![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 4, 2020, 5:56 AM IST
ಸೌತೆಕಾಯಿ ಜ್ಯೂಸ್
ಮಲಗುವ ಮುನ್ನ ಈ ಆರೋಗ್ಯಕರ ಜ್ಯೂಸ್ ಕುಡಿಯುವುದರಿಂದ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಡ್, ನಾರಿನಂಶ, ಖನಿಜಾಂಶ, ವಿಟಮಿನ್‌ಮೈ ಬೊಜ್ಜು ಕರಗಿಸುವಲ್ಲಿ ಸಹಕಾರಿಯಾಗುತ್ತದೆ. ಇದು ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗದಂತೆ ತಡೆಯುತ್ತದೆ.
ನಿಂಬೆ ಮತ್ತು ಸೌತೆಕಾಯಿ ಜ್ಯೂಸ್
ನಿಂಬೆರಸ ಬೊಜ್ಜು ಕರಗಿಸುವಲ್ಲಿ ಪರಿಣಾಮಕಾರಿ. ಮಲಗುವ ಮುನ್ನ ಸೌತೆಕಾಯಿ ಜ್ಯೂಸ್‌ಗೆ ನಿಂಬೆರಸ ಹಾಕಿ ಕುಡಿಯುವುದರಿಂದ ಬೊಜ್ಜನ್ನು ಕರಗಿಸಬಹುದು. ಈ ಜ್ಯೂಸ್ ಅನ್ನು ರುಚಿಕರವಾಗಿ ಮಾಡ ಬಯಸುವುದಾದರೆ ಸೌತೆಕಾಯಿ, ಕಿತ್ತಳೆ, ಸ್ವಲ್ಪ ನೀರು ಹಾಕಿ ಜ್ಯೂಸ್ ಮಾಡಿ ಅನಂತರ ಅದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ.
ಸೌತೆಕಾಯಿ ಮತ್ತು ಕೊತ್ತಂಬರಿ ಸೊಪ್ಪು
ಸೌತೆಕಾಯಿ ಹಾಗೂ ಕೊತ್ತಂಬರಿ ಸೊಪ್ಪಿನ ಜ್ಯೂಸ್ ಕೂಡ ಹೊಟ್ಟೆಬೊಜ್ಜು ಕರಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಒಂದು ಸೌತೆಕಾಯಿ, ಒಂದು ಕಪ್ ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ, ನಂತರ ಸ್ವಲ್ಪ ನಿಂಬೆರಸ ಹಾಕಿ ಕುಡಿಯಿರಿ. ಇನ್ನು ಇದಕ್ಕೆ ಸ್ವಲ್ಪ ತುರಿದ ಶುಂಠಿ ಹಾಗೂ 1 ಚಮಚ ಲೋಳೆಸರ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಕುಡಿಯಬಹುದು.
ಅನಾನಸ್ ಜ್ಯೂಸ್
ಅನಾನಸ್ ಜ್ಯೂಸ್ ಬಾಯಿಗೂ ರುಚಿಕರ ಹೊಟ್ಟೆ ಬೊಜ್ಜು ಕರಗಿಸುವಲ್ಲಿಯೂ ಪರಿಣಾಮಕಾರಿ. ಅನಾನಸ್ ಜ್ಯೂಸ್ ಮಾಡಿ ಅದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿಯಬಹುದು.
ಸ್ಟ್ರಾಬೆರಿ ಮತ್ತು ನಿಂಬೆರಸ
ಈ ಜ್ಯೂಸ್‌ಗೆ ಉರಿಯೂತವನ್ನು ಕಡಿಮೆ ಮಾಡುವ ಹಾಗೂ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಸುವ ಸಾಮರ್ಥ್ಯ ಇದೆ. ಮಲಗುವ ಮುನ್ನ ಈ ಜ್ಯೂಸ್ ಕುಡಿದು ಹೊಟ್ಟೆ ಬೊಜ್ಜು ಕಡಿಮೆ ಮಾಡಿಕೊಳ್ಳಿ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.