ತೂಗು ಉಯ್ಯಾಲೆಯಲ್ಲಿ ಕೂತು
Team Udayavani, Mar 7, 2020, 4:45 AM IST
ಮನೆಯನ್ನು ಅದೆಷ್ಟು ಚಂದಗಾಣುವಂತೆ ಮಾಡಿದ್ರೂ ಕೂಡ ಇನ್ನೂ ಬೇಕೆನಿಸುವುದಂತು ಸಹಜ. ವಾಲ್ ಪೈಂಟಿಂಗ್, ಬಣ್ಣಗಳ ಆಯ್ಕೆ, ಅಲ್ಲಲ್ಲಿ ಪಾಟ್‌ಗಳ ಅಲಂಕಾರ, ಕ್ರಾಫ್ಟ್ ವರ್ಕ್ ಹೀಗೆ ಅದೆಷ್ಟೋ ವಸ್ತುಗಳಿಂದ ಮನೆಯನ್ನು ಸುಂದರಗೊಳಿಸಲು ನಾವು ಪಡುವ ಕಷ್ಟ ಅಷ್ಟಿಷ್ಟಲ್ಲ. ಹಾಗೆಯೆ ಮನೆ ಮುಂದೆ ಒಂದು ಚಂದದ ಉಯ್ನಾಲೆ ತೂಗಾಡುತ್ತಿರಬೇಕು ಅನ್ನೊ ಪುಟ್ಟ ಆಸೆಯು ಎಲ್ಲರ ಮನದಲ್ಲಿ ಇರುತ್ತದೆ, ಹಾಗೆಯೇ ನಾವು ಆಯ್ಕೆ ಮಾಡುವ ಉಯ್ನಾಲೆ ಹೇಗಿರಬೆಕು, ಮನೆ ಮುಂಭಾಗಕ್ಕೆ ಅದು ಹೊಂದಿಕೊಳ್ಳುತ್ತದೆಯೆ ಎಂದು ಗಮನಿಸಿಕೊಳ್ಳುವುದು ಉತ್ತಮ. ಉಯ್ನಾಲೆ ಜತೆಗೆ ನೇತಾಡುವ ಕುರ್ಚಿಗಳು ಶಾಂತಿಯುತ ವಾತಾವರಣವನ್ನು ಸೃಷ್ಟಿಸುವುದರ ಜತೆಗೆ ಒಂದು ಉಲ್ಲಾಸಯುತವಾದ ದಿನವನ್ನು ನೀಡುತ್ತದೆ, ಇದರಿಂದ ಮನಸ್ಸು ಶಾಂತಗೊಳ್ಳುವುದರ ಜತೆಗೆ ಮನೆಗೆ ಒಂದೊಳ್ಳೆ ನೋಟವನ್ನು ಬೀರುತ್ತದೆ. ಕೇವಲ ಮನೆ ಹೊರಗೆ ಮಾತ್ರವಲ್ಲದೆ ಮನೆ ಒಳಗಿನ ಅಲಂಕಾರಕ್ಕೂ ಸೂಕ್ತವಾಗಿದೆ .
ಹ್ಯಾಂಗಿಂಗ್ ಮ್ಯಾಕ್ರೆಮ್ ಕುರ್ಚಿ
ಹತ್ತಿಯಿಂದ ಮಾಡಲ್ಪಟ್ಟ ಈ ಉಯ್ನಾಲೆ ಆರಾಮದಾಯಕತೆಯನ್ನು ನೀಡುತ್ತದೆ, ಹಾಗೆಯೇ ಮನೆಗೆ ಒಂದು ಸುಂದರ ನೋಟವನ್ನು ಬೀರುತ್ತದೆ. ಆರಾಮ ಮತ್ತು ಸಮಕಾಲಿ ಶೈಲಿಯನ್ನು ಹೊಂದಿರು ಈ ಕುರ್ಚಿ ಮನೆಯ ಹೊರಾಂಗಣಕ್ಕೆ ಹೇಳಿ ಮಾಡಿಸಿದಂತಿರುತ್ತದೆ. ಮನೆಯಲ್ಲಿ ಸೀಲಿಂಗ್ ಹ್ಯಾಂಗ್ ವಿನ್ಯಾಸ ಮಾಡದಿದ್ದರೆ ಇಂತಹ ಫ್ರೀ ಸ್ಟೈಲ್ ಶೈಲಿಯ ಕುರ್ಚಿ ಉತ್ತಮ ಆಯ್ಕೆಯಾಗಿರುತ್ತದೆ. ಅಲ್ಯೂಮಿನಿಯಂನಿಂದ ತಯಾರಿಸಿರುವ ಇದು ಕುಶನ್ ವರ್ಕ್‌ಗಳಲ್ಲಿಯೂ ಲಭ್ಯವಿದ್ದು, ಇದನ್ನು ಸುಲಭವಾಗಿ ಸ್ವತ್ಛಗೊಳಿಸಬಹುದು ಹಾಗೂ ಇದು ಮನೆಯ ನೋಟವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ.
ನೇಯ್ದ ವಿಕರ್ ರಟ್ಟನ್ ಕುರ್ಚಿ
ವಕ್ರಾಕೃತಿಯುಳ್ಳ ನೇಯ್ಗೆ ಬುಟ್ಟಿಯಂತಹ ಶೈಲಿ, ವ್ಯತಿರಿಕ್ತ ಕುಶನ್ ವರ್ಕ್ ವಿಕರ್ ರಟ್ಟನ್ ಕುರ್ಚಿಯ ಆಕರ್ಷಣೆಗೆ ಕಾರಣವಾಗಿದೆ. ಇದರ ಹಿಂಭಾಗದಲ್ಲಿ ನೇಯ್ಗೆಯಂಥಹ ರಚನೆ ಉತ್ತಮ ನೋಟವನ್ನು ಬೀರುವುದ ಜತೆಗೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಆರಾಮದಾಯಕ ಶೈಲಿಯ ವಿನ್ಯಾಸವನ್ನು ಹೊಂದಿರುವುದರಿಂದ ಇದು ಉತ್ತಮ ಆಯ್ಕೆಯಾಗಿದೆ.
ಸ್ವಿಂಗ್ ವಿಕರ್ ಕುರ್ಚಿ
ತೋಟದ ಮನೆಗಳ ಅಂದವನ್ನು ಇನ್ನಷ್ಟು ಹೆಚ್ಚಿಸಲು ಸ್ವಿಂಗ್ ವಿಕರ್ ಚೇರ್ ಉತ್ತಮ ಆಯ್ಕೆಯಾಗಿದೆ. ಸೆಣಬಿನ ಹಗ್ಗದಿಂದ ರಚಿಸಿದ ಈ ಜೋಕಾಲಿ ಆಕರ್ಷಕವನ್ನು ನೊಟವನ್ನು ನೀಡುತ್ತದೆ.
ಎಲ್‌ಇಡಿ ದೀಪದೊಂದಿಗೆ ಮ್ಯಾಕ್ರೆಮ್ ಕುರ್ಚಿ: ಎಲ್‌ಇಡಿ ದೀಪದೊಂದಿಗೆ ಆಕರ್ಷಕವಾದ ನೋಟವನ್ನು ಬೀರುವುದರ ಜತೆಗೆ ಮೃದುವಾದ ಹೊಳಪನ್ನು ನಿಡುತ್ತದೆ.
ನೇತಾಡುವ ಕುರ್ಚಿ
ಮಲಗುವ ಕೋಣೆ ಬೊಹಿಮೀ ಯನ್ ಶೈಲಿಯಾದರೆ, ಹೊರಗೆ ಲೌಂಜರ್ ಆಗಿರಲಿ ಇದು ಮನೆಯ ನೋಟವನ್ನು ಇನ್ನಷ್ಟು ಹೆಚ್ಚಿಸುತ್ತದೆ.
– ವಿಜಿತಾ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.