ಅರಿವಿನ ಮರೆವಿಗೆ ಯೋಗದಲ್ಲಿ ಗುಳಿಗೆ
ಪುಸ್ತಕದಿಂದ ಮಸ್ತಕಕ್ಕೆ ಯೋಗದಲ್ಲಿ ಪರಿಹಾರ
Team Udayavani, Mar 10, 2020, 5:32 AM IST
ಇದು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಕಾಲ. ಪರೀಕ್ಷೆ ಸಂದರ್ಭ ಸಹಜವಾಗಿ ನಿದ್ರೆ, ಶಕ್ತಿಯ ನಷ್ಟ, ಏಕಾಗ್ರತೆಯ ಕೊರತೆ, ಒತ್ತಡ, ಭಯ ಮೊದಲಾದವುಳಿಗೆ ಕಾರಣವಾಗುತ್ತದೆ. ಅದೂ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಅಂಕಗಳಿಸುವ ವಿದ್ಯಾರ್ಥಿಗಳು ಮಾತ್ರ ಉನ್ನತ ವ್ಯಾಸಾಂಗಕ್ಕೆ ಬೇಡಿಕೆ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳು ಜೋರಾಗಿಯೇ ನಡೆಯುತ್ತದೆ.
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಿದ್ದನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಪರೀಕ್ಷಾ ಮುನ್ನಾದಿನ ಓದಿರುವ ಅಷ್ಟೂ ವಿಷಯಗಳು ಪರೀಕ್ಷೆ ಕೊಠಡಿಗೆ ತೆರಳಿದಾಗ ಮರೆತು ಬಿಡುತ್ತದೆ.ಈ ಮಧ್ಯೆ ಕೆಲವರಿಗೆ ಪಾಯಿಂಟ್ಸ್‌ಗಳು ಮರೆತು ಹೋಗುವುದು ಸಾಮಾನ್ಯ. ಈ ಮರೆಯವನ್ನು ನೀಗಿಸಲು ಮತ್ತು ಉಲ್ಲಾಸ ಭರಿತ ಓದಿಗಾಗಿ ಯೋಗದಲ್ಲಿ ಪರಿಹಾರ ಇದೆ.
ಅಧ್ಯಯನ ಅಷ್ಟೂ ವಿಷಯಗಳನ್ನು ನೆನಪಿನಲ್ಲಿಡಲು ಯೋಗ, ಧ್ಯಾನ, ಮುದ್ರೆಗಳು ಸಹಕಾರಿಯಾಗಿದೆ. ಮುದ್ರಾಥೆರಪಿ ಎನ್ನುವುದು ಮತ್ತೂಂದು ಅನೌಷಧೀಯ ಚಿಕಿತ್ಸೆಯಾಗಿದೆ. ಯಾವುದೇ ತೊಂದರೆಯಿಲ್ಲದೆ ಸಹಾಯಮಾಡುತ್ತದೆ. ಕೈ ಬೆರಳುಗಳನ್ನು ವ್ಯವಸ್ಥಿತ ಭಂಗಿಯಲ್ಲಿ ಜೋಡಿಸುವ ಕ್ರಿಯೆಯೇ “ಮುದ್ರೆ’ಯಾಗಿದೆ.
ಕೈಯಲ್ಲಿನ ಐದು ಬೆರಳುಗಳು ಪಂಚಭೂತ ಗಳನ್ನು ಪ್ರತಿನಿಧಿಸುತ್ತವೆ. ಪ್ರತಿಯೊಂದು ಬೆರಳು ತನ್ನದೇ ಆದ ಶಕ್ತಿ ಚೈತನ್ಯವನ್ನು ಹೊಂದಿದೆ. ಎಲ್ಲಾ ಬೆರಳುಗಳೂ ಚೇತನದಾಯಕವಾಗಿದ್ದು, ಅವು ದೇಹಕ್ಕೆ ಚೈತನ್ಯವನ್ನು ತುಂಬುತ್ತವೆ. ಹೆಬ್ಬೆರಳು ಅಗ್ನಿ ತಣ್ತೀ, ತೋರು ಬೆರಳು ವಾಯು, ಮಧ್ಯದ ಬೆರಳು ಆಕಾಶ, ಉಂಗುರದ ಬೆರಳು ಪೃಥ್ವಿ, ಕಿರುಬೆರಳು ವರುಣನನ್ನು ಪ್ರತಿನಿಧಿಸುತ್ತವೆ. ಪಂಚಭೂತಗಳನ್ನು ಪ್ರತಿನಿಧಿಸುವ ಹೆಬ್ಬೆರಳಿನ ತುದಿಯನ್ನು ಆಯಾ ಬೆರಳುಗಳ ತುದಿಗೆ ಸ್ಪರ್ಶಿಸಿದಾಗ ಪಂಚತತ್ವಗಳು ಸಮತೋಲನ ಸ್ಥಿತಿಗೆ ಬರುತ್ತವೆ. ಅದ್ಭುತ ಪರಿಣಾಮ ಬೀರುವ ಮುದ್ರೆಗಳನ್ನು ದಿನ ನಿತ್ಯದ ಜೀವನದಲ್ಲಿ ಮಾಡುತ್ತ ಬಂದಲ್ಲಿ ಸುದೃಢವಾಗಿ ಆರೋಗ್ಯಕರವಾಗಿ ಬಾಳಬಹುದು.
ಆದಷ್ಟು ಬೆಳಗ್ಗೆ ಓದಿ
ಪರೀಕ್ಷಾ ಸಂದರ್ಭ ಮಕ್ಕಳು ಬೆಳಗ್ಗೆ ಓದುವುದು ಸೂಕ್ತ. ಬೆಳಗ್ಗೆ 5ರಿಂದ 7ರ ತನಕ ಓದುವ ಸಮಯ ಉತ್ತಮ. ಸಾಮಾನ್ಯವಾಗಿ ಈ ಸಮಯದಲ್ಲಿ ಓದಿದರೆ ಮಿದುಳು ಹೆಚ್ಚು ಗ್ರಹಿಸುತ್ತದೆ. ಬೆಳಗ್ಗೆ ಎದ್ದ ಕೂಡಲೇ ಶೌಚ ಮುಗಿಸಿ ಒಂದು ಲೋಟ ನೀರನ್ನು ಸೇವಿಸಬೇಕು. ಖಾಲಿ ಹೊಟ್ಟೆಯಲ್ಲಿ ಉಸಿರನ್ನು ಗಮನಿಸುವ ಸಲುವಾಗಿ 15 ನಿಮಿಷ ಧ್ಯಾನ ಮಾಡಿ. ಇದರಿಂದ ನಿಮ್ಮ ಏಕಾಗೃತೆ ಪಕ್ವಗೊಳ್ಳುತ್ತದೆ. ಚಿಕ್ಕ ಧ್ಯಾನವೊಂದು ಆದ ಬಳಿಕ ಸುಖಪ್ರಾಣಾ ಯಾಮವನ್ನು 6ರಿಂದ 8 ಬಾರಿ ಅಭ್ಯಾಸ ನಡೆಸಬೇಕು. ಇಲ್ಲಿ ಮೂಗಿನ ಎರಡೂ ಹೊಳ್ಳೆಗಳಿಂದ ದೀರ್ಘವಾಗಿ, ನಿಧಾನವಾಗಿ, ನಿರಂತರವಾಗಿ ಉಸಿರನ್ನು ತೆಗೆದು ಕೊಂಡು ಹಾಗೇ ಉಸಿರನ್ನು ಬಿಡಿ. ಇದಿಷ್ಟರಲ್ಲಿ ಓದಲು ಸರಿಯಾದ ವಾತಾ ವರಣಕ್ಕೆ ಮನಸ್ಸು ಮತ್ತು ಆಸಕ್ತಿ ಬರುತ್ತದೆ. ಏಕಾಗ್ರತೆ ದೊರಕುತ್ತದೆ.
ಮದ್ರೆಯನ್ನು ಮಾಡಬಹುದು
ಯೋಗದಲ್ಲಿನ ಮುದ್ರೆಗಳು ಧ್ಯಾನವನ್ನು ಕೇಂದ್ರೀಕರಿಸಲು ನೆರವಾಗುತ್ತವೆ. ಚಿನ್‌ಮುದ್ರೆ, ಹಕಿನಿಮುದ್ರೆ, ಪ್ರಾಣಮುದ್ರೆ ತಲಾ ಹತ್ತು ನಿಮಿಷ ಅಭ್ಯಾಸ ಮಾಡಬಹುದು. ಮುದ್ರಾ ಎಂದರೆ ನಿಮ್ಮ ಕೈಗಳನ್ನು ಒಟ್ಟಿಗೆ ಸೇರಿಸುವ ವಿಧಾನ. ಕೈಗಳಲ್ಲಿರುವ ಕೆಲವು ಆಕ್ಯುಪ್ರಶರ್ ಪಾಯಿಂಟ್‌ಗಳಿಗೆ ಒತ್ತಡವನ್ನು ಅನ್ವಯಿಸಲು ಮುದ್ರೆ ಸಹಾಯ ಮಾಡಿ, ಕೆಲವು ಅಂಗಗಳನ್ನು ಸಕ್ರಿಯಗೊಳಿಸುತ್ತದೆ. ಇವುಗಳನ್ನು ಪದ್ಮಾಸನ, ಸ್ವಸ್ತಿಕಾಸನ, ಸುಖಾಸನ ಅಥವಾ ವಜ್ರಾಸನ ಹಾಕಿ ಧ್ಯಾನಾವಸ್ಥೆಯಲ್ಲಿ ಕುಳಿತು ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಚೈತನ್ಯ ಹಾಗೂ ಮನಸ್ಸಿಗೆ ನೆಮ್ಮದಿ ದೊರಕುತ್ತದೆ.
ಶಶಾಂಕಾಸನ
ಈ ಭಂಗಿಯು ಮೊಲದ ಆಕಾರವನ್ನು ಸ್ವಲ್ಪ ಹೋಲುವ ಕಾರಣ ಶಶಾಂಕಾಸನ ಎಂದು ಹೇಳುತ್ತಾರೆ. ಬಟ್ಟೆ ಅಥವ ಮ್ಯಾಟ್ ಹಾಸಿದ ನೆಲದ ಮೇಲೆ ಮೊದಲು ವಜ್ರಾಸನ ಭಂಗಿ ಮಾಡಬೇಕು. ಬಳಿಕ ಉಸಿರನ್ನು ಬಿಡುತ್ತಾ ನಿಧಾನವಾಗಿ ದೇಹವನ್ನು ಬಾಗಿಸಬೇಕು. ಕೈಗಳು, ಹಣೆ ನೆಲಕ್ಕೆ ಊರಬೇಕು. ಈ ಸ್ಥಿತಿಯಲ್ಲಿ ಕಣ್ಣುಗಳನ್ನು ಮುಚ್ಚಿ ಸ್ವಲ್ಪ ಹೊತ್ತು ಸಮ ಉಸಿರಾಟ ನಡೆಸುತ್ತಾ ವಿರಮಿಸಿ. ಬಳಿಕ ಬ್ರಹ್ಮಮುದ್ರೆಯಲ್ಲಿ ಶಶಾಂಕಾಸನ ಮಾಡಬಹುದು. ಈ ಆಸನದಿಂದ ಶಿರಸ್ಸಿಗೆ ರಕ್ತ ಸಂಚಲನೆ ಜರುಗಿ ನರಮಂಡಲ ಸಚೇತನಗೊಳ್ಳುತ್ತದೆ. ಮಾನಸಿಕ ಒತ್ತಡ ಕೋಪ ಇತ್ಯಾದಿಗಳ ಹತೋಟಿಗೊಂದು ಮೆದುಳಿನ ನರಗಳು ಚುರುಕಾಗುತ್ತವೆ.
ಚಿನ್‌ಮುದ್ರೆ
ಎರಡೂ ಕೈಗಳನ್ನು ಮೇಲ್ಮುಖವಾವಿದ್ಯಾರ್ಥಿಗಳು ಯೋಗ ಮಾಡಿದರೆ ತುಂಬಾ ಪ್ರಯೋಜನ ಇದೆ. ಬೆಳೆಯುವ ವಯಸ್ಸಾಗಿರುವ ಕಾರಣ ಅವರ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಇದು ಸಹಾಯವಾಗುತ್ತದೆ. ಪರೀಕ್ಷೆಯ ವೇಳೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಮರೆಗುಳಿತನಕ್ಕೆ ಕೆಲವು ಯೋಗ ಕ್ರಮಗಳನ್ನು ಅನುಸರಿಸಬೇಕು. ವಿಶೇಷವಾಗಿ ಮುದ್ರೆಗಳು ಮತ್ತು ಆಸನಗಳತ್ತ ಮಕ್ಕಳು ಚಿತ್ತ ಹರಿಸಬೇಕು. ಇದು ಪರೀಕ್ಷಾ ಸಂದರ್ಭ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.
-ಡಾ| ಕೃಷ್ಣ ಹೆಬ್ಟಾರ್
ಯೋಗ ತಜ್ಞರು, ಮಣಿಪಾಲಗಿಟ್ಟುಕೊಳ್ಳಿ. ತೋರು ಬೆರಳಿಗೆ ಹೆಬ್ಬೆರಳಿನ ತುದಿಯನ್ನು ತಾಗಿಸಬೇಕು. ಉಳಿದ ಮೂರು ಬೆರಳುಗಳು ಲಂಬವಾಗಿರಲಿ. 108 ಬಾರಿ ನಿಮ್ಮ ಇಷ್ಟ ದೇವರನ್ನು ನೆನೆದುಕೊಳ್ಳಿ. ಈ ಮುದ್ರೆಯಿಂದ ಅಗಾಧವಾದ ನೆನಪು ಶಕ್ತಿ ಮತ್ತು ಏಕಾಗ್ರತೆ ಲಭಿಸಿ ಒತ್ತಡ ನಿವಾರಣೆಯಾಗುತ್ತದೆ. ನವ ಚೈತನ್ಯ ಶಕ್ತಿಯನ್ನು ಮಿದುಳಿನತ್ತ ಚಲಿಸುವಂತೆ ಮಾಡುತ್ತದೆ.
ಪ್ರಾಣ ಮುದ್ರೆ
ಕಿರುಬೆರಳು ಮತ್ತು ಉಂಗುರ ಬೆರಳಿನ ತುದಿಗಳನ್ನು ಹೆಬ್ಬೆರಳಿನ ತುದಿಗೆ ಜೋಡಿಸಬೇಕು. ಉಳಿದ ಬೆರಳುಗಳು ನೇರವಾಗಿರಲಿ. ಚಿಕಿತ್ಸಾ ರೂಪದಲ್ಲಿ ಮಾಡಿದ ಮುದ್ರೆಯ ಬಳಿಕ ಕೊನೆಯಲ್ಲಿ ಪ್ರಾಣ ಮುದ್ರೆಯನ್ನು ಹತ್ತು ನಿಮಿಷ ಮಾಡಲೇಬೇಕು. ಈ ಮುದ್ರೆಯನ್ನು ಸುಮಾರು 20ರಿಂದ 40 ನಿಮಿಷಗಳ ಕಾಲ ಮಾಡಬಹುದು. ಇದರಿಂದ ಚೈತನ್ಯ ಶಕ್ತಿ ಹೆಚ್ಚಾಗುತ್ತದೆ. ಜತೆಗೆ ಆಯಾಸ ನೀಗುವುದು. ಕಣ್ಣಿನ ಆರೋಗ್ಯಕ್ಕೂ ಇದು ಸಹಕಾರಿ. ಹೆಸರೇ ಹೇಳುವಂತೆ ಈ ಮುದ್ರೆ ಶರೀರಕ್ಕೆ ಪ್ರಾಣ ಶಕ್ತಿಯನ್ನು, ಚೈತನ್ಯವನ್ನು ತಂದು ಕೊಡುತ್ತದೆ. ದೇಹವನ್ನು ಸರ್ವ ರೀತಿಯಲ್ಲೂ ಸದೃಢಗೊಳಿಸುತ್ತದೆ. ಯೋಗ ಮುದ್ರೆಗಳನ್ನು ಗುರುವಿನ ಸಹಾಯದಿಂದ ತಿಳಿದುಕೊಳ್ಳುವುದು ಒಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.