ಚಾರಣಿಗರ ಮನಸೂರೆ ಗೊಳಿಸುವ ಸ್ಕಂದಗಿರಿ
Team Udayavani, Jan 16, 2020, 5:13 AM IST
ಚಾರಣಿಗರ ಮನಸೂರೆಗೊಳಿಸುವ ಸ್ಕಂದಗಿರಿ ಬೆಟ್ಟಕೈ ಚಾಚಿದಷ್ಟು ಸಮೀಪದಿ ಸಿಗುವ ಬೆಳ್ಳಿ ಮೋಡ. ಅದರ ಮೇಲೆ ನಾಜೂ ಕಾಗಿ ಹೆಜ್ಜೆಯಿಟ್ಟು ಮುಂದೆ ಸಾಗುವ ಹಂಬಲ. ಮನದುಂಬುವಷ್ಟು ಮಂಜು ಹಿಡಿದು ಮನೆಗೆ ಕದ್ದು ಮುಚ್ಚಿ ಒಯ್ಯುವ ಹುಚ್ಚು, ಅಲ್ಲಿನ ಸೌಂದರ್ಯ ರಾಶಿಯಲ್ಲಿ ಕಿಂಚಿತ್ತಾ ದರೂ ನನ್ನದಾಗ ಬಾರದೇ ಎಂಬ ಆಸೆ. ಒಟ್ಟಾರೆ ಸ್ಕಂದಗಿರಿ ಬೆಟ್ಟ ಬದುಕಿನಲ್ಲಿ ಹೊಸ ಉತ್ಸಾಹ ತುಂಬುವ ಚಾರಣ ತಾಣ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವಾರ ಗ್ರಾಮದ ಸಮೀಪವಿರುವ ಈ ಬೆಟ್ಟ ಮಂಜಿನ ಹೊದಿಕೆ ಹೊದ್ದು ಚಾರಣಿಗರ ಮನಸೂರೆಗೊಳಿಸುತ್ತದೆ. ವರ್ಷ ವಿಡೀ ಹೋಗಬಹುದಾಗಿದ್ದರೂ, ಚಳಿಗಾಲದಲ್ಲೇ ಬರುವವರ ಸಂಖ್ಯೆ ಹೆಚ್ಚು.ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 1530 ಮೀಟರ್ ಎತ್ತರದಲ್ಲಿರುವ ಸ್ಕಂದಗಿರಿ ಬೆಟ್ಟವನ್ನು ತಲುಪಲು ಕನಿಷ್ಠ 2 ಗಂಟೆ ಬೇಕು.
ಕಾಲುದಾರಿಯುದ್ದಕ್ಕೂ ಎರಡು ಬದಿಗಳಲ್ಲೂ ಗಿಡಗಂಟಿಗಳಿದ್ದು, ಅಲ್ಲಲ್ಲಿ ಸಿಗುವ ಬೃಹತ್ ಬಂಡೆಗಲ್ಲುಗಳ ಮೇಲೆ ಆಯಾಸವೆನ್ನಿಸಿದಾಗ ವಿರಮಿಸಬಹುದು.
ಚಾರಣಿಗರಿಗೆ ದಾರಿಯುದ್ದಕ್ಕೂ ಕಂಡು ಬರುವ ಐತಿಹಾಸಿಕ ಸ್ಥಳ, ದೇವಾಲ ಯಗಳು, ಸೂರ್ಯೋ ದಯ, ಸೂರ್ಯಾ ಸ್ತಮಾನ, , ಪಕ್ಷಿ ವೈವಿಧ್ಯ ಕುರಿತು ಮಾರ್ಗ ದರ್ಶಕರು ಮಾಹಿತಿ ನೀಡುತ್ತಾರೆ. ಚಾರಣಕ್ಕೆ ಬೆಳಗ್ಗೆ 5 ರಿಂದ ಸಂಜೆ 5ರ ವರೆಗೆ ಅವಕಾಶವಿದ್ದು, ಚಾರಣಿಗರನ್ನು 10 ಜನರಂತೆ ತಂಡಗಳನ್ನಾಗಿ ವಿಂಗಡಿಸ ಲಾಗುತ್ತದೆ. ಪ್ರತಿ ತಂಡಕ್ಕೆ ಒಬ್ಬ ಅನುಭವಿ ಮಾರ್ಗದರ್ಶಕನನ್ನು ನಿಯೋಜಿಸಲಾಗುತ್ತದೆ. ಇನ್ನೂ ಚೆಂದ ನೆಯ ಸೂಯೋ ìದಯ ನೋಡಲೆಂದು ಬಹ ಳಷ್ಟು ಮಂದಿ ಬೆಳಗ್ಗಿನ ಜಾವ 3ಕ್ಕೆ ಈ ಬೆಟ್ಟವನ್ನೇರಲು ತೊಡಗುತ್ತಾರೆ.
ಹೋಗುವುದು ಹೇಗೆ?
ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಈ ತಾಣ ಒಂದು ದಿನದ ಚಾರಣಕ್ಕೆ ಸೂಕ್ತ. ಚಿಕ್ಕಬಳ್ಳಾಪುರದಿಂದ 3ಕಿ.ಮೀ ದೂರದಲ್ಲಿರುವ ಕಳವಾರ ಗ್ರಾಮದ ಮೂಲಕ ಪಾಪಾಗ್ನಿ ಮಠದಿಂದ -ಸ್ಕಂದಗಿರಿ ಬೆಟ್ಟ ತಲುಪಬಹುದು.
ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ
ಸ್ಕಂದಗಿರಿಗೆ ಬರುವ ಚಾರಣಿಗರಿಗೆ ಮುಂಗಡವಾಗಿ ಟಿಕೆಟ್ ಬುಕ್ ಮಾಡುವ ವ್ಯವಸ್ಥೆ ಇದ್ದು, ಪ್ರವಾಸೋದ್ಯಮ ಇಲಾಖೆಯ ಜಾಲತಾಣದ ಮೂಲಕ ಆನ್‌ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಮೊದಲು ಪ್ರತಿ ಒಬ್ಬ ರಿಗೆ 450 ರೂ. ಶುಲ್ಕ ನಿಗದಿಪಡಿಸಲಾಗಿತ್ತು, ಸದ್ಯ 250 ರೂಪಾಯಿಗೆ ಇಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.