ಟೆಸ್ಟ್ ಕ್ರಿಕೆಟಿಗೆ ಹೊಸ ರೂಪ
2 ವರ್ಷಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್
Team Udayavani, Aug 8, 2019, 5:00 AM IST
ಕ್ರಿಕೆಟ್ ಶುರುವಾಗಿದ್ದರ ಹಿಂದೆ ಒಂದು ಕಥೆಯಿದೆ. ಇಂಗ್ಲೆಂಡ್‌ನಲ್ಲಿ ದನ ಕಾಯುತ್ತಿದ್ದ ಹುಡುಗರು ತಮ್ಮ ಬೇಸರ ಕಳೆಯಲು, ಚೆಂಡಿನಂತೆ ಇರುವ ಒಂದು ವಸ್ತುವನ್ನು ಎಸೆಯುವುದು, ಇನ್ನೊಬ್ಬ ಅದಕ್ಕೆ ಕೋಲಿನಿಂದ ಕುಟ್ಟುವುದು ಮಾಡುತ್ತಿದ್ದರಂತೆ. ಕಡೆಗೆ ಅದೇ ಕ್ರಿಕೆಟ್ ಆಗಿ ಬದಲಾಯಿತು ಎಂದು ದಂತಕಥೆ ಹೇಳುತ್ತದೆ. ಇದು ಎಷ್ಟು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಆದರೆ ಆ ಕ್ರಿಕೆಟ್ ಕ್ರೀಡೆಯನ್ನು ಬ್ರಿಟಿಷರು ಎಲ್ಲೆಲ್ಲಿ ಹೋದರೋ ಅಲ್ಲೆಲ್ಲ ಹಬ್ಬಿಸಿದ್ದಾರೆ. ಭಾರತ, ಆಸ್ಟ್ರೇಲಿಯಾ, ದ.ಆಫ್ರಿಕಾ ಹೀಗೆ ಹಲವು ದೇಶಗಳಲ್ಲಿ ಕ್ರಿಕೆಟ್ ಬೆಳೆಯುತ್ತ ಹೋಯಿತು.
ಕ್ರಿಕೆಟಿನ ಮೊದಲ ರೂಪ ಟೆಸ್ಟ್. ಆರಂಭದಲ್ಲಿ ಇದಕ್ಕೆ ದಿನಗಳ ಮಿತಿಯಿರಲಿಲ್ಲ. ಸೋಲು ಗೆಲುವಿನ ಫಲಿತಾಂಶ ಬರುವವರೆಗೆ ಆಡಲಾಗುತ್ತಿತ್ತು. ಒಂದು ಹಂತದ ಅನಂತರ ಅದನ್ನು ಐದು ದಿನಕ್ಕೆ ಮಿತಿಗೊಳಿಸಲಾಯಿತು. ಫಲಿತಾಂಶ ಬರದಿದ್ದರೆ, ಅದನ್ನು ಡ್ರಾ ಎಂದು ಪರಿಗಣಿಸಲಾಯಿತು. ಈ ಮಾದರಿಯ ಕ್ರಿಕೆಟ್ ಒಂದೇ ಅಸ್ತಿತ್ವದಲ್ಲಿದ್ದರಿಂದ, ಆರಂಭದಲ್ಲಿ ಇದು ಬಹಳ ಜನಪ್ರಿಯವಾಗಿತ್ತು. ಜನ ಬಹಳ ಕುತೂಹಲದಿಂದ ನೋಡುತ್ತಿದ್ದರು. ಆದರೆ ಇದಕ್ಕಿದ್ದ ಸಮಸ್ಯೆಯೆಂದರೆ ಮಳೆ. ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಮಳೆ ಜಾಸ್ತಿ. ಅದು ಬಂದರೆ ಕೆಲವೊಮ್ಮೆ ಪೂರ್ಣ ಟೆಸ್ಟ್ ಪಂದ್ಯವೇ ರದ್ದಾಗುತ್ತಿತ್ತು. ಅಭಿಮಾನಿಗಳು ನಿರಾಶರಾಗುತ್ತಿದ್ದರು. ಈ ಹಂತದಲ್ಲಿ ಅಭಿಮಾನಿಗಳಿಗೆ ನಿರಾಶೆ ತಪ್ಪಿಸುವುದು ಹೇಗೆ ಎಂದು ಯೋಚಿಸಿದಾಗ, ಹೊಳೆದಿದ್ದೇ ಏಕದಿನ ಕ್ರಿಕೆಟ್.
1971ರಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಮಳೆಗೆ ಸಿಕ್ಕಿ ರದ್ದಾಗುವ ಹಂತ ತಲುಪಿದಾಗ, ಒಂದು ದಿನದ ಕ್ರಿಕೆಟ್ ನಡೆಸಲಾಯಿತು. ಅಲ್ಲಿಂದ ಕ್ರಿಕೆಟ್ ಸ್ವರೂಪ ವೇಗಗೊಳ್ಳುತ್ತ ಹೋಯಿತು. ಎಷ್ಟು ವೇಗವೆಂದರೆ ಟಿ20 ಮಟ್ಟಕ್ಕೆ ಬರುವಷ್ಟು ವೇಗವಾಗಿದೆ. ಇದರಿಂದ ದೊಡ್ಡ ಏಟು ಬಿದ್ದಿದ್ದು ಟೆಸ್ಟ್ ಕ್ರಿಕೆಟಿಗೆ. ಅದು ದಿನದಿನಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತ ಸಾಗಿತು. ಟೆಸ್ಟ್ ಕ್ರಿಕೆಟ್ ಇದ್ದಾಗ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕೊಡುವ ಮಟ್ಟಕ್ಕೆ ಪರಿಸ್ಥಿತಿ ಬದಲಾಗಿದೆ.
ಆದ್ದರಿಂದ ಹಲವು ವರ್ಷಗಳಿಂದ ಟೆಸ್ಟ್‌ಗೂ ಒಂದು ಆಕರ್ಷಕ ರೂಪ ಕೊಡಬೇಕು. ತಂಡಗಳು ಶುದ್ಧ ಪೈಪೋಟಿಯನ್ನು ನಡೆಸಬೇಕಾದ ಮಾದರಿಯಲ್ಲಿ ಅದನ್ನು ಬದಲಾಯಿಸಬೇಕು ಎಂದು ಐಸಿಸಿ ಯೋಚಿಸಿತು. ಅದರ ಫಲವಾಗಿ ಹುಟ್ಟಿಕೊಂಡಿರುವುದು ಟೆಸ್ಟ್ ವಿಶ್ವಚಾಂಪಿಯನ್‌ಶಿಪ್. ಬಹಳ ವರ್ಷಗಳಿಂದ ಇದನ್ನು ಮಾಡಬೇಕು ಎಂದು ಹೇಳುತ್ತಲೇ ಬಂದಿದ್ದರೂ ಜಾರಿಯಾಗಿರಲಿಲ್ಲ.
ಏನಿದು ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್?
ಎಲ್ಲಿಂದ ಎಲ್ಲಿಯವರೆಗೆ ನಡೆಯಲಿದೆ?
ಹೇಗಿರುತ್ತದೆ ಸ್ವರೂಪ?
ಅಂಕ ಹಂಚಿಕೆ ಹೇಗೆ?
ನಿರ್ಬಂಧಗಳೇನು?
ಕಣದಲ್ಲಿರುವ ತಂಡಗಳು?
ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ದ.ಆಫ್ರಿಕಾ, ಪಾಕಿಸ್ತಾನ, ನ್ಯೂಜಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ವೆಸ್ಟ್‌ಇಂಡೀಸ್ ತಂಡಗಳು ಆಡಲಿವೆ.
ವಿಜೇತರ ನಿರ್ಧಾರ ಹೇಗೆ?
ಪ್ರತಿ ಟೆಸ್ಟ್‌ನಲ್ಲಿ ತಂಡವೊಂದು ಪಡೆಯುವ ಅಂಕಗಳನ್ನು ಪರಿಗಣಿಸಿ ಅಗ್ರ ಎರಡು ತಂಡಗಳನ್ನು ನಿರ್ಧರಿಸಲಾಗುತ್ತದೆ. ಈ ಎರಡು ತಂಡಗಳ ನಡುವೆ ಅಂತಿಮ ಟೆಸ್ಟ್ ನಡೆಸಿ ವಿಶ್ವ ಚಾಂಪಿಯನ್ನರನ್ನು ಆಯ್ಕೆ ಮಾಡಲಾಗುತ್ತದೆ.
ಕೂಟದಿಂದ ಲಾಭವೇನು?
2ಗೆಲುವಿನ ಫಲಿತಾಂಶವನ್ನೇ ಪಡೆಯಲು ಕಡ್ಡಾಯವಾಗಿ ಯತ್ನಿಸುತ್ತವೆ. ಆಗ ನೀರಸ ಡ್ರಾಗಳ ಸಂಖ್ಯೆ ಕಡಿಮೆಯಾಗುತ್ತದೆ.
3ಆಗ ಸಹಜವಾಗಿಯೇ ಟೆಸ್ಟ್‌ಗೂ ರೋಚಕತೆ ಬರುತ್ತದೆ. ಅಭಿಮಾನಿಗಳು ಮೈದಾನಕ್ಕೆ ಬರುತ್ತಾರೆ.
•ನಿರೂಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ
Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ
Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್ ನಿಲ್ದಾಣವೇ ಇಲ್ಲ !
”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್
Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.