ಲಿಂಬುವಿನಿಂದ ಹೊಳಪು
Team Udayavani, Nov 24, 2018, 2:11 PM IST
ಲಿಂಬೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಸಾಮಾನ್ಯವಾಗಿ ಈ ಹಣ್ಣನ್ನು ಪ್ರತಿಯೊಬ್ಬರ ಮನೆಯಲ್ಲೂ ಅಡುಗೆಗೆ ಅಥವಾ ತಂಪು ಪಾನೀಯಗಳನ್ನು ಮಾಡಲು ಉಪಯೋಗಿಸುತ್ತಾರೆ. ಆದರೆ ಇದರಿಂದ ನಿಮ್ಮ ಮನೆಯನ್ನೂ ಹಾಗೂ ಅಲ್ಲಿರುವ ವಸ್ತುಗಳನ್ನು ಕೂಡ ಹೊಳಪಿನಿಂದ ಇಟ್ಟುಕೊಳ್ಳಬಹುದು ಎಂದರೆ ನಿಮಗೆ ಆಶ್ಚರ್ಯವೆನಿಸಬಹುದು.
ಅಡುಗೆ ಮಾಡುವ ಕಟ್ಟೆ ಸ್ವಚ್ಛತೆಗೆ
ನೀವು ಅಡುಗೆ ಮಾಡಿ ಮುಗಿಸಿದ್ದೀರಿ ಆದರೆ ಆ ಟೈಲ್ಸ್ ಗಳ ಮೇಲೆ ಆದ ಕಲೆಗಳು ಹೋಗುತ್ತಿಲ್ಲ ಎಂದಾದರೆ ಬಳಸಿದ ನಿಂಬೆ ಹಣ್ಣಿನ ಸಿಪ್ಪೆಗೆ ಸ್ವಲ್ಪ ಉಪ್ಪು ಬೇರೆಸಿ ಅದನ್ನು ಟೈಲ್ಸ್ ಅಥವಾ ಕಟ್ಟೆಗಳ ಮೇಲೆ ಒರೆಸುವುದರಿಂದ ಜಿಡ್ಡಿನ ಕಲೆಗಳು ಹೋಗುತ್ತದೆ. ಕಟ್ಟೆಗಳ ಮೇಲೆ ವರ್ಷಗಟ್ಟಲೆಯಿಂದ ಇದ್ದ ಕಲೆಗಳು ಕೂಡ ಮಾಯವಾಗುತ್ತದೆ.
ಬೇಸಿನ್ ಸ್ವಚ್ಛಗೊಳಿಸಲು
ಸ್ಟೀಲ್ ಬೇಸಿನ್ ಗಳು ಬೇಗ ಹೊಳಪು ಕಳೆದುಕೊಳ್ಳುತ್ತವೆ. ಅದಲ್ಲದೆ ಜಿಡ್ಡು ಇನ್ನಿತರ ಕಲೆಗಳಿಂದ ಮುಕ್ತಿ ಹೊಂದಲು ಲಿಂಬೆ ಹಣ್ಣು ಅತ್ಯಂತ ಸಹಾಯಕಾರಿ ಇದರ ರಸ ಹಾಗೂ ಸ್ವಲ್ಪ ಉಪ್ಪು ಮತ್ತು ಅಡುಗೆ ಸೋಡಾ ಬಳಸಿ ಬೇಸಿನ್ ಉಜ್ಜಿದರೆ ಹೊಳಪು ಪಡೆದುಕೊಂಡು ಸುಂದರವಾಗಿ ಕಾಣುತ್ತದೆ ಅದಲ್ಲದೆ ಜಿಡ್ಡಿನ ಕಲೆಗಳೂ ಮಾಯವಾಗುತ್ತದೆ.
ಚಾ ಸೋಸುವ ಸೌಟು
ಚಾ ಸೋಸುವ ಸೌಟು ಎಷ್ಟು ತೊಳೆದರೂ ಕೂಡ ಹೋಗು ವುದೇ ಇಲ್ಲ ಆಗ ಲಿಂಬೆ ಹಣ್ಣು ಹಾಕಿ ಉಜ್ಜಿದರೆ ಅದರ ಕಲೆಗಳು ಮಾಯವಾಗಿ ಚಾ ಸೋಸುವ ಸೌಟು ಕ್ಲೀನ್ ಆಗುತ್ತದೆ.
ತಾಮ್ರ ಹಿತ್ತಾಳೆ ಪಾತ್ರೆ ಸ್ವಚ್ಛಗೊಳಿಸಲು
ಮನೆಯಲ್ಲಿ ದೇವರ ಪಾತ್ರೆ ಅಥವಾ ಇನ್ನಿತರ ಕೆಲಸಗಳಿಗೆ ತಾಮ್ರ ಹಿತ್ತಾಳೆ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಅವುಗಳು ಬರುಬರುತ್ತಾ ಹೊಳಪು ಕಳೆದುಕೊಳ್ಳುತ್ತದೆ. ಆಗ ಲಿಂಬೆ ಹಣ್ಣಿಗೆ ಸ್ವಲ್ಪ ಉಪ್ಪು ಹಾಗೂ ಹುಣಸೆ ಹಣ್ಣು ಸೇರಿಸಿ ಪಾತ್ರೆಯನ್ನು ಉಜ್ಜಬೇಕು. ಆಗ ಪಾತ್ರೆಗಳು ಹೊಸದರಂತೆ ಕಂಗೊಳಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.