ಇತಿಹಾಸವನ್ನು ಸಾರುವ ರಾಮದುರ್ಗ ಶ್ರೀ ವೆಂಕಟೇಶ್ವರ
Team Udayavani, Apr 25, 2019, 5:31 AM IST
ಬೆಳಗಾವಿ ಜಿಲ್ಲೆಯಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ. ತಾಲೂಕು ಕೇಂದ್ರವಾದ ರಾಮದುರ್ಗದಲ್ಲೂ ಅಂಥದೊಂದು ಸ್ಥಳವಿದೆ. ಅದೇ ಮಲಪ್ರಭಾ ನದಿಯ ದಡದಲ್ಲಿರುವ ರಾಮದುರ್ಗಕ್ಕೆ ಕಳಸಪ್ರಾಯವಾದ ಪುರಾತನ ವೆಂಕಟೇಶ್ವರ ದೇವಾಲಯ. ನರಗುಂದ ಮತ್ತು ರಾಮದುರ್ಗ ಸಂಸ್ಥಾನಗಳ ಆಡಳಿತ 1,742ರಲ್ಲಿ ವಿಭಜನೆಯಾಯಿತು. ಅನಂತರ ಕೊನೆಯ ಅರಸರಾದ ರಾಜಾ ರಾಮರಾವ್ ವೆಂಕಟರಾವ್ ಭಾವೆಯವರು ಈ ದೇವಾಲಯ ನಿರ್ಮಿಸಿದರು.
ಆಕರ್ಷಿಣೀಯ ಕಂಬಗಳು
ದೇವಸ್ಥಾನದ ಒಳಭಾಗವು 28 ಕಂಬಗಳನ್ನು ಹೊಂದಿದ ಬೃಹತ್‌ಪ್ರಾಂಗಣವಾಗಿದೆ. ಇದರ ಸುತ್ತಲೂ ಇರುವ ಕಂಬಗಳು ಆಕರ್ಷಣಿಯವಾಗಿವೆ. ಗರ್ಭಗುಡಿಯ ಹೊರಗಡೆಯಲ್ಲಿರುವ ನವರಂಗವು 12 ಕಂಬಗಳ ಪ್ರಾಂಗಣವನ್ನು ಹೊಂದಿದೆ. ಇದರ ಜತೆಗೆ ದತ್ತಾತ್ರೇಯ, ಹನುಮಂತ ಹಾಗೂ ಪಾಂಡುರಂಗ ವಿಟuಲ ದೇವರ ಮೂರ್ತಿಗಳನ್ನೂ ಕಾಣಬಹುದು.
ಈ ಪ್ರಾಂಗಣದಲ್ಲಿ ದಕ್ಷಿಣ, ಉತ್ತರ ಹಾಗೂ ಪಶ್ಚಿಮ ದಿಕ್ಕಿಗೆ ಚಿಕ್ಕ ಬಾಗಿಲುಗಳಿವೆ. ಗರ್ಭಗುಡಿಯಲ್ಲಿರುವ ರಾಮನ ಆಕರ್ಷಕ ವಿಗ್ರಹವು ನಾಲ್ಕು ಕೈಗಳಿಂದ ಕೂಡಿದ್ದು ಶಂಖ, ಚಕ್ರ, ಬಿಲ್ಲು ಬಾಣಗಳನ್ನು ಹೊಂದಿವೆ. ಬಲಗಡೆಗೆ ಕಾಶಿಯಿಂದ ತಂದ ಸಾಲಿಗ್ರಾಮಗಳ ಹಾಗೂ ಮುಂದುಗಡೆಗೆ ಕೃಷ್ಣನ ಮೂರು ವಿಗ್ರಹಗಳು, ಲಕ್ಷ್ಮೀ ವೆಂಕಟೇಶ್ವರ, ವಿಷ್ಣು ಮತ್ತು ಸತ್ಯನಾರಾಯಣ ದೇವರ ಚಿಕ್ಕ ವಿಗ್ರಹಗಳನ್ನು ಕಾಣಬಹುದು. ಗರ್ಭಗುಡಿಯು ಬೃಹತ್‌ಗೊàಪುರವನ್ನು ಹೊಂದಿದೆ. ವೈಕುಂಠ ಏಕಾದಶಿಯಂದು ಇಲ್ಲಿ ವಿಜೃಂಭಣೆಯಿಂದ ಪೂಜೆ ನೆರವೇರುತ್ತದೆ. ಸುತ್ತಮುತ್ತಲ ಗ್ರಾಮಗಳಿಂದ ಬಾಲಾಜಿಯ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಾರೆ.
ರೂಟ್ ಮ್ಯಾಪ್
· ಮಂಗಳೂರಿನಿಂದ ರಾಮದುರ್ಗಕ್ಕೆ 453 ಕಿ.ಮೀ. ದೂರ.
· ರಾಮದುರ್ಗದಿಂದ ದೇವಸ್ಥಾನವೂ ಹತ್ತಿರದಲ್ಲಿದ್ದು ಆಟೋ, ಬಸ್‌ನ ಸೌಲಭ್ಯವಿದೆ.
· ದೇವಸ್ಥಾನದಲ್ಲಿ ಬೆಳಗ್ಗೆ 6 ರಿಂದ 8 ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ.
· ರಾಮದುರ್ಗವೂ ತಾಲೂಕು ಕೇಂದ್ರವಾಗಿರುವುದರಿಂದಾಗಿ ಪೆಟ್ರೋಲ್ ಬಂಕ್, ಊಟ, ವಸತಿಗೆ ಸಮಸ್ಯೆಯಿಲ್ಲ.
– ಸುರೇಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.