ದುಬಾರಿ ಪಾತ್ರೆಗಳ ನಿರ್ವಹಣೆಗೆ ಕೆಲವು ಟಿಪ್ಸ್
Team Udayavani, Aug 18, 2018, 2:22 PM IST
ಅಡುಗೆ ಮನೆಯಲ್ಲಿ ದುಬಾರಿ ಮೌಲ್ಯದ ಪಾತ್ರೆಗಳಿಗೆ ಈಗ ಪ್ರಮುಖ ಸ್ಥಾನ ಸಿಕ್ಕಿದೆ. ತಟ್ಟೆ, ಲೋಟ ಸಹಿತ ಇನ್ನಿತರೆ ಅಡುಗೆ ಸಾಮಗ್ರಿಗಳು ಹೆಚ್ಚಾಗಿ ಚೀನಾಮೇಡ್ ಆಗಿರುತ್ತವೆ. ಚೀನಾ ಮೇಡ್ ಅಡುಗೆ ಪಾತ್ರೆಗಳಲ್ಲಿ ಶೇ. 30ರಷ್ಟನ್ನು ಪ್ರಾಣಿಗಳ ಮೂಳೆ ಉಳಿದಂತೆ ಗಟ್ಟಿ ಮಣ್ಣು ಬಳಸಿ ತಯಾರಿಸಿರುತ್ತಾರೆ. ಹೀಗೆ ತಯಾರಿಸಲಾದ ವಸ್ತುಗಳನ್ನು ದೀರ್ಘಕಾಲ ಬಳಿಕೆ ಬರುವಂತೆ ಮತ್ತು ಅವುಗಳ ಸೌಂದರ್ಯ ಹಾಳಾಗದಂತೆ ಉಳಿಸಿಕೊಳ್ಳುವುದಕ್ಕೆ ಇಲ್ಲಿವೆ ಕೆಲವು ಟಿಪ್ಸ್.
ಜೋಡಿಸಿ ಇಡುವಾಗ ಎಚ್ಚರ
ಇಂತ ಹ ಪಾತ್ರೆಗಳನ್ನು ಒಂದರ ಮೇಲೆ ಇನ್ನೊಂದನ್ನು ಜೋಡಿಸಿಟ್ಟಾಗ ಅವುಗಳು ಒಡೆಯುವುದು ಅಥವಾ ಬಿರುಕು ಬೀಳುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಈ ಪಾತ್ರೆ ಗಳ ಮಧ್ಯೆ ಮೃದುವಾದ ಕಾಗದಗಳು ಅಥವಾ ಟಿಶ್ಯೂಗಳನ್ನು ಬಳಸುವ ಮೂಲಕ ನಾವು ಅವುಗಳನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.
ಭಾರವಾಗದಿರಲಿ
ಇನ್ನು ಟಿಶ್ಯೂ ಬಳಸಿ ಪಾತ್ರೆಗಳನ್ನು ಜೊಡಿಸುವಾಗಲೂ ಹೆಚ್ಚು ಭಾರವಾಗುವಂತೆ ಒಂದರ ಮೇಲೊಂದು ಇಡಬೇಡಿ. ಏಕೆಂದರೆ ಭಾರ ಹೆಚ್ಚಾಗಿ ಕೆಳಗಿನ ಪಾತ್ರೆಗಳು ಒಡೆಯುವ ಸಾಧ್ಯತೆಗಳೂ ಇರುತ್ತವೆ. ಅದರ ಬದಲು 6 ರಿಂದ 8 ಪಾತ್ರೆಗಳನ್ನಷ್ಟೇ ಒಂದು ಗುಂಪಿನಲ್ಲಿ ಜೋಡಿಸಿ.
ಪತ್ರಿಕೆಗಳನ್ನು ಉಜ್ಜಬೇಡಿ
ಪತ್ರಿಕೆಗಳ ಅಕ್ಷರಗಳಲ್ಲಿನ ಶಾಯಿ ಆರೋಗ್ಯದ ದೃಷ್ಟಿಯಿಂದ ಹಿತವಲ್ಲ. ಆ ಕಾರಣಕ್ಕಾಗಿ ಚೀನಾ ಪಾತ್ರೆಗಳ ಸೆಟ್ ಅನ್ನು ನ್ಯೂಸ್ ಪೇಪರ್‌ಗಳನ್ನು ಬಳಸಿ ಉಜ್ಜಬೇಡಿ. ಅವುಗಳಲ್ಲಿನ ಶಾಯಿಯ ವಿಷಕಾರಕ ಅಂಶಗಳು ತಿನ್ನುವ ಆಹಾರಕ್ಕೆ ಸೇರಿ ದೇಹವನ್ನು ಸೇರುತ್ತವೆ. ಹಾಗಾಗಿ ಈ ಬಗ್ಗೆ ಕಾಳಜಿ ವಹಿಸಿ.
ಅತೀ ತಂಪು/ ಹೆಚ್ಚು ಬಿಸಿ ನೀರು ಬಳಸಬೇಡಿ
ಪಾತ್ರೆಗಳನ್ನು ಆದಷ್ಟು ಸಾಮಾನ್ಯ ನೀರಿನಲ್ಲಿಯೇ ತೊಳೆಯಿರಿ. ಹೆಚ್ಚು ಬೆಚ್ಚಗಿನ ನೀರು ಮತ್ತು ಅತೀ ತಂಪಾಗಿರುವ ನೀರು ಇವೆರಡೂ ಪಾತ್ರೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ದುಬಾರಿ ಪಾತ್ರೆಗಳು ಸೌಂದರ್ಯ ಕಳೆದುಕೊಳ್ಳುತ್ತವೆ.
ಸಿಂಕ್‌ಗೆ ಮೃದು ಬಟ್ಟೆ ಹಾಸಿ
ಪಾತ್ರೆಗಳನ್ನು ತೊಳೆಯುವ ಸಂದರ್ಭದಲ್ಲಿ ವಾಷ್ ಬೇಸಿನ್‌ನ ಸಿಂಕ್‌ಗೆ ಮೃದುವಾದ ಬಟ್ಟೆ ಹಾಸಿ. ಏಕೆಂದರೆ, ಪಾತ್ರೆಗಳನ್ನು ಸೋಪ್ ಬಳಸಿ ತೊಳೆಯುವ ಸಂದರ್ಭದಲ್ಲಿ ಅವುಗಳು ಜಾರುವ ಸಂಭವಗಳೂ ಹೆಚ್ಚು. ಹೀಗೆ ಒಂದು ವೇಳೆ ಕೈತಪ್ಪಿ ಕೆಳಗೆ ಬಿದ್ದಾಗಲೂ ಯಾವುದೇ ಹಾನಿ ಸಂಭವಿಸದೇ ಇರಲು ಈ ದಾರಿ ಸೂಕ್ತ. ಅಲ್ಲದೆ ಪಾತ್ರೆಗಳನ್ನು ಉಜ್ಜಿಡುವುದಕ್ಕೂ ಮೃದು ಬಟ್ಟೆಗಳ ಬಳಕೆ ಉತ್ತಮ. ಇದರಿಂದ ಪಾತ್ರೆಗೆ ಗೆರೆ ಬೀಳುವ ಅಥವಾ ಹಾನಿಯಾಗುವುನ್ನು ತಪ್ಪಿಸಬಹುದು.
ಭುವನಾ ಬಾಬು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸ್ಪಷ್ಟನೆ
Karkala: ಇಳಿಜಾರಿನಲ್ಲಿ ಯು-ಟರ್ನ್; ಅತ್ತೂರು ರಸ್ತೆಯಲ್ಲಿ ಅಪಾಯ
BBK11: ಸತ್ಯಕ್ಕೆ ಸೋಲಿಲ್ಲ.. ರಜತ್ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು
Kundapura: ಚೋರಾಡಿ; ಕರೆ ಬಂದರೆ ಬೆಟ್ಟ ಹತ್ತಬೇಕು!
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.