ಗೋಲ್ಕೊಂಡ ಕೋಟೆ ಸೊಬಗು ಒಮ್ಮೆಯಾದರೂ ನೋಡಿಬನ್ನಿ
Team Udayavani, Feb 13, 2020, 5:37 AM IST
ಮುತ್ತಿನ ನಗರ ಮತ್ತು ಬಿರಿಯಾನಿ ನಗರ ಎಂದೇ ಪ್ರಸಿದ್ಧಿ ಪಡೆದಿರುವ ಹೈದರಾಬಾದ್ ತೆಲಂಗಾಣ ರಾಜ್ಯದಲ್ಲಿರುವ ಒಂದು ಅದ್ಭುತ ನಗರವಾಗಿದೆ. ಕಣ್ಮನ ಸೆಳೆಯುವ ಹಲ ವಾರು ಪ್ರವಾಸಿ ತಾಣಗಳು ತನ್ನ ತೆಕ್ಕೆಯಲ್ಲಿಟ್ಟು ಕೊಂಡಿರುವ ಹೈದರಾಬಾದ್ ಪ್ರವಾಸಿಗರ ಪ್ರಮುಖ ಆಕರ್ಷಣೆ. ನಿಜಾಮರ ನಾಡಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ತಾಣವಾಗಿದೆ.
ಗೋಲ್ಕೊಂಡ ಕೋಟೆ ಈ ಪ್ರದೇಶದ ಅತ್ಯು ತ್ತಮ ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಗಿದೆ. ಈ ಕೋಟೆಯ ನಿರ್ಮಾಣವು 1600ರ ದಶಕದಲ್ಲಿ ಪೂರ್ಣಗೊಂಡಿತು ಮತ್ತು ಒಮ್ಮೆ ಕೊಹ್-ಐ- ನೂರ್ ವಜ್ರವನ್ನು ಸಂಗ್ರಹಿಸಿದ ಪ್ರದೇಶವೆಂದು ಹೆಸರುವಾಸಿಯಾಗಿದೆ.
ಕುರಿಗಾಹಿಗಳ ದಿಬ್ಬ
ಗೋಲ್ಕೊಂಡಾ ಕೋಟೆ ಅಥವಾ ಗೊಲ್ಲ ಕೊಂಡ ಕೋಟೆಯು ಕುರಿಗಾಹಿಗಳ ದಿಬ್ಬ ಎಂಬ ಅರ್ಥವನ್ನು ಸೂಚಿಸುತ್ತದೆ. ಈ ಕೋಟೆಯನ್ನು ಹೈದರಾಬಾದಿನಿಂದ 11 ಕಿ.ಮೀ. ದೂರದಲ್ಲಿ 15ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಗೋಲ್ಕೊಂಡಾ ಒಂದಾನೊಂದು ಕಾಲದಲ್ಲಿ ವೈಭವಯುತವಾಗಿದ್ದ ನಗರವಾಗಿತ್ತು. ಆದರೆ ಇಂದು ನಾವು ಇಲ್ಲಿ ಆ ಗತಕಾಲದ ವೈಭವವನ್ನು ಕೇವಲ ಅಳಿದುಳಿದ ಅವಶೇಷಗಳಲ್ಲಿ ಮಾತ್ರ ಕಾಣಬಹುದು. ಈ ಪ್ರದೇಶವು ತನ್ನಲ್ಲಿ ದೊರಕಿದ ವಿಶ್ವವಿಖ್ಯಾತ ವಜ್ರ ವೈಢೂರ್ಯಗಳಾದ ಕೊಹಿ ನೂರ್, ಐಡಲ್ಸ್ ಐ ಮತ್ತು ಹೋಪ್ ಡೈಮಂಡ್ ಗಳಿಗಾಗಿ ಪ್ರಸಿದ್ಧವಾಗಿದೆ.
ಗೋಲ್ಕೊಂಡಾ ಕೋಟೆಯನ್ನು 1512ನೇ ಇಸವಿಯಲ್ಲಿ ಈ ನಗರವನ್ನು ಆಳಿದ ಖುತುಬ್ ಷಾಹಿ ಸಾಮ್ರಾಜ್ಯದ ಅರಸರು ನಿರ್ಮಿಸಿದರು. ಖುಲಿ ಖುತುಬ್ ಷಾಹ್ ವಾಲಿಯ ಅವಧಿಯಲ್ಲಿ ಈ ಕೋಟೆಯ ಬಹುಪಾಲು ಭಾಗವು ನಿರ್ಮಾಣ ಗೊಂಡಿತು. ಈ ಕೋಟೆಯನ್ನು ಉತ್ತರ ಭಾರತದ ಮೊಘಲರ ದಾಳಿಯಿಂದ ರಕ್ಷಿಸುವ ಸಲುವಾಗಿ ನಿರ್ಮಿಸಲಾಯಿತು.
ಮರುಕಳಿಸುವ ಸಪ್ಪಳ
ಈ ಕೋಟೆಯ ವಿಶೇಷ ಅಂಶವೆಂದರೆ ಇಲ್ಲಿನ ಧ್ವನಿವ್ಯವಸ್ಥೆ, ಅದು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಸೇರಿದೆ. ನೀವು ಈ ಕೋಟೆಯ ಆವರಣದಲ್ಲಿ ನಿಂತು ಚಪ್ಪಾಳೆ ಬಾರಿಸಿದರೆ, ಅದರ ಪ್ರತಿಧ್ವನಿಯು ಮುಖ್ಯ ಪ್ರವೇಶ ದ್ವಾರದಿಂದ 91 ಮೀಟರ್ ಎತ್ತರದಲ್ಲಿರುವ ಭಾಗಗಳಿಗೂ ಕೇಳುತ್ತದೆ. ಅಲ್ಲದೆ ನಂಬಿಕೆಗಳ ಪ್ರಕಾರ ಗೋಲ್ಕೊಂಡಾ ಕೋಟೆಯಿಂದ ಚಾರ್ ಮಿನಾರಿಗೆ ಒಂದು ರಹಸ್ಯ ಸುರಂಗ ಮಾರ್ಗವಿದೆಯಂತೆ. ಆದರೆ ಅದರ ಕುರುಹುಗಳು ಮತ್ತು ಸಾಕ್ಷಿಗಳು ಯಾವುವೂ ಇದುವರೆಗೂ ದೊರೆತಿಲ್ಲ.
ಬೆಳಗ್ಗಿನ ಸಮಯ ಸೂಕ್ತ
ಇಲ್ಲಿನ ವಾಸ್ತುಶಿಲ್ಪ, ದಂತಕಥೆಗಳು, ಇತಿಹಾಸ ಮತ್ತು ಗೋಲ್ಕೊಂಡ ಕೋಟೆಯ ರಹಸ್ಯವು ಅದರ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಹೈದರಾಬಾದ್‌ನಲ್ಲಿ ನೋಡಲೇಬೇಕಾದ ಸ್ಥಳಗಳಲ್ಲಿ ಇದೂ ಒಂದು. ಇಲ್ಲಿಗೆ ಬೆಳಗ್ಗಿನ ಸಮಯದಲ್ಲಿ ಇಲ್ಲವೇ ಸಂಜೆಯ ಹೊತ್ತಿನಲ್ಲಿ ಹೋಗಬೇಕು. ಮಧ್ಯಾಹ್ನ ಸಮಯದಲ್ಲಿ ತುಂಬಾನೇ ಬಿಸಿಲು ಇರುವುದರಿಂದ ಕೋಟೆ ಹತ್ತಲು ಸಾಧ್ಯವಾಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karkala: ಚಿನ್ನದಂಗಡಿ ಕಳ್ಳತನ: ಕುಖ್ಯಾತ ಸರಗಳ್ಳ ಅರೆಸ್ಟ್
ICC ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್ ಬುಮ್ರಾ ಹೆಸರು
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.