ಸ್ವಾವಲಂಬನೆ ಉದ್ಯೋಗ ಮಾದರಿಯಾಗಲಿ
Team Udayavani, Nov 26, 2018, 2:14 PM IST
ಮಹಿಳೆಯರು ತಮ್ಮ ಪೂರ್ಣಾವಧಿ ಶಿಕ್ಷಣ ಮುಗಿದ ಬಳಿಕ ಹಲವು ಅವಕಾಶ ಹಾಗೂ ಉದ್ಯೋಗಕ್ಕಾಗಿ ಪ್ರಯತ್ನಗಳನ್ನು ಮಾಡಿದರೂ, ಕೂಡ ಯಶಸ್ವಿಯಾಗುವುದಿಲ್ಲ. ಇದಕ್ಕೆ ಸಾಮರ್ಥ್ಯ ಹಾಗೂ ಶಕ್ತಿ ಕುಂದಿಸಿಕೊಳ್ಳುವ ಆವಶ್ಯಕತೆಯೇ ಇಲ್ಲ. ಬದಲಾಗಿ ಹಲವಾರು ಮಾರ್ಗಗಳಲ್ಲಿ ಮಹಿಳೆಯರು ಇಂದು ತೊಡಗಿಸಿಕೊಳ್ಳುವ ಮಾರ್ಗಗಳಿರುವುದಂತೂ ಸತ್ಯ. ಅಂತಹ ಕೆಲವೊಂದು ಸಂಗತಿಗಳು ಇಲ್ಲಿವೆ.
ಹವ್ಯಾಸಿ ಬರೆಹ
ಬರೆವಣಿಗೆಯೂ ಕೂಡ ಇಂದು ಅನೇಕರಿಗೆ ಹಲವು ರೀತಿಯಲ್ಲಿ ವೇದಿಕೆಯಾಗಿದ್ದು, ಒಂದು ಸಾಮಾಜಿಕ ಜವಾಬ್ದಾರಿಯ ಜತೆಗೆ ಉದ್ಯೋಗ ನೀಡಬಲ್ಲದು ಎಂಬುದು ಗಮನಾರ್ಹವಾದುದು. ಇಂದು ಅನೇಕ ವಿದ್ಯಾವಂತ ಮಹಿಳೆಯರು ತಮ್ಮ ಪದವಿ ಶಿಕ್ಷಣ ಮುಗಿದ ಬಳಿಕ ಉದ್ಯೋಗ ಸಿಗದೇ ಇರಬಹುದು, ಆದರೆ, ಬರೆವಣಿಗೆ ಪ್ರವೃತ್ತಿಯನ್ನು ಮುಂದುವರೆಸಿದರೆ, ಸ್ವಾಭಾವಿಕವಾಗಿ ಉದ್ಯೋಗವನ್ನು ಕೂಡಗಳಿಸಿಕೊಳ್ಳಬಹುದು.
ಸ್ವಾವಲಂಬನೆ ಉದ್ಯೋಗ
ಶಿಕ್ಷಣ ಪಡೆದ ಮಾತ್ರಕ್ಕೆ ಉದ್ಯೋಗ ಸಿಗಬೇಕಿಲ್ಲ ಎಂಬ ಮಾತಿನಂತೆ, ಶಿಕ್ಷಣ ಮುಗಿದ ಅನಂತರ ಕೇವಲ ಕಚೇರಿ ಉದ್ಯೋಗ ಸಿಗಬೇಕೆಂದೇನಿಲ್ಲ, ಬದಲಾಗಿ ಹಲವಾರು ರೀತಿಯಲ್ಲಿ ಮಹಿಳೆಯರು ಸ್ವಾವಲಂಬನೆಯ ಉದ್ಯೋಗಿಯಾಗಬಹುದು. ಅದರಲ್ಲಿ ಮನೆಯಲ್ಲಿ ಉಳಿದಿರುವ ತ್ಯಾಜ್ಯ ವಸ್ತುಗಳಿಂದ, ಅದನ್ನು ಮರುಪೂರಣ ಮಾಡುವ ಮೂಲಕ ಕಲಾಕೃತಿ ಮಾಡಬಹುದು.
ಸ್ವಸಹಾಯ ಸಂಘಗಳನ್ನು ಕಟ್ಟುವುದು
ಮಹಿಳೆಯರಿಗೆ ಇಂದು ಅನೇಕರಿಗೆ ಉದ್ಯೋಗಕ್ಷೇತ್ರವಾಗಿ ಸ್ವಸಹಾಯ ಸಹಕಾರ ಕ್ಷೇತ್ರ ಬೆಳೆದು ನಿಂತಿದೆ. ಈ ಕಾರಣಕ್ಕಾಗಿಯೇ ಎಷ್ಟೋ ಮಹಿಳೆಯರಿಗೆ ಉದ್ಯೋಗ ಕ್ಷೇತ್ರವಾಗಿದೆ. ಸ್ಥಳೀಯವಾಗಿ ಸ್ವಸಹಾಯ ಸಂಘಗಳನ್ನು ಕಟ್ಟಿಕೊಂಡು ಈ ಮೂಲಕ ಆರ್ಥಿಕವಾಗಿ ಸಶಕ್ತರಾಗಬಹುದು. ಹಾಗೆಯೇ ಉದ್ಯೋಗ ಕ್ಷೇತ್ರವಾಗಿಯೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಕೈ ಹಿಡಿಯುವ ಕೃಷಿ ಕ್ಷೇತ್ರ
ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಗಣನೀಯ. ಹೀಗಾಗಿ ಕೃಷಿ ಸಹಿತ ಹೈನುಗಾರಿಕೆ, ಜೇನು ಸಾಕಣೆ ಅಂತಹ ಕ್ಷೇತ್ರಗಳಲ್ಲಿ ಕೂಡ ಮಹಿಳೆಯರು ಸ್ವಾವಲಂಬನೆಯಾಗಿ ತೊಡಗಿಸಿಕೊಳ್ಳಬಹುದಾಗಿದ್ದು, ಇದಕ್ಕೆ ಸರಕಾರ ಕೂಡ ಹಲವಾರು ಯೋಜನೆಗಳ ಮೂಲಕ ಆರ್ಥಿಕ ಸಹಾಯಕ್ಕೆ ನಿಂತಿರುವಾಗ ಮಹಿಳೆಯರು ಕೇವಲ ಕಚೇರಿ ಉದ್ಯೋಗಕ್ಕಿಂತ ಸ್ವಾವಲಂಬನೆ ಮಾದರಿಯ ಉದ್ಯೋಗ ಹರಿಸಿಕೊಳ್ಳವುದು ಮುಖ್ಯವೆನಿಸುತ್ತದೆ. ಇದು ಭವಿಷ್ಯ ಹಾಗೂ ವೈಯಕ್ತಿಕ ಅಭಿವೃದ್ಧಿಗೆ ಪೂರಕ. ಇಂದು ಸಮಾಜದಲ್ಲಿ ಮಹಿಳೆಯರ ಸಶಕ್ತೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಸ್ಫರ್ಧಾತ್ಮಕತೆಯಿಂದಾಗಿ ಹಲವರಿಗೆ ಉದ್ಯೋಗದಿಂದ ದೂರವಾಗಬಹುದು, ಅದಕ್ಕೆ ಹಿಂಜರಿಯದೇ ಈ ಮೇಲಿನ ಕ್ಷೇತ್ರಗಳ ಮೂಲಕ ತಮ್ಮನ್ನು ತಾವು ಸ್ವಾವಲಂಬಿಯಾಗಬಹುದಾಗಿದೆ.
ಶಿವಲೀಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.