ಪರಿಸರ ಸೇಹಿ ಸಂಚಾರಕ್ಕೆ  ಸ್ಕೈ ಗಾರ್ಡ್‌ನ್‌ ಮಾದರಿ


Team Udayavani, Dec 2, 2018, 12:48 PM IST

2-december-10.gif

ಇಂದು ಭಾರತ ನಗರೀಕರಣಕ್ಕೆ ತೆರೆದುಕೊಂಡಿದೆ. ದೇಶದ ಬಹುತೇಕ ಮಹಾನಗರಗಳಲ್ಲಿ ಬಹುಮಹಡಿ ಕಟ್ಟಡಗಳು, ಸಾರಿಗೆ ಸಂಚಾರ, ಹೆಚ್ಚುತ್ತಿರುವ ಜನಸಂಖ್ಯೆ ಇವುಗಳು ನಗರೀಕರಣದ ಮಾನದಂಡವಾಗಿವೆ. ನಗರೀಕರಣಗೊಂಡ ಒಂದು ಮಹಾನಗರಕ್ಕೆ ಮುಖ್ಯವಾಗಿ ಸಾರಿಗೆ ಸಂಚಾರ ಪ್ರಧಾನ ವಾಗಿರುತ್ತದೆ. ಏಕೆಂದರೆ, ದಿನಕ್ಕೆ ಬೆಳಗ್ಗೆಯಿಂದ ರಾತ್ರಿಯವರೆಗೂ ನಗರದ ರಸ್ತೆಗಳು ವಾಹನಗಳಿಂದ ತುಂಬಿ ತುಳುಕುತ್ತಿರುತ್ತವೆ. ಇದರ ಮಧ್ಯೆ ಟ್ರಾಫಿಕ್‌ ಸಮಸ್ಯೆ. ಇದು ಸಾಮಾನ್ಯದ ಸಂಗತಿ.

ರಸ್ತೆಗಳಲ್ಲಿ ವಾಹನ ಸಂಚಾರದಿಂದ ಕೇವಲ ಟ್ರಾಫಿಕ್‌ ಸಮಸ್ಯೆ ಮಾತ್ರ ಆಗುತ್ತಿಲ್ಲ, ವಾಹನಗಳು ಇಂಧನಗಳಿಂದ ಸೂಸುವ ಹೊಗೆಯಿಂದಾಗಿ ದೇಶದ ನಗರಗಳು ವಾಯು ಮಾಲಿನ್ಯಕ್ಕೆ ತತ್ತರಿಸಿವೆ. ನಗರದ ಜನರು ಈ ವಿಷಪೂರಿತ ವಾಯುವನ್ನು ಸೇವಿಸದೇ, ಸದಾ ಮಾಸ್ಕ್ ಹಾಕಿಕೊಂಡೇ ತಿರುಗಾಡುವಂತಾಗಿದೆ. ಇದಕ್ಕೇನೂ ಪರಿಹಾರವಿಲ್ಲ ಎಂಬಂತೆ ನಮ್ಮ ಆಡಳಿತ ವ್ಯವಸ್ಥೆಯೂ ಕೈಕಟ್ಟಿ ಕುಳಿತಿರುತ್ತದೆ. ಪರಿಸರ ಮಾಲಿನ್ಯ ಹಾಗೂ ವಾಯು ಮಾಲಿನ್ಯ ತಡೆಯಲೆಂದು ಕೆಲವೊಂದು ಉಪಕ್ರಮಗಳನ್ನು ತೆಗೆದುಕೊಂಡರೂ, ಸದ್ಯ ಸಂಪೂರ್ಣವಾಗಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಇಂದಿಗೂ ಸಾಧ್ಯವಾಗಿಲ್ಲ ಎಂಬುವುದು ದಿಲ್ಲಿಯನ್ನು ನೋಡಿದಾಗ ಗೊತ್ತಾಗುತ್ತದೆ. ಈ ವಿಚಾರವಾಗಿ ನಗರದ ರಸ್ತೆಗಳನ್ನು ವಾಯು ಮಾಲಿನ್ಯದಿಂದ ಮುಕ್ತವಾಗಿಸಿ, ಪರಿಸರ ಸ್ನೇಹಿಯಾಗಿಸುವ ಪ್ರಯತ್ನಕ್ಕೆ ಪರಿಣಾಮಕಾರಿಯಾಗಿಸುವ ಒಂದು ಯೋಜನೆಯೆಂದರೆ ಅದುವೇ ಸ್ಕೈ ಗಾರ್ಡ್‌ನ್‌.

ಸ್ಕೈ ಗಾರ್ಡ್‌ನ್‌ ಇದೊಂದು ಪರಿಸರ ಸ್ನೇಹಿ ಮಾದರಿ. ನಗರದ ಹೆದ್ದಾರಿಗಳು ಹಾಗೂ ರಸ್ತೆಗಳಲ್ಲಿ ವಾಹನಗಳು ಉಗುಳುವ ವಿಷಪೂರಿತವಾದ ಹೊಗೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ನಗರದ ಸುಗಮ ಸಂಚಾರಕ್ಕಾಗಿ ಫ್ಲೈ ಓವರ್‌ ಹಾಗೂ ಸ್ಕೈವಾಕ್‌ ಗಳನ್ನು ನಿರ್ಮಿಸಲಾಗುತ್ತದೆ. ಅದರಂತೆ ರಸ್ತೆಗಳ ಮೇಲೆ ಫ್ಲೈ ಓವರ್‌ ಗಳ ಮೇಲೆ ಗಾರ್ಡ್‌ನ್‌ಗಳನ್ನು ನಿರ್ಮಿಸುವುದೇ ಸ್ಕೈಗಾರ್ಡ್‌ನ್‌.

ಸಿಯೋಲ್‌ ನಗರದ ಮಾದರಿ ಸ್ಕೈ ಗಾರ್ಡ್‌ನ್‌
ದಕ್ಷಿಣ ಕೊರಿಯಾ ರಸ್ತೆಗಳನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿ ರೂಪಿಸಲಾಗಿದೆ. ಇದಕ್ಕೆ ಸಾಕ್ಷಿಯೆಂದರೆ, ದೇಶದ ಸಿಯೋಲ್‌ ಎಂಬ ನಗರದಲ್ಲಿ ನಿರ್ಮಿಸಲಾಗಿರುವ ಸ್ಕೈಗಾರ್ಡ್‌ನ್‌. ಸಿಯೋಲ್‌ ನಗರದ ಹೆದ್ದಾರಿಯ ಮೇಲೆ ನಿರ್ಮಿಸಲಾಗಿರುವ ಸ್ಕೈಗಾರ್ಡ್‌ನ್‌ ಇದು ಜಗತ್ತಿಗೆ ಮಾದರಿಯಾಗಿದೆ. ನಗರದ ಪ್ರಮುಖ ಹೆದ್ದಾರಿಯ ಮೇಲೆ ಈ ಸ್ಕೈಗಾರ್ಡ್‌ನ್‌ನ್ನು ಸುಮಾರು 938 ಮೀಟರ್‌ ಉದ್ದ ನಿರ್ಮಿಸಿದ್ದು, 24, 000 ಕ್ಕೂ ಅಧಿಕ ಗಿಡ ಮರಗಳನ್ನು ಬೆಳೆಸಲಾಗಿದೆ. ಇದೊಂದು ಸ್ಕೈ ಗಾರ್ಡ್‌ನ್‌ ಕೇವಲ ಸಂಚಾರಕ್ಕೆ ಮಾತ್ರ ಉಪಯೋಗವಾಗದೇ, ಬಹುಮುಖಿಯಾಗಿ ಬಳಕೆಯಾಗುತ್ತಿದೆ. ವಾಕಿಂಗ್‌ಗೆ ಕೂಡ ಜನರು ಈ ಹೆದ್ದಾರಿಯ ಸ್ಕೈ ಗಾರ್ಡ್‌ನ್‌ ಅನುಸರಿಸುತ್ತಿದ್ದಾರೆ. ಹೀಗಾಗಿ ಇದು ಸಂಚಾರ ಸಹಿತ ಪ್ರವಾಸೋದ್ಯಮಕ್ಕೂ ಉಪಯೋಗವಾಗಿದೆ.

ಇದು ಸಿಯೋಲ್‌ ಕಥೆಯಾದರೆ, ಇನ್ನು ನಮ್ಮ ದೇಶದ ನಗರಗಳ ರಸ್ತೆಗಳ ಸ್ಥಿತಿ ನೋಡಿದರೆ, ಇನ್ನು ಹೊಂಡ ಗುಂಡಿಗಳ ಮುಚ್ಚುವುದರಲ್ಲೇ ಕಾಲ ಕಳೆಯುತ್ತಿದ್ದೇವೆ. ಇನ್ನು ರಸ್ತೆಗಳಲ್ಲಿ ಉಂಟಾಗುವ ವಾಯು ಮಾಲಿನ್ಯ ತಡೆಯಲು ಕ್ರಮಕ್ಕೆ ಮುಂದಾಗಿರುವುದಿಲ್ಲ ಎಂಬುದು ಸೋಜಿಗದ ಸಂಗತಿ. ಈ ಕಾರಣಕ್ಕಾಗಿಯಾದರೂ ಸಿಯೋಲ್‌ ನಗರದ ಸ್ಕೈ ಗಾರ್ಡ್‌ನ್‌ಗಳು ಕೂಡ ಮಾದರಿಯಾಗಬೇಕಿದೆ.

ಸ್ಮಾರ್ಟ್‌ ಸಿಟಿ ಪಟ್ಟಿಯಲ್ಲಿರುವ ಮಂಗಳೂರು ಮಹಾನಗರವೂ ಇಂತಹ ಹಲವಾರು ಸಮಸ್ಯೆಗಳನ್ನು ಎದುರುಸುತ್ತಿರುತ್ತವೆ. ನಗರದ ರಸ್ತೆಗಳನ್ನು ಕೂಡ ಮಾದರಿಯಾಗಿ ನಿರ್ಮಿಸಬೇಕಿದೆ. ನಗರದಲ್ಲಿ ವಾಹನ ಸಂಚಾರವೂ ವಿಸ್ತಾರಗೊಂಡಿದ್ದು, ಸಾಮಾನ್ಯವಾಗಿ ಪರಿಸರ ಮಾಲಿನ್ಯವಾಗುವುದು ಸಾಧ್ಯತೆ. ಹೀಗಾಗಿ ಸಿಯೋಲ್‌ ನಗರದಲ್ಲಿ ನಿರ್ಮಿಸಲಾಗಿರುವ ಸ್ಕೈ ಗಾರ್ಡ್‌ನ್‌ ಮಾದರಿಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಸ್ಕೈ ಗಾರ್ಡ್‌ನ್‌ ನಿರ್ಮಾಣಕ್ಕೆ ಆಡಳಿತ ಒತ್ತು ನೀಡಬೇಕಿದೆ.

  ಶಿವ ಸ್ಥಾವರಮಠ 

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.