ಆರೋಗ್ಯಕರ ಕೈತೋಟದ ಗುಟ್ಟು
Team Udayavani, Dec 29, 2018, 7:55 AM IST
ಪ್ರತಿಯೊಬ್ಬರ ಮನೆ ಮುಂದೆ, ಹಿಂದೆ ಸಣ್ಣದೊಂದು ಕೈತೋಟ ಇದ್ದೇ ಇರುತ್ತದೆ. ಆದರೆ ಇದನ್ನು ಸರಿಯಾಗಿ ಬಳಸಿಕೊಂಡರೆ ಮಾತ್ರ ಲಾಭ. ಮಣ್ಣಿನ ಸತ್ವವನ್ನು ಸದಾ ಕಾಲ ಕಾಯ್ದುಕೊಳ್ಳುವ ಜತೆಗೆ ಒಂದಷ್ಟು ಉಪಕ್ರಮಗಳನ್ನು ಅನುಸರಿಸಿದರೆ ಇರುವ ಸಣ್ಣ ಜಾಗದಲ್ಲೂ ಅತೀ ಹೆಚ್ಚು ಗಿಡಗಳನ್ನು ಬೆಳೆಸಲು ಸಾಧ್ಯವಿದೆ. ಆಗ ಮನೆ ಮುಂದೆ ಅಥವಾ ಹಿಂದಿರುವ ಜಾಗ ಚಿಕ್ಕದಿದ್ದರೂ ಚೊಕ್ಕವಾಗಿ, ಸುಂದರವಾಗಿ ಕಾಣುವುದು.
ಒಣಗಿದ ಕೊಂಬೆಗಳನ್ನು ತೆಗೆಯಿರಿ
ಕೈದೋಟದಲ್ಲಿರುವ ಮರ, ಪೊದೆ, ಇತರ ಗಿಡಗಳ ಕೊಂಬೆಗಳನ್ನು ತೆಗೆಯಬೇಕು. ಇದು ಅವುಗಳ ಬೆಳವಣಿಗೆಗೂ ಸಹಕಾರಿ. ಜತೆಗೆ ತೋಟ ಸ್ವಚ್ಛ, ಸುಂದರವಾಗಿ ಕಾಣಲು ಸಹಾಯಕವಾಗುವುದು. ಅಷ್ಟೇ ಅಲ್ಲದೆ, ಮರಗಳ ಸುತ್ತ ಗಾಳಿ ಸಂಚಾರಕ್ಕೆ ಮತ್ತು ಅವುಗಳ ಕೆಳಗೆ ಇರುವ ಇತರ ಗಿಡಗಳು ಬೆಳೆಯಲು ಜಾಗ ನೀಡಿದಂತಾಗುವುದು. ಆರಂಭದಲ್ಲಿ ಒಣಗಿದ ಕೊಂಬೆಗಳನ್ನು ಕತ್ತರಿಸಿದ ಅನಂತರ ಗಿಡದ ಬುಡದಲ್ಲಿರುವ ಗೊಬ್ಬರದ ಚೂರುಗಳನ್ನು ತೆಗೆಯಿರಿ. ಇದರಿಂದ ಬುಡದಲ್ಲಿರುವ ಒಣಗಿದ ಎಲೆ, ಬೀಜ, ಪಾಚಿಗಳನ್ನು ತೆಗೆದಂತಾಗುತ್ತದೆ. ಬಳಿಕ ಹೊಸ ಗೊಬ್ಬರ ಹಾಕಿ ಗಿಡಗಳಿಗೆ ನೀರುಣಿಸಿ. ಗಿಡಗಳ ಬುಡದಲ್ಲಿರುವ ಬೀಜದಿಂದ ಹೊಸ ಚಿಗುರು ಬಂದಿದ್ದರೆ ಅವುಗಳನ್ನು ತೆಗೆದು ಬೆರೆಡೆ ನೆಟ್ಟು ಬಿಡಿ.
ಸಣ್ಣ ಹುಳುಗಳು ಇರಲಿ
ಸಣ್ಣ ಹುಳುಗಳು ಮಣ್ಣಿನ ಫಲವತ್ತತೆ ಹೆಚ್ಚಿಸಲು ಅಗತ್ಯ. ಅವುಗಳನ್ನು ಮಾರುಕಟ್ಟೆಯಿಂದ ತರಬಹುದು ಅಥವಾ ನಾವೇ ಮಾಡಬಹುದು. ಅವುಗಳನ್ನು ತೋಟಕ್ಕೆ ಬಿಡುವುದರಿಂದ ಮಣ್ಣು ಹದಗೊಂಡು ಸ್ವಚ್ಛವಾಗುತ್ತದೆ.
ಒಣಗಿದ ಮಣ್ಣಲ್ಲಿ ಕೆಲಸ ಮಾಡಬೇಡಿ
ಕೈದೋಟದ ಮಣ್ಣು ಒಣಗಿದ್ದರೆ ಆಗ ಯಾವುದೇ ಕೆಲಸವನ್ನು ಮಾಡಬೇಡಿ.ಯಾಕೆಂದರೆ ಮಣ್ಣಿನಲ್ಲಿರುವ ವಾಯುವಿನ ಪ್ರಮಾಣ ಕಡಿಮೆಯಾಗುತ್ತದೆ. ಮಣ್ಣಿಗೆ ನೀರು ಹಾಕಿ ಅದು ಚೆನ್ನಾಗಿ ಹೀರಿದ ಮೇಲೆ ಕೆಲಸ ಮುಂದುವರಿಸಿ.
ಗಿಡಗಳಿಗೆ ಕವರ್ ಹಾಕಿ
ಚಳಿಗಾಲದಲ್ಲಿ ನಾವು ಗಿಡಗಳನ್ನು ಅಷ್ಟಾಗಿ ಸಂರಕ್ಷಿಸುವುದಿಲ್ಲ. ಹಾಗೆಯೇ ಬಿಟ್ಟು ಬಿಡುತ್ತೇವೆ. ಇದರಿಂದಾಗಿ ಗಿಡಗಳ ಫಲವತ್ತತೆ ಕುಂಠಿತವಾಗುತ್ತದೆ. ಅದಕ್ಕಾಗಿ ಗಿಡಗಳಿಗೆ ಸಣ್ಣದಾಗಿ ಕವರ್ ಮಾಡಿ. ಇದರಿಂದ ಗಿಡಗಳು ಸುರಕ್ಷಿತವಾಗಿರುತ್ತವೆ. ಮನೆಯ ಕೈತೋಟದಲ್ಲಿ ಆಗಾಗ ಸಂಚರಿಸಿ, ಅವುಗಳ ಕ್ಷೇಮ ವಿಚಾರಿಸಿ. ಇದರಿಂದ ಗಿಡಗಳು ಮಾತ್ರವಲ್ಲ ನಿಮ್ಮ ಮನಸ್ಸು ಉಲ್ಲಾಸಗೊಳ್ಳುತ್ತದೆ.
ರಂಜಿನಿ, ಮಿತ್ತಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.