ಸೋಲೇ ಗೆಲುವಿನ ಮೆಟ್ಟಿಲಾಗಲಿ…
Team Udayavani, Sep 23, 2019, 5:16 AM IST
ಗೆಲುವು ಮತ್ತು ಯಶಸ್ಸಿಗೆ ಕಾರಣವಾಗಬಲ್ಲ ಅಂಶಗಳು ಯಾವುವು? ನಿರಂತರ ಪ್ರಯತ್ನ, ಕಠಿನ ಪರಿಶ್ರಮ, ಶ್ರದ್ಧೆ. ಇವೆಲ್ಲದರ ಜತೆ ಸೋಲು ಮತ್ತು ಸೋಲಿನ ಭಯ. ಹೌದು, ಬದುಕು ಒಡ್ಡಿದ ಪರೀಕ್ಷೆಯಲ್ಲಿ ನಾವು ಇನ್ನೇನು ಸೋಲುತ್ತೇವೆ ಎನ್ನುವ ಭಯ ಕಾಡಿದಾಗ ಅದರಿಂದ ಹೊರಬರಲು ಇನ್ನಿಲ್ಲದ ಪ್ರಯತ್ನ ಪಡುತ್ತೇವಲ್ಲ ಆಗ ಗೆಲುವಿನ ದಡ ಸೇರುತ್ತೇವೆ. ಇದೇ ಕಾರಣಕ್ಕೆ ಸೋಲೇ ಗೆಲುವಿನ ಸೋಪಾನ ಎನ್ನುತ್ತಾರೆ.
ಸೋಲನ್ನೇ ಮೆಟ್ಟಿಲಾಗಿಸಿಕೊಳ್ಳಿ
ಸೋಲು ಎಂದಿಗೂ ನಮ್ಮ ಆತ್ಮ ಸ್ಥೈರ್ಯವನ್ನು ಕುಗ್ಗಬಾರದು. ಬದಲಾಗಿ ಗೆಲುವಿನ ಛಲ ಮೂಡಿಸುವಂತಾಗಬೇಕು. ಯಾವುದಾದರೂ ಕೆಲಸಕ್ಕೆ ಹೊರಟು ಅದರಲ್ಲಿ ವಿಫಲರಾದಿರಿ ಎಂದಿಟ್ಟುಕೊಳ್ಳಿ. ಅಷ್ಟಕ್ಕೇ ಸುಮ್ಮನಾಗಬೇಡಿ. ಮುಂದಿನ ಬಾರಿ ಮತ್ತೂಮ್ಮೆ ಪ್ರಯತ್ನಿಸಿ. ಹಿಂದಿನ ಬಾರಿ ಯಾವ ಕಾರಣಕ್ಕೆ ನಿಮ್ಮ ಯತ್ನ ವಿಫಲವಾಯಿತು. ಎಡವಲು ಕಾರಣವೇನು ಎನ್ನುವುದರ ಕುರಿತು ಚಿಂತಿಸಿ. ಆ ತಪ್ಪು ಮರುಕಳಿಸದಂತೆ ಯಾವ ರೀತಿ ಕಾರ್ಯ ನಿರ್ವಹಿಸಬಹುದು ಎನ್ನುವುದನ್ನು ಲೆಕ್ಕ ಹಾಕಿ. ಅನಂತರ ಹೊರಡಿ. ಸಂಶಯ ಬೇಡ. ಆಗ ಗೆಲುವು ನಿಮ್ಮದೇ.
ಗೆಲುವಿನ ದಡ ಸೇರಿಸಲಿ
ಶಾಲಾ ದಿನಗಳನ್ನು ನೆನಪು ಮಾಡಿಕೊಳ್ಳಿ. ನಮಗೆ ಯಾವುದಾದರೂ ಕಷ್ಟ ಅಥವಾ ಇಷ್ಟ ಇಲ್ಲದ ವಿಷಯ ಇದ್ದರೆ ಅದರ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ಆದರೆ ಪರೀಕ್ಷೆ ಸಮಯದಲ್ಲಿ ಮಾತ್ರ ಜಾಗೃತರಾಗುತ್ತೇವೆ. ಎಲ್ಲ ವಿಷಯಗಳಲ್ಲಿ ಉತ್ತಮ ಅಂಕ ಬಂದು ಇದರಲ್ಲಿ ಫೇಲ್ ಆದರೆ ಎನ್ನುವ ಭಯದಲ್ಲೇ ಅಧ್ಯಯನ ನಡೆಸುತ್ತೇವೆ. ಹಗಲು-ರಾತ್ರಿ ಕಷ್ಟ ಪಟ್ಟು ಶ್ರದ್ಧೆಯಿಂದ ಓದಿ ತೇರ್ಗಡೆಯಾಗಿ ನಿಟ್ಟುಸಿರು ಬಿಡುತ್ತೇವೆ. ಇಲ್ಲಿ ನಮ್ಮ ಗೆಲುವಿಗೆ ಪ್ರೇರಣೆ ಯಾಗಿದ್ದು ಸೋತರೆ ಮುಂದೇನು ಎನ್ನುವ ಭಯ. ಒಂದು ಸೋಲು ಬಂದಾಗ ತಲೆ ಮೇಲೆ ಕೈ ಹೊತ್ತು ಕೂರುವ ಬದಲು ಮರಳಿ ಯತ್ನ ಮಾಡಬೇಕು. ಮನೆಯ ಮೂಲೆಯಲ್ಲಿನ ಜೇಡರ ಬಲೆಯನ್ನು ನಾವು ಕಿತ್ತರೂ ಮತ್ತೆ ಮತ್ತೆ ನೇಯುವಂತೆ…
ಶ್ರಮ ನಿರರ್ಥಕವಲ್ಲ
ನಾವು ಗೆಲುವಿಗಾಗಿ ಶ್ರಮ ಪಡದೆ ಸೋಲಿನ ಭೀತಿಯಿಂದ ಹಿಂದೇಟು ಹಾಕಿದರೆ ಅದು ದೊಡ್ಡ ತಪ್ಪಾಗುತ್ತದೆ. ಏನಾದರೂ ಆಗಲಿ ಒಂದು ಕೈ ನೋಡುತ್ತೇವೆ ಎನ್ನುವ ಮನಸ್ಥಿತಿ ಹೊಂದಿರಬೇಕು. ಒಂದು ವೇಳೆ ಸೋತರೂ ಅದು ನಮಗೆ ದೊಡ್ಡ ಪಾಠವನ್ನೇ ಕಲಿಸಿರುತ್ತದೆ. ಅನುಭವವೇ ಗುರು ತಾನೆ? ನಾವು ಗೆಲುವಿಗಾಗಿ ಶ್ರಮ ಪಡದೆ ಸೋಲಿನ ಭೀತಿಯಿಂದ ಹಿಂದೇಟು ಹಾಕಿದರೆ ಅದು ದೊಡ್ಡ ತಪ್ಪಾಗುತ್ತದೆ. ಏನಾದರೂ ಆಗಲಿ ಒಂದು ಕೈ ನೋಡುತ್ತೇವೆ ಎನ್ನುವ ಮನಸ್ಥಿತಿ ಹೊಂದಿರಬೇಕು. ಒಂದು ವೇಳೆ ಸೋತರೂ ಅದು ನಮಗೆ ದೊಡ್ಡ ಪಾಠವನ್ನೇ ಕಲಿಸಿರುತ್ತದೆ. ಅನುಭವವೇ ಗುರು ತಾನೆ?
- ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.