ಟ್ಯಾಕ್ಸ್ ಡಿಡಕ್ಟೆಡ್ ಎಟ್ ಸೋರ್ಸ್
Team Udayavani, Jan 7, 2019, 9:23 AM IST
ಟಿಡಿಎಸ್. ತಿಂಗಳ ಸಂಬಳ ಪಡೆಯುವ ಬಹುತೇಕ ಮಂದಿಗೆ ಇದು ಚಿರಪರಿಚಿತ. ಟ್ಯಾಕ್ಸ್ ಡಿಡಕ್ಟೆಡ್ ಎಟ್ ಸೋರ್ಸ್ ಎಂಬುದು ಇದರ ಪೂರ್ಣ ರೂಪ. ಇದು ಆದಾಯದ ಮೂಲದಿಂದಲೇ ತೆರಿಗೆ ಪಡೆಯುವುದಕ್ಕಾಗಿ ಆದಾಯ ತೆರಿಗೆ ಇಲಾಖೆಯಿಂದ ಜಾರಿಯಲ್ಲಿದೆ. ಟಿಡಿಎಸ್ ಎಂದರೆ, ಆದಾಯ ತೆರಿಗೆ ಕಾಯ್ದೆ 1961ರ ನಿಬಂಧನೆಗಳಡಿಯಲ್ಲಿ ಆದಾಯ ತೆರಿಗೆ ಸಂಗ್ರಹಿಸುವ ಪದ್ಧತಿಯಾಗಿದೆ. ಇದನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ-ಸೆಂಟ್ರಲ್ ಬೋರ್ಡ್ ಫಾರ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ನಿರ್ವಹಿಸುತ್ತದೆ. ಸಂಬಳ, ಕಮಿಷನ್, ಬ್ರೋಕರೇಜ್, ರಾಯಧನ ಪಾವತಿಗಳು, ಕರಾರು ಪಾವತಿಗಳು, ವಿವಿಧ ಹಣಕಾಸು ಹೂಡಿಕೆಗಳಿಂದ ಸಂಪಾದಿಸಿದ ಬಡ್ಡಿ, ಲಾಟರಿ ಸಂಪಾದನೆ, ಬಾಡಿಗೆ ಆದಾಯ, ವೃತ್ತಿ ಪಾವತಿ (ಪ್ರೊಫೆಶನಲ್‌ಫೀ) ಮತ್ತಿತರ ಅಂಶಗಳಿಗೆ ಟಿಡಿಎಸ್ ಅನ್ವಯವಾಗುತ್ತದೆ.
ಇಲ್ಲಿ, ಉದ್ಯೋಗಿ (ಡಿಡಕ್ಟೀ)ಗೆ ವೇತನ ಪಾವತಿ ಮಾಡಬೇಕಾದ ವ್ಯಕ್ತಿ-ಉದ್ಯೋಗದಾತ (ಡಿಡಕ್ಟರ್)ನು ವೇತನದಿಂದಲೇ ತೆರಿಗೆಯನ್ನು ಕಡಿದು ಕೇಂದ್ರ ಸರಕಾರದ ಖಾತೆಗೆ ಹಾಕಿಬಿಡುತ್ತಾನೆ. ಸರಕಾರದ ಆದಾಯದ ಮೂಲವನ್ನು ಸ್ಥಿರವಾಗಿರಿಸುವುದಕ್ಕೆ ಟಿಡಿಎಸ್ ಬಳಸಲಾಗುತ್ತದೆ. ಒಂದೇ ಬಾರಿ ದೊಡ್ಡ ಮಟ್ಟದ ತೆರಿಗೆ ಪಾವತಿ ಮಾಡುವುದೂ ಬಲು ಕಷ್ಟದ ಕೆಲಸ. ಆದರೆ ಟಿಡಿಎಸ್ ನಿಂದಾಗಿ ವೇತನ ಪಾವತಿಯಾದಂತೆಯೇ ತೆರಿಗೆಯೂ ಕಡಿತಗೊಳ್ಳುತ್ತದೆ.
ಪ್ರಯೋಜನಗಳು
ಸಂಪಾದನೆ ಆರಂಭಗೊಂಡಂತೆ ಟಿಡಿಎಸ್ ಕೂಡ ಆರಂಭಗೊಳ್ಳುತ್ತದೆ. ಎಷ್ಟು ಸಂಪಾದನೆಯಾಗುತ್ತದೆ ಎಂಬುದರ ಮೇಲೆ ಟಿಡಿಎಸ್ ನಿರ್ಧಾರಿತವಾಗುತ್ತದೆ. ಟಿಡಿಎಸ್‌ನಿಂದ ಸರಕಾರ, ತೆರಿಗೆದಾರ-ಈ ಈರ್ವರಿಗೂ ಪ್ರಯೋಜನವಾಗುತ್ತದೆ.
ಅವುಗಳು
1 ಟಿಡಿಎಸ್ ಆದಾಯದ ಮೂಲದಿಂದಲೇ ಸಂಗ್ರಹಿಸಲ್ಪಡು ವುದರಿಂದ ತೆರಿಗೆಯಿಂದ ನುಣುಚಿಕೊಳ್ಳುವುದು ತಪ್ಪುತ್ತದೆ.
2 ಸರಕಾರದ ಸ್ಥಿರ ಆದಾಯ ಮೂಲಗಳಲ್ಲಿ ಟಿಡಿಎಸ್ ಕೂಡ ಒಂದು.
3 ಒಂದಲ್ಲ ಒಂದು ವಿಧದಲ್ಲಿ ಬಹುತೇಕ
ಜನರು ಟಿಡಿಎಸ್ ಪಾವತಿ ಮಾಡಬೇಕಾಗುತ್ತದೆ; ಹಾಗಾಗಿ ತೆರಿಗೆ ಸಂಗ್ರಹದ ಆಧಾರ ವಿಸ್ತಾರವಾಗಿದೆ.
4 ಟಿಡಿಎಸ್ ಸ್ವಯಂಚಾಲಿತವಾಗಿ ಕಡಿತಗೊಳ್ಳುವುದರಿಂದ ಜನರಿಗೆ ಇದು ಅನುಕೂಲವಾಗಿದೆ.
ಟಿಡಿಎಸ್ ಲೆಕ್ಕಾಚಾರ
ಪ್ರತಿ ಆದಾಯದ ವಿಧಕ್ಕೂ ಕಡಿತಗೊಳ್ಳುವ ಟಿಡಿಎಸ್ ಶೇಕಡಾವಾರು ಭಿನ್ನವಾಗಿರುತ್ತದೆ. ಟಿಡಿಎಸ್ ಸಂಗ್ರಹವಾಗುವಾಗ ಹೂಡಿಕೆಗಳು ಲೆಕ್ಕಕ್ಕೆ ಬರುವುದಿಲ್ಲವಾದರೂ, ರಿಟರ್ನ್ ಫೈಲ್ ಮಾಡುವಾಗ ಅಥವಾ ಟಿಡಿಎಸ್ ರಿಫಂಡ್‌ಗೆ ಕ್ಲೇಮ್ ಮಾಡುವಾಗ ಹೂಡಿಕೆಗಳನ್ನು ಘೋಷಿಸಿ, ದಾಖಲೆ ನೀಡುವ ಅವಕಾಶವಿದೆ. ಕಮಿಷನ್, ವೇತನ, ಬಡ್ಡಿಪಾವತಿ, ವಕೀಲರ, ಫ್ರೀಲಾನ್ಸರ್‌ಗಳ ಪಾವತಿ ಇತ್ಯಾದಿ ಯಾವುದೇ ಪಾವತಿಗಳು ಟಿಡಿಎಸ್ ವ್ಯಾಪ್ತಿಗೆ ಬರುತ್ತವೆ.
ಟಿಡಿಎಸ್ ರಿಟರ್ನ್
ಸ್ವಸ್ಥ ಹಣಕಾಸು ದಾಖಲೆ ಇರಿಸಿಕೊಳ್ಳುವುದಕ್ಕಾಗಿ ಟಿಡಿಎಸ್ ರಿಟರ್ನ್ ಅಗತ್ಯವಾಗಿದೆ. ಆದಾಯ ತೆರಿಗೆ ವೆಬ್‌ಸೈಟ್ www.incometaxindia.gov.in
ಮೂಲಕ ಟಿಡಿಎಸ್ ರಿಟರ್ನ್ ಫೈಲ್ ಮಾಡಬಹುದು. ನಿಗದಿತ ಸಮಯದ ಒಳಗೆ ರಿಟರ್ನ್ ಫೈಲ್ ಮಾಡಬೇಕಿರುತ್ತದೆ. ಈ ಸಂಬಂಧ ಇಲಾಖೆಯಿಂದ ತೆರಿಗೆದಾರರಿಗೆ ಈ ಮೇಲ್‌ಗಳು ಬರುತ್ತವೆ. ರಿಟರ್ನ್ಫೈ ಲ್‌ಗೆ ತೆರಿಗೆದಾರರು ಚಾರ್ಟರ್ಡ್ ಅಕೌಂಟೆಂಟ್ ಗಳ ಸೇವೆಯನ್ನೂ ಬಳಸಿಕೊಳ್ಳುವುದಿದೆ. ರಿಟರ್ನ್
ಫೈಲ್ ತಡವಾದರೆ ದಂಡವೂ ವಿಧಿಸಲ್ಪಡುತ್ತದೆ. ರಿಟರ್ನ್ ಫೈಲ್ ಮಾಡಿ ಕೆಲವು ತಿಂಗಳುಗಳ ಬಳಿಕ ಟಿಡಿಎಸ್ ರಿಫಂಡ್ ಆಗುತ್ತದೆ. ರಿಫಂಡ್‌ಗೆ ನಿಗದಿತ ಸಮಯ ಇಲ್ಲವಾದರೂ, 1 ತಿಂಗಳಿನಿಂದ ಒಂದು ವರ್ಷದ ಅವಧಿಯಲ್ಲಿ ಯಾವಾಗಲಾದರೂ ರಿಫಂಡ್ ಆಗಬಹುದು.
ಎಸ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್‌ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.