ರಾಸಾಯನಿಕ ಮುಕ್ತ ಸೋಲಾರ್‌ ಕೀಟನಾಶಕ


Team Udayavani, Jul 28, 2019, 5:00 AM IST

q-17

ಸೂರ್ಯನ ಬಳಸಿ ಬೆಳಕು ಪಡೆಯು ವುದನ್ನು, ನೀರು ಬಿಸಿ ಮಾಡುವುದನ್ನು, ಆಹಾರ ಸಿದ್ಧಪಡಿಸುವುದನ್ನು ನೋಡಿರುತ್ತೀರಿ. ಇದೀಗ ಕೀಟನಾಶಕವಾಗಿಯೂ ಸೋಲಾರ್‌ ಶಕ್ತಿಯನ್ನು ಬಳಸಬಹುದು ಎಂದು ತೋರಿಸಿಕೊಟ್ಟಿದೆ ಈ ಯಂತ್ರ!

ರೈತರು ಹತ್ತಾರು ಸಮಸ್ಯೆಗಳನ್ನು ಎದುರಿಸಿಕೊಂಡು ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಅಲ್ಲಿಯ ತನಕದ ಸಮಸ್ಯೆಗಳದು ಒಂದು ಪಟ್ಟಿಯಾದರೆ. ಬೆಳೆ ಬಂದ ಅನಂತರ ಅದನ್ನು ಕಾಪಾಡಿಕೊಳ್ಳುವುದು ಮತ್ತೂಂದು ಸಾಹಸ. ಅನೇಕ ಕೀಟಗಳು ಹುಟ್ಟಿಕೊಂಡು ಬೆಳೆಗಳೆಲ್ಲವೂ ಹೆಚ್ಚಾಗಿ ರೋಗಬಾಧೆಗೆ ತುತ್ತಾಗಿ ನಾಶವಾಗುತ್ತವೆ. ಅದರ ನಿವಾರಣೆಗಾಗಿ ರೈತರು ಕೀಟನಾಶಕಗಳ ಮೊರೆಹೋಗಿ ಅದಕ್ಕೊಂದಿಷ್ಟು ಖರ್ಚು ಮಾಡಬೇಕಾಗುತ್ತದೆ. ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಆಹಾರ ವಿಷಪೂರಿತಗೊಳ್ಳುವುದಲ್ಲದೆ, ಕೃಷಿ ಭೂಮಿಯು ತನ್ನ ಸತ್ವವನ್ನು ಕಳೆದುಕೊಳ್ಳುವ ಅಪಾಯ ಇರುತ್ತದೆ. ಇದಕ್ಕೆಲ್ಲಾ ಪರಿಹಾರ ಒದಗಿಸುವ ಸಲುವಾಗಿ ಹೊಸದೊಂದು ಕೀಟನಾಶಕ ಉತ್ಪನ್ನವೊಂದನ್ನು ಅಭಿವೃದ್ಧಿ ಪಡಿಸಲಾಗಿದೆ. ಅದುವೇ ಸೋಲಾರ್‌ ಕೀಟನಾಶಕ! ಇದನ್ನು SOLAR INSECTS TRAP ಎಂದೂ ಕರೆಯಬಹುದು.

ಹೇಗೆ ಕೆಲಸ ಮಾಡುತ್ತೆ?
ರಾಸಾಯನಿಕ ವಸ್ತುಗಳನ್ನು ಒಳಗೊಳ್ಳದೆ, ಕೇವಲ ಸೂರ್ಯನ ಬೆಳಕಿನ ಶಕ್ತಿಯನ್ನು ಬಳಸಿಕೊಂಡು ಈ ಯಂತ್ರ ಕಾರ್ಯಾಚರಿಸುತ್ತದೆ. ಸಂಶೋಧನೆ, ಅಧ್ಯಯನಕ್ಕೆ ಒಳಪಟ್ಟಿರುವ ಈ ಯಂತ್ರವನ್ನು ಈಗಾಗಲೇ ಅನೇಕ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಅಲ್ಲದೆ ಕೃಷಿ ವಿಜ್ಞಾನಿಗಳಿಂದಲೂ ಇದರ ಕಾರ್ಯಕ್ಷಮತೆಯನ್ನು ಖಾತರಿ ಪಡಿಸಿಕೊಳ್ಳಲಾಗಿದೆ. ರೈತರಿಗೆ ಕೈಗೆಟುಕುವ ದರವನ್ನು ನಿಗದಿಪಡಿಸಲಾಗಿದೆ.

ಮನೆಗಳಲ್ಲಿ ಹುಳ ಹುಪ್ಪಟೆಗಳನ್ನು ಆಕರ್ಷಿಸುವ ಬಲ್ಬ್ ಉರಿಸುವುದನ್ನು ನೀವು ನೋಡಿರಬಹುದು. ಆ ಬಲ್ಬಿನ ಸುತ್ತಲೂ ವಿದ್ಯುತ್‌ ಹರಿಬಿಟ್ಟ ಕಂಬಿಗಳಿರುತ್ತವೆ. ಬೆಳಕಿಗೆ ಆಕರ್ಷಿತಗೊಳ್ಳುವ ಹುಳ ಹುಪ್ಪಟೆಗಳು ಈ ಕಂಬಿಗಳಿಗೆ ತಗುಲಿ ಸಾವನ್ನಪುತ್ತವೆ. ಅದೇ ರೀತಿಯ ತಂತ್ರಜ್ಞಾನ ಈ ಸೋಲಾರ್‌ ಕೀಟನಾಶಕದ್ದು. ಇಲ್ಲಿ ಅಳವಡಿಸಲಾಗಿರುವ ಬಲ್ಬ್ ಸೂರ್ಯನ ಶಕ್ತಿಯಿಂದ ಚಾಲೂ ಆಗುತ್ತದೆ.

ವಿ.ಸೂ:- ಈ ವ್ಯವಸ್ಥೆ ಹಾರಾಡುವ ಕೀಟಗಳಿಗೆ ಮಾತ್ರ ರಾಮಬಾಣವಾಗಬಲ್ಲುದು. ಓಡಾಡುವ ಕೀಟಗಳು ನಾಶವಾಗುವುದಿಲ್ಲ, ಆದರೆ ಮುಖ್ಯವಾಗಿ ತಿಳಿಯಬೇಕಾಗಿರುವ ವಿಷಯವೇನೆಂದರೆ, ಓಡಾಡುವ ಕೀಟಗಳು ಜನಿಸುವುದು ಹಾರಾಡುವ ಕೀಟಗಳ ಮೊಟ್ಟೆಗಳಿಂದ! ಆದ್ದರಿಂದ ಪರೋಕ್ಷವಾಗಿ ಓಡಾಡುವ ಕೀಟಗಳ ನಿಯಂತ್ರಣವನ್ನು ಮಾಡುತ್ತದೆ ಎನ್ನಬಹುದು.

ತನ್ನಷ್ಟಕ್ಕೆ ಆನ್‌ ಆಗುತ್ತದೆ

ಈ ಯಂತ್ರದಲ್ಲಿ ಕೀಟಗಳನ್ನು ಆಕರ್ಷಿಸು ವಂಥ ವಿಶೇಷ ತಂತ್ರಜ್ಞಾನ ವನ್ನು ಒಳಗೊಂಡಂತಹ ಬೆಳಕು ಬಲ್ಬ್ಅನ್ನು ಅಭಿವೃದ್ಧಿಪಡಿಸಿದ್ದು , ಅದರಿಂದ ಹೊಮ್ಮುವ ಬೆಳಕಿಗೆ ಆಕರ್ಷಿತಗೊಳ್ಳುವ ಕೀಟಗಳು ಬಳಿ ಬಂದು ಕೆಳಗಿಟ್ಟಿರುವ ಬುಟ್ಟಿಯಲ್ಲಿನ ನೀರಿನಲ್ಲಿ ಬಿದ್ದು ಸಾಯುವುದು. ಬಲ್ಬ್ ತನ್ನಷ್ಟಕ್ಕೆ ತಾನೇ ಆನ್‌ ಆಗುತ್ತವೆ ಮತ್ತು ತನ್ನಷ್ಟಕ್ಕೆ ತಾನೇ ಆಫ್ ಕೂಡಾ ಆಗುತ್ತದೆ. ಸಾಮಾನ್ಯವಾಗಿ ಸಂಜೆ 7ಕ್ಕೆ ಆನ್‌ ಆಗಿ ರಾತ್ರಿ 10ಕ್ಕೆ ಆಫ್ ಆಗುತ್ತದೆ.

·ಬೆಳೆಗಳ ಎತ್ತರಕ್ಕನುಗುಣವಾಗಿ 1.5 ಎಕರೆಯಿಂದ 2 ಎಕರೆ ವಿಸ್ತೀರ್ಣದ ತನಕದ ಕೀಟಗಳನ್ನು ಆಕರ್ಷಿಸಬಲ್ಲದು

·ಹಣ್ಣು, ತರಕಾರಿ, ಅರಣ್ಯ ಬೆಳೆಗಳಂಥ ವಕ್ಕೆಲ್ಲಾ ಇದನ್ನು ಬಳಸಬಹುದು

·ಸೈನಿಕ ಹುಳು, ರಸ ಹೀರುವ ಕೀಟ, ಕಾಯಿ ಕೊರಕ, ಕಾಂಡ ಕೊರಕ, ಬೇರು ಹುಳ, ಥ್ರಿಪ್ಸ್‌, ಎಲೆ ತಿನ್ನುವ ಕೀಟ, ಧ್ವಮರಿ, ಲೀಫ್ ಮೈನರ್ಸ್‌, ಮಾತ್‌ ಮುಂತಾದವನ್ನು ಬಲಿ ಪಡೆಯಬಲ್ಲುದು.

·3ರಿಂದ 5 ವರ್ಷ ಯಂತ್ರದ ವಾರೆಂಟಿ

ಉಪಯೋಗಗಳು

·ಕೃಷಿ ಭೂಮಿಯ ಮಣ್ಣು ಮಲಿನಗೊಳ್ಳುವುದು ತಪ್ಪುತ್ತದೆ.

·ಆಹಾರ ಕಲುಷಿತಗೊಳ್ಳುವುದನ್ನು ತಡೆಗಟ್ಟಬಹುದು.

·ರೈತರಿಗೆ 80% ರಿಂದ 95% ವರೆಗೂ ರಾಸಾಯನಿಕ ಕೀಟನಾಶಕಗಳ ಖರ್ಚು ಉಳಿಯುವುದು

 

•ನಾಗರಾಜ್‌

 

ಟಾಪ್ ನ್ಯೂಸ್

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.