ಮೌನಕ್ಕಿದೆ ಅನೇಕ ಅರ್ಥ
Team Udayavani, Oct 21, 2019, 5:15 AM IST
ಮಾತಿಗೆ ಒಂದು ಅರ್ಥವಾದರೆ ಮೌನಕ್ಕೆ ಅನೇಕ ಅರ್ಥಗಳು. ಮೌನ ಧನಾತ್ಮಕತೆ ಮತ್ತು ಋಣಾತ್ಮಕತೆಗಳ ಎರಡು ಅಲಗಿನ ಕತ್ತಿಯಂತೆ. ಅದನ್ನು ಚಾಕಚಕ್ಯತೆಯಿಂದ ಬಳಸುವುದು ಅವರವರಿಗೆ ಬಿಟ್ಟಿದ್ದು. ಸಂತೋಷದ ಜತೆಗೆ ಮೌನಕ್ಕೂ ಜೀವನದಲ್ಲಿ ಮಹತ್ತರವಾದ ಪಾತ್ರವಿದೆ. ಹೌದು, ಮೌನದಿಂದ ಆಗುವಂತಹ ಕೆಲಸಗಳು ಯಾವ ಮಾರ್ಗದಿಂದಲೂ ಮಾಡಲು ಸಾಧ್ಯವಾಗುವುದಿಲ್ಲ . ಹಾಗೆಯೇ ಮೌನದಿಂದ ಯೋಜನೆಗಳು, ಯೋಚನೆಗಳು ಧನಾತ್ಮಕತೆಯನ್ನು ಹೊಂದುತ್ತದೆ. ಮನಸ್ಸಿನ ಒತ್ತಡದ ಜತೆಗೆ ಮನಸ್ಸಿನ ನೋವನ್ನು ಮರೆಸಲು ಮೌನವೊಂದೇ ದಾರಿ, ಸಾಧನೆಗೂ ಮೌನ ಸಹಕಾರಿ. ನೆಮ್ಮದಿಯುಕ್ತ ಜೀವನಕ್ಕೆ ಮೌನವೂ ಜತೆಗೂಡುತ್ತದೆ.
ಕೋಪ ಶಮನಕ್ಕೆ ರಾಮಬಾಣ
ಒಂದು ಮಾತಿದೆ ಕೋಪದ ಕೈಗೆ ಬುದ್ಧಿ ಕೊಡಬಾರದೆಂದು, ಹಾಗಾಗಿ ಮನುಷ್ಯನ ಕಡು ವೈರಿ ಕೋಪ. ಈ ಕೋಪದಿಂದ ಉತ್ತಮ ಸ್ನೇಹ ಸಂಬಂಧಗಳು ಸಾಯುತ್ತವೆ ಇದನ್ನು ತಪ್ಪಿಸಲು ಮೌನವೊಂದೇ ರಾಮಬಾಣ. ಮೌನಕ್ಕೆ ಸಂಬಂಧ ಬೆಸೆಯುವ ಶಕ್ತಿಯೂ ಇದೆ. ಗೆಳೆತನ, ಸಂಸಾರಗಳಲ್ಲಿ ಕೆಲವೊಮ್ಮೆ ಕೊಪದಲ್ಲಿ ಮಾತಿಗೆ ಮಾತು ಬೆಳೆದು ಮುಂದೆಂದೂ ಜೋಡಿಸಲು ಸಾಧ್ಯವಾಗದಷ್ಟರ ಮಟ್ಟಿಗೆ ಸಂಬಂಧದ ಸೇತುವೇ ಮುರಿದು ಬೀಳಬಹುದು, ಆದರೆ ಹೀಗಾಗದಿರಲು ಮೌನದ ಗೆಳೆತನ ಬೆಳೆಸುವುದು ಒಳಿತು. ಮೌನಂ ಸಮ್ಮತಿ ಲಕ್ಷಣಂ ಅನ್ನೋ ಮಾತು ಸಹ ಒಪ್ಪುವಂತಹದು. ಮಾತುಗಾರ ಮೌನವಹಿಸಿದನೆಂದರೆ ಅಲ್ಲಿ ಅವನಿಗಾದ ಅನುಭವ ಆತನಿಗೆ ಲಭಿಸಿದ ವಿಷಯಗಳು ಅವನ ಸಾಧನೆಗೆ ಪೂರಕವಾಗಿದೆ ಎಂದರ್ಥ. ಬದಲಿಗೆ ಆತನಿಗೆ ಅಹಂಕಾರ ಎಂದಲ್ಲ.
ಹೌದು ಮಾತಿಗಿಂತ ಮೌನಕ್ಕೆ ಬೆಲೆ ಜಾಸ್ತಿ, ಅದಕ್ಕೆ ಹೇಳಿರಬೇಕು ಹಿರಿಯರು, ಮಾತು ಬೆಳ್ಳಿ ಮೌನ ಬಂಗಾರ ಎಂದು, ನೀ ಏನೇ ಸಾಧಿಸುವ ಮೊದಲು ಒಂದು ಬಾರಿ ಮೌನದಿಂದ ಯೋಚಿಸಿ ಮುನ್ನಡೆಯುತ್ತೀಯ ಎಂದಾದರೆ ಅದಕ್ಕೆ ಕಾರಣ ಇಷ್ಟೆ, ಮೌನಕ್ಕಿರುವಷ್ಟು ತಾಳ್ಮೆ ಆಡುವ ಮಾತಿನಲ್ಲಿರುವುದಿಲ್ಲ, ಎಲ್ಲರ ಜತೆಗೂಡಿ ವ್ಯವಹರಿಸುವುದಕ್ಕೂ ಮೌನದಿಂದ ಒಬ್ಬರೆ ಯೋಚಿಸುವುದಕ್ಕೂ ವ್ಯತ್ಯಾಸಗಳು ಹಲವು. ಆದರೆ ಮೌನ ಕಣಿವೆಯಲ್ಲಿ ದೊರಕುವ ಅನುಭವದ ಸಾಲುಗಳು, ಮಧುರ ಕ್ಷಣಗಳು, ಕಳೆದುಹೋದ ನೆನಪುಗಳ ಸಾಲಲ್ಲಿ ಮಿಂದೆದ್ದು, ಸಾಧಿಸುವ ಹೊಸ ಹುಮ್ಮಸ್ಸು ನೀ ಎಲ್ಲಿ ಹೋದರೂ, ಯಾರನ್ನೂ ಕೇಳಿದರೂ ಸಿಗದು. ಹಾಗಾಗಿ ಮೌನವನ್ನು ಕಡೆಗಣಿಸದೆ ಉತ್ತಮ ಜೀವನದ ಆಯ್ಕೆಗೆ ಸೂತ್ರವಾಗಿ ಬಳಸಿ ಸಾಧನೆಯ ಮೆಟ್ಟಿಲೇರಲು ಪ್ರಯತ್ನಿಸಿ. ಸಹಪಾಠಿಗಳೆಷ್ಟೇ ಇರಲಿ ಅವರು ಜೀವನದ ಹಾದಿಯ ಆಯ್ಕೆ ಕೊಡಬಲ್ಲರೇ ಹೊರತು ಇಡೀ ಜೀವನದಲ್ಲಿ ನಿಮ್ಮೊಂದಿಗಿರಲಾರದು. ಕೆಲವೊಮ್ಮೆ ನೆರಳು ಸಹ ನಮ್ಮನ್ನು ಹಿಂಬಾಲಿಸುವುದಿಲ್ಲ ಇದರ ಅರ್ಥ ನೀ ಜೀವನದಲ್ಲಿ ಸೋತಿದ್ದೀಯ ಎಂದಲ್ಲ, ಸೋಲಿನಲ್ಲಿಯೂ ಗೆಲುವ ಹುಡಕಲು ಮೌನ ನಿನ್ನ ಆತ್ಮ ಶಕ್ತಿಯಿದ್ದಂತೆ ಇನ್ನನ್ನು ಎಚ್ಚೆತ್ತಿಕೊಳ್ಳಲು ಸಹಕರಿಸುತ್ತದೆ.
ಏಕಾಗ್ರತೆಗೆ ದಾರಿ
ಮನಸ್ಸಿನಲ್ಲಿನ ಚಂಚಲತೆಯನ್ನು ಕಿತ್ತೆಸೆಯಲು ಏಕಾಗ್ರತೆ ಅತ್ಯಗತ್ಯ. ಈ ಸಮಯದಲ್ಲಿ ಮೌನವೊಂದೇ ಸಹಪಾಠಿ. ಮನಸಿನ ತುಮುಲಗಳ ಮಧ್ಯೆ ಸಿಕ್ಕಿ ನಲುಗುವ ಜಂಜಾಟದ ಜೀವನಕ್ಕೆ ಏಕಾಗ್ರತೆಯ ಜತೆಗೆ ಮೌನವೇ ಪರಮೌಷಧ. ಗೊಂದಲದಲ್ಲಿ ಮನಸ್ಸು ವಿಚಲಿತಗೊಂಡು ತಪ್ಪು ಹಾದಿ ಹಿಡಿಯಲು ಪ್ರೇರೇಪಿಸುವುದು ಸಹಜ, ಇದರಿಂದ ನಿಮ್ಮ ಸಾಧನೆಗೆ ಮುಳುವಾಗಬಹುದು. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಮೌನ ಜೀವನಕ್ಕೆ ಸಹಕಾರಿಯಾಗುವುದರ ಜತೆಗೆ ಸಮಸ್ಯೆಯನ್ನು ನಿರ್ಮೂಲನೆಗೊಳಿಸುವ ಶಕ್ತಿಯನು ಹೊಂದಿದೆ.
- ವಿಜಿತಾ,ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.