ಸ್ಲೈಡ್ ಸ್ಲೈಟ್ ಕುರ್ತಾ
Team Udayavani, Dec 14, 2018, 12:55 PM IST
ಫ್ಯಾಶನ್ ಜಗತ್ತೇ ಹಾಗೆ. ಅದು ಮಾಡುವ ಮೋಡಿ ಅನನ್ಯ. ಈ ಫ್ಯಾಶನ್ ಜಗತ್ತಿನ ವೇಗವೂ ಹಾಗೆಯೇ. ಕಣ್ಣು ಮುಚ್ಚಿ ಬಿಡುವುದರೊಳಗೆ ಫ್ಯಾಶನೇಬಲ್ ಆಗಿದ್ದ ಉಡುಗೆಯೋ, ಧರಿಸುವ ಇತರ ವಸ್ತುಗಳ್ಳೋ ಹಳೆಯದಾಗಿರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳ ಫ್ಯಾಶನ್ ಲೋಕದೊಳಗೊಂದು ಅದ್ಭುತದ ಆನಂದವೇ ಇರುತ್ತದೆ.
ಕುರ್ತಾ ಕಮಾಲ್ ಈಗಿನದು. ಹೆಣ್ಣು ಮಕ್ಕಳ ನೆಚ್ಚಿನ ದೈನಂದಿನ ತೊಡುಗೆಯಾದ ಕುರ್ತಾದಲ್ಲೂ ನಿತ್ಯ ನಿರಂತರ ಫ್ಯಾಶನ್ ನದ್ದೇ ಹವಾ. ಪ್ರತಿ ಬಾರಿ ಮಾರುಕಟ್ಟೆಗೆ ತೆರಳಿದಾಗಲೂ ಹೊಸತನ್ನು ಆರಿಸಿ ತರುವ ಮನಸ್ಸಾಗದೆ ಇರದು ಎಂಬಷ್ಟು ರೀತಿಯಲ್ಲಿ ಕುರ್ತಾದಲ್ಲಿ ಫ್ಯಾಶನ್‌ಗಳು ಬರುತ್ತಿವೆ.
ಸಿಂಪಲ್ ಉಡುಗೆಯಿದು
ಕುರ್ತಾ ಸಿಂಪಲ್ ಉಡುಗೆಯೆಂದೇ ಖ್ಯಾತಿಯಾಗಿದೆ. ಈ ಸಿಂಪಲ್ ಉಡುಗೆಯಲ್ಲಿಯೂ ಒಂದಷ್ಟು ಫ್ಯಾಶನ್ ಬೆರೆತು ಮಾಡರ್ನ್ ಲುಕ್ ನೀಡುವಲ್ಲಿ ಸಫಲವಾಗಿದೆ. ಮೊಣಕಾಲುದ್ದದ ಕುರ್ತಾ ಟಾಪ್‌ನಿಂದ ಹಿಡಿದು ಲಾಂಗ್ ಕುರ್ತಾದವರೆಗೆ ಸಾಕಷ್ಟು ಹೊಸ ರೀತಿಯ ಕುರ್ತಾಗಳನ್ನು ಧರಿಸಿ ನೋಡಿದ್ದಾಯಿತು. ಕುರ್ತಾ ಟಾಪ್‌ನಲ್ಲಿಯೇ ಶಾರ್ಟ್ ಮತ್ತು ಲಾಂಗ್ ಓವರ್ ಕೋಟ್ ಧರಿಸಿಯೂ ನೋಡಿದ್ದಾಯಿತು. ಶಾಲಿನಂತ ಧಿರಿಸನ್ನು ಕುರ್ತಾಕ್ಕೆ ಬೆಸೆದದ್ದಾಯಿತು. ಎರಡೂ ಕಡೆ ಕಟ್ ಹೊಂದಿರುವ ಕುರ್ತಾಗಳು, ಅಂಬ್ರಲ್ಲ ಮಾದರಿಯ ಕುರ್ತಾಗಳೂ ಹೆಣ್ಮಕ್ಕಳ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಆಕರ್ಷಣೀಯ ಲುಕ್ ನೀಡಲು ಕಾರಣವಾದವು. ಆ ಸಾಲಿಗೆ ಸೈಡ್ ಸ್ಲೈಟ್ ಕುರ್ತಾಗಳು ಹೊಸ ಸೇರ್ಪಡೆ.
ದೈನಂದಿನ ಕಚೇರಿ ಕೆಲಸಕ್ಕೆ, ಶಾಲಾ-ಕಾಲೇಜಿಗಳಲ್ಲದೆ ಯಾವುದೇ ತರಹದ ಫಂಕ್ಷನ್, ಟ್ರಿಪ್ ಗಳಿಗೂ ಈ ಮಾದರಿಯ ಕುರ್ತಾ ಧರಿಸಿದರೆ ಆಕರ್ಷಕವಾಗಿ ಕಾಣುತ್ತದೆ. ಟ್ರಿಪ್ ತೆರಳುವಾಗ ಈ ಸೈಡ್ ಸ್ಲೈಟ್ ಕುರ್ತಾವನ್ನು ಜೀನ್ಸ್ ಪ್ಯಾಂಟ್‌ನೊಂದಿಗೆ ಧರಿಸಿ ಕೂಲಿಂಗ್ ಗ್ಲಾಸ್ ಧರಿಸಿದರೆ ಆಧುನಿಕ ಮತ್ತು ಬೋಲ್ಡ್ ಲುಕ್ ನಿಮ್ಮದಾಗಿಸಿಕೊಳ್ಳಬಹುದು. ಹೆಚ್ಚಾಗಿ ಇದನ್ನು ಜೀನ್ಸ್ ಪ್ಯಾಂಟ್ ಗೇ ಧರಿಸುವುದಾದರೂ, ಡಿಸೈನ್ಡ್ ಮತ್ತು ಎಂಬ್ರಾಯ್ಡರಿ ವರ್ಕ್ ಹೊಂದಿರುವ ಕುರ್ತಾಗಳನ್ನು ಪ್ಲೈನ್ ಪ್ಯಾಂಟ್ ಅಥವಾ ಲೆಗ್ಗಿಂಗ್ಸ್‌ಗಳಿಗೆ ಧರಿಸಿದರೂ ಚೆನ್ನಾಗಿ ಕಾಣುತ್ತದೆ. ಪ್ಲೈನ್ ಕುರ್ತಾವನ್ನು ಡಿಸೈನ್ಡ್ ಪ್ಯಾಂಟ್‌ಗಳಿಗೆ ಧರಿಸಬಹುದು. ಆದರೆ ಎರಡೂ ಕೂಡ ಡಿಸೈನ್ಡ್ ಅಥವಾ ಪ್ಲೈನ್ ಆಗಿದ್ದರೆ ಚೆನ್ನಾಗಿ ಒಪ್ಪುವುದಿಲ್ಲ.
ಬೋಟ್ ನೆಕ್ ಇರಲಿ
ಸೈಡ್ ಸ್ಲೈಟ್ ಕುರ್ತಾಗಳನ್ನು ಆಯ್ಕೆ ಮಾಡುವಾಗ ಆದಷ್ಟು ಬೋಟ್ ನೆಕ್ ಹೊಂದಿರುವ ಕುರ್ತಾಗಳನ್ನೇ ಆಯ್ಕೆ ಮಾಡಿದರೊಳಿತು. ಏಕೆಂದರೆ ಬೋಟ್ ನೆಕ್ ಎಲ್ಲ ವಯೋಮಾನದ ಮಹಿಳೆಯರಿಗೂ ಚೆನ್ನಾಗಿ ಒಪುತ್ತದೆ. ಸಪೂರ ಶರೀರವನ್ನು ಹೊಂದಿರುವವರಿಗೆ ಬೋಟ್ ನೆಕ್ ಮಾದರಿಯ ಕುರ್ತಾಗಳೇ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
ಏನಿದು ಸೈಡ್ ಸ್ಲೈಟ್ ಕುರ್ತಾ
ಸದ್ಯಕ್ಕೆ ಫ್ಯಾಶನ್ ಲೋಕಕ್ಕೆ ಹೊಸ ಎಂಟ್ರಿ. ಸಿಂಪಲ್ಲಾದರೂ, ಮಾಡರ್ನ್ ಲುಕ್ ನೀಡುವ ಕುರ್ತಾಗಳಿವು. ಲಾಂಗ್ ಕುರ್ತಾ ಮಾದರಿಯಲ್ಲಿರುವ ಇದು, ಎಡ ಬದಿಯಲ್ಲಿ ಉದ್ದನೆಯ ಕಟ್ ಹೊಂದಿರುತ್ತದೆ. ಅರ್ಥಾತ್ ಸುಮಾರು ಕಾಲಿನಿಂದ ಹೊಟ್ಟೆಯ ಭಾಗದ ತನಕ ಎಡ ಬದಿಯಲ್ಲಿ ಕಟ್ ಇರುತ್ತದೆ. ಹೊಸ ಸ್ಟೈಲಿನ ಕುರ್ತಾ ಉಡುಗೆಯಾದ್ದರಿಂದ ಸಮಾರಂಭಗಳಿಗೂ ಧರಿಸಿ ನೋಡಬಹುದು.
ಡಿ.ಬಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.