ಸ್ಮಾರ್ಟ್ ನಗರಿಗೂ ಬರಲಿ ಸ್ಮಾಗ್ ಫ್ರೀ ಬೈಸಿಕಲ್
Team Udayavani, May 19, 2019, 6:00 AM IST
ನಗರಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಒಂದು.
ನಗರಗಳು ಬೆಳೆದಂತೆ ಅಲ್ಲೀ ಟ್ರಾಫಿಕ್ ಸಮಸ್ಯೆ ದಿನೇ ದಿನೇ ತನ್ನ ಕರಾಳ ಮುಖವನ್ನು ಪ್ರದರ್ಶಿಸುತ್ತಲೇ ಇರುತ್ತದೆ. ತಲುಪಬೇಕಾದ ಸ್ಥಳಗಳನ್ನು ನಿಗದಿತ ಸಮಯದಲ್ಲಿ ತಲುಪಲಾಗದೆ ಸಮಯದ ತಾಪತ್ರಯ ಒಂದು ಕಡೆಯಾದರೆ, ಫ್ಲ್ಯಾಟ್ ಮಾಡಿಕೊಂಡವರಿಗೆ ಮತ್ತು ಇಲ್ಲೇ ಹೆಚಾಗಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸಿಕೊಂಡವರಿಗೆ ವಾಹನಗಳ ವಿಷಕಾರಿ ಅನಿಲ ಆರೋಗ್ಯದ ಮೇಲೆ ಪರಿ ಣಾಮ ಬೀರಿ ನಾನಾ ವಿಧದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ನಗರದಲ್ಲಿ ಶುದ್ಧ ಗಾಳಿ ಬೇಕೆಂದರೆ ಅಲ್ಲೇ ಇರುವ ಪಾರ್ಕ್ ಒಂದೇ ದಾರಿ. ಅದು ಬಿಟ್ಟರೆ ಬೇರೆ ದಾರಿಗಳು ಉಳಿದಿಲ್ಲ.
ನಗರಗಳಲ್ಲಿ ಮರಗಳ ಪ್ರಮಾಣ ಕೂಡ ಇಳಿಮುಖವಾಗಿದೆ. ಹೀಗಿರುವಾಗ ಶುದ್ಧ ಗಾಳಿಗೆ ಏನನ್ನು ಆಶ್ರಯಿಸಬೇಕು? ಟ್ರಾಫಿಕ್ ಸಮಸ್ಯೆಗೆ ಯಾವ ಪರಿಹಾರವನ್ನೂ ಕಾಣಬೇಕು ಎನ್ನುವ ಈ ಎರಡೂ ಪ್ರಶ್ನೆಗಳಿಗೂ ಉತ್ತರವಾಗಿ ಕಾಣೋದು ಚೀನಾ ಮಾರುಕಟ್ಟೆಗೆ ಬಿಟ್ಟಿರುವ “ಎ ಸ್ಮಾಗ್ ಫ್ರೀ ಬೈಸಿಕಲ್’ಸ್ಮೋಗ್ ಫ್ರೀ ಬೈಸಿಕಲ್‌ಡಚ್ ವಿನ್ಯಾಸಕ ಕಲಾವಿದ ಡಾನ್ ರೂಸ್‌ಗಾರ್ಡ್ ಅವರ ಕ್ರಾಂತಿಕಾರಿ ಕಲ್ಪನೆಯಿಂದ ಬಂದ ಈ ಯೋಜನೆಯು ಚೀನೀ ಬೈಕ್ – ಹಂಚಿಕೆ ಕಂಪೆನಿಯಾಗಿರುವ ಒಪೋ ಸಹಯೋಗದೊಂದಿಗೆ ಪ್ರಯೋಗಕ್ಕೆ ಒಳಪಡಿಸಿದೆ.
ನಗರದಲ್ಲಿನ ಈ ಜಂಟಿ ಸಮಸ್ಯೆಗೆ ಸ್ಮಾಗ್ ಫ್ರೀ ಬೈಸಿಕಲ್ ಮಾಲಿನ್ಯ ಹೊಂದಿರುವ ಗಾಳಿಯನ್ನು ತನ್ನಲ್ಲಿರುವ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ ಮತ್ತೆ ಪರಿಸರಕ್ಕೆ ಬಿಡುತ್ತದೆ. ಇದರಿಂದಾಗಿ ನಗರ ಪರಿಸರದಲ್ಲಿ ಉತ್ತಮ ಆರೋಗ್ಯ ಮೂಡಲು ಸಹಕರಿಸುತ್ತದೆ.
ಬೈಸಿಕಲ್‌ನ ಈ ವಿಶೇಷತೆಯಿಂದ ನಗರ ವಾಸಿಗಳು ಒಂದು ಟ್ರೆಂಡ್ ರೀತಿಯಲ್ಲಿ ಉಪಯೋಗಿಸಲು ಮುಂದಾದರೆ ನಗರದಲ್ಲಿನ ವಾಹನಗಳ ಸಂಖ್ಯೆ ಇಳಿಮುಖವಾಗಿ ಸಂಚಾರ ಅಷ್ಟೊಂದು ತ್ರಾಸದಾಯಕವಾಗದೇ ಇರಬಹುದು.
ಇದು ಹೇಗೆ ಕೆಲಸ ಮಾಡುತ್ತದೆ?
ತಾಮ್ರದ ಸುರುಳಿಗನ್ನು ಹೊಂದಿರುವ ಈ ತಂತ್ರಜ್ಞಾನ ಹ್ಯಾಂಡಲಾºರ್ಗಳ ಮೇಲೆ ಒಂದು ಸಣ್ಣ ಪೆಟ್ಟಿಗೆಯಲ್ಲಿ ವಿದ್ಯುನ್ಮಾನವಾಗಿ ವಾಯುಗಾಮಿ ಕಣಗಳನ್ನು ಚಾರ್ಜ್ ಮಾಡುತ್ತದೆ ಮತ್ತು ಫಿಲ್ಟರ್‌ಗಳ ಸಹಾಯದಿಂದ ಅವುಗಳನ್ನು ಉಳಿಸಿಕೊಳ್ಳುತ್ತವೆ.
ಇದು ರೂಸ್‌ಗಾರ್ಡೆಸ್‌ನ ಸ್ಮಾಗ್ ಫ್ರೀ ಟವರ್ ಶುದ್ಧೀಕರಿಸುತ್ತದೆ. ಈ ತಂತ್ರಜ್ಞಾನದ ಮೂಲಕ 30,000 ಕ್ಯೂಬಿಕ್ ಮೀಟರ್ ಗಾಳಿಯನ್ನು ಸðಬ್ಬಿಂಗ್ ಮಾಡಲು ಸಮರ್ಥವಾಗಿದೆ.
ಮಂಗಳೂರಿಗೂ ಬರಲಿ
ಟ್ರಾಫಿಕ್ ಸಮಸ್ಯೆಯನ್ನು ದಟ್ಟವಾಗಿ ಎದುರಿಸುತ್ತಿರುವ ಮಂಗಳೂರು ಈಗಲೇ ಇಂತಹ ಪ್ರಯೋಗಗಳಿಗೆ ಒಗ್ಗಿಕೊಂಡರೆ ಮುಂದೆ ಬರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾಗಬಹುದು. ಈ ನಿಟ್ಟಿನಲ್ಲಿ ಮಂಗಳೂರಿನ ಆಡಳಿತ ಮಂಡಳಿ ಕೆಲವೊಂದು ವಿದೇಶಿ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ.
– ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.