‘ಕಲೆ, ಸಾಹಿತ್ಯ ಉಳಿಸುವುದು ಹಿರಿಯರ ಜವಾಬ್ದಾರಿ’
Team Udayavani, Nov 4, 2018, 3:24 PM IST
ಬೆಳ್ಳಾರೆ: ಸಾಹಿತ್ಯ ಹಾಗೂ ಸಂಸ್ಕೃತಿಗಳನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಸಾಹಿತ್ಯ ಸಮ್ಮೇಳನಗಳಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳ ಮೂಲಕ ಕಲೆ ಹಾಗೂ ಸಾಹಿತ್ಯ ಉಳಿಸುವುದು ಹಿರಿಯರ ಜವಾಬ್ದಾರಿ ಎಂದು ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶಕುಂತಳಾ ನಾಗರಾಜ್ ಹೇಳಿದರು.
ಇಲ್ಲಿನ ಸಪಪೂ ಕಾಲೇಜಿನ ನಾರಾಯಣ ಶೇಖ ಸಭಾಭವನದಲ್ಲಿ ಸುವಿಚಾರ ಸಾಹಿತ್ಯ ವೇದಿಕೆ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ವಿದ್ಯಾರ್ಥಿಗಳ ಸಾಹಿತ್ಯ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್‌ನಲ್ಲೇ ಸಮಯ ಪೋಲು ಮಾಡುತ್ತಿರುವುದರಿಂದ ಕಲೆ, ಸಾಹಿತ್ಯದ ಕಡೆಗೆ ಆಸಕ್ತಿ ಕಡಿಮೆಯಾಗಿದೆ. ಹಿರಿಯರಿಂದ ಬಳುವಳಿಯಾಗಿ ಬಂದ ಸಾಹಿತ್ಯ ಸಂಪತ್ತನ್ನು ರಕ್ಷಿಸುವ, ಇನ್ನಷ್ಟು ಶ್ರೀಮಂತಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಮರೆಯಬಾರದು ಎಂದರು.
ಪ್ರಾಂಶುಪಾಲ ಸುಬ್ರಾಯ ಗೌಡ ಮಾತನಾಡಿ, ಮಕ್ಕಳು ಬಿಡುವಿನ ವೇಳೆಯಲ್ಲಿ ಸಾಹಿತ್ಯ ಹಾಗೂ ಕಲೆಯತ್ತ ಚಿತ್ತ ಹರಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸುಳ್ಯ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಚರಿಷ್ಮಾ ಕೆ.ವೈ. ಮಾತನಾಡಿ, ಸಾಹಿತ್ಯದ ರುಚಿಯನ್ನು ವಿದ್ಯಾರ್ಥಿಗಳು ಸವಿಯಬೇಕು. ಬರವಣಿಗೆ ಪಾಕ ಮಾಡುವುದನ್ನು ಕಲಿಯಬೇಕು. ಕಲೆಯ ಕುಂಚದಿಂದ ಭಾಷೆಯನ್ನು ಬಣ್ಣಗಳಿಂದ ರಾರಾಜಿಸುವಂತೆ ಮಾಡಬೇಕು. ಜಗತ್ತಿನ ಶ್ರೇಷ್ಠ ಸಾಹಿತ್ಯಗಳು ತರಗತಿಯೊಳಗೆ ಹರಿದು ಬರಬೇಕು. ಕನ್ನಡದಲ್ಲಿ ಮಾತನಾಡಿದರೆ ಘನತೆ ಕುಂದುತ್ತದೆ ಎಂದು ತಿಳಿದರೆ ಅದು ಕನ್ನಡ ಮಾತೆಗೆ ಮಾಡುವ ಅವಮಾನ. ಕನ್ನಡವು ವಿಶ್ವದಲ್ಲಿಯೇ ಸಿಂಹ ಘರ್ಜನೆ ಮಾಡುವಂತಾಗಬೇಕು ಎಂದರು.
ಚರಿಷ್ಮಾ ಅವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಎ.ಕೆ. ಮಣಿಯಾಣಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಾಳಪ್ಪ ಮಣಿಮಜಲು, ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ, ಬೆಳ್ಳಾರೆ ಜೆಸಿಐ ಅಧ್ಯಕ್ಷ, ಜಯರಾಮ ಉಮಿಕ್ಕಳ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಮ ಅಮಳ, ಉಪಪ್ರಾಚಾರ್ಯೆ ಉಮಾಕುಮಾರಿ ಉಪಸ್ಥಿತರಿದ್ದರು. ಸುವಿಚಾರ ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಪೆರಾಲ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪನ್ಯಾಸಕಿ ಹಸೀನಾ ಬಾನು ವಂದಿಸಿದರು. ಲಿಂಗಪ್ಪ ಗೌಡ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.