ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ
ಕೃಷಿ ವಿವಿ ಈ ವರ್ಷದ ಘೋಷ
Team Udayavani, Nov 24, 2019, 5:36 AM IST
ನಿಖರ ಕೃಷಿಯ ಮುಖಾಂತರ ಸಂಪನ್ಮೂಲಗಳ ಸಮರ್ಥ ನಿರ್ವಹಣೆ ಮತ್ತು ಬಳಕೆಯು ಯಾವುದೇ ಪ್ರತಿಕೂಲ ಪರಿಣಾಮವಿಲ್ಲದೆ ಸುಸ್ಥಿರತೆ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಕೃಷಿ ವಿವಿ ಪ್ರಸ್ತುತ ವರ್ಷದಲ್ಲಿ ಪರಿಣಾಮಕಾರಿ ಮತ್ತು ಪರಿಸರ ಸಮರ್ಥನೀಯ ಬೆಳೆ ಉತ್ಪಾದನೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಿದೆ.
ಆಧುನಿಕ ದಿನಗಳಲ್ಲಿ ಕೃಷಿಯಲ್ಲಿ ವ್ಯವಸ್ಥಿತ ನಿರ್ವಹಣೆ ತಂತ್ರಗಳನ್ನು ಅನುಸರಿಸುವುದು ಅತಿ ಮುಖ್ಯ. ಈ ಕಾರಣದಿಂದ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯವು ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ ಘೋಷ ವಾಕ್ಯದೊಂದಿಗೆ ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಿದ್ದ ಈ ವರ್ಷದ ಕೃಷಿ ಮೇಳದಲ್ಲಿ ಸುಸ್ಥಿರ ಕೃಷಿ ಮಾಹಿತಿಗೆ ಆದ್ಯತೆ ನೀಡಲಾಗಿತ್ತು.
ಏನಿದು ನಿಖರ ಕೃಷಿ?
ನಿಖರ ಕೃಷಿಯೆಂದರೆೆ ಸರಿಯಾದ ಕೆಲಸ/ಕಾರ್ಯಗಳನ್ನು ಸರಿಯಾದ ಜಾಗದಲ್ಲಿ, ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಕೃಗೊಂಡು ಬೆಳೆ ಉತ್ಪಾದನ ಸಾಮಗ್ರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು. ಇದನ್ನು ಸಾಮಾನ್ಯವಾಗಿ ಸ್ಥಳ ನಿರ್ದಿಷ್ಟ ನಿರ್ವಹಣೆ ಎಂದು ಕರೆಯುತ್ತಾರೆ. ನಿರ್ದಿಷ್ಟ ಸ್ಥಳದ ಮಣ್ಣು, ನೀರು, ಗಾಳಿ ಮತ್ತು ನಿರ್ವಹಣೆಯಲ್ಲಿರುವ ವ್ಯತ್ಯಾಸಗಳನ್ನು ಪರಿಗಣನೆಗೆ ತೆಗೆದುಕೊಂಡು ಸಮಗ್ರವಾಗಿ ಕಡಿಮೆ ಖರ್ಚಿನಲ್ಲಿ ಪರಿಸರಕ್ಕೆ ಧಕ್ಕೆಯಾಗದಂತೆ ನಿರಂತರವಾಗಿ ಉತ್ಪಾದನೆ, ಉತ್ಪಾದಕತೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಂಡು ಉತ್ಪಾದಿಸುವ ವ್ಯವಸ್ಥೆ.
ನಿಖರ ಕೃಷಿಯೆಂದರೆ ಪೂರ್ಣ ಕ್ಷೇತ್ರದ ನಿರ್ವಹಣೆಗೆ ಬದಲಾಗಿ ಕ್ಷೇತ್ರದ ಸಣ್ಣ ಸಣ್ಣ ಭಾಗಗಳನ್ನು ಗಮನದಲ್ಲಿಟ್ಟುಕೊಂಡು ಮಣ್ಣಿನ ಗುಣಧರ್ಮ, ಪೋಷಕಾಂಶಗಳ ಲಭ್ಯತೆ, ನೀರಿನ ಲಭ್ಯತೆ ಮತ್ತು ಗುಣಮಟ್ಟ, ಬೇಸಾಯ ಮಾಡುವ ಬೆಳೆಗೆ ನೀರಿನ ಆವಶ್ಯಕತೆ, ಪೋಷಕಾಂಶಗಳ ಅವಶ್ಯಕತೆ, ಕಳೆಗಳ ನಿರ್ವಹಣೆ, ಸಾಂದ್ರತೆಯನ್ನು ಪ್ರತಿ ಹಂತದಲ್ಲೂ ನಿರ್ವಹಣೆ ಮಾಡುವುದು.
ನಿಖರ ಬೇಸಾಯದಲ್ಲಿ ಬೆಳೆ ಉತ್ಪಾದನೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಆಧಾರಿತ ಸಂಪನ್ಮೂಲ ಬಳಕೆಯಿಂದ ಹೆಚ್ಚಿನ ಇಳುವರಿ, ಗುಣಮಟ್ಟ ಹಾಗೂ ಆದಾಯ ಪಡೆಯಲು ಸಾಧ್ಯ. ಹೆಚ್ಚುತ್ತಿರುವ ಪರಿಸರ ಪ್ರಜ್ಞೆ ಮತ್ತು ಕುಗ್ಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳ (ನೀರು, ಗಾಳಿ ಮತ್ತು ಮಣ್ಣಿನ ಗುಣಮಟ್ಟ) ಸುಸ್ಥಿರ ಸಂರಕ್ಷಣೆ ಹಾಗೂ ಆರ್ಥಿಕ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೃಷಿ ನಿರ್ವಹಣ ಪದ್ಧತಿಗಳನ್ನು ಇತ್ತೀಚೆಗೆ ಮಾರ್ಪಡಿಸಲಾಗುತ್ತಿದೆ.
ಪೂರಕ ಪ್ರಾತ್ಯಕ್ಷಿಕೆ ಹೀಗಿತ್ತು
· ನೀರಿನ ಸದ್ಬಳಕೆಗೆ ಸೂಕ್ಷ್ಮ ನೀರಾವರಿ ಪದ್ಧತಿಗಳಾದ ಹನಿ ಹಾಗೂ ತುಂತುರು ನೀರಾವರಿ.
· ನೀರಿನೊಂದಿಗೆ ಪೋಷಕಾಂಶ ಪೂರೈಸುವ ರಸಾವರಿ.
· ಬೆಳೆ ಹಾಗೂ ಮಣ್ಣಿನ ಆಧಾರದ ನೀರು ಹಾಗೂ ಪೋಷಕಾಂಶ ಪೂರೈಕೆಗೆ ಸಂವೇದನ ಆಧಾರಿತ ಸ್ವಯಂ
ನೀರಾವರಿ ಪದ್ಧತಿ.
· ದಕ್ಷ ಉತ್ಪಾದನ ಕ್ರಮಗಳಾದ ಸಂರಕ್ಷಿತ ಬೇಸಾಯ,
ಜಲಕೃಷಿ ಇತ್ಯಾದಿ.
· ಹನಿ ನೀರಾವರಿ – ಮುಸುಕಿನ ಜೋಳ, ತೊಗರಿ, ಗೋರಿಕಾಯಿ ಮತ್ತು ದಪ್ಪ ಮೆಣಸಿನಕಾಯಿ.
· ಪ್ಲಾಸ್ಟಿಕ್ ಹೊದಿಕೆ – ತಿಂಗಳ ಹುರುಳಿ, ಬದನೆ ಮತ್ತು ಕುಂಬಳಕಾಯಿ.
· ಹನಿ ನೀರಾವರಿ ಮತ್ತು ಪ್ಲಾಸ್ಟಿಕ್ ಹೊದಿಕೆ – ಸೌತೆಕಾಯಿ, ಟೊಮೇಟೊ, ಬದನೆ, ಬೆಂಡೆ, ಎಲೆ ಕೋಸು, ಮೆಣಸಿನಕಾಯಿ, ಕರಬೂಜ ಮತ್ತು ಹಾಗಲಕಾಯಿ, ಮುಸುಕಿನ ಜೋಳ, ಗ್ಲಾ$Âಡಿಯೋಲಸ್ ಮತ್ತು ಚಂಡು ಹೂವು.
· ಸಂರಕ್ಷಿತ ಬೇಸಾಯ (ಹಸುರು ಮನೆ) – ದೊಡ್ಡ ಮೆಣಸಿನಕಾಯಿ, ಸೌತೆಕಾಯಿ, ತಿಂಗಳ ಹುರುಳಿ ಮತ್ತು ಟೊಮೇಟೊ.
· ಆಕಾರ ನೀಡುವಿಕೆ – ಪಡವಲಕಾಯಿ, ಸೋರೆಕಾಯಿ ಮತ್ತು ಹೀರೆಕಾಯಿ.
· ಸಂರಕ್ಷಿತ ಬೇಸಾಯ (ಹನಿ ರಸಾವರಿ) – ಭತ್ತದಲ್ಲಿ ಹನಿ ರಸಾವರಿ ನೂತನ ತಳಿಗಳ ಅಭಿವೃದ್ಧಿ.
ಸಂಶೋಧನ ಕಾರ್ಯಕ್ರಮ
ಆಹಾರ ಭದ್ರತೆಯನ್ನು ಖಾತರಿಪಡಿಸುವುದರ ಜತೆಗೆ ರೈತರ ಆದಾಯ ಮತ್ತು ಸಾಮಾಜಿಕ ಸ್ಥಿತಿಯ ಗುಣಮಟ್ಟವನ್ನು ಸುಧಾರಿಸಲು ಹಾಗೂ ಸಣ್ಣ ಹಿಡುವಳಿದಾರರು ಮತ್ತು ಕೃಷಿ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯವು 10 ಜಿಲ್ಲೆಗಳಲ್ಲಿರುವ ತನ್ನ 13 ಕೃಷಿ ಸಂಶೋಧನ ಕೇಂದ್ರಗಳಲ್ಲಿ ನಿಖರ ಮತ್ತು ಸುಸ್ಥಿರ ಕೃಷಿಯ ಕುರಿತ ಸಂಶೋಧನ ಕಾರ್ಯಕ್ರಮಗಳನ್ನು ರೂಪಿಸಿದೆ.
ಹೊಸ ತಳಿಗಳ ಬಿಡುಗಡೆ
1 ಭತ್ತ: ಗಂಗಾವತಿ ಸೋನಾ
· ಅವಧಿ: 130-135 ದಿನಗಳು (ಮಧ್ಯಮಾವಧಿ)
· ಇಳುವರಿ – ಧಾನ್ಯ: 2.5 -2.8ಟನ್/ಎ.
ಹುಲ್ಲು: 3.2 – 3.4ಟನ್/ಎ.
· ಗಿರಣಿಯ ಗುಣಧರ್ಮ ಹಾಗೂ ಅನ್ನದ ಗುಣಮಟ್ಟ ಉತ್ತಮವಾಗಿರುತ್ತದೆ.
2 ಅಲಸಂಡೆ: ಪಿ.ಜಿ.ಸಿ.ಪಿ. -6
· ಅವಧಿ: 70-75 ದಿನಗಳು (ಅಲ್ಪಾವಧಿ ತಳಿ)
· ಬೀಜದ ಇಳುವರಿ: 2.8-3.2ಕ್ವಿಂ./ಎ.
· ಪೂರ್ವ ಹಾಗು ತಡವಾದ ಮುಂಗಾರಿಗೆ ಸೂಕ್ತ
· ಅಂತರ ಬೆಳೆಯಾಗಿ ಬೆಳೆಯಲು ಸೂಕ್ತ
· ವಲಯ 5 ಮತ್ತು 6 ಕ್ಕೆ ಶಿಫಾರಸು ಮಾಡಲಾಗಿದೆ
3 ಉದ್ದು: ಎಲ್‌ಬಿಜಿ 791
· ಅವಧಿ: 75-85 ದಿನಗಳು (ಅಲ್ಪಾವಧಿ ತಳಿ)
· ಬೀಜದ ಇಳುವರಿ: 3.5-4ಕ್ವಿಂ./ಎ.
· ಹಳದಿ ಎಲೆ ನಂಜುರೋಗಕ್ಕೆ ನಿರೋಧಕತೆ ಹೊಂದಿದೆ
· ವಲಯ 5 ಮತ್ತು 6 ಕ್ಕೆ ಶಿಫಾರಸ್ಸು ಮಾಡಲಾಗಿದೆ
4 ಸೂರ್ಯಕಾಂತಿ: ಕೆಬಿಎಸ್‌ಹೆಚ್-78
· ಅವಧಿ: 85 ದಿನಗಳು (ಅಲ್ಪಾವಧಿ ಸಂಕರಣತಳಿ)
· ಕಾಳಿನ ಇಳುವರಿ: ಮಳೆಯಾಶ್ರಿತ: 4-4.8ಕ್ವಿ/ಎ.
ನೀರಾವರಿ:6.8-9.2ಕ್ವಿ/ಎ.
· ಎಣ್ಣೆಯ ಇಳುವರಿ: 360-380 ಕೆ.ಜಿ./ಎ.
· ಮಧ್ಯಮ ಎತ್ತರ ಮತ್ತು ಗಟ್ಟಿಮುಟ್ಟಾದ ಕಾಂಡ ಹೊಂದಿದೆ
· ವಲಯ 4, 6 ಮತ್ತು 7 ಕ್ಕೆ ಶಿಫಾರಸು ಮಾಡಲಾಗಿದೆ.
5 ಕಬ್ಬು: ಸಿ.ಒ.ವಿ.ಸಿ – 16061
· ಅವಧಿ : 10-11 ತಿಂಗಳುಗಳು (ಅಲ್ಪಾವಧಿ ತಳಿ)
· ಇಳುವರಿ : 60-65ಟನ್/ಎ.
· 5 ಅಡಿ ಅಂತರದ ಬೇಸಾಯಕ್ಕೆ ಸೂಕ್ತ.
· ನೀರಿನ ಕೊರತೆ ತಡೆದುಕೊಳ್ಳುವ ಗುಣ ಹೊಂದಿದೆ.
· ಉತ್ತಮ ತೆಂಡೆಯೊಡೆಯುವ ಸಾಮರ್ಥ್ಯವಿದೆ.
· ಜನವರಿ – ಫೆಬ್ರವರಿ ನಾಟಿಗೆ ಸೂಕ್ತ.
· ಬೆಲ್ಲ ತಯಾರಿಕೆಗೆ ಯೋಗ್ಯವಾದ ತಳಿ.
· ವಲಯ 6ಕ್ಕೆ ಶಿಫಾರಸು ಮಾಡಲಾಗಿದೆ.
6 ಕಬ್ಬು: ಸಿ.ಒ.ವಿ.ಸಿ – 16062
· ಅವಧಿ: ಮಧ್ಯಮಾವಧಿ ತಳಿ.
· ಇಳುವರಿ: 65-68ಟನ್/ಎ.
· ಬರ ಸಹಿಷ್ಣುತೆ ಹೊಂದಿದೆ.
· 5 ಅಡಿ ಅಂತರದ ಬೇಸಾಯಕ್ಕೆ ಸೂಕ್ತ.
· ಜುಲೈ- ನವೆಂಬರ್ ನಾಟಿಗೆ ಸೂಕ್ತ.
· ಉತ್ತಮ ತೆಂಡೆಯೊಡೆಯುವ ಸಾಮರ್ಥ್ಯವಿದ್ದು ಕೂಳೆ ಬೆಳೆಗೂ ಸೂಕ್ತ.
· ಬೆಲ್ಲ ತಯಾರಿಕೆಗೆ ಯೋಗ್ಯವಾದ ತಳಿ.
· ವಲಯ 6 ಕ್ಕೆ ಶಿಫಾರಸು ಮಾಡಲಾಗಿದೆ.
7 ಹಲಸು: ಲಾಲ್‌ಬಾಗ್ ಮಧುರ
· ಇಳುವರಿ: 80-100 ಕಾಯಿ/ಮರಕ್ಕೆ (10-15 ವರ್ಷ)
· ಹಣ್ಣಿನ ತೂಕ: 8-10 ಕೆ.ಜಿ (ಸರಾಸರಿ- 7.70 ಕೆ.ಜಿ)
· ತೊಳೆಗಳು ಹಳದಿ ಬಣ್ಣ ಹೊಂದಿರುತ್ತವೆ.
· ತೊಳೆಗಳ ಸಕ್ಕರೆ ಅಂಶ: 29 ಶೇ. – 30 ಶೇ.ಬ್ರಿಕ್ಸ್
· ಹಣ್ಣಿನ ತೊಳೆಗಳ ಮಾರಾಟಕ್ಕೆ ಮತ್ತು ಹಣ್ಣಿನ ಮೌಲ್ಯವರ್ಧನೆಗೆ ಹಾಗೂ ತಿರುಳಿನ ಉಪಯೋಗಕ್ಕೆ ಅತ್ಯುತ್ತಮ ತಳಿಯಾಗಿದೆ.
· ವಲಯ 5 ಕ್ಕೆ ಶಿಫಾರಸು ಮಾಡಲಾಗಿದೆ
- ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.