ಮೌನ ಸಾಂತ್ವನ ಹೃದಯದ ಮಾತು

Team Udayavani, Jun 24, 2019, 5:47 AM IST

mouna-santwana

ಮೌನಕ್ಕೆ ಭಾವನೆಗಳೇ ಇಲ್ಲವೆಂಬುದು ಹಲವರ ಭಾವನೆ. ಆದರೆ ಮೌನವೇ ಒಂದು ಅದ್ಭುತ ಭಾವನೆಯೆಂಬ ಸತ್ಯವನ್ನು ಎಲ್ಲರೂ ಮರೆತಿದ್ದಾರೆ. ಅಲ್ಲಿ ಪ್ರೀತಿಯಿದೆ, ಕಾಳಜಿ, ನೋವು, ಕೋಪ, ಅಹಂಕಾರ, ಸ್ವಾಭಿಮಾನ ಎಲ್ಲವೂ ಇದೆ. ಆದರೆ ತೋರಿಸುವ ರೀತಿ ಬೇರೆಯೆಂಬುದು ಮಾತ್ರ ಸತ್ಯ. ಅದಕ್ಕಿಂತ ಹೆಚ್ಚು ನಿಗೂಢ.

ಭಾವನೆಗಳನ್ನು ತೋರಿಸಲು ಮಾತೇ ಪ್ರಧಾನವಾದ ಮಾರ್ಗ. ಅದು ಯಾವುದೇ ಆಗಿರಬಹುದು. ಪ್ರೀತಿ ಕೋಪ ಹೀಗೆ ಎಲ್ಲ. ಮಾತಿನಲ್ಲಿ ಹೇಳಿದಾಗ ಅದು ಅರ್ಥವಾಗಬೇಕಾದ ವ್ಯಕ್ತಿಗೆ ನೇರವಾಗಿ ಅರ್ಥವಾಗುತ್ತದೆ. ಆದರೆ ಮೌನ ಹಾಗಲ್ಲ. ಅದು ಅರ್ಥವಾಗಬೇಕಾದರೆ ಎರಡು ವ್ಯಕ್ತಿಗಳ ನಡುವೆ ಸಂಭಾಷಣೆಯೇ ನಡೆಯಬೇಕೆಂದಿಲ್ಲ. ಎಲ್ಲ ಭಾವನೆಗಳೂ ಹೃದಯವನ್ನು ತಟ್ಟುತ್ತವೆ. ಅಷ್ಟು ಶಕ್ತಿಯಿದೆ.

ಸೀತೆಯನ್ನು ಕಾಡಿಗೆ ಅಟ್ಟುವಾಗ ರಾಮನ ಮೌನದಲ್ಲಿದ್ದದ್ದು ಸೀತೆಯ ಬಗ್ಗೆ ಅಪರಿಮಿತ ಪ್ರೀತಿ ಮತ್ತು ಕಾಳಜಿ ಹಾಗೂ ರಾಜ ಮತ್ತು ಗಂಡನ ಪದವಿಯ ನಡುವೆ ಸಿಲುಕಿದ ತೊಳಲಾಟ ಮಾತ್ರ. ಆದರೆ ಪ್ರಜೆಗಳಿಗೆ ಅರ್ಥವಾದದ್ದು ಅವನು ಮಾತಿನಲ್ಲಿ ಹೇಳಿದ ಶಾಸನ ಮಾತ್ರ. ಆದರೆ ಸೀತೆಗೆ ಹಾಗಲ್ಲ. ಅವಳಿಗೆ ಅವನ ಮೌನವೂ ಅರ್ಥವಾಗಿತ್ತು. ಅದಕ್ಕಾಗಿಯೇ ಕಾಡಿನ ಮಧ್ಯೆ ಲಕ್ಷ್ಮಣ ಅವಳನ್ನು ಬಿಟ್ಟು ಬಂದಾಗಲೂ ಸೀತೆ ರಾಮನನ್ನು ಹಳಿಯುವುದಿಲ್ಲ. ಅದುವೇ ಮೌನದ ಮಹತ್ವ.

ಸೋತು ನಿಂತಿರುವ ಪ್ರತಿಯೊಬ್ಬರಿಗೂ ಸಾಂತ್ವನದ ಅಗತ್ಯವಿರುತ್ತದೆ. ಅದಕ್ಕಾಗಿ ಜಗತ್ತೆಲ್ಲ ಕೇಳುವಂತೆ ನಾನು ನಿನ್ನೊಂದಿಗಿದ್ದೇನೆಂದು ಹೇಳಬೇಕಾಗಿಲ್ಲ. ಸೊರಗಿದ ಕೈಯನ್ನು ಗಟ್ಟಿ ಹಿಡಿದರೂ ಸಾಕು. ಸೋತಿರುವ ವ್ಯಕ್ತಿಗೆ ನೂರಾನೆ ಬಲ ಬಂದಂತಾಗುತ್ತದೆ.

ಮೌನ ಎಂದರೆ ಸೋಲಲ್ಲ. ಸೋತು ಗೆಲ್ಲುವ ತವಕ. ಕೆಲವು ಬಾರಿ ನಿಮ್ಮ ಮೌನ ಹಲವರಿಗೆ ಅರ್ಥವಾಗದೇ ಹೋಗಬಹುದು. ಮೌನದ ಹಿಂದಿರುವ ನಿಮ್ಮ ಭಾವನೆಗಳಿಗೆ ಎದುರಿಗಿರುವ ವ್ಯಕ್ತಿ ಸ್ಪಂದಿಸಬೇಕಾದರೆ ಮೌನವನ್ನು ಮುರಿಯಲೇ ಬೇಕು. ಮನಸ್ಸಿನಲ್ಲಾಗುವ ಭಾವನೆಗಳಿಗೆ ಮಾತಿನ ರೂಪವನ್ನು ನೀಡಿದರೆ ಮಾತ್ರ ಎಲ್ಲ ರೂ ಸ್ಪಂದಿಸುತ್ತಾರೆ. ಗಾಢ ಮೌನವಹಿಸಿ ಸಂಬಂಧಗಳನ್ನು ಕೆಡಿಸಿಕೊಳ್ಳುವುದರ ಬದಲು ಒಂದೆರಡು ಮಾತನಾಡಿ ಭಾವನೆಗಳನ್ನು ಹಂಚಿಕೊಂಡರೆ ಮುರಿದು ಹೋಗುವ ಎಷ್ಟೋ ಬಾಂಧವ್ಯಗಳನ್ನು ಉಳಿಸಬಹದು.

-  ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

15-

Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.