ಯಶಸ್ಸಿನ ಹಿಂದಿನ ರಹಸ್ಯ…


Team Udayavani, Feb 18, 2019, 7:35 AM IST

18-february-10.jpg

ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ತಾವೇ ಬಾಸ್‌ ಆಗಬೇಕೆಂಬ ಆಸೆ, ಕನಸುಗಳಿರುತ್ತವೆ. ಕೆಲವೊಂದಷ್ಟು ಜನ ಅದಕ್ಕೆ ಕಷ್ಟಪಟ್ಟು ಶ್ರಮಿಸುತ್ತಾರೆ. ಗೆಲುವು ಕೆಲವರದ್ದಾದರೆ, ಅದರಲ್ಲಿ ಯಶಸ್ವಿಯಾಗದೆ ಕೈ ಸುಟ್ಟುಕೊಂಡವರ ಸಂಖ್ಯೆಗೂ ಕೊರತೆ ಇಲ್ಲ. ಸರಿಯಾದ ಯೋಜನೆಗಳಿದ್ದು, ಕೆಲವು ತಂತ್ರಗಳನ್ನು ಉಪಯೋಗಿಸಿದರೆ ಯಶಸ್ಸು ಲಭಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಸರಿಯಾದ ದಾರಿ ಆಯ್ದುಕೊಳ್ಳಿ
ಯಾವುದೇ ಕೆಲಸ ಪ್ರಾರಂಭಿಸುವುದಕ್ಕೂ ಮೊದಲು ನಮ್ಮ ಅಭಿರುಚಿಯ ಬಗ್ಗೆ ತಿಳಿದಿರಬೇಕು. ನಮಗೆ ಯಾವ ಕೆಲಸ ಖುಷಿ ಕೊಡುತ್ತದೋ ಅದನ್ನೇ ಉದ್ಯಮವಾಗಿ ಆರಂಭಿಸಬೇಕು. ಹಾಗೇ ಪ್ರಾರಂಭಿಸುವುದಕ್ಕಿಂತ ಮೊದಲು ಸರಿಯಾದ ರೂಪುರೇಷೆಗಳನ್ನು ಹಾಕಿಕೊಳ್ಳಬೇಕು. 

ಸಂಶೋಧನೆ ಅಗತ್ಯ
ಉದ್ಯಮ ಆರಂಭಿಸುವ ಕ್ಷೇತ್ರದ ಬಗ್ಗೆ ಆಳವಾದ ಸಂಶೋಧನೆಯನ್ನು ಮಾಡುವುದು ಅಗತ್ಯ. ನಿಮ್ಮ ಪ್ರತಿಸ್ಪರ್ಧಿ, ಗ್ರಾಹಕರು, ಹೇಗೆ ಬಂಡವಾಳ ಹೂಡಬಹುದು, ಕಾನೂನು ವ್ಯವಹಾರ ಹಾಗೂ ನಿಮ್ಮ ಉದ್ಯಮಕ್ಕೆ ಸಹಾಯವಾಗುವ ಎಲ್ಲ ಸಣ್ಣ ಸಣ್ಣ ವಿಚಾರಗಳ ಕುರಿತು ಮೊದಲೇ ತಿಳಿದಿರಬೇಕು.

ವ್ಯವಹಾರ ಚೆನ್ನಾಗಿರಲಿ
ಎಲ್ಲ ನನಗೇ ತಿಳಿದಿದೆ ಎಂಬ ಭಾವನೆ ನಮ್ಮಲ್ಲಿದ್ದರೆ ಉದ್ಯಮದಲ್ಲಿ ಯಶಸ್ಸು ಲಭಿಸಲು ಸಾಧ್ಯವಿಲ್ಲ. ಪ್ರತಿಯೊಂದನ್ನೂ ಕಲಿಯುವ ಆಸಕ್ತಿ, ಕುತೂಹಲವಿದ್ದಾಗ ಮಾತ್ರ ಗೆಲುವು ನಮ್ಮದಾಗುತ್ತದೆ.

ಕಾರಣಗಳನ್ನು ನೀಡದಿರಿ
ಕೆಲಸ ಎಷ್ಟೇ ಕಷ್ಟವಾಗಿದ್ದರೂ ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಿ. ಅದಕ್ಕಾಗಿ ಕಾರಣಗಳನ್ನು ನೀಡದಿರಿ. ನಿಮ್ಮ ಕಾರಣಗಳು ಬೇಜವಾಬ್ದಾರಿತನವನ್ನು ಸೂಚಿಸುತ್ತವೆ. ಎಲ್ಲ ಸಮಸ್ಯೆಗಳನ್ನು ಜಾಣ್ಮೆಯಿಂದ ಪರಿಹರಿಸಿ ಮುನ್ನಡೆಯಿರಿ.

ಸರಿಯಾದ ವ್ಯಕ್ತಿಗಳನ್ನು ಆಯ್ಕೆ ಮಾಡಿ
ನಿಮ್ಮ ಗುಂಪಿಗೆ ಜನರನ್ನು ಆಯ್ಕೆ ಮಾಡುವಾಗ ಎಚ್ಚರಿಕೆಯಿಂದಿರಿ. ಕೆಲಸದ ಮೇಲೆ ನಿಮ್ಮಷ್ಟೇ ಆಸಕ್ತಿ ಇರುವ, ಧನಾತ್ಮಕ ಚಿಂತಕರನ್ನು ಹಾಗೂ ಪ್ರತಿಭಾಶಾಲಿಗಳನ್ನು ಆಯ್ಕೆ ಮಾಡಿ. ನಿಮ್ಮ ಗೈರಿನಲ್ಲಿ ಉದ್ಯಮವನ್ನು ಸೂಕ್ತವಾಗಿ ಮುಂದುವರಿಸುವಂತವರಾಗಿರಬೇಕು.

ಲಾಸ್ಟ್‌ ನಾಟ್‌ ದ ಲೀಸ್ಟ್‌
ಯಾವುದೇ ಕೆಲಸವನ್ನು ಆರಂಭಿಸಲು ನಮ್ಮ ಮೇಲೆ ನಮಗೆ ನಂಬಿಕೆಯಿರಬೇಕಾದದ್ದು ಅತೀ ಅಗತ್ಯ. ನಿಮ್ಮ ಚಿಂತನೆಗಳನ್ನು ಬೆಂಬಲಿಸಿ. ಎಲ್ಲರ ಸಲಹೆ ಸೂಚನೆಗಳಿಗೂ ಗೌರವ ನೀಡಿ ಆದರೆ ಕೊನೆಗೆ ಎಲ್ಲವನ್ನೂ ತೂಗಿಸಿ ನೋಡಿ ನಿಮ್ಮ ಮನಸ್ಸಿಗೆ ಸರಿ ಅನಿಸಿದ್ದನ್ನು ಮಾಡಿ. ಸ್ಟೀವ್‌ ಜಾಬ್ಸ್ ಹೇಳುವ ಪ್ರಕಾರ ನಿಮ್ಮ ಹೃದಯ ಮತ್ತು ಕನಸನ್ನು ಮುಂದುವರಿಸುವ ದ್ಧಿವಂತಿಕೆಯಿರಲಿ. ಅಂತಹವರಿಗೆ ಮಾತ್ರ ಜೀವನದಲ್ಲಿ ಏನು ಬೇಕೆಂಬುದು ಮೊದಲೇ ತಿಳಿದಿರುತ್ತದೆ.

 ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

5

Bajpe: ಇನ್ಮುಂದೆ ದೀಪಗಳಿಂದ ಬೆಳಗ‌ಲಿದೆ ವಿಮಾನ ನಿಲ್ದಾಣ ರಸ್ತೆ

ulock

Sandalwood: ಅನ್‌ಲಾಕ್‌ ರಾಘವದಿಂದ ಲಾಕ್‌ ಸಾಂಗ್‌ ಬಂತು

yogaraj bhat song in Manada kadalu movie

Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…

4(2

Mangaluru: ಕುಡುಪು, ಮಂಗಳಜ್ಯೋತಿ ಬಳಿ ಅಂಡರ್‌ಪಾಸ್‌

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.