2 ತಿಂಗಳ ರಜೆ ಹಲವು ಅವಕಾಶಗಳಿಗೆ ದಾರಿ
Team Udayavani, Apr 25, 2019, 5:55 AM IST
ಬೇಸಗೆ ರಜೆ ಬಂದರೆ ಸಾಕು ಆರಾಮವಾಗಿ ಇರಬಹುದು ಎಂಬ ಭಾವನೆ ಹಲವರಲ್ಲಿದೆ. ಆದರೆ ಈ ಅವಧಿಯನ್ನು ಸರಿಯಾಗಿ ಸದ್ಭಳಕೆ ಮಾಡಿಕೊಂಡರೆ ಭವಿಷ್ಯಕ್ಕೊಂದು ಭದ್ರ ತಳಹದಿಯನ್ನು ಹಾಕಬಹುದು. ಕಾಲೇಜು ಜೀವನದಲ್ಲಿ ವಾರ್ಷಿಕವಾಗಿ ಸಿಗುವ ಎರಡು ತಿಂಗಳ ರಜೆ ಮುಂದಿನ ತರಗತಿಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಬೇಕಾದ ಅವಧಿ ಎಂದೇ ಪರಿಗಣಿಸಿದರೆ, ಜತೆಗೆ ಶಿಕ್ಷಣಕ್ಕೆಪೂರಕವಾದ ಒಂದಷ್ಟು ವಿಷಯ ಕಲಿಕೆಗೆ ಮೀಸಲಿಟ್ಟರೆ ಭವಿಷ್ಯ ಉಜ್ವಲವಾಗುವುದು. ಹೀಗಾಗಿ ಈ ಬಾರಿ ರಜೆಯಲ್ಲಿ ಏನು ಮಾಡಬಹುದು ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಹಲವು ದಾರಿ.
ಕಾಲೇಜು ಪರೀಕ್ಷೆ ಮುಗಿದು ಎರಡು ತಿಂಗಳು ರಜಾ ಅವಧಿ ಅಂದರೆ ಕೆಲವರಿಗೆ ಸ್ನೇಹಿತರಿಲ್ಲದೆ ಬೋರಾಗಬಹುದು. ಹಲವರಿಗೆ ಅವಕಾಶ ಸದುಪಯೋಗಪಡಿಸುವ, ಸ್ವಾವಲಂಬನೆಯ ದಾರಿ ಕಂಡುಕೊಳ್ಳುವ ಕಾಲ. ಅಂತೂ ರಜೆ ಎಂದಾಕ್ಷಣ ಕಾಲಹರಣ ಮಾಡದೆ, ವೇಳಾಪಟ್ಟಿ ತಯಾರಿಸಿ ಅದರಂತೆ ಮುನ್ನಡೆದರೆ ರಜೆ ದಿನಗಳನ್ನು ಸಂಭ್ರಮಿಸಲು ಸಾಧ್ಯವಿದೆ. ಅದರಿಂದ ಲಾಭವು ಇದೆ.
ಕಾಲೇಜು ತರಗತಿಯ ಅಂತಿಮ ಹಂತದ ಪರೀಕ್ಷೆ ಮುಗಿಯಿತು ಅಂದರೆ ಸ್ವಂತ ಬದುಕು ರೂಪಿಸಿಕೊಳ್ಳುವ ಕಾಲ ಘಟ್ಟ ಸನಿಹಕ್ಕೆ ಬಂತು ಎಂದರ್ಥ. ಮುಂದೆ ಉದ್ಯೋಗ ಹುಡುಕಲು ನಾವು ಸಿದ್ಧಗೊಳ್ಳಬೇಕು. ಹೆತ್ತವರ, ಮನೆಯ ಜವಾಬ್ದಾರಿ ವಹಿಸುವ ಅನಿವಾರ್ಯತೆ ಕೂಡ. ನಾ ಲ್ಕೈದು ವರ್ಷದ ಕಲಿಕೆ ಅವಧಿಗೆ ಒಗ್ಗಿಕೊಂಡು ಮತ್ತೆ ಹೊಸ ದಾರಿ ಹುಡುಕುವುದು ಕೊಂಚ ತ್ರಾಸವೆನಿಸಿದರೂ, ಕಾಲೇಜಿನ ರಜಾ ದಿನಗಳಲ್ಲಿ ಅದಕ್ಕೂಂದು ಭೂಮಿಕೆ ಸಿ ದ್ಧಪಡಿಸುವ ಅವಕಾಶವಂತು ಕಣ್ಣ ಮುಂದಿದೆ. ಪರೀಕ್ಷೆ ಮುಗಿದರೂ, ಇನ್ನೆರೆಡು ವರ್ಷ ವ್ಯಾ ಸಂಗ ಇದೆ ಎನ್ನುವವರಿಗೆ ಒಂದಷ್ಟು ಮನೋರಂಜನೆಯ ಜತೆಗೆ ಜೀವನ ಕೌಶಲ ರೂಢಿಸಲು ಅವಕಾಶವು ಇದೆ.
ಶಾಲಾ, ಕಾಲೇಜಿಗೆ ತೆರಳುವ ಹೊತ್ತಲ್ಲಿ ಪರಾವಂಬಿಯಾಗಿದ್ದಲ್ಲಿ, ಸ್ವತಂತ್ರವಾಗಿ ಕೆಲಸ ಮಾಡಲು ಪ್ರೋತ್ಸಾಹ ನೀಡದಿದ್ದರೆ ಅವರ ಬದುಕನ್ನು ಸಲೀಸಾಗಿ ಮುನ್ನಡೆಸಲಾಗದು. ಬಟ್ಟೆ ಒಗೆಯುವುದು, ಇಸ್ತ್ರೀ ಹಾಕುವುದು ಹೀಗೆ ನಾನಾ ಸಂಗತಿಗಳಿಗೆ ತಾಯಿ ಅಥವಾ ಮನೆ ಮಂದಿಯನ್ನು ಅವಲಂಬಿಸಿ ಆರಾಮವಾಗಿ ದಿನ ದೂಡುವ ವಿದ್ಯಾರ್ಥಿಗಳು ಸಾಕಷ್ಟಿದ್ದಾರೆ. ಈ ಎರಡು ತಿಂಗಳ ರಜಾ ದಿನಗಳಲ್ಲಿ ಈ ಕೆಲಸವನ್ನು ಮನೆ ಮಂದಿ ಮಾಡದೆ, ಮಕ್ಕಳಿಂದಲೇ ಮಾಡಿಸಬೇಕು. ಇದರಿಂದ ಉದ್ಯೋಗ ಅವಧಿಯಲ್ಲಿ ಊರು ಬಿಟ್ಟು ಒಂಟಿ ಜೀವನ ನಡೆಸಬೇಕಾದ ಸಂದರ್ಭದಲ್ಲಿಯೂ ಇದರಿಂದ ಪ್ರಯೋಜನ ದೊರೆಯುತ್ತದೆ.
ಇನ್ನು ಕಲಿಕೆಗೆ, ದುಡಿಮೆಗೆ ಸಾಕಷ್ಟು ಅವಕಾಶ ಇರುವ ಸಮಯ. ರಜೆ ಅಂದಾಕ್ಷಣ ಮನೆಯಲ್ಲಿ, ನೆಂಟರ ಮನೆಯಲ್ಲಿ ಕೂರಬೇಕಿಲ್ಲ. ಪಠ್ಯೇತರ ಕಲಿಕೆ, ಒಂದಷ್ಟು ಆದಾಯ ಸಂಪಾದನೆ ವಿಫುಲ ಅವಕಾಶಗಳಿವೆ. ಭವಿಷ್ಯದಲ್ಲಿ ಸಾಧನೆ ತೋರಬೇಕು ಎಂಬ ಕ್ಷೇತ್ರದ ಬಗ್ಗೆ ಪೂರ್ವಭಾವಿ ಕಲಿಕೆ, ತಯಾರಿಗೆ ಬೇಕಾದ ಶಿಬಿರಗಳು ಇವೆ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ಸ್ವಂತ ಉದ್ಯಮ ನಡೆಸಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆಯುವಿಕೆ, ಸಂಗೀತ, ಕ್ರೀಡೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತರಬೇತಿ ಪಡೆದುಕೊಂಡು ವಿದ್ಯಾಭ್ಯಾಸದ ಬಳಿಕ ಉದ್ಯೋಗ ಗಿಟ್ಟಿಸಲು ನೆರವಾಗಬಹುದು. ಭಿತ್ತಿಪತ್ರಗಳು, ಚಿತ್ರ ಪಟಗಳು, ಹೊಸ ಶಬ್ದ ಕಲಿಯುವುದು, ಬರವಣಿಗೆ ಸುಧಾರಿಸಿಕೊಳ್ಳುವುದು. ಹೊಸ ಹಾಡು, ಶ್ಲೋಕ, ನೃತ್ಯ ಕಲಿಯುವುದು, ಡೈರಿ ಬರೆಯುವುದು, ಕೃಷಿ ಕಡೆಗೆ ಗಮನ ಕೊಡುವುದು, ಓದುವುದು -ಬರೆಯುವುದು, ಪ್ರವಾಸ, ಆಟ ಹೀಗೆ ನಾನಾ ಅವಕಾಶಗಳನ್ನು ಬಳಸಿಕೊಳ್ಳಬಹುದು. ಇವುಗಳು ನಮ್ಮ ವೈಯಕ್ತಿಕ ಬದುಕಿಗೆ ಸಹಕಾರಿ ಆಗಿರಬೇಕು.
ಜೀವನ ಕೌಶಲಗಳು
ಅದೆಷ್ಟೋ ತಾಯಂದಿರು ಮಕ್ಕಳೆಂದರೆ ಮುದ್ದು ಮಾಡುವುದು ಹೆಚ್ಚು. ವಿಭಕ್ತ ಕುಟುಂಬ ಹೆಚ್ಚಾದ ಹಾಗೆ ಆಧರಿಸುವ, ಅಕ್ಕರೆ ತೋರುವ ಪ್ರಮಾಣವು ಅಧಿಕವಾಗಿದೆ. ಕಾಲೇಜು ಮುಗಿದು ಉದ್ಯೋಗ ಪಡೆದ ಮೇಲು ಮಕ್ಕಳ ಮೇಲಿನ ಅತಿ ಪ್ರೀತಿ ಕಣ್ಮರೆಯಾಗದು. ಇದರ ಬದಲು ಎಳವೆಯಿಂದಲೇ ಅಂದರೆ ಶಾಲಾ, ಕಾಲೇಜು ರಜಾ ಅವಧಿಯಲ್ಲಿ ಸ್ವಾವಲಂಬನೆಯ ಪಾಠ ಹೇಳಿಕೊಡಲು ಮನೆ ಮಂದಿಗೂ ಒಂದು ಅವಕಾಶ. ಅದನ್ನು ರೂಢಿಸಿಕೊಳ್ಳಲು ವಿದ್ಯಾರ್ಥಿಗಳಿಗೂ ಸುವರ್ಣಾವಕಾಶ.
- ಕಿರಣ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.