“ಅಪ್ಪ-ಅಮ್ಮನಿಗೆ ನಮಸ್ಕಾರ ಮಾಡಿ’
Team Udayavani, Feb 13, 2020, 5:59 AM IST
ಟೆಸ್ಟ್, ಏಕದಿನ ಅಥವಾ ಟಿ20 ಈ ಯಾವುದೇ ಮಾದರಿಯ ಪಂದ್ಯಗಳನ್ನು ಆಡುವ ಮೊದಲು ಎಲ್ಲ ಆಟಗಾರರೂ ಒಂದು ಅಥವಾ ಎರಡು ದಿನ ಅಭ್ಯಾಸ ಮಾಡುತ್ತಾರೆ. ಈ ಸಂದರ್ಭದಲ್ಲಿ , ಹೆಸರಾಂತ ಆಟಗಾರರಿಗೆ ಬೌಲಿಂಗ್ ಮಾಡಲು, ಮೈದಾನದ ಅಂಚಿಗೆ ಬಿದ್ದ ಚೆಂಡನ್ನು ಹಿಡಿಯಲು ರಣಜಿ ಕ್ರಿಕೆಟ್‌ನಂತಹ ಕೂಟಗಳಲ್ಲಿ ಪಾಲ್ಗೊಂಡ ಕಿರಿಯರಿಗೆ ಅವಕಾಶ ಸಿಗುತ್ತದೆ. ನೆಟ್ ಅಭ್ಯಾಸ ಎಂದು ಕರೆಸಿಕೊಳ್ಳುವ ಈ ಆಟದ ಸಂದರ್ಭದಲ್ಲಿ ಆಟಗಾರರನ್ನು ಮಾತನಾಡಿಸುವ, ಅವರೊಂದಿಗೆ ಚಿತ್ರ ತೆಗೆಸಿಕೊಳ್ಳುವ ಅದೃಷ್ಟವೂ ಕೆಲವರಿಗೆ ಸಿಗುತ್ತದೆ. ಅಂಥದೇ ಒಂದು ಸಂದರ್ಭ. 2010ರ ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ಮುಂಬೈನ ಬಾಂದ್ರಾ ಕುರ್ಲಾ ಮೈದಾನದಲ್ಲಿ ನೆಟ್ ಅಭ್ಯಾಸ ನಡೆದಿತ್ತು.
ಅಲ್ಲಿದ್ದ ಸಚಿನ್ ತೆಂಡುಲ್ಕರ್ ಅವರ ಹಸ್ತಾಕ್ಷರ ಪಡೆಯಲು, ಅವರ ಕೈಕುಲುಕಿ ಸಂಭ್ರಮಿಸಲು ಸಾಕಷ್ಟು ಮಕ್ಕಳು ಸೇರಿದ್ದರು. ಕಡೆಗೊಮ್ಮೆ ಅಭ್ಯಾಸ ಮುಗಿಯುತ್ತಿದ್ದಂತೆಯೇ, ಮಕ್ಕಳೆಲ್ಲ ತೆಂಡುಲ್ಕರ್ ಅವರನ್ನು ಸುತ್ತುವರಿದರು. ಕೆಲವರು ಹಸ್ತಾಕ್ಷರ ಪಡೆದರು. ಈ ಮಧ್ಯೆಯೇ, ತೆಂಡುಲ್ಕರ್ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಬಾಲಕನೊಬ್ಬ ಅವರ ಕಾಲಿಗೆ ಬೀಳಲು ಮುಂದಾದ. ತಕ್ಷಣ ಆತನನ್ನು ತಡೆದ ತೆಂಡುಲ್ಕರ್ ಹೇಳಿದ್ದು: “ಹಾಗೆಲ್ಲ, ಯಾರ ಕಾಲಿಗೂ ಬೀಳಬಾರದು. ಕಾಲಿಗೆ ಬೀಳಲೇಬೇಕು ಅಂದರೆ, ಮನೆಗೆ ಹೋಗಿ, ಅಲ್ಲಿರುವ ತಾಯಿ ತಂದೆಯ ಕಾಲು ಮುಟ್ಟಿ ನಮಸ್ಕರಿಸಿ. ಹೆತ್ತವರಿಗಿಂತ ದೊಡ್ಡವರು, ಅವರಿಗಿಂತ ಶ್ರೇಷ್ಠರು ಈ ಜಗತ್ತಿನಲ್ಲಿ ಯಾರೂ ಇಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.