ಸ್ಮಾರ್ಟ್ ನಗರಿಯ ರಸ್ತೆಗಳಿಗೂ ರೋಡ್ ಸ್ಪ್ರಿಂಕ್ಲರ್ ಅಳವಡಿಕೆಯಾಗಲಿ
Team Udayavani, Jun 23, 2019, 5:00 AM IST
ಬೇಸಗೆ ಕಳೆದು ಮಳೆಗಾಲ ಬಂದೇ ಬಿಡ್ತು. ಈಗಾಗಲೇ ನಮಗೆ ನೀರಿನ ಮಹತ್ವ ಅದನ್ನು ಉಳಿಸುವ ಅರಿವು ತಕ್ಕ ಮಟ್ಟಿಗೆ ಆಗಿದೆ. ಮನುಷ್ಯ ಎಚ್ಚೆತ್ತುಕೊಳ್ಳಬೇಕಾದರೆ ಆತನಿಗೆ ಬಲವಾದ ಪೆಟ್ಟು ಬೀಳಬೇಕು ಎನ್ನುವುದನ್ನು ಈ ವರ್ಷದ ಬೇಸಗೆ ಸರಿಯಾಗಿಯೇ ಕಲಿಸಿಕೊಟ್ಟಿದೆ. ಹೌದು ನೀರಿಲ್ಲದೇ ಟ್ಯಾಂಕರ್, ಬೋರ್ ಎಂದು ಅಲೆದಾಡಿದ ನಾವು ಮುಂದಿನ ಬೇಸಗೆಗಾದರೂ ನೀರಿನ ಬರ ಬರದಂತೆ ಎಚ್ಚೆತ್ತುಕೊಳ್ಳಬೇಕು.
ಗ್ರಾಮೀಣ ಮಟ್ಟದಲ್ಲಿ ನೀರನ್ನು ಸಂಗ್ರಹಿಸುವ ವಿಧಾನ ಹಲವು ಮಟ್ಟದಲ್ಲಿದೆ. ಆದರೆ. ನಗರೀಕರಣಕ್ಕೆ ಒಗ್ಗಿಕೊಂಡ ಪ್ರದೇಶಗಳಲ್ಲಿ ನೀರನ್ನು ಉಳಿಸುವ ಜಾಗೃತಿಗಳು ಇನ್ನೂ ಬರಬೇಕಿದೆ. ಮಳೆ ಹನಿ ನೀರು ನೇರ ಸಮುದ್ರ ಸೇರುವುದನ್ನು ತಡೆಯಬೇಕಾಗಿದೆ. ಸುಮ್ಮನೆ ಪೋಲಾಗುವ ನೀರನ್ನು ಉಳಿಸಲು ವೈಜ್ಞಾನಿಕ ಕ್ರಮದ ಕುರಿತು ಚಿಂತನೆ ನಡೆಸಬೇಕಿದೆ.
ಮಳೆಗಾಲದಲ್ಲಿ ರಸ್ತೆಯಲ್ಲಿ ಹರಿಯುವ ನೀರು ಚರಂಡಿ ತುಂಬಿಕೊಂಡು ಕೊನೆಗೆ ಯಾವುದೇ ಉಪಯೋಗವಿಲ್ಲದೆ ಬೃಹತ್ ತೋಡುಗಳಲ್ಲಿ ತ್ಯಾಜ್ಯವನ್ನು ಸೇರಿಸಿಕೊಂಡು ಸಮುದ್ರವನ್ನು ಸೇರಿ ಬಿಡುತ್ತದೆ. ಆದರೆ ನಗರವಲಯದಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ನೀರನ್ನು ಸಂಗ್ರಹಿಸುವ ವಿಧಾನಗಳು ವಿದೇಶದಲ್ಲಿ ಬಹಳ ಜನಪ್ರಿಯವಾಗಿದೆ ಮತ್ತು ಅವರು ಯೋಚಿಸುವ ಹೊಳಹುಗಳಿಗೆ ತಲೆದೂಗಲೇಬೇಕು.
ರೋಡ್ ಸ್ಪ್ರಿಂಕ್ಲರ್
ಜಪಾನ್‌ನ ಕೆಲವೊಂದು ನಗರಗಳು ರಸ್ತೆಗೆ ಹರಿಯುವ ನೀರು ಪೋಲಾಗುತ್ತಿರುವುದನ್ನು ಕಂಡು ಅದನ್ನು ಸರಿಯಾಗಿ ಉಪಯೋಗಿಸುವ ವಿನೂತನ ಮಾರ್ಗವನ್ನು ಕಂಡು ಹಿಡಿದಿದ್ದಾರೆ. ಅದುವೇ ರೋಡ್ ಸ್ಪ್ರಿಂಕ್ಲರ್. ಇದು ರಸ್ತೆ ಮೇಲೆ ಹರಿಯುತ್ತಿರುವ ನೀರನ್ನು ತನ್ನೊಳಗೆ ಸಂಗ್ರಹಿಸಿ ಅದರಿಂದ ರಸ್ತೆಗಳಲ್ಲಿ ತೆರಳುವ ವಾಹನಗಳನ್ನು ತೊಳೆಯಲು ಬಳಸುತ್ತಾರೆ. ಮಳೆಗಾಲ ಹಾಗೂ ಬೇಸಗೆಯಲ್ಲಿ ಧೂಳು, ಕೆಸರಿನಿಂದ ಕೊಳಕಾಗುವ ವಾಹನಗಳು ಈ ಮೂಲಕ ಸ್ವಚ್ಛಗೊಳ್ಳುತ್ತವೆ. ಇದು ಮಳೆಯ ಒಂದು ಹನಿ ನೀರೂ ವ್ಯರ್ಥವಾಗದಂತೆ ತಡೆಯುತ್ತದೆ.
ಮಂಗಳೂರಿನಲ್ಲೂ ಅಳವಡಿಕೆಯಾಗಲಿ
ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೊರಗಿನ ಜನರು ಮಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ ವೇಗವಾಗಿ ಮತ್ತು ವ್ಯವಸ್ಥಿತವಾಗಿ ಮಂಗಳೂರು ನಗರ ಬೆಳೆಯುತ್ತಿದೆ ಕೆಲವೊಂದು ಮೂಲಭೂತ ಸಮಸ್ಯೆಗಳಿಗೆ ಮಂಗಳೂರು ಜಾಗೃತವಾದರೆ ನೀರನ್ನು ಸಂಗ್ರಹಿಸುವ ರೋಡ್ ಸ್ಪಿಂಕ್ಲರ್ ಮಾದರಿಯನ್ನು ಅಳವಡಿಸಿಕೊಂಡರೆ ಸ್ವಚ್ಛ, ಸುಂದರ ಮಂಗಳೂರಿನ ಕಲ್ಪನೆಗೊಂದು ಹೊಸ ರೂಪ ಸಿಕ್ಕಂತಾಗುತ್ತದೆ. ಇದನ್ನು ವಾಹನ ತೊಳೆಯಲಷ್ಟೇ ಅಲ್ಲ ನಗರದಲ್ಲಿ ಹಸುರು ಕಾಪಾಡಲೂ ಬಳಸಿಕೊಳ್ಳಬಹುದು.
•ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kunigal:ಮನೆಗೆ ನುಗ್ಗಿದ ದುಷ್ಕರ್ಮಿಗಳು; ರಾಡ್ ನಿಂದ ತಲೆಗೆ ಹೊಡೆದು ಮಾಂಗಲ್ಯಸರ ದೋಚಿ ಪರಾರಿ
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.