ಮೆದುಳಿನ ಆರೋಗ್ಯಕ್ಕೆ ಸೂಪರ್‌ ಬ್ರೇನ್‌ ಯೋಗ

ದೈಹಿಕ ಸ್ವಾಸ್ಥ್ಯದ ಜತೆಗೆ ಮೆದುಳಿನ ಆರೋಗ್ಯವೂ ಮುಖ್ಯ

Team Udayavani, Feb 11, 2020, 5:04 AM IST

yoda-750

ಪ್ರತಿದಿನ ನೀವು ಎದ್ದ ನಂತರ ನಿಮ್ಮ ದೇಹದ ಆರೋಗ್ಯವು ನಿಮ್ಮ ದಿನವನ್ನು ನಿರ್ಧರಿಸುತ್ತದೆ. ದೇಹ ದಲ್ಲಿ ಯಾವುದೇ ಕಾಯಿಲೆ ಇದ್ದರೂ ಅದು ನಿಮ್ಮ ಉತ್ಸಾಹವನ್ನು ಕುಂದಿಸುತ್ತದೆ ಮತ್ತು ದಿನನಿತ್ಯದ ಚಟುವಟಿಕೆಯ ಸುಗಮ ನಿರ್ವಹಣೆಗೆ ತಡೆಯ ನ್ನೊಡ್ಡುತ್ತದೆ. ವ್ಯಾಯಾಮದಿಂದ ನೀವು ದೈಹಿಕವಾಗಿ ಆರೋಗ್ಯದಿಂದ ಇರಬಹುದಾದರೂ ಸಮಗ್ರ ಸ್ವಾಸ್ಥ್ಯ ಕ್ಕಾಗಿ ಅದೊಂದೇ ಸಾಕಾಗುವುದಿಲ್ಲ. ನಿಮ್ಮ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯವಾದದ್ದು.

ದಿನನಿತ್ಯದ ಚಟುವಟಿಕೆಗಳ ನಿರ್ವಹಣೆಯಲ್ಲಿ ನಿಮ್ಮ ಮೆದುಳು ಅತಿ ದೊಡ್ಡ ಪಾತ್ರವನ್ನು ವಹಿ ಸುತ್ತದೆ. ತ್ವರಿತವಾಗಿ ಸ್ಪಂದಿಸುವ, ಗ್ರಹಿಸುವ, ಅರ್ಥ ಮಾಡಿಕೊಳ್ಳುವ ಮತ್ತು ಕಾರ್ಯ ಮಾಡುವ ನಿಮ್ಮ ಸಾಮರ್ಥ್ಯವು ಮೆದುಳಿನ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ದೇಹದ ಇತರ ಅಂಗಗ ಳಂತೆಯೇ ಪ್ರತಿನಿತ್ಯ ಮೆದುಳಿಗೂ ಪೌಷ್ಟಿಕತೆ ಮತ್ತು ಶಕ್ತಿ ಅಗತ್ಯ. ಮೆದುಳಿನ ವ್ಯಾಯಾಮವೂ ನಮ್ಮ ಚಟುವಟಿಕೆಗೆ ಒಳ್ಳೆಯ ಪರಿಣಾಮಗಳನ್ನುಂಟು ಮಾಡುತ್ತದೆ.

ಅದರಲ್ಲೂ ಯೋಗಾಸನಗಳು ಮಾನವ ದೇಹವು ಉತ್ತಮವಾಗಿ ಕೆಲಸ ಮಾಡುವಂತೆ ಮಾಡುತ್ತವೆ. ಉತ್ತಮ ಮೆದುಳಿಗಾಗಿ ಯೋಗ- ಪ್ರಾಣಾಯಾಮ ಪರಿಣಾಮಕಾರಿ. ಇದು ನಮ್ಮ ದೇಹವು ತನ್ನದೇ ಮೂಲ ಶಕ್ತಿಗಳನ್ನು ಮತ್ತು ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂತೆ ಮಾಡುತ್ತದೆ. ಯೋಗವು ಮನೋದೈಹಿಕ ಶಕ್ತಿಯನ್ನು ವರ್ಧಿಸುತ್ತದೆ.

ಒತ್ತಡವನ್ನು ನಿವಾರಿಸುತ್ತದೆ ಮತ್ತು ಇದರಿಂದ ಮೆದುಳಿನ ಕಾರ್ಯನಿರ್ವಹಣಾ ಸಾಮರ್ಥ್ಯವೂ ಹೆಚ್ಚುತ್ತದೆ. ಎಡ ಮೂಗಿನ ಹೊಳ್ಳೆಯಿಂದ ಉಸಿರಾ ಡಿದರೆ ಬಲ ಮೆದುಳು ಸಕ್ರಿಯವಾಗುತ್ತದೆ ಮತ್ತು ಬಲ ಮೂಗಿನ ಹೊಳ್ಳೆಯಲ್ಲಿ ಉಸಿರಾಡಿದರೆ ಎಡ ಮೆದುಳು ಸಕ್ರಿಯವಾಗುತ್ತದೆ. ಸೂಪರ್‌ ಬ್ರೇನ್‌ ಯೋಗವು ಸರಳ ವಾದ ಯೋಗಾಸನಗಳ ಸರಣಿಯಾಗಿದ್ದು, ಇದು ವೃತ್ತಿಪರರಲ್ಲಿ ಮತ್ತು ಶಿಕ್ಷಕರಲ್ಲಿ ಹೆಚ್ಚು ಪ್ರಸಿದ್ಧವಾಗಿದೆ.

ಸೂಪರ್‌ ಬ್ರೇನ್‌ ಯೋಗದ ಲಾಭಗಳು
ಸೂಪರ್‌ ಬ್ರೇನ್‌ ಯೋಗವು ನಿಮ್ಮ ಕಿವಿಯ ಲ್ಲಿರುವ ಆಕ್ಯುಪಂಕ್ಚರ್‌ನ ಸ್ಥಳಗಳನ್ನು ಸಕ್ರಿಯವಾಗಿ ಸುತ್ತದೆ. ಇವು ನಿಮ್ಮ ಮೆದುಳಿನ “ಗ್ರೇ ಮ್ಯಾಟರ’ನ್ನು ಪ್ರಚೋದಿಸುತ್ತದೆ. ಸೂಪರ್‌ ಬ್ರೇನ್‌ ಯೋಗ ವು ಮೆದುಳಿನ ಎಡ-ಬಲ ಭಾಗಗಳ ನಡುವೆ ಸಮನ್ವ ಯತೆಯನ್ನು ತರುತ್ತದೆ. ಶಕ್ತಿಯ ಮಟ್ಟಗಳನ್ನು ಹಂಚಿ, ಪ್ರಶಾಂತತೆಯನ್ನು ತರಿಸುತ್ತದೆ. ಆಲೋಚಿಸುವ ಸಾಮ ರ್ಥ್ಯವನ್ನು ಹೆಚ್ಚಿಸಿ, ಮಾನಸಿಕ ಶಕ್ತಿ ವರ್ಧಿಸುತ್ತದೆ.

ಏಕಾಗ್ರತೆ, ಮತ್ತು ಸ್ಮರಣ ಶಕ್ತಿಯನ್ನು ಸುಧಾರಿ ಸುತ್ತದೆ. ನಿರ್ಧಾರವನ್ನು ಮಾಡುವ ಕುಶಲತೆಗಳನ್ನು ವರ್ಧಿ ಸುತ್ತದೆ. ಒತ್ತಡವನ್ನು ಅಥವಾ ವರ್ತನೆಯ ಸಮ ಸ್ಯೆಗಳನ್ನು ನೀಗಿಸುತ್ತದೆ. ಮಾನಸಿಕವಾಗಿ ಹೆಚ್ಚು ಸಮತೋಲನ ವುಳ್ಳವರಾಗಿರುತ್ತೀರಿ. ಧ್ಯಾನದಿಂದ ಮೆದು ಳಿನ ಶಕ್ತಿಯನ್ನು ವರ್ಧಿಸಿಕೊಳ್ಳಬಹುದು.

ಮಿದುಳಿನ ಆರೋಗ್ಯಕ್ಕೆ ಬ್ರೇನ್‌ ಯೋಗ ತುಂಬಾ ಅಗತ್ಯ. ಮೆದುಳಿನ ರಕ್ತ ಸಂಚಾರ ವನ್ನು ಹೆಚ್ಚಿಸಿ, ನರ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ. ಜತಗೆ ಬೌದ್ಧಿಕ ಮಟ್ಟ ಚುರುಕಾಗಿರುವಂತೆ ಇದು ಮಾಡುತ್ತದೆ. ಇದನ್ನು ಎಲ್ಲರೂ ಮಾಡಬಹುದಾಗಿದೆ.
-ಗೋಪಾಲಕೃಷ್ಣ ದೇಲಂಪಾಡಿ
ಯೋಗ ಶಿಕ್ಷಕ, ಮಂಗಳೂರು

-ನೇರವಾಗಿ, ಉದ್ದವಾಗಿ ನಿಲ್ಲಿ. ನಿಮ್ಮ ತೋಳುಗಳು ದೇಹದ ಬದಿಯಲ್ಲಿರಲಿ.
-ನಿಮ್ಮ ಎಡತೋಳನ್ನು ಎತ್ತಿ ಮತ್ತು ನಿಮ್ಮ ಬಲಗಿವಿಯ ಕೆಳ ಭಾಗವನ್ನು ನಿಮ್ಮ ಹೆಬ್ಬೆರಳಿನಿಂದ ಮತ್ತು ತೋರುಬೆರಳಿನಿಂದ
ಹಿಡಿಯಿರಿ. ನಿಮ್ಮ ಹೆಬ್ಬೆರಳು ಮುಂದಿರಲಿ.
-ದೀರ್ಘ‌ ಉಸಿರನ್ನು ಒಳಗೆ ತೆಗೆದುಕೊಳ್ಳಿ ಮತ್ತು ಕುಳಿತುಕೊಳ್ಳುವ ಭಂಗಿಗೆ ಬನ್ನಿ.
-ಈ ಭಂಗಿಯಲ್ಲಿ 2-3 ಸೆಕೆಂಡುಗಳ ವರೆಗೆ ಇರಿ.
-ಮೇಲೇಳುತ್ತ ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ. ಇದರಿಂದ ಒಂದು ಚಕ್ರ ಮುಗಿಯುತ್ತದೆ. ಈ ಚಕ್ರವನ್ನು ಪ್ರತಿನಿತ್ಯ 15 ಸಲ ಪುನರಾವರ್ತಿಸಿ.

ಯಾವೆಲ್ಲ ಯೋಗ ಮಾಡಬೇಕು
1. ಭಾÅಮರಿ ಪ್ರಾಣಾಯಾಮ ದುಂಬಿಯ ಉಸಿರಾಟ
ಕೋಪ, ಆಶಾಭಂಗ ಮತ್ತು ಆತಂಕದಂತಹ ನಕಾರಾತ್ಮಕ ಭಾವನೆಗಳನ್ನು ತೊಲಗಿಸುತ್ತದೆ. ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ. ವಿಶ್ವಾಸವನ್ನು ಹೆಚ್ಚಿಸುತ್ತದೆ.

2.ಪಶ್ಚಿಮೋತ್ತಾ¤ನಾಸನ ಕುಳಿತು ಮುಂದಕ್ಕೆ ಬಗ್ಗುವುದು
ಬೆನ್ನೆಲುಬನ್ನು ವಿಸ್ತರಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಕೋಪ, ಕಿರಿಕಿರಿಯಂತಹ ನಕಾರಾತ್ಮಕ ಭಾವನೆಗಳನ್ನು ತೆಗೆದು ಮನಸ್ಸಿಗೆ ವಿಶ್ರಾಮ ನೀಡುತ್ತದೆ.

3.ಸೇತು ಬಂಧಾಸನ
ಕತ್ತು ಮತ್ತು ಬೆನ್ನೆಲುಬನ್ನು ಬಲಿಷ್ಠಗೊಳಿಸಿ, ವಿಸ್ತರಿಸುತ್ತದೆ. ಬಿಗಿಯಾಗಿರುವ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.ಮೆದುಳಿನ ರಕ್ತಚಲನೆ ಸುಧಾರಿಸುತ್ತದೆ. ಮೆದುಳು ಮತ್ತು ನರವ್ಯವಸ್ಥೆಯನ್ನು ಪ್ರಶಾಂತ ಗೊಳಿಸುತ್ತದೆ. ಇದರಿಂದ ಆತಂಕ, ಒತ್ತಡ ಮತ್ತು ಖನ್ನತೆಯು
ಕುಗ್ಗುತ್ತದೆ.

4.ಸರ್ವಾಂಗಾಸನ
ಭುಜಗಳ ಹಲಗೆ
ಥೈರಾಯ್ಡ ಮತ್ತು ಪ್ಯಾರಾಥೈರಾಯ್ಡ ಗ್ರಂಥಿಯನ್ನು ನಿಯಂತ್ರಿಸುತ್ತದೆ ಮತ್ತು ಸಾಮಾನ್ಯ ಸ್ಥಿತಿಗೆ ತರುತ್ತದೆ. ಹೆಚ್ಚು ರಕ್ತವು ಪೀನಿಯಲ್‌ ಮತ್ತು ಹೈಪೊಥಲಾಮಸ್‌ ಗ್ರಂಥಿಯನ್ನು ತಲುಪಿ ಮೆದುಳಿಗೆ ಹೆಚ್ಚು ಪೌಷ್ಟಿಕತೆಯನ್ನು ನೀಡಿ ಪೋಷಿಸುತ್ತದೆ.

5.ಹಲಾಸನ ನೇಗಿಲ ಆಸನ
ಮೆದುಳಿನ ರಕ್ತ ಸಂಚಾರವನ್ನು ಹೆಚ್ಚಿಸಿ, ನರ ವ್ಯವಸ್ಥೆಯನ್ನು ಪ್ರಶಾಂತಗೊಳಿಸುತ್ತದೆ. ಬೆನ್ನನ್ನು, ಕತ್ತನ್ನು ವಿಸ್ತರಿಸುತ್ತದೆ, ಒತ್ತಡವನ್ನು, ದಣಿವನ್ನು ನಿವಾರಿಸುತ್ತದೆ.

ಟಾಪ್ ನ್ಯೂಸ್

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.