ಮಹಿಳಾ ಕ್ರಿಕೆಟ್‌ನ ಭರವಸೆಯ ಪ್ರತಿಭೆ ಸಂಧ್ಯಾ

ಕ್ರೀಡೆಯಲ್ಲಿ ಮುಂದಿರುವ ಸಂಧ್ಯಾ ಸಂಘಟನೆಯಲ್ಲೂ ಮುಂಚೂಣಿಯಲ್ಲಿದ್ದಾಳೆ.

Team Udayavani, Jan 23, 2020, 5:26 AM IST

Untitled-1

ಕ್ರಿಕೆಟ್‌, ವಾಲಿಬಾಲ್‌, ಲಾನ್‌ಟೆನಿಸ್‌ನಲ್ಲಿ ಮುಂದಿರುವ ಸಂಧ್ಯಾ ಕೆ.ಕಾಂಚನ್‌ ಬಾಳಿಕೆರೆ ಮಹಿಳಾ ಕ್ರಿಕೆಟ್‌ ಅಖಾಡದಲ್ಲಿ ಭರವಸೆಯ ಕ್ರಿಕೆಟ್‌ ಆಟಗಾರ್ತಿಯಾಗುವ ಭರವಸೆ ಮೂಡಿಸಿದ್ದಾರೆ. ಈಗಾಗಲೇ ರಾಜ್ಯ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಅವಕಾಶ ಪಡೆದಿರುವ ಸಂಧ್ಯಾ, ಬಾಲ್ಯದಿಂದಲೂ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವಳು.

ಕುಂದಾಪುರ ತಾಲೂಕು ದೇವಲ್ಕುಂದ ಸಮೀಪದ ಬಾಳಿಕೆರೆಯ ನಿವಾಸಿಯಾದ ಸಂಧ್ಯಾ ಕಿರಣ್‌ ಕುಂದರ್‌ ಮತ್ತು ಸರಸ್ವತಿ ದಂಪತಿಯ ಪುತ್ರಿ. ಪ್ರಸ್ತುತ ಬ್ರಹ್ಮಾವರದ ಎಸ್‌.ಎಂ.ಎಸ್‌. ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಕಾಂ ಅಭ್ಯಾಸಿ.
ಈಗಾಗಲೇ ಮಹಿಳಾ ಕ್ರಿಕೆಟ್‌ನಲ್ಲಿ ಮಂಗಳೂರು ವಿವಿ ಮಟ್ಟದಲ್ಲಿ ತಂಡವನ್ನು 4ನೇ ಬಾರಿ ಪ್ರತಿನಿಧಿಸಿ ಉತ್ತಮ ಬೌಲರ್‌ ಪ್ರಶಸ್ತಿಗೆ 2 ಬಾರಿ ಭಾಜನರಾಗಿದ್ದಾರೆ. ಮಂಗಳೂರು ವಿವಿ ದಕ್ಷಿಣ ವಲಯ ಕ್ರಿಕೆಟ್‌ ಪಂದ್ಯಾವಳಿ, ಸತ್ಯಭಾಮ ಯುನಿವರ್ಸಿಟಿ ಚೆನ್ನೈ, ದಕ್ಷಿಣ ವಲಯ- ಬೆಂಗಳೂರು ಯುನಿವರ್ಸಿಟಿ ಬೆಂಗಳೂರಿನಲ್ಲಿ, ದಕ್ಷಿಣ ವಲಯ- ಆಂಧ್ರಪ್ರದೇಶದ ಆಂಧಾÅ ಯೂನಿವರ್ಸಿಟಿ ವಿಶಾಖಪಟ್ಟಣದಲ್ಲಿ ಆಡಿದ್ದ ಸಂಧ್ಯಾ, ಕಳೆದ ಡಿಸೆಂಬರ್‌ನಲ್ಲಿ ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ವಿವಿ ಮಟ್ಟದ ಕ್ರಿಕೆಟ್‌ ಪಂದ್ಯಾಟದಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿ ಧಿಸಿದ್ದರು. ವಾಲಿಬಾಲ್‌ನ ಸರ್ವಾಂಗೀಣ ಆಟಗಾರ್ತಿಯಾಗಿ ಹೊರಹೊಮ್ಮಿರುವ ಇವರು, ನೆಲಮಂಗಲದಲ್ಲಿ ನಡೆದ ರಾಜ್ಯ ಮಟ್ಟದ ಗ್ರಾಮೀಣ ವಾಲಿಬಾಲ್‌ ಸ್ಪರ್ಧೆಗೆ ಆಯ್ಕೆಗೊಂಡಿದ್ದರು. ರಾಜ್ಯ, ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದ ಪಂದ್ಯದಲ್ಲಿ 2ನೇ ಬಹುಮಾನ, ಬಾಗಲಕೋಟದಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಟದಲ್ಲಿ 2ನೇ ಬಹುಮಾನ, ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ಮಹಿಳಾ ವಾಲಿಬಾಲ್‌ ಪಂದ್ಯಾಟ, ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್‌ ಪಂದ್ಯಾಟ, ರಾಜ್ಯ ಮಹಿಳಾ ತಂಡವನ್ನು 3 ಬಾರಿ ಪ್ರತಿನಿಧಿ ಸಿ, ಪಿವೈಕೆಕೆಎ ವಾಲಿಬಾಲ್‌ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಲಾನ್‌ ಟೆನಿಸ್‌ನಲ್ಲಿಯೂ ಪ್ರತಿಭಾನ್ವಿತ ಆಟಗಾರ್ತಿಯಾದ ಸಂಧ್ಯಾ, ಇತ್ತೀಚೆಗೆ ಓಪನ್‌ ಲಾನ್‌ ಟೆನಿಸ್‌ ಪಂದ್ಯಾವಳಿಗಾಗಿ ಆಯ್ಕೆಯಾಗಿ 1ನೇ ಸ್ಥಾನವನ್ನು ಪಡೆದರು.

2018-19ರಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಉಡುಪಿ ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದಲ್ಲಿ ಯುವ ಜಾಗƒತಿ ಯೋಜನೆಯಲ್ಲಿ ಭಾಗವಹಿಸಿದ್ದಾರೆ. 4 ವರ್ಷಗಳ ಇಂಟರ್‌ ಕಾಲೇಜು ಶಟ್ಲ ಬ್ಯಾಡ್ಮಿಂಟನ್‌, ಚೆಸ್‌ ಟೂರ್ನಮೆಂಟ್‌ನಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಟೇಬಲ್‌ ಟೆನಿಸ್‌ ಪಂದ್ಯಾವಳಿ, ಯಕ್ಷಗಾನದಲ್ಲಿಯೂ ಆಸಕ್ತಿ ಹೊಂದಿದ್ದು, ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದರು.
ಸಂಧ್ಯಾ ಅವರ ಸಾಧನೆಯನ್ನು ಕಾಲೇಜು ಗೌರವಿಸಿ ಗುರುತಿಸಿತಲ್ಲದೆ ಮೊಗವೀರ ಮಹಾಜನ ಸಂಘ ಬಗ್ವಾಡಿ ಹೋಬಳಿ ವತಿಯಿಂದ ಜಾತ್ರೆಯಲ್ಲಿ ಸಮ್ಮಾನಿಸಿತು. ಇದಲ್ಲದೆ ಹಲವಾರು ಅಭಿನಂದನೆಗಳಿಗೆ ಪಾತ್ರರಾಗಿ ಮೊಗವೀರ ಯುವ ಸಂಘಟನೆಯ ಸದಸ್ಯೆಯಾಗಿ ಸಂಘಟನ ಚಟುವಟಿಕೆಯಲ್ಲೂ ತೊಡಗಿರುವುದು ವಿಶೇಷ.

-  ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.