ ಹೊರ ಹೊಮ್ಮುವಂಥ ರಚನೆ ಇದೆ.
ಡೈಮಂಡ್ ರಾಖಿ
ವಜ್ರವನ್ನು ಹೋಲುವ ಹರಳುಗಳ ಈ ರಾಖೀ ನೋಡಲು ಸಿಂಪಲ್ ಮತ್ತು ಕ್ಲಾಸಿ ಆಗಿವೆ. ಕೆಂಪು ಬಣ್ಣದ ದಾರದ ಮಧ್ಯದಲ್ಲಿ ಹೊಳೆಯುವ ಹರಳುಗಳನ್ನು ಪೋಣಿಸಿ ಮಾಡಲಾಗಿದೆ.
ಬ್ರೇಸ್ಲೆಟ್ ರಾಖಿ
ಇದು ಟು ಇನ್ ಒನ್ ರಾಖಿ . ಅಂದರೆ, ರಾಖೀಯೂ ಹೌದು, ಬ್ರೇಸ್ಲೆಟ್ ಕೂಡ ಹೌದು. ಸಿಲ್ವರ್ ಕೋಟೆಡ್ ಅಥವಾ ಸಂಪೂರ್ಣ ಬೆಳ್ಳಿಯದ್ದೇ ಆಗಿರುವ ಈ ರಾಖಿಯನ್ನು ರಕ್ಷಾ ಬಂಧನದ ಅನಂತರ ಬ್ರೇಸ್ಲೆಟ್ ಆಗಿಯೂ ಧರಿಸಬಹುದು.
ಗುಲಾಬಿ ಡಿಸೈನ್ ರಾಖಿ
ಗುಲಾಬಿ ಹೂವು ಪ್ರೀತಿಯ ಸಂಕೇತ. ಕೆಂಪು ಗುಲಾಬಿ ಹೂವಿನ ವಿನ್ಯಾಸದ ರಾಖಿಯನ್ನು ಕಟ್ಟಿ ಪ್ರೀತಿ ವ್ಯಕ್ತಪಡಿಸಬಹುದು.
ಹೂವಿನ ಡಿಸೈನ್ ರಾಖಿ
ಇದು ಎಲ್ಲೆಡೆ ಪ್ರಚಲಿತದಲ್ಲಿರುವ ರಾಖಿ. ವಿವಿಧ ಬಗೆಯ ಹೂವಿನ ಆಕಾರ ಹಾಗೂ ಬಣ್ಣದಲ್ಲಿ ಈ ರಾಖೀಗಳು ಲಭ್ಯ. ದಾರದಿಂದಲೇ ಹೂವಿನ ಚಿತ್ತಾರವನ್ನು ನೇಯ್ದು, ನಡುವೆ ಮಣಿಗಳನ್ನು ಪೋಣಿಸಿದ ರಾಖೀಗಳೂ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ.
ಕಮಲದ ರಾಖಿ
ಈ ರಾಖಿಯಲ್ಲಿ, ಕೆಂಪು ದಾರದ ಮಧ್ಯದಲ್ಲಿ, ಬಂಗಾರದ ಬಣ್ಣದ ಕಮಲದ ಡಿಸೈನ್ ಇರುತ್ತದೆ. ಪುರಾಣಗಳಲ್ಲಿ ಕಮಲದ ಹೂವನ್ನು ಶ್ರೇಷ್ಠ ಎಂದು ಪರಿಗಣಿಸುವುದರಿಂದ ಈ ರಾಖಿ ಪವಿತ್ರತೆಯ ಸಂಕೇತವಾಗಿದೆ.
ಸೂಪರ್ ಮ್ಯಾನ್ ರಾಖಿ
ಸೂಪರ್‌ಮ್ಯಾನ್ ನ ಫ್ಯಾನ್ ಆಗಿರೋ ಮುದ್ದು ತಮ್ಮನಿಗೆ ಇಷ್ಟವಾಗುವ ರಾಖಿ ಇದು. ದಾರದ ಮಧ್ಯದಲ್ಲಿ ಬೇರೆ ಬೇರೆ ಡಿಸೈನ್‌ಗಳಿರುವಂತೆ ಇದರಲ್ಲಿ ಸೂಪರ್ ಮ್ಯಾನ್ ನ ಸಂಕೇತವಾದ ಎಸ್ ಆಕೃತಿ ಇದೆ.
ನವಿಲಿನ ರಾಖಿ
ನವಿಲಿನ ಡಿಸೈನ್‌ನ ಮೆಹೆಂದಿ, ಕಿವಿಯೋಲೆ, ಸೀರೆ, ಟ್ಯಾಟೂ… ಹೀಗೆ ಫ್ಯಾಷನ್ ಜಗತ್ತಿನ ಫೇವರಿಟ್ ಪಕ್ಷಿ ನವಿಲು. ಈಗ ನವಿಲಿನ ಡಿಸೈನ್‌ನ ರಾಖೀಗಳೂ ಲಭ್ಯ. ಕಣ್ಸೆಳೆಯುವ ಬಣ್ಣದ ಈ ರಾಖೀ ತನ್ನದೇ ಟ್ರೆಂಡ್ ಅನ್ನೂ ಸೃಷ್ಟಿಸಿದೆ.
ಚಂದನ್ ರಾಖೀ/ ಸ್ಯಾಂಡಲ್ ವುಡ್ ರಾಖಿ
ಕೆಂಪು ದಾರದ ಮಧ್ಯದಲ್ಲಿ ಶ್ರೀಗಂಧದ ಮಣಿಗಳನ್ನು ಪೋಣಿಸಿರುವ ಈ ರಾಖಿಗಳು ಸದ್ಯ ಅತಿಹೆಚ್ಚು ಬೇಡಿಕೆಯಲ್ಲಿವೆ. ಗಂಧದ ತುಣುಕುಗಳನ್ನು ಬೇರೆ ಬೇರೆ ವಿನ್ಯಾಸದಲ್ಲಿ ಕೂಡ ಬಳಸಲಾಗುತ್ತದೆ. ಗಂಧದ ಓಂ, ಸ್ವಸ್ತಿಕ್ ಹಾಗೂ ದೇವರ ಚಿತ್ರವಿರುವ ರಾಖಿಗಳು ಕೂಡ ಲಭ್ಯ.
ಗೊಂಬೆ ಚಿತ್ರದ ರಾಖಿ
ಇದು ತಮ್ಮಂದಿರಿಗೆ ಕಟ್ಟುವ ರಾಖೀ. ಛೋಟಾ ಭೀಮ…, ಬಾಲ ಹನುಮಾನ್, ಬಾಲ ಗಣೇಶ, ಮಿಕ್ಕಿ ಮೌಸ್… ಹೀಗೆ ಪುಟಾಣಿಗಳಿಗೆ ಇಷ್ಟವಾಗುವ ಕಾರ್ಟೂನ್ ಪಾತ್ರಗಳ ಡಿಸೈನ್ ಇರುವ ರಾಖಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.