ನಿವೃತ್ತಿಯ ಬದುಕು, ಸುಖಮಯವಾಗಿರಲಿ
Team Udayavani, Nov 12, 2018, 1:06 PM IST
ನಿವೃತ್ತಿ ಹೊಂದಿದ ಮೇಲೆ ಕೆಲಸದಲ್ಲಿದ್ದಾಗ ಮಾಡುವಂತೆಯೇ ಖರ್ಚುಗಳನ್ನು ಮಾಡಲಾಗುವುದಿಲ್ಲ. ಹೀಗಾಗಿ ಜೀವನ ಶೈಲಿಯನ್ನು ಕೂಡ ಬದಲಾಯಿಸಿಕೊಳ್ಳಬೇಕು. ಎಂಥ ಖರ್ಚುಗಳೆಲ್ಲ ಬರುತ್ತವೆ ಎನ್ನುವ ಸಣ್ಣ ಪ್ರಜ್ಞೆ ಅಥವಾ ಊಹೆ ಮೊದಲೇ ಇರಬೇಕು. ಮನೋರಂಜನೆ, ದುಬಾರಿ ಶಾಪಿಂಗ್, ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.
ನಾವು ಈ ಭೂಮಿ ಮೇಲೆ ಇಷ್ಟೇ ವರ್ಷ ಬದುಕುತ್ತೇವೆ ಅಂತ ಎದೆ ತಟ್ಟಿ ಹೇಳಲು ಆಗದು. ಆದರೂ ಗ್ರಾಮೀಣ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಬದುಕಿನ ಸರಾಸರಿ ಆಯಸ್ಸು 70- 80 ವರ್ಷ ಆಗಿದೆ. ನಗರ ಪ್ರದೇಶದಲ್ಲಿ ವಾಸಿಸುವ ಜನ ಇಷ್ಟು ದೀರ್ಘಕಾಲ ಬದುಕುವ ಸಾಧ್ಯತೆಗಳು ಕಡಿಮೆ. ಒಂದು ಸರ್ವೆ ಪ್ರಕಾರ ಈಗಲೂ ನಿವೃತ್ತಿ ಅಂದರೆ ಶೇ. 51ರಷ್ಟು ಜನ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಾರಂತೆ.
ಇದರಲ್ಲಿ ಶೇ. 13ರಷ್ಟು ಜನಕ್ಕೆ ನಿವೃತ್ತಿ ಎಂದರೆ ಪೆಡಂಭೂತವೇ ಸರಿ. ಹೀಗಿರುವಾಗ, ನಿವೃತ್ತಿಯ ಅನಂತರದ ದಿನಗಳು ಸುಖಕರವಾಗಿರಲು ಈಗಲೇ ಯೋಜನೆ ಮಾಡೋದು ಒಳಿತು. ಮುಖ್ಯವಾಗಿ ನೆಮ್ಮದಿಯ ಜೀವನಕ್ಕೆ, ಅದು ಉದ್ಯೋಗದಲ್ಲಿ ಇದ್ದಾಗಲೂ ಅಥವಾ ನಿವೃತ್ತಿಯಾದಾಗಲೂ. ಎರಡೂ ಸಂದರ್ಭಕ್ಕೆ ಮುಖ್ಯವಾಗುತ್ತದೆ. ಅದಕ್ಕೆ ಉಳಿತಾಯ ಎಂದರೆ ಕೇವಲ ಮದುವೆ, ಮನೆ ಕಟ್ಟುವುದಕ್ಕೆ ಮಾತ್ರವೇ ಅಲ್ಲ. ಉಳಿತಾಯಕ್ಕೂ ನಾನಾ ಮುಖಗಳಿವೆ.
ನಿಮ್ಮದು ಯಾವ ರೀತಿಯ ನಿವೃತ್ತಿ?
ನಿವೃತ್ತಿಯಲ್ಲಿ ಎರಡು ವಿಧವಿದೆ. 45- 50 ವರ್ಷಕ್ಕೆ ತಾವೇ ನಿವೃತ್ತರಾಗುವುದು. ಇಲ್ಲವೇ ಕಾನೂನಿನ ಪ್ರಕಾರ 58 ವರ್ಷಕ್ಕೆ ನಿವೃತ್ತರಾಗುವುದು. ಈ ಎರಡಕ್ಕೂ ಪೂರ್ವ ಸಿದ್ಧತೆಗಳು ಬೇಕು. ಅವಧಿಗೂ ಮೊದಲೇ ನಿವೃತ್ತರಾಗುವುದಾದರೆ ಮೊದಲಿಂದಲೇ ಉಳಿತಾಯ, ಹೂಡಿಕೆ ವಿಚಾರದಲ್ಲಿ ಟಾರ್ಗೆಟ್ ಇಟ್ಟುಕೊಳ್ಳಬೇಕು.
ಮೊದಲು, ಅವಧಿಗೆ ತಕ್ಕಂತೆ ನಿವೃತ್ತಿ ಹೊಂದುವುದಾದರೆ ನಿಮ್ಮ ಕೈಗೆ ಸಿಗುವ ಹಣ ಎಷ್ಟು ಎನ್ನುವುದನ್ನು ಗುಡ್ಡೆ ಹಾಕಿ. ಅಂದರೆ ಪಿಎಫ್/ ಪಿಪಿಎಫ್, ಎಲ್ ಐಸಿ , ಆರ್‌ಡಿ ಇತ್ಯಾದಿ. ಇದರ ಆಧಾರದ ಮೇಲೆ ನೀವು ಅವಧಿಗೆ ಮೊದಲೇ ನಿವೃತ್ತಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಪಿಎಫ್, ಎಲ್ ಐಸಿ ಇತರೆ ಉಳಿತಾಯ ಮೊತ್ತವನ್ನು ಹೆಚ್ಚಿಸಬೇಕಾಗುತ್ತದೆ.
ಜೀವನ ಶೈಲಿ ಬದಲಿಸಿ
ನಿವೃತ್ತಿ ಹೊಂದಿದ ಮೇಲೆ ಕೆಲಸದಲ್ಲಿದ್ದಾಗ ಮಾಡುವಂತೆಯೇ ಖರ್ಚುಗಳನ್ನು ಮಾಡಲಾಗುವುದಿಲ್ಲ. ಹೀಗಾಗಿ ಜೀವನ ಶೈಲಿಯನ್ನು ಕೂಡ ಬದಲಾಯಿಸಿಕೊಳ್ಳಬೇಕು. ಎಂಥ ಖರ್ಚುಗಳೆಲ್ಲ ಬರುತ್ತವೆ ಎನ್ನುವ ಸಣ್ಣ ಪ್ರಜ್ಞೆ ಅಥವಾ ಊಹೆ ಮೊದಲೇ ಇರಬೇಕು. ಮನೋರಂಜನೆ, ದುಬಾರಿ ಶಾಪಿಂಗ್, ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಹಾಗಂತ ಓಡಾಟ, ವಿಮೆಗಾಗಿ ಹಣ ಹೂಡಿಕೆ, ವೈದ್ಯಕೀಯ ವೆಚ್ಚಗಳೆಲ್ಲ ಸ್ವಲ್ಪ ಏರಬಹುದು, ಅದು ಸಹಜ. ಇದಕ್ಕಾಗಿ ನಿವೃತ್ತಿ ಮೊದಲೇ ಸಾಲಗಳಿದ್ದರೆ ಮೊದಲು ಅದರಿಂದ ಮುಕ್ತರಾಗಿ.
ನಾನಾ ಕಡೆ ಹಾಕಿ
ಕೇವಲ ಪಿಎಫ್ ನಂಬಿದರೆ ಆಗೋಲ್ಲ. ಬದಲಾಗಿ ನಾನಾ ದಾರಿಯಲ್ಲಿ ಹೂಡಿಕೆ ಮಾಡಬೇಕು. ಸುರಕ್ಷತೆ, ಭದ್ರತೆ, ವಾಪಸ್- ಈ ಮೂರು ಹೂಡಿಕೆಯಲ್ಲಿ ಬಹಳ ಮುಖ್ಯ. ಅದಕ್ಕೆ ಚಿನ್ನ, ರಿಯಲ್ ಎಸ್ಟೇಟ್, ಷೇರು… ಹೀಗೆ ವಿಭಾಗ ಮಾಡಿಕೊಳ್ಳಿ. ಷೇರಿನ ಹೂಡಿಕೆ ಅಂದಾಕ್ಷಣ ಭಯ ಬೀಳುವ ಅಗತ್ಯವಿಲ್ಲ. ನಿವೃತ್ತಿಗಾಗಿ ನಾನಾ ಯೋಜನೆಗಳಿವೆ. ಆದರೆ ಒಂದು ಎಚ್ಚರ ಅಗತ್ಯ. ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕಾದರೆ ಎರಡು ಮೂರು ವರ್ಷದ ಅದ ಅಭಿವೃದ್ಧಿ ನೋಡಿ ಹಾಕಿ. ಉದಾಹರಣೆಗೆ ಚಿನ್ನಕ್ಕೆ ದುಡ್ಡು ಹಾಕಬೇಕಾದರೆ- ಮೂರು ವರ್ಷಗಳಲ್ಲಿ ಆಭರಣ ಮಾರುಕಟ್ಟೆಯಲ್ಲಿ ಆಗಿರುವ ಏರುಪೇರುಗಳನ್ನು ಗಮನಿಸಿ ದುಡ್ಡು ಹಾಕಿ. ಷೇರಿನ ವಿಚಾರದಲ್ಲಿ ಯುಲಿಪ್ ಯೋಜನೆಗಳಿವೆ.
ವಿಮೆಗಳು ಇರಲಿ
ವಯಸ್ಸು 40 ದಾಟಿದ ಅನಂತರ ಉಳಿತಾಯದ ಬಹುತೇಕ ಹಣ ತಿನ್ನುವುದು ಅನಾರೋಗ್ಯ. ಈ ಕಾರಣಕ್ಕೆ ಇಂದು ಆರೋಗ್ಯವಿಮೆ ಬಹಳ ಮುಖ್ಯ. ಈಗಂತೂ 70 ವರ್ಷದ ತನಕ ಕವರ್ ಆಗುವ ವಿಮೆಗಳು ಲಭ್ಯ. ನಮ್ಮಲ್ಲಿ ಶೇ. 41ರಷ್ಟು ಜನರ ಉಳಿತಾಯಕ್ಕೆ ಕತ್ತರಿ ಹಾಕುವುದು ವೈದ್ಯಕೀಯ ಚಿಕಿತ್ಸೆ. ಶೇ.45ರಷ್ಟು ಜನಕ್ಕೆ ಅನಿರೀಕ್ಷಿತ ಖರ್ಚುಗಳು, ಶೇ. 36ರಷ್ಟು ಉಳಿತಾಯ ಮಕ್ಕಳ ಓದು, ಫೀಸ್‌ಗೆ ಖಾಲಿಯಾಗುತ್ತಿದೆಯಂತೆ. ಅದನ್ನು ಹೋಗಲಾಡಿಸಲು ಉಳಿತಾಯ ಮಾಡುವುದೊಂದೇ ದಾರಿ.
ಉಳಿತಾಯಕ್ಕೆ ವಯಸ್ಸು ಎಷ್ಟು?
ನಿಮ್ಮ ವಯಸ್ಸು 60 ದಾಟಿದ್ದರೆ ನಗದಿನ ಪ್ರಮಾಣ ಶೇ. 70 ಇರಲಿ. ತುರ್ತು ಸಂದರ್ಭದಲ್ಲಿ ಬ್ಯಾಂಕಿಗೆ ಹೋಗಿ ಹಣ ಪಡೆಯಲು ಆಗದು ಅಥವಾ ಕೈ ಸಾಲ ಮಾಡುವ ವಯಸ್ಸಲ್ಲ ಇದು. ಉಳಿದ ಶೇ. 15ರಷ್ಟು ಚಿನ್ನ, ಶೇ. 15ರಷ್ಟು ಈಕ್ವಿಟಿ ಷೇರಿಗೆ ಹಾಕಿದರೆ ಆರಾಮದಾಯಕ ಜೀವನ ನಿಮ್ಮದು. ನಿಮ್ಮ ವಯಸ್ಸು 36ರಿಂದ 45 ಆಗಿದ್ದರೆ ಶೇ. 60ರಷ್ಟು ಈಕ್ವಿಟಿ ಷೇರಿಗಿರಲಿ, ಶೇ. 10ರಷ್ಟು ಚಿನ್ನಕ್ಕೆ ಹಾಕಿ, ಶೇ. 30 ನಗದು ಇರಲಿ, ಅದೇ ನಿಮ್ಮ ವಯಸ್ಸು 55 ಆಗಿದ್ದರೆ – ಆಗ ಶೇ. 15ರಷ್ಟು ಚಿನ್ನ. ಶೇ. 45 ನಗದು ಜತೆಗಿರಲಿ, ಶೇ. 40ರಷ್ಟು ಈ ಹಣವನ್ನು ಈಕ್ವಿಟಿ ಷೇರಲ್ಲಿ ಹೂಡಿ. ನಿವೃತ್ತಿಯ ಅನಂತರ ದೊಡ್ಡ ಇಡುಗಂಟು ಬರಲಿ ಅಂತ ನೀವು ಬೇಗ ಶ್ರೀಮಂತಿಕೆ ಹಾದಿ ಹಿಡಿಯುವುದು ಅಪಾಯ. ಅಂದರೆ 3 ವರ್ಷದಲ್ಲಿ ಡಬಲ್ ಕೊಡುತ್ತೇವೆ ಅಂತಲೋ, ಶೇ. 15ರಷ್ಟು ಬಡ್ಡಿ ಕೊಡುತ್ತೇವೆ ಅಂತಲೋ ಹೇಳಿಕೊಳ್ಳುವ ಬ್ಯಾಂಕ್‌ಗಳನ್ನು ನಂಬಬೇಡಿ. ಅಪರಿಚಿತರ ಹತ್ತಿರ ಚೀಟಿ ವ್ಯವಹಾರ ಮಾಡಿ ದುಡ್ಡು ಮಾಡಲು ಹೋಗಬೇಡಿ. ಇವೆಲ್ಲ ಬೇಗ ಶ್ರೀಮಂತಿಕೆಯನ್ನು ತಂದು ಕೊಡೋಕ್ಕಿಂತ ಬೇಗ ಕೈಸುಟ್ಟು ಕೊಳ್ಳುವಂತೆ ಮಾಡುತ್ತವೆ.
ನಾದಸ್ವರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.