ಸ್ಮಾರ್ಟ್  ಹೆಲ್ತ್‌ ಕೇರ್‌ ಆದ್ಯತೆಯಾಗಲಿ


Team Udayavani, Dec 23, 2018, 12:48 PM IST

23-december-11.gif

ದೇಶದ ಆಸ್ಪತ್ರೆಗಳ ಸ್ಥಿತಿ ಇಂದು ಅರಣ್ಯರೋದನದಂತಿದೆ. ಮೂಲ ಸೌಲಭ್ಯ ಹಾಗೂ ಸಿಬಂದಿ ಕೊರತೆಯಿಂದಾಗಿ ಹಲವು ಬಾರಿ ರೋಗಿಗಳು ನರಳಾಡುವಂತೆ ಮಾಡುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದರೂ ಕೆಲವೊಂದು ಆಸ್ಪತ್ರೆಗಳ ಸ್ಥಿತಿ ಇಂದಿಗೂ ಅಯೋಮಯ. ಸರಕಾರವೂ ಆರೋಗ್ಯಕ್ಕೆ ಪೂರಕವಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ, ಸಮರ್ಪಕ ಅನುಷ್ಠಾನದ ಕೊರೆತೆಯಿಂದಾಗಿ ಸಮಸ್ಯೆ ಹೆಚ್ಚಾಗುತ್ತಲೇ ಇದೆ.

ಗಗನಚುಂಬಿ ಕಟ್ಟಡಗಳು, ಬೃಹದಾದ ರಸ್ತೆಗಳಷ್ಟೇ ನಗರೀಕರಣವಲ್ಲ. ಶಿಕ್ಷಣ, ಪರಿಸರ ಕಾಳಜಿ ಹಾಗೂ ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಯನ್ನು ಕೂಡ ನಾವು ಬೆಳೆಯುತ್ತಿರುವ ನಗರದ ಆದ್ಯತೆಯಾಗಿ ಪರಿಗಣಿಸಬೇಕಾಗಿದೆ. ಸುವ್ಯವಸ್ಥಿತ ಆಸ್ಪತ್ರೆ ಹಾಗೂ ವಿಶ್ವ ವಿದ್ಯಾಲಯ ನಿರ್ಮಾಣ ಕೂಡ ನಗರೀಕರಣದ ಭಾಗವಾಗಬೇಕಿದೆ. ಆಸ್ಪತ್ರೆಗಳಿಗೆ ಮೂಲ ಸೌಲಭ್ಯ ನೀಡಿ, ಇನ್ನಷ್ಟೂ ಸ್ಮಾರ್ಟ್‌ ಆಗಿಸಬೇಕಿದೆ. ಈ ಲೆಕ್ಕದಲ್ಲಿ ನಮಗೆ ಸಿಂಗಾಪುರ, ಜಪಾನ್‌ ಹಾಗೂ ದಕ್ಷಿಣ ಕೊರಿಯಾ ದೇಶಗಳು ಅಳವಡಿಸಿಕೊಂಡಿರುವ ಸ್ಮಾರ್ಟ್‌ ಹೆಲ್ತ್‌ ಕೇರ್‌ ವ್ಯವಸ್ಥೆ ಮಾದರಿಯಾಗಬೇಕಿದೆ.

ಏನಿದು ಸ್ಮಾರ್ಟ್‌ ಹೆಲ್ತ್‌ ಕೇರ್‌ ವ್ಯವಸ್ಥೆ?
ಸ್ಮಾರ್ಟ್‌ ಹೆಲ್ತ್‌ ಕೇರ್‌ ವ್ಯವಸ್ಥೆ ಅಭಿವೃದ್ಧಿ ಹೊಂದಿದ ತಂತ್ರಜ್ಞಾನ ಪೂರಿತವಾದ ವ್ಯವಸ್ಥೆಯಾಗಿದೆ. ಆರೋಗ್ಯ ಕ್ಷೇತ್ರದ ಡಯಾಗ್ನೋಸಿಸ್‌ ಉಪಕರಣಗಳು ಹಾಗೂ ಔಷಧ, ಚಿಕಿತ್ಸೆಗೆ ತಂತ್ರಜ್ಞಾನ ಪೂರಿತವಾಗಿ ನೀಡುವ ವ್ಯವಸ್ಥೆಗೆ ಸ್ಮಾರ್ಟ್‌ ಹೆಲ್ತ್‌ ಕೇರ್‌ ಎನ್ನಲಾಗುತ್ತದೆ. ದೇಶದ ಬಹುತೇಕ ಮೂಲ ಸೌಲಭ್ಯಗಳಿಂದ ಬಳಲುತ್ತಿರುವ ಆಸ್ಪತ್ರೆಗಳಿಗೆ ಈ ಮುಂದುವರಿದ ತಂತ್ರಜ್ಞಾನ ಪೂರಕವಾಗಬಲ್ಲದೇ ಎಂಬ ಪ್ರಶ್ನೆಗೆ ದೇಶವೂ ಈಗಾಗಲೇ ಡಿಜಿಟಲ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ ಸಹಿತ ಸ್ಮಾರ್ಟ್‌ ಸಿಟಿ ಎಂಬ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿರುವಾಗ, ನಮ್ಮ ನಗರಗಳ ಆಸ್ಪತ್ರಗಳಿಗೆ ಸ್ಮಾರ್ಟ್‌ ಹೆಲ್ತ್‌ ಕೇರ್‌ ವ್ಯವಸ್ಥೆ ಅಳವಡಿಸಿಕೊಳ್ಳುವುದು ದೊಡ್ಡದೇನಲ್ಲ.

ಸಿಂಗಾಪೂರ್‌ ಮಾದರಿ
ಸಿಂಗಾಪೂರ್‌, ದಕ್ಷಿಣ ಕೊರಿಯಾ ಹಾಗೂ ಜಪಾನ್‌ ದೇಶಗಳೂ ಸ್ಮಾರ್ಟ್‌ ಹೆಲ್ತ್‌ ಕೇರ್‌ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿವೆ. ಸಿಂಗಾಪೂರದ ಚೆಂಗೈ ಕೇಂದ್ರೀಯ ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಗೆ ತಂತ್ರಜ್ಞಾನದ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಆಸ್ಪತ್ರೆಯಲ್ಲಿ ಬಹುತೇಕ ವೈದ್ಯರಂತೆ ರೋಬೋಗಳನ್ನು ನಿರ್ಮಿಸಲಾಗಿದ್ದು, ಅಪರೇಶನ್‌ ಹಾಗೂ ಚಿಕಿತ್ಸೆ ನೀಡುವಾಗ, ಮೆಡಿಸಿನ್‌ ಸಂಬಂಧಿಸಿದಂತೆ ಮಾಹಿತಿಗಳನ್ನು ಮಾನವ ನಿರ್ಮಿತ ರೋಬೋಗಳೇ ನೀಡುತ್ತವೆ. ಅಲ್ಲದೇ ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಪಯೋಗವಾಗಲು ಹಲವಾರು ಹೈಟೆಕ್‌ ತಂತ್ರಜ್ಞಾನದ ಆರೋಗ್ಯ ಸೌಲಭ್ಯಗಳನ್ನು ನೀಡಲಾಗಿದೆ. ಇದೊಂದು ಜನಪರವಾದ ಯೋಜನೆಯಾಗುವುದಂತೂ ಸತ್ಯ.

ಅಂತೆಯೇ ಭಾರತದ ಆಸ್ಪತ್ರೆಗಳ ಸ್ಥಿತಿಯೇನೂ ಅಷ್ಟು ಕೆಟ್ಟಿಲ್ಲ. ನಿರ್ಲಕ್ಷ್ಯ ದಿಂದಾಗಿ ಕೆಲವೊಮ್ಮೆ ಮೂಲ ಸೌಲಭ್ಯಗಳ ಕೊರತೆ ಕಾಣಬಹುದು ಅಷ್ಟೇ. ಸ್ಮಾರ್ಟ್‌ ಸಿಟಿ ಪಟ್ಟಿಯಲ್ಲಿರುವ ಮಂಗಳೂರು ಮಹಾನಗರದ ಆಸ್ಪತ್ರೆಗಳೂ ಇಂತಹ ಸಮಸ್ಯೆಗಳಿಂದ ಆಗಾಗ ಪತ್ರಿಕೆಯಲ್ಲಿ ವರದಿಯಾಗು ತ್ತಿರುತ್ತವೆ. ಸ್ಮಾರ್ಟ್‌ ಸಿಟಿಯ ಆದ್ಯತೆಯಲ್ಲಿ ನಗರದಲ್ಲಿ ರಸ್ತೆಗಳು, ಕಟ್ಟಡಗಳು ಇನ್ನಿತರಗಳನ್ನು ನಿರ್ಮಿಸಿದಂತೆ, ಆಡಳಿತ ವ್ಯವಸ್ಥೆಯೂ ನಗರದ ಆಸ್ಪತ್ರೆಗಳಿಗೆ ಸ್ಮಾರ್ಟ್‌ ಹೆಲ್ತ್‌ ಕೇರ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳವು ದನ್ನು ಮರೆಯಬಾರದು.

  ಶಿವ ಸ್ಥಾವರಮಠ

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.