![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Mar 13, 2020, 5:12 AM IST
ಇದುವರೆಗೂ ಒಂದೇ ಬಣ್ಣವನ್ನು ಹೊಂದಿದ್ದ ಟಯರ್‌ಗಳು ಈಗ ಹಲವಾರು ಬಣ್ಣದೊಂದಿಗೆ ಬಿಡುಗಡೆಯಾಗಿವೆ. ಟಯರ್ ಉತ್ಪಾದಕ ಸಂಸ್ಥೆಯಾದ ಸಿಯೆಟ್ ಈ ಟಯರ್‌ಗಳನ್ನು ಬಿಡುಗಡೆಗೊಳಿಸಿದೆ. ಸಿಯೆಟ್ ಕಂಪೆನಿಯ ಟಯರ್‌ಗಳು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸಿಯೆಟ್ ಕಂಪೆನಿಯು ಹಲವು ಬಣ್ಣಗಳಲ್ಲಿ ಟ್ಯೂಬ್ಲೆಸ್ ಟಯರ್‌ಗಳನ್ನು ಬಿಡುಗಡೆಗೊಳಿಸಿದೆ.
ಈ ಟಯರ್‌ಗಳನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಿದ್ದು, ಕೆಲವು ದಿನಗಳ ವರೆಗೆ ಮಾತ್ರ ಮಾರಾಟ ಮಾಡಲಿದೆ. ಈ ಬಣ್ಣದ ಟ್ಯೂಬ್ಲೆಸ್ ಟಯರ್‌ಗಳು ಆಟೋ ಮೊಬೈಲ್ ಕ್ಷೇತ್ರದ ಆಸಕ್ತಿಯನ್ನು ಸೆಳೆದಿವೆ. ಈ ಟಯರ್‌ಗಳು ಬ್ಲೂ, ಆರೇಂಜ್ ಹಾಗೂ ಬ್ಲೂ ಆರೇಂಜ್ ಎಂಬ ಮೂರು ವಿಧದ ಬಣ್ಣಗಳಲ್ಲಿವೆ.
ನ್ಪೋರ್ಟ್ಸ್ ಬೈಕ್‌ಗಳಾದ ಯಮಹಾ ಎಫ್ಇಸಿ, ಯಮಹಾ ಫೇಜರ್, ಸುಜುಕಿ ಜಿಕ್ಸರ್ ಹಾಗೂ ಸುಜುಕಿ ಇಂಟ್ರೂಡರ್‌ಗಳಲ್ಲಿ ಬಳಸಲಾಗುತ್ತದೆ. ಈ ಟಯರ್‌ಗಳು ಇತರ ಸಿಯೆಟ್ ಟಯರ್‌ಗಳಿಗಿಂತ ಭಿನ್ನವಾಗಿದ್ದು, ಹೆಚ್ಚಿನ ಬಾಳಿಕೆ ಬರುತ್ತವೆ ಎಂದು ಸಂಸ್ಥೆ ಹೇಳಿದೆ. ಈ ಟಯರ್‌ಗಳು ಹೆಚ್ಚು ಗ್ರಿಪ್, ಮೆದು ಆಗಿದ್ದು ಸುಲಭವಾಗಿ ಟ್ಯೂನ್ ಮಾಡಬಹುದಾಗಿದೆ.
You seem to have an Ad Blocker on.
To continue reading, please turn it off or whitelist Udayavani.