ಉತ್ತಮ ಬಾಂಧವ್ಯದಿಂದ ಬದುಕಿನಲ್ಲಿ ನೆಮ್ಮದಿ


Team Udayavani, Oct 29, 2018, 1:56 PM IST

29-october-11.gif

ಬದುಕಿನಲ್ಲಿ ನೆಮ್ಮದಿಗಾಗಿ ಸಾಮಾಜಿಕ ಹಾಗೂ ಕೌಟುಂಬಿಕವಾಗಿ ಉತ್ತಮ ಬಾಂಧವ್ಯ ಅಗತ್ಯ. ನೆಮ್ಮದಿ ಇದ್ದರೆ ಮನಸ್ಸು ಉಲ್ಲಾಸದಿಂದ್ದು, ಯೋಜಿತ ಕೆಲಸ- ಕಾರ್ಯಗಳೆಲ್ಲ ಸರಾಗವಾಗಿ ನಡೆಯುತ್ತದೆ ಮಾತ್ರವಲ್ಲ ಜೀವನದಲ್ಲಿ ಯಶಸ್ಸು ಸಾಧಿಸಲು ಇದು ಪ್ರೇರಣೆಯಾಗುವುದು. ಪರಸ್ಪರ ಗೌರವ, ಪ್ರಾಮಾಣಿಕತೆ, ಬೆಂಬಲ, ಒಬ್ಬರನ್ನೊಬ್ಬರು ಗುರುತಿಸಿಕೊಳ್ಳುವಿಕೆ, ಒಳ್ಳೆಯ ಸಂವಹನ, ಪ್ರೀತಿ, ಹೊಂದಾಣಿಕೆ ಇವೇ ಮೊದಲಾದ ಮೌಲ್ಯಗಳನ್ನು ವ್ಯಕ್ತಿಗತವಾಗಿ ಅಳವಡಿಸಿಕೊಳ್ಳುವುದರಿಂದ ಬಾಂಧವ್ಯ ವೃದ್ಧಿಸುವುದು. ಕರುಣೆ ಮತ್ತು ಕ್ಷಮಿಸುವ ಗುಣವನ್ನು ಬೆಳೆಸಿಕೊಳ್ಳುವುದು. ಮನಸ್ಸನ್ನು ಸ್ವನಿಯಂತ್ರಣದಲ್ಲಿಟ್ಟು ಕೊಳ್ಳುವುದು ಬಾಂಧವ್ಯ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಶಾಂತ ಚಿತ್ತರಾಗಿ
ಇಂದಿನ ಆಧುನಿಕ ಯುಗದಲ್ಲಿ ಹೆಚ್ಚಿನ ಮಂದಿ ಹಣ ಗಳಿಸುವ ಆಸೆಯಿಂದಾಗಿ ನೆಮ್ಮದಿ ಕಳೆದುಕೊಂಡು ಒತ್ತಡದಿಂದ ಬದುಕು ಸಾಗಿಸುತ್ತಿದ್ದಾರೆ. ಇದರಿಂದ ದ್ವೇಷ, ಅಸೂಯೆ, ಕಚ್ಚಾಟಗಳು ಹೆಚ್ಚಾಗಿವೆ. ಮಾನವೀಯ ಸಂಬಂಧಗಳು ಮರೆಯಾಗುತ್ತಿವೆ. ಕುಟುಂಬಗಳಲ್ಲೂ ಪ್ರೀತಿ, ಸಹಬಾಳ್ವೆ, ಸಾಮರಸ್ಯ, ಪರ ಸ್ಪರ ನಂಬಿಕೆ ಇಲ್ಲವಾಗಿವೆ. ಹೀಗಾಗಿ ಪ್ರತಿ ಮನೆ ಗಳಲ್ಲೂ ಜಗಳ ಸಾಮಾನ್ಯವಾಗಿ ಬಿಟ್ಟಿವೆ. ಸಮಸ್ಯೆ ಇಲ್ಲದೆ ಬದುಕನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ. ವೈಯಕ್ತಿಕ ಅಥವಾ ಔದ್ಯೋಗಿಕರಂಗ ಇರಬಹುದು. ಸಮಸ್ಯೆ ತಪ್ಪಿದಲ್ಲ. ಆದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇದೆ ಎಂಬ ಸತ್ಯವನ್ನು ನಾವು ತಿಳಿದಿರಬೇಕು. ಹಾಗೇ ಶಾಂತ ಚಿತ್ತದಿಂದ ಅವುಗಳನ್ನು ಪರಿಹರಿಸುವತ್ತ ಚಿಂತನೆ ನಡೆಸಬೇಕು.

ಆಧುನಿಕ ಜಗತ್ತಿನಲ್ಲಿ ಎಲ್ಲವೂ ಕ್ಷಣಕ್ಷಣಕ್ಕೂ ಬದಲಾವಣೆಯಾಗುತ್ತಿರುತ್ತವೆ. ಹಾಗಾಗಿ ಯಾರಿಗೂ  ನೆಮ್ಮದಿ ಎಂಬುದು ಸುಲಭದಲ್ಲಿ ಲಭಿಸುವುದಿಲ್ಲ. ವಿಶ್ವದ ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗದಷ್ಟು ಮಂದಿ ಇಂದು ನೆಮ್ಮದಿಯಿಲ್ಲದೆ ಒದ್ದಾಡುತ್ತಿದ್ದಾರೆ. ಮನುಷ್ಯ ತನಗೆ ಸಂಬಂಧಿಸಿದ ವಸ್ತು, ಸಂಬಂಧ, ಉದ್ಯೋಗಗಳನ್ನು ಬದಲಿಸಿಕೊಳ್ಳಲು ಬಯಸುತ್ತಾನೆ. ಆದರೆ ತನ್ನ ಮನಃಸ್ಥಿತಿಯನ್ನು ಬದಲಿಸಿಕೊಳ್ಳುವುದಿಲ್ಲ. ಹಾಗಾಗಿಯೇ ಬದುಕಿನಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ.

ಶಿಸ್ತು, ನಿಯಮ ಪಾಲಿಸಿ
ನೀತಿ, ನಿಯಮ, ಶಿಸ್ತು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಧೃತಿಗೆಡದೆ ದೃಢವಾಗಿದ್ದು, ಸಮಸ್ಯೆ ಬಗ್ಗೆ ಚೆನ್ನಾಗಿ ಅರಿತು ಸಮಾಧಾನಕರವಾಗಿ, ಶಾಂತಿಯುತವಾಗಿ ಅದನ್ನು ಪರಿಹರಿಸಿಕೊಳ್ಳಬಹುದು. ಹಾಗೆ ಅತಿಯಾದ ಆಸೆ, ಕ್ರೌಯ, ದುಷ್ಟ ಮನಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯ. ಹಾಗಾದಲ್ಲಿ ನೆಮ್ಮದಿ ಎಂಬುದು ತನ್ನಿಂದತಾನಾಗಿಯೇ ಲಭಿಸುತ್ತದೆ.

ಅತ್ಯಾವಶ್ಯಕ ಅಂಶಗಳು
ಸಂತೋಷ, ನೆಮ್ಮದಿ, ತೃಪ್ತಿ, ಸಮಾಧಾನಗಳು ಮನುಷ್ಯ ಜೀವನದಲ್ಲಿರಬೇಕಾದ ಅತ್ಯಾವಶ್ಯಕ ಅಂಶಗಳು. ಸಂಪೂರ್ಣವಾಗಿ ತೃಪ್ತಿ, ನೆಮ್ಮದಿಯ ಬದುಕು ಸಾಧ್ಯವಿಲ್ಲವಾದರೂ ಇರುವುದರಲ್ಲಿ ಸ್ವಲ್ಪ ಸಮಾಧಾನ ಪಟ್ಟುಕೊಳ್ಳುವ ಗುಣ ಬೆಳೆಸಿಕೊಳ್ಳುವುದು ಅಗತ್ಯ.

ಬದುಕು ಎಂಬುದು ಕ್ಷಣಿಕ ಎಂಬಂತೆ ಬದುಕಬೇಕು. ಇಲ್ಲಿ ಹಣ, ಐಶ್ವರ್ಯಕ್ಕಿಂತ ಮುಖ್ಯವಾದದ್ದು ಮಾನವೀಯತೆ. ಇದರಿಂದ ಜನರ ಪ್ರೀತಿಯ ಜತೆಗೆ ಸಾಕಷ್ಟು ಮಂದಿಯ ಆಶೀರ್ವಾದವನ್ನು ಪಡೆಯಲು ಸಾಧ್ಯವಿದೆ. ಕೈತುಂಬಾ ಸಂಬಳ ಇದ್ದರೂ ಎಷ್ಟೇ ಸಾಧನೆಗೈದರೂ ಮನಸ್ಸಿನಲ್ಲಿ ಮರೆಯಲಾಗದ ದುಃಖ ಇದ್ದರೆ, ಸಮಾಧಾನ, ತೃಪ್ತಿ, ಸಂತೋಷ, ನೆಮ್ಮದಿ ಇರುವುದಿಲ್ಲ. ಎಲ್ಲರೂ ಕೂಡಿ ಬಾಳುವ, ಸಂತೋಷವನ್ನು ಅನುಭವಿಸುವ ಅವ್ಯಕ್ತ ಭಾವವನ್ನು ಅಳವಡಿಕೊಳ್ಳುವುದರಿಂದ ಅವು ನಮ್ಮನ್ನು ನಿರಂತರ ಹಸನ್ಮುಖೀಗಳನ್ನಾಗಿಸುತ್ತದೆ ಹಾಗೂ ನೆಮ್ಮದಿಯನ್ನು ಒದಗಿಸುತ್ತದೆ.

ದುರಾಸೆ ನೆಮ್ಮದಿಯ ಶತ್ರು
ದುರಾಸೆ ನೆಮ್ಮದಿಯ ಬಹುದೊಡ್ಡ ಶತ್ರು. ಅದನ್ನು ಅಷ್ಟು ಸುಲಭವಾಗಿ ಹತ್ತಿಕ್ಕಿಕೊಳ್ಳುವುದು ಸಾಧ್ಯವಿಲ್ಲ. ಇದಕ್ಕಾಗಿಯೇ ಕವಿ ಅಡಿಗರು ‘ಇದ್ದುದನ್ನು ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ’ ಎಂದಿದ್ದಾರೆ. ದುರಾಸೆ ತುಂಬಿಕೊಂಡಿರುವ ಮನಸ್ಸು ಬಂಜರು ಭೂಮಿ ಇದ್ದಂತೆ; ಅಲ್ಲಿ ನೆಮ್ಮದಿಯ ಹಸುರು ಬೆಳೆಯುವುದಿಲ್ಲ. ಮನುಷ್ಯ ಯಾವುದೇ ಸಂಶೋಧನೆ ನಡೆಸಿ ಅತ್ಯಾಧುನಿಕ ಸೌಲಭ್ಯಗಳನ್ನು ಕಂಡು ಹಿಡಿದರೂ ಅವುಗಳು ಆತನಿಗೆ ಕೆಲವು ದಿನಗಳ ಕಾಲ ನೆಮ್ಮದಿಯನ್ನು ನೀಡಬಲ್ಲವು. ಬಳಿಕ ಆತನಿಗೆ ಇದಕ್ಕಿಂತಲೂ ಮಿಗಿಲಾದದು ಬೇಕೆನಿಸುತ್ತದೆ. ಕೋಟಿ ಗಟ್ಟಲೆ ಹಣವಿದ್ದರೂ ಇನ್ನೂ ಬೇಕು ಎನ್ನುವ ಮನುಷ್ಯನ ದುರಾಸೆಯ ಭಾವದಿಂದ ಇಂದು ಆತ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಆದ್ದರಿಂದ ಕಷ್ಟ – ಸುಖ ಏನೇ ಬರಲಿ ನೆಮ್ಮದಿಯಿಂದ ಬದುಕುವಂತಾಗಬೇಕು.

 ಗಣೇಶ ಕುಳಮರ್ವ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.