ಅಡಿಕೆ ಬೆಲೆಯಲ್ಲಿ ಸ್ಥಿರತೆ
Team Udayavani, Jun 2, 2019, 6:00 AM IST
ಸುಮಾರು ಒಂದು ತಿಂಗಳಿನಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳು ಕಾಣಿಸಿಕೊಂಡಿಲ್ಲ. ಕೆಲವೇ ದಿನಗಳಲ್ಲಿ ಶಾಲಾ ಕಾಲೇಜುಗಳು ಆರಂಭಗೊಳ್ಳುವುದರಿಂದ ಹಣಕಾಸಿನ ಆವಶ್ಯಕತೆಯನ್ನು ಪೂರೈಸಲು ಬೆಳೆಗಾರರು ಒಂದಷ್ಟು ಪ್ರಮಾಣದ ಅಡಿಕೆಯನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಆದರೆ ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಅಡಿಕೆಯನ್ನು ಮಾರಾಟಕ್ಕೆ ಬಿಡದೆ ತೆಗೆದಿರಿಸಿಕೊಂಡಿದ್ದ ಬೆಳೆಗಾರರಿಗೆ ನಿರೀಕ್ಷಿತ ಬೆಲೆ ಏರಿಕೆ ಆಗದೇ ಇರುವುದು ನಿರಾಶೆಯನ್ನುಂಟುಮಾಡಿದೆ.
ತಿಂಗಳ ಹಿಂದೆ ಅಡಿಕೆ ಧಾರಣೆ 278 ರೂ.ಗೆ ಏರಿಕೆಯಾಗಿ ಅದೇ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಹೊಸ ಅಡಿಕೆ 235 ಕ್ಕೆ ಖರೀದಿಯಾಗಿದೆ. ಡಬಲ್ ಚೋಲು 310 ರೂ.ವರೆಗೆ ಖರೀದಿ ನಡೆಸಿದ್ದು, ಹಿಂದಿನ ವಾರದ ಧಾರಣೆಯನ್ನೇ ಕಾಪಾಡಿಕೊಂಡಿದೆ. ಪಠೊರಾ ಹೊಸ 150 ರೂ.ನಿಂದ 190 ರೂ.ವರೆಗೆ ಹಾಗೂ ಹಳೆಯದು 210 ರೂ.ಗೆ ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 130 ರೂ. ಹಾಗೂ ಹಳೆಯದು 150 ರೂ., ಕರಿಕೋಟು 100 ರೂ.ನಿಂದ 140 ರೂ.ವರೆಗೆ ಧಾರಣೆ ಪಡೆಯುತ್ತಿವೆ.
ಕಾಳುಮೆಣಸು ಅಲ್ಪ ಏರಿಕೆ
ಕಾಳುಮೆಣಸು ಧಾರಣೆಯಲ್ಲಿ ವಾರದ ಮಧ್ಯೆ 5 ರೂ. ಇಳಿಕೆ ಕಂಡರೂ ಮತ್ತೆ 5 ರೂ. ಏರಿಕೆಯಾಗಿದೆ. 315 ರೂ.ಗೆ ಮಾರುಕಟ್ಟೆಯಲ್ಲಿ ಖರೀದಿಯಾಗಿದೆ. ಲೋಕಲ್ ಮಾರುಕಟ್ಟೆಯಲ್ಲಿ ಕಾಳುಮೆಣಸು ಒಂದಷ್ಟು ಬೇಡಿಕೆ ಪಡೆದುಕೊಂಡಿದೆ. ಈ ಕಾರಣದಿಂದ ದರ ಏರಿಕೆಯಾಗುವ ಸಾಧ್ಯತೆಯೂ ಇದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ. ಕೆಲ ಸಮಯಗಳ ಧಾರಣೆಯನ್ನು ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರೆದಿದೆ.
ರಬ್ಬರ್ ಮತ್ತಷ್ಟು ಚೇತೋಹಾರಿ
ರಬ್ಬರ್‌ನ ಬೆಲೆ ಈ ವಾರವೂ ಮತ್ತಷ್ಟು ಚೇತೋ ಹಾರಿ ಏರಿಕೆಯನ್ನು ಕಂಡಿರುವುದು ಬೆಳೆಗಾರರಲ್ಲಿ ಖುಷಿಯನ್ನು ತಂದಿದೆ. ಕಳೆದ ವಾರ 6.5 ರೂ.ನಷ್ಟು ಏರಿಕೆಯಾಗಿ 139.5 ರೂ.ಗೆ ತಲುಪಿದ್ದ ರಬ್ಬರ್ ಬೆಲೆ ಈ ವಾರ ಮತ್ತೆ 2 ರೂ. ಏರಿಕೆಯಾಗಿ 141.5 ರೂ.ಗೆ ಖರೀದಿ ನಡೆಸಿದೆ. ಆರ್‌ಎಸ್‌ಎಸ್4 ದರ್ಜೆ ಏರಿಕೆ ಕಂಡು ಕಂಡು 141.5 ರೂ., ಆರ್‌ಎಸ್‌ಎಸ್5 ದರ್ಜೆ ಏರಿಕೆ ಕಂಡು 136. 5 ರೂ., ಲಾಟ್ 131 ರೂ.ನಲ್ಲಿ ಖರೀದಿ ನಡೆಸಿದೆ. ಏರಿಕೆ ಕಂಡಿರುವ ಸಾðಪ್ 1 ದರ್ಜೆ 95 ರೂ. ಹಾಗೂ ಸ್ಕಾಪ್ 2 ದರ್ಜೆ 86 ರೂ. ರೂ.ನಲ್ಲಿ ಖರೀದಿ ನಡೆಸಿವೆ.
ತೆಂಗು ಧಾರಣೆ ಸಾಧಾರಣ
ಕೆಲವು ತಿಂಗಳುಗಳಿಂದ ಉತ್ತಮ ಸರಾಸರಿ ಧಾರಣೆಯಲ್ಲಿ ಸಾಗಿದ್ದ ತೆಂಗಿಗೆ ಬೆಲೆ ಇಳಿಕೆಯಾಗಿದೆ. ಈ ವಾರ ಹೊಸ ತೆಂಗಿನ ಕಾಯಿ 24-25 ರೂ.ಗೆ ಖರೀದಿಯಾದರೆ, ಹಳೆಯ ತೆಂಗಿನಕಾಯಿ 25-26 ರೂ. ತನಕ ಖರೀದಿಯಾಗಿದೆ. ತೆಂಗಿನ ಕಾಯಿ ಬೆಲೆಯಲ್ಲಿ ಸದ್ಯ ಏರಿಕೆಯಾಗುವ ಸಾಧ್ಯತೆ ಕಾಣಿಸಿಕೊಂಡಿಲ್ಲ.
ಕೊಕ್ಕೋ ಯಥಾಸ್ಥಿತಿ
ಕಳೆದ ಕೆಲ ಸಮಯಗಳಿಂದ ಕೊಕ್ಕೋ ಧಾರಣೆ ಸ್ಥಿರವಾಗಿ ಸಾಗುತ್ತಿದ್ದ ಕೊಕ್ಕೋ ಧಾರಣೆ ಒಂದಷ್ಟು ಇಳಿಕೆಯ ಹಾದಿಯಲ್ಲೇ ಸಾಗಿದೆ. ಹಸಿ ಕೊಕ್ಕೋ ಧಾರಣೆ 57 ರೂ. ಗೆ ಖರೀದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್‌ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.