ನಗರೀಕರಣಕ್ಕೆ  ಪೂರಕ ಮಿಕ್ಸ್‌ಡ್‌ ಯೂಸ್ಡ್  ಬಿಲ್ಡಿಂಗ್ಸ್ 


Team Udayavani, Aug 26, 2018, 3:03 PM IST

26-agust-15.jpg

ನಗರೀಕರಣದ ಬೆಳವಣಿಗೆ ಈಗ ತೀವ್ರ ಗತಿಯಲ್ಲಿ ನಡೆಯುತ್ತಿದೆ. ಅಭಿವೃದ್ಧಿಯ ಮಾನದಂಡವಿದ್ದರೂ ಯಾವುದೇ ಚೌಕಟ್ಟು ಇಲ್ಲದೇ ಬೆಳೆಯುತ್ತಿರುವುದರಿಂದ ಇದು ಅನೇಕ ಅವಘಡಗಳಿಗೂ ಕಾರಣವಾಗುತ್ತಿದೆ. 

ಮಹಾನಗರಗಳಲ್ಲಿ ಗಗನ ಚುಂಬಿ ಕಟ್ಟಡಗಳು ಸಾಮಾನ್ಯ. ಇದು ನಗರದ ಪ್ರಮುಖ ಆಕರ್ಷಣೆಯೂ ಹೌದು. ನಮ್ಮ ನಗರಗಳಲ್ಲಿ ಬಹು ಅಂತಸ್ತಿನ ಕಟ್ಟಡಗಳು ಒಂದು ಸೀಮಿತ ಉದ್ದೇಶಕ್ಕೆ ಸೀಮಿತವಾಗುತ್ತಿವೆ. ಉದಾಹರಣೆ ಹೊಟೇಲ್‌ ಉದ್ಯಮ, ಆಫೀಸ್‌, ವಸತಿ ಇತ್ಯಾದಿ. ಕೆಲವರು ಇಡಿ ಮಹಡಿಯನ್ನೇ ಪಡೆದು ಅಲ್ಲಿ ತಮ್ಮ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಾರೆ. ಇದು ಇನ್ನೊಬ್ಬರು ವಾಸಿಸುವ ಜಾಗವನ್ನು ನಾವು ವಶಪಡಿಸಿಕೊಂಡಂತಾಗುತ್ತದೆ. ನಮ್ಮ ದೇಶದಲ್ಲಿ ಜನ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನವರಿಗೆ ವಾಸಿಸಲು ಮನೆಯೇ ಸಿಗುತ್ತಿಲ್ಲ. ಕಾರಣ ಇದುವೇ.
ಇದಕ್ಕೆ ಸುಲಭವಾದ ಪರಿಹಾರವೇ ಮಿಕ್ಸ್‌ಡ್‌ ಯೂಸ್ಡ್ ಬಿಲ್ಡಿಂಗ್ಸ್‌. ಬೆಳೆಯುತ್ತಿರುವ ನಗರಕ್ಕೆ ಇದು ಅತ್ಯಂತ ಸೂಕ್ತವಾದುದು. ಅನೇಕ ರಾಷ್ಟ್ರಗಳಿಂದು ಮಿಕ್ಸ್‌ಡ್‌ ಯೂಸ್ಡ್ ಬಿಲ್ಡಿಂಗ್ಸ್‌ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳುತ್ತಿವೆ. ಮುಖ್ಯವಾಗಿ ಮೆಕ್ಸಿಕೋ, ಜಪಾನ್‌ ರಾಷ್ಟ್ರಗಳು ಇದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿವೆ.

ಏನಿದು ಮಿಕ್ಸ್‌ಡ್‌ ಯೂಸ್ಡ್ ಬಿಲ್ಡಿಂಗ್ಸ್‌ ?
ಮಿಕ್ಸ್‌ಡ್‌ ಯೂಸ್ಡ್ ಬಿಲ್ಡಿಂಗ್ಸ್‌ ಈ ಕಲ್ಪನೆ ಪುರಾತನವಾಗಿದ್ದು, ರೋಮ್‌ ಸಾಮ್ರಾಜ್ಯದ್ದಾಗಿದೆ. ಯಾವುದೇ ಬಹು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸುವಾಗ ಅದನ್ನು, ಕೇವಲ ಒಂದೇ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳದೇ ಅನೇಕ ರೀತಿಯಲ್ಲಿ ಬಳಸಿಕೊಳ್ಳುವುದು. ಅಂದರೆ ಉದ್ಯಮ, ವಸತಿ, ಹೊಟೇಲ್‌, ಥೀಯೇಟರ್‌, ಜಿಮ್‌ ಸೆಂಟರ್‌ ಮೊದಲಾದ ಎಲ್ಲ ಸೌಲಭ್ಯ, ಅವಕಾಶಗಳನ್ನೂ ಒಂದು ಕಟ್ಟಡ ಹೊಂದಿರುತ್ತದೆ.

ಉಪಯೋಗವೇನು?
ಇಂತಹ ಕಟ್ಟಡಗಳ ನಿರ್ಮಾಣದಿಂದ ಸಾಕಷ್ಟು ಪ್ರಯೋಜನಗಳಿವೆ. ಬೆಳೆಯುತ್ತಿರುವ ನಗರಗಳಲ್ಲಿ ಇಂದು ವಸತಿ ಸಮಸ್ಯೆಯೇ ಬಹು ದೊಡ್ಡ ಸಮಸ್ಯೆ. ಇದರಿಂದ ಜಾಗದ ಅತಿಕ್ರಮಣವನ್ನು ತಡೆಯಬಹುದು. ಜತೆಗೆ ಒಂದೇ ಬಿಲ್ಡಿಂಗ್‌ ನಲ್ಲಿ ಎಲ್ಲ ವ್ಯವಸ್ಥೆಯೂ ಇರುವುದರಿಂದ ಬೇರೆ ಉದ್ದೇಶಕ್ಕಾಗಿ ಬೇರೊಂದು ಕಡೆ ಜಾಗದ ಬಳಕೆಯನ್ನು ಕಡಿಮೆ ಮಾಡಬಹುದು. ಉದಾ- ಒಂದು ಕಟ್ಟಡದಲ್ಲಿ ಕಚೇರಿ ಇದ್ದರೆ ಅಲ್ಲಿಯ ಸಿಬಂದಿಗೆ ವಸತಿ ಸೌಲಭ್ಯವನ್ನು ಬೇರೊಂದು ಜಾಗದಲ್ಲಿ ನಿರ್ಮಾಣ ಮಾಡಿರುತ್ತಾರೆ. ಅದರ ಬದಲು ಅದೇ ಕಟ್ಟಡದಲ್ಲಿ ಅವರಿಗೆ ವಸತಿ ವ್ಯವಸ್ಥೆಯನ್ನು ನೀಡಿದರೆ ಬೇರೆ ಜಾಗವನ್ನು ಇನ್ನೊಂದು ಕಾರ್ಯಕ್ಕೆ ಬಳಸಬಹುದು. ಇದು ಬೆಳೆಯುತ್ತಿರುವ ನಗರೀಕರಣಕ್ಕೆ ಧನಾತ್ಮಕ ಚಿಂತನೆಯೇ ಸರಿ. ಅಲ್ಲದೇ ಮಾನವ ಸಂಪನ್ಮೂಲ ಹಾಗೂ ಪರಿಸರ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿಡಲು ಈ ಪರಿಕಲ್ಪನೆ ತುಂಬಾ ಉಪಯೋಗಕಾರಿ.

ಮಂಗಳೂರು ನಗರವೂ ಸ್ಮಾರ್ಟ್‌ ನಗರಿಯಾಗಿ ಬೆಳೆಯುತ್ತಿದೆ. ಈಗಲೇ ನಗರದೊಳಗೆ ಜಾಗದ ಕೊರತೆ ಕಾಡುತ್ತಿದೆ. ಹೀಗಾಗಿ ಮುಂದೆ ನಿರ್ಮಾಣವಾಗುವ ಕಟ್ಟಡಗಳಲ್ಲಿ ಇಂತಹ ಎಲ್ಲ ಸೌಲಭ್ಯ ಇರುವಂತೆ ನೋಡಿ ಮಂಗಳೂರು ಮಹಾನಗರಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ.

 ಶಿವ ಸ್ಥಾವರಮಠ 

ಟಾಪ್ ನ್ಯೂಸ್

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.