ಖರ್ಚು ಕಡಿಮೆ ಮಾಡಿ ಇಲ್ಲವೇ ಆದಾಯ ಹೆಚ್ಚಿಸಿಕೊಳ್ಳಿ
Team Udayavani, Aug 13, 2018, 3:01 PM IST
ನಮ್ಮ ಆಸೆಗಳಿಗೆ ಮಿತಿ ಇಲ್ಲ. ಆದಾಯದ ಹಂಗೂ ಇಲ್ಲ. ಆದರೆ ಅವುಗಳ ಪೂರೈಕೆಗೆ ಮಾತ್ರ ಆದಾಯವೇ ಮೂಲ. ಈ ಅಪರಿಮಿತ ಆಸೆಗಳಿಂದಲೇ ಕೆಲವೊಮ್ಮೆ ನಮ್ಮ ಆದಾಯಕ್ಕಿಂತ ನಮ್ಮ ಖರ್ಚಿನ ಪಟ್ಟಿ ಹೆಚ್ಚಾಗಿರುತ್ತದೆ.
ಹೀಗಾದಾಗ ಆರ್ಥಿಕ ಅಸಮತೋಲನ ಸಾಧಿಸುವುದು ಅಸಾಧ್ಯ. ಖರ್ಚುವೆಚ್ಚಗಳ ಸರಿಯಾದ ನಿರ್ವಹಣೆಯೊಂದಿಗೆ ನಿಗದಿತ ಆದಾಯವಿದ್ದಲ್ಲಿ ಆರ್ಥಿಕ ಸಮತೋಲನ ಸಾಧಿಸುವುದು ಅಷ್ಟೇನೂ ಕಷ್ಟವಲ್ಲ. ಇರುವ ಆದಾಯದಲ್ಲೇ
ಕೊಂಚ ಹಣವನ್ನಾದರೂ ಹೇಗೆ ಉಳಿಸಬಹುದು ಎನ್ನುವುದಕ್ಕೆ ಕೆಲವು ಸಲಹೆಗಳು ಇಲ್ಲಿವೆ.
ವೆಚ್ಚದ ಪರಿಶೀಲನೆ ನಡೆಸಿ
ನಿಮ್ಮ ತಿಂಗಳ ಬಜೆಟ್ ತಯಾರಿಗೂ ಮುನ್ನ ನಿಮ್ಮ ಹಣವೆಲ್ಲ ಇಲ್ಲಿಯ ತನಕ ಯಾವುದಕ್ಕೆ ವಿನಿಯೋಗವಾಗುತ್ತಿತ್ತು ಎನ್ನುವುದನ್ನು ಮೊದಲು ಗಮನಿಸಿ. ಕನಿಷ್ಠ ಆರು ವಾರಗಳ ಖರ್ಚುವೆಚ್ಚಗಳನ್ನಾದರೂ ಪರಿಶೀಲಿಸಿಯೇ ನಿಮ್ಮ ಮುಂದಿನ ಬಜೆಟ್ ನಿರ್ಣಯವಾಗಬೇಕು. ನೀವು ವೆಚ್ಚ ಮಾಡಿದ ಅಥವಾ ವಸ್ತುಗಳನ್ನು ಕೊಂಡುಕೊಂಡಿರುವ ಬಿಲ್‌ಗಳನ್ನು ಆದಷ್ಟು ಶೇಖರಿಸಲು ನೋಡಿ. ಇವೆಲ್ಲವೂ ನಿಮ್ಮ ಆದಾಯ ಮತ್ತು ಖರ್ಚಿನ ನಿಖರ ಮಾಹಿತಿ ನೀಡಲು ಸಹಕಾರಿಯಾಗುತ್ತವೆ.
ಬಜೆಟ್ ಸಿದ್ಧಪಡಿಸಿ
ಒಮ್ಮೆ ನಿಮ್ಮ ಖರ್ಚಿನ ಲೆಕ್ಕ ಸಿಕ್ಕಿದ್ದೇ ಆದಲ್ಲಿ ನಿಮ್ಮ ಬಜೆಟ್ ತಯಾರಿ ಸ್ವಲ್ಪ ಸುಲಭವಾಗಿರುತ್ತದೆ. ಕುಟುಂಬದ ಪ್ರತೀ ಸದಸ್ಯರ ಖರ್ಚು ವೆಚ್ಚಗಳು ನಿಮ್ಮ ಬಜೆಟ್‌ನಲ್ಲಿರಲಿ. ಏಕೆಂದರೆ ಸಾಮಾನ್ಯವಾಗಿ ಕುಟುಂಬದ ಮುಖ್ಯಸ್ಥರ ಆದಾಯದ ಆಧಾರದಲ್ಲಿಯೇ ಇತರ ಸದಸ್ಯರ ಖರ್ಚು ವೆಚ್ಚಗಳಿರುತ್ತವೆ. ಆ ಕಾರಣ ಬೆಜೆಟ್ ನಿರ್ವಹಣೆ ಕುಟುಂಬದ ಪ್ರತೀ ಸದಸ್ಯರ ಜವಬ್ದಾರಿ.
ಹಣ ಹೊಂದಿಸಿಕೊಳ್ಳಿ
ಒಂದು ವೇಳೆ ನಿಮ್ಮ ಬಜೆಟ್ ನಿಮ್ಮ ಆದಾಯಕ್ಕಿಂತ ಹೆಚ್ಚಿದ್ದಲ್ಲೇ ಆದಲ್ಲಿ ಕೆಲವು ಸುಧಾರಣೆಗಳನ್ನು ನೀವು ಮಾಡಿಕೊಳ್ಳಲೇಬೇಕಾಗುತ್ತದೆ. ಏಕೆಂದರೆ ಆಗ ನಮಗಿರುವ ಆಯ್ಕೆಗಳು ಎರಡೇ. ಒಂದೋ ಆದಾಯ ಹೆಚ್ಚಿಸಿಕೊಳ್ಳಬೇಕು ಇಲ್ಲವೇ ಖರ್ಚನ್ನು ಕಡಿತಗೊಳಿಸಬೇಕು.
ಬಜೆಟ್ ಹೀಗಿರಲಿ
ಸಾಮಾನ್ಯವಾಗಿ ನಾವು ಒಂದು ನಿರ್ದಿಷ್ಟ ಕಾರಣಕ್ಕೆ ವಿನಿಯೋಗಿಸುವ ಹಣ ನಮ್ಮ ಬಜೆಟ್‌ನಲ್ಲಿ ಕೊಂಚ ಕಡಿಮೆಯೇ ಇದ್ದರೆ ಕೊನೆಗೆ ಅದು ಪ್ರಸ್ತುತ ಇರುವ ಖರ್ಚಿನಷ್ಟಕ್ಕಾದರೂ ನಿಲ್ಲುತ್ತದೆ. ಇಲ್ಲಿದಿದ್ದಲ್ಲಿ ಮುಂದಿನ ಬಾರಿ ಅದು ನಮ್ಮ ಬಜೆಟ್ ಅನ್ನೂ ಮೀರಬಹುದು. ಉದಾಹರಣೆಗೆ ಟೆಲಿಫೋನ್ ಅಥವಾ ಮೊಬೈಲ್ ಗೆಂದು ನಾವು ವಿನಿಯೋಗಿಸುವ ಹಣ ತಿಂಗಳಿಗೆ 300 ರೂ. ಇದ್ದರೆ. ನಮ್ಮ ಬಜೆಟ್‌ನಲ್ಲಿ ಅದು 250 ರೂ. ಗೆ ಇರಲಿ. ಆಗ ಕನಿಷ್ಠ 300 ರೂ. ಗಳಿಗಾದರೂ ನಾವು ನಮ್ಮ ವೆಚ್ಚವನ್ನು ನಿಲ್ಲಿಸಬಹುದು.
ಪ್ರಸನ್ನ ಹೆಗಡೆ ಊರಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.