ತಡವಾದ ಮುಂಗಾರು ಭತ್ತ ಕೃಷಿಗೆ ಹಿನ್ನಡೆ
Team Udayavani, Jun 23, 2019, 6:00 AM IST
ಈ ವರ್ಷ ವಾಡಿಕೆಯಂತೆ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಪ್ರವೇಶಿಸದ ಕಾರಣ ಮುಖ್ಯವಾಗಿ ಭತ್ತದ ಕೃಷಿ ನಿಧಾನಗೊಂಡಿದೆ. ಜೂನ್ ತಿಂಗಳ ಮೊದಲ ವಾರದಲ್ಲೇ ಮುಂಗಾರು ಮಳೆ ಕೃಷಿ ಕಾರ್ಯಗಳಿಗೆ ಇಳಿಯುವ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತದೆ.
ಮುಂಗಾರು ಮಳೆ ಸುರಿದು ಎರಡು ಅಥವಾ ಮೂರನೇ ವಾರದಲ್ಲಿ ಗದ್ದೆ ಕೆಲಸಗಳಿಗೆ ರೈತರು ಇಳಿಯುತ್ತಾರೆ. ಕಳೆದ ವರ್ಷವನ್ನು ಬಿಟ್ಟರೆ ಹಿಂದಿನ ಎರಡು ವರ್ಷಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ವಾತಾವರಣ ನಿರ್ಮಾಣವಾಗಿತ್ತು. ತಡವಾಗಿ ಮುಂಗಾರು ಮಳೆ ಸುರಿದ ಕಾರಣ ಹಾಗೂ ನಿರೀಕ್ಷೆಯ ಮಳೆ ಸುರಿಯದೆ ಭತ್ತದ ಕೃಷಿಯೂ ತಡವಾಗಿ ಆರಂಭಗೊಂಡಿತ್ತು. ಈ ಬಾರಿಯೂ ಅದೇ ವಾತಾವರಣ ನಿರ್ಮಾಣವಾಗಿದೆ.
ಭತ್ತ ಬೆಳೆಯುವ ಕೃಷಿಕ ಗದ್ದೆಯನ್ನು ಉತ್ತು ಬೀಜ ಬಿತ್ತಿದ ಸಂದರ್ಭದಲ್ಲಿ ಮಳೆಯ ಪ್ರಮಾಣ ಇಳಿಮುಖವಾದರೆ ನಿರೀಕ್ಷಿತ ರೀತಿಯಲ್ಲಿ ಫಸಲು ಬೆಳೆಯಲು ಸಾಧ್ಯವಿಲ್ಲ. ಆರಂಭದ ಮಳೆ ನಿರೀಕ್ಷೆ ಹುಟ್ಟಿಸಿದರೂ ಗದ್ದೆಯನ್ನು ಹದಮಾಡಿ ಬೀಜ ಬಿತ್ತಿದ ಬಳಿಕ ಅಂದರೆ ಜೂನ್ ತಿಂಗಳ ಅಂತ್ಯದಲ್ಲಿ ಅಥವಾ ಜುಲೈ ತಿಂಗಳ ಆರಂಭದಲ್ಲಿ ಮಳೆ ಕೈಕೊಟ್ಟರೆ ಸ್ವಲ್ಪ ಕಷ್ಟವೆಂಬ ಕಾರಣದಿಂದ ಭತ್ತದ ಬೆಳೆಗಾರ ಕಾದು ನೋಡುತ್ತಾರೆ. ಒಮ್ಮೆ ಉತ್ತಮ ರೀತಿಯಲ್ಲಿ ನೀರಾದರೆ ಮತ್ತೆ ಪಂಪ್ ಬಳಸಿಯಾದರೂ ಗದ್ದೆಗೆ ನೀರು ಹಾಯಿಸಬಹುದು ಎನ್ನುವ ನಿರೀಕ್ಷೆ ಆತನಲ್ಲಿದೆ.
ಯಂತ್ರಗಳ ಬಳಕೆ
ಭತ್ತದ ಕೃಷಿಯಲ್ಲಿ ಗದ್ದೆ ಉಳುವುದರಿಂದ ಹಿಡಿದು ಭತ್ತದ ಫಸಲನ್ನು ಕೊೖಲು ಮಾಡುವವರೆಗೂ ಬಳಸುವ ಯಂತ್ರಗಳು ಇಂದು ಲಭ್ಯವಿವೆ. ಕೂಲಿ ಕಾರ್ಮಿಕರ ಕೊರತೆ ಇರುವುದರಿಂದ ಭತ್ತದ ಕೃಷಿಕರೂ ಯಂತ್ರೋಪಕರಣಗಳನ್ನು ನಿಧಾನವಾಗಿ ಅನುಸರಿಸುತ್ತಿದ್ದಾರೆ. ಯಂತ್ರಗಳ ಮೂಲಕ ಒಂದೆರಡು ದಿನಗಳಲ್ಲಿ ಕೆಲಸಗಳನ್ನು ಪೂರೈಸಲು ಸಾಧ್ಯವಿರುವುದರಿಂದ ಮಳೆ ಸರಿಯಾಗಿ ಸುರಿದರೆ ಕೂಡಲೇ ಭತ್ತ ಕೃಷಿ ವೇಗವನ್ನು ಪಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.