ಆತ್ಮ ವಿಶ್ವಾಸ, ನಂಬಿಕೆಯೇ ಜೀವನ- ನಿಕ್ ವುಜಿಸಿಕ್
Team Udayavani, Dec 3, 2018, 1:05 PM IST
ಸಾಧನೆ ಎಂಬುವುದೇ ಹಾಗೇ ಅದಕ್ಕೆ ನಂಬಿಕೆ, ಆತ್ಮವಿಶ್ವಾಸ, ನಿರ್ದಿಷ್ಟ ಗುರಿ ಎಂಬುವುದು ಅತೀ ಅಗತ್ಯ. ಸಾಧನೆಯ ಹಂಬಲ ಎಂಬುದು ಇದ್ದರೆ ವ್ಯಕ್ತಿ ಯಶಸ್ಸಿನ ಉತ್ತುಂಗಕ್ಕೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುವುದಕ್ಕೆ ನಿಕ್ ವುಜಿಸಿಕ್ ಸ್ಪಷ್ಟ ಉದಾಹರಣೆ.
ಜೀವನದಲ್ಲಿ ಸವಾಲು ಸ್ವೀಕರಿಸಿ; ಅದು ಕೇವಲ ಒಂದು ಭಾಗವಾಗಿ ಅಲ್ಲ, ಜೀವನವೇ ಒಂದು ಸವಾಲು. ಈ ಮಧ್ಯೆ ನೀವು ಅಷ್ಟಕ್ಕೇ ಸಮಾಧಾನ ಪಟ್ಟರೇ ಸಾಲದು. ನಿಮ್ಮ ಜೀವನದ ಕೊನೆಯ ಘಳಿಗೆಯವರೆಗೂ ನೀವು ಸವಾಲಿನಲ್ಲಿಯೇ ಬದುಕಿದರೆ ನಿಮ್ಮ ಕನಸು ನಿಮ್ಮ ಜತೆಯಲ್ಲಿರುತ್ತದೆ ಇಂತಹದ್ದೊಂದು ಸವಾಲಿನ ಬದುಕಿನ ಬಗ್ಗೆ ಹೇಳಿದವರು, ಸ್ವತಃ ಅಂತಹ ಸವಾಲಿನೊಂದಿಗೆ ಬದುಕಿ ತೋರಿಸಿದ ಖ್ಯಾತ ಅಂತಾರಾಷ್ಟ್ರೀಯ ವಾಗ್ಮಿ ನಿಕ್ ವುಜಿಸಿಕ್.
ನಿಕ್ ವುಜಿಸಿಕ್ ಹುಟ್ಟು ಅಂಗವೈಕಲ್ಯದಿಂದ ಬಳಲಿದವರು. ಈತನ ಜನನದೊಂದಿಗೆಯೇ ಫೊಕಾಮೆಲಿಯ ಎಂಬ ಕಾಯಿಲೆ ಜನಿಸಿತ್ತು. ಈ ಅಪರೂಪ ಕಾಯಿಲೆಯಿಂದಾಗಿ ಆತ ಹುಟ್ಟಿನಿಂದಲೇ ಎರಡು ಕೈ ಹಾಗೂ ಕಾಲುಗಳನ್ನು ಕಳೆದುಕೊಂಡು ಜನಿಸಬೇಕಾಯಿತು. ಇಂತಹ ಸವಾಲನ್ನು ಸ್ವೀಕರಿಸಿ ಆತ ಇಂದಿಗೂ ಬದುಕಿದ್ದಾನೆ, ಜಗತ್ತಿನಾದ್ಯಂತ ಆತನ ಉಪನ್ಯಾಸ ಕೇಳಲು ಕಿಕ್ಕಿರಿದು ಜನ ಸಮೂಹವೇ ಕಿವಿಗೊಡುತ್ತದೆ. ಇಂತಹ ಅಸಾಮಾನ್ಯನ ಸಾಧನೆ ಕಂಡು ಜನಗಳು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಮಾಡಿದ್ದು, ನಿಕ್ ವುಜಿಸಿಕ್ ಸಾಧನೆ ಅಪ್ರತಿಮವಾದುದು.
ನಿಕ್ ವುಜಿಸಿಕ್ 1982 ಡಿಸೆಂಬರ್ 4 ರಂದು ಅಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಜನಿಸಿದನು. ಈತ ಹುಟ್ಟಿನಿಂದಲೇ ಫೂಕಮೆಲಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಬೇರೆಯವರಂತೆ ತಮ್ಮ ಮಗ ಕುಣಿಯುವುದು, ಹಾಡುವುದು, ನಲಿಯುವುದರ ಬಗ್ಗೆ ಸಹಜ ಆಸೆಯನ್ನು ಹೊತ್ತಿದ್ದ ತಾಯಿಗೆ ನಿರಾಸೆ ಮೂಡಿಸಿತ್ತು. ಪತ್ರಿಕೆಯಲ್ಲಿ ಅಂಗವೈಕಲವನ್ನು ಮೆಟ್ಟಿನಿಂತ ಸಾಧಕನ ಕತೆ ಓದಿದ ಬಳಿಕ ನಿಕ್ ವುಜಿಸಿಕ್‌ನ ತಾಯಿ, ನನ್ನ ಮಗನೂ ಕೂಡ ಅಂಗವೈಕಲ್ಯವನ್ನು ಮೆಟ್ಟಿನಿಂತು, ಜಗತ್ತಿನಲ್ಲಿ ಸಾಧಕನಾಗಿ ಮೆರೆಯಬೇಕು ಎಂದು ಪಣ ತೊಟ್ಟಳು. ಈ ಪಣದಿಂದಲೇ ಇಂದು ನಿಕ್ ವುಜಿಸಿಕ್ ದೊಡ್ಡ ವೇದಿಕೆಯಲ್ಲಿ ನಿರರ್ಗಳವಾಗಿ ಜೀವನದ ಬಗ್ಗೆ ಮಾತನಾಡುತ್ತಾನೆ, ಈಜು ಹೊಡೆಯುತ್ತಾನೆ, ಸ್ಕೆç ಡೈವ್ ಮಾಡುತ್ತಾನೆ, ಒಬ್ಬನೇ ಕಾರು ಚಲಾಯಿಸುತ್ತಾನೆ. ಅಂಗವೈಕಲ್ಯವನ್ನೇ ಮೆಟ್ಟಿನಿಂತ ಈ ಪೋರ ಇಂದು ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.
ನಿಕ್ ವುಜಿಸಿಕ್ ಕೇವಲ ವಾಗ್ಮಿಯಷ್ಟೇ ಅಲ್ಲ, ಸ್ವತಃ ಬರೆಹಗಾರ. ಹಲವು ಕೃತಿಗಳನ್ನು ಬರೆದಿದ್ದಾನೆ. ಸಾಕ್ಷ್ಯ ಚಿತ್ರಗಳಲ್ಲಿ ನಟಿಸಿದ್ದಾನೆ. ಬಟರ್ ಫ್ಲೈ ಸರ್ಕಸ್ ಹಾಗೂ ವಿಲ್ಲ್ ಎಂಬ ಜನರ ಮನ ಸೆ ಳೆದು ಪ್ರಶಸ್ತಿ ಗೆದ್ದ ಚಿತ್ರಗಳು. ಈತನ ಅಸಾಮಾನ್ಯ ಸಾಧನೆಗಾಗಿ ಆಸ್ಟ್ರೇಲಿಯನ್ ಯಂಗ್ ನಾಗರಿಕ ಪ್ರಶಸ್ತಿ, ವೆಲ್‌ಡನ್ ಪ್ರಶಸ್ತಿ ದೊರಕಿರುವುದು ಈತನ ಸಾಧನೆಗೆ ಕೈಗನ್ನಡಿಯಾಗಿದೆ. ಕಾನೆ ಮಿಯಾಹಾರ ಎಂಬ ಯುವತಿಯೊಂದಿಗೆ ಮದುವೆಯಾದ ನಿಕ್ ವುಜಿಸಿಕ್, ಕಿಯೋಷಿ ಜೇಮ್ಸ್ ಹಾಗೂ ಡೆಜನ್ ಲೆವಿ ಎಂಬ ಇಬ್ಬರು ಮಕ್ಕಳ ಜತೆ ಮೆಲ್ಬೋರ್ನ್ ನಲ್ಲಿ ಸುಖ ಜೀವನ ಸಾಗಿಸುತ್ತಿದ್ದಾರೆ. ಅಂಗವೈಕಲ್ಯದ ಸವಾಲನ್ನು ಮೆಟ್ಟಿನಿಂತ ನಿಕ್ ವುಜಿಸಿಕ್ ಜೀವನವೇ ಒಂದು ಮಾದರಿ ಹಾಗೂ ಮಾರ್ಗದರ್ಶನ. ಜೀವನದ ಬಗ್ಗೆ ನಿಕ್ ಏನು ಹೇಳುತ್ತಾರೆ ಎಂಬುದು ತಿಳಿಯುವುದು ಸದ್ಯದ ಸಂಗತಿ.
ಮಿತಿಯಿಲ್ಲದ ಬದುಕು ಸಾಗಿಸಿ
ಬೆಂಕಿಯಲ್ಲಿ ಅರಳಿದ ಹೂವಿನಂತೆ, ನಿಕ್ ಕೂಡ ಸವಾಲುಗಳಲ್ಲಿಯೇ ಅರಳಿದ ಸಾಧಕ. ಈತ ಹೇಳುವಂತೆ ಬದುಕಿಗೆ ಮಿತಿ ಹಾಗೂ ಚೌಕಟ್ಟು ಹಾಕಿರಬಾರದು ಎನ್ನುತ್ತಾನೆ. ಜೀವನಕ್ಕೊಂದು ಬೌಂಡರಿಯಿದ್ದರೆ, ನಾವು ಮುಂದೆ ಬರಲು ಸಾಧ್ಯವಿಲ್ಲ. ಲೈಫ್ ವಿಥೌಟ್ ಲಿಮಿಟ್ಸ್ ಎಂದು ನಿಕ್ ಹೇಳುತ್ತಾನೆ. ಜೀವನದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸಬೇಕಿದ್ದರೆ, ನಿಮ್ಮಲ್ಲಿರುವ ಕೆಲವೊಂದು ಋಣಾತ್ಮಕ ಚಿಂತನೆಗಳನ್ನು ದೂರ ಮಾಡಿ ಬದುಕಿದಾಗ ನೀವು ಯಶಸ್ಸಿನ ಸಾಧಕರಾಗಿರುತ್ತೀರಿ ಎನ್ನುತ್ತಾನೆ ನಿಕ್.
ಕಳೆದ ದಿನಗಳ ಚಿಂತೆಯೇಕೆ?
ನಾವು ಸ್ವಾಭಾವಿಕವಾಗಿ ನಮ್ಮ ಜೀವನದಲ್ಲಿ ಕಳೆದು ಹೋದ ಘಟನೆಗಳಿಂದ ಆದ ನೋವನ್ನೇ ಮೆಲುಕು ಹಾಕಿ ವ್ಯಥೆಪಡುತ್ತಿರುತ್ತೇವೆ. ಆದರೆ ನಿಕ್ ಹಾಗಲ್ಲ. ಆತ ಇಂದು ಹಾಗೂ ನಾಳೆಯ ಬಗ್ಗೆ ಚಿಂತಿಸಲ್ಲ, ಯೋಚಿಸುತ್ತಾನೆ. ಆತನೇ ಹೇಳುವಂತೆ, ನನಗೆ ಎರಡು ಕೈಯಿಲ್ಲ, ಎರಡೂ ಕಾಲಿಲ್ಲ, ಅದರ ಬಗ್ಗೆ ನಾನು ಚಿಂತೆಯೂ ಮಾಡಲ್ಲ ಎಂದೂ ನಿಕ್ ತನ್ನ ಜೀವನದ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನು ಆಡುತ್ತಾನೆ. ಇದು ನಮ್ಮೆಲ್ಲರಿಗೂ ಸ್ಫೂರ್ತಿಯಾಗುವ ಮಾತುಗಳೇ, ಇದನ್ನ ಅರಿತು ನಾವು ಮುನ್ನಡೆದರೆ, ನಿಕ್‌ನಂತೆ ಕೂಡ ನಾವೂ ಮುಂದೆ ಬರಬಹುದು.
ನಂಬಿಕೆಯೇ ಜೀವನ
ನಿಕ್ ವುಜಿಸಿಕ್ ಬಹುತೇಕ ಭಾಷಣ ಹಾಗೂ ಬರೆಹಗಳಲ್ಲಿ ವ್ಯಕ್ತವಾಗುತ್ತಿದ್ದ ಬಹುಮುಖ್ಯ ಅಂಶವೆಂದರೆ ನಂಬಿಕೆಯ ಬಗ್ಗೆ. ಆತ ಹೇಳುವಂತೆ ಜೀವನದಲ್ಲಿ ನೀವು ನಂಬಿಕೆ ಇಡದಿದ್ದರೆ, ಏನನ್ನೂ ಸಾಧಿಸಲೂ ಆಗುವುದಿಲ್ಲ. ನಾನು ಕೂಡ ನನ್ನ ಅಂಗವೈಕಲ್ಯದ ಬಗ್ಗೆ ಚಿಂತಿಸುತ್ತಾ ಕುಳಿತಿದ್ದರೆ, ವ್ಹೀಲ್ ಚೇರ್ ಮೇಲೆಯೇ ಕುಳಿತಿರಬೇಕಿತ್ತು. ಅದನ್ನು ಹಿಮ್ಮೆಟ್ಟಿಸಿ, ನಂಬಿಕೆಯ ಮೇಲೆ ಮುಂದೆ ಬಂದೆ ಎಲ್ಲವೂ ಸಾಧ್ಯವಾಯಿತು. ನಂಬಿಕೆಯಿಂದಲೇ ಇಂದು ನಾನು ಜಗತ್ತನ್ನು ಸುತ್ತುತ್ತಿದ್ದೇನೆ. ನನ್ನ ನಂಬಿಕೆಯಿಂದಲೇ ಇಂದು ನಾನು ಈಜುತ್ತೇನೆ, ಸ್ಕೈಡೈವ್ ಮಾಡುತ್ತೇನೆ. ಅದಕ್ಕಾಗಿ ನಂಬಿಕೆಯೇ ಜೀವನ ಎಂದು ನಿಕ್ ಹೇಳುತ್ತಾರೆ.
ಕೈ, ಕಾಲುಗಳಿಲ್ಲದ ವ್ಯಕ್ತಿ ಕೈ, ಕಾಲುಗಳಿಲ್ಲದ ವ್ಯಕ್ತಿ ಸಾಧನೆಯ ಬಗ್ಗೆ ಕನಸು ಕಾಣುತ್ತಾನೆ ಅಂತಾದರೆ ನಮಗೆ ಯಾಕೆ ಸಾಧ್ಯವಿಲ್ಲ? ಯಾಕೆ ಸಾಧ್ಯವಿಲ್ಲ?
ಯಾವತ್ತೂ ಒಳ್ಳೆಯ ಕೆಲಸಗಳನ್ನೇ ಮಾಡಲು ಪ್ರಯತ್ನಿಸಿ; ಉಳಿದುದನ್ನು ದೇವರು ನೋಡಿಕೊಳ್ಳುತ್ತಾನೆ.
ನನ್ನಲ್ಲಿ ಏನು ಇಲ್ಲವೋ ಅದಕ್ಕಾಗಿ ನಾನು ದೇವರನ್ನು ದ್ವೇಷಿಸುತ್ತೇನೆ. ಹಾಗೆಯೇ ಇಂದು ನಾನು ಏನಾಗಿದ್ದೇನೆಯೋ ಅದಕ್ಕೆ ಕೃತಜ್ಞತೆ ಹೇಳಬಯಸುತ್ತೇನೆ.
ಶಿವ ಸ್ಥಾವರ ಮಠ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.