ಸಾವು ಗೆದ್ದು ಬಂದವರು…


Team Udayavani, Jan 28, 2019, 7:27 AM IST

28-january-13.jpg

ಅಚಾನಕ್‌ ಆಗಿ ಸಾವು ಬಂದು ಎದುರು ನಿಂತಾಗ ನಾವೇನು ಮಾಡುತ್ತೇವೆ? ಒಂದ ಕ್ಷಣ ಕುಸಿಯುತ್ತೇವೆ. ಮತ್ತೆ ಸಾವರಿಸಿ ನಿಲ್ಲಲು ಪ್ರಯತ್ನಿಸುತ್ತೇವೆ. ಕೊನೆಗೆ ಹೋರಾಡಲು ಸಿದ್ಧರಾಗುತ್ತೇವೆ. ಜೀವನ ಎಂದರೆ ಇದೇ. ಇಲ್ಲಿ ಎದುರಾಗುವ ಸಣ್ಣ ಸಣ್ಣ ಸಂಕಷ್ಟಗಳಿಗೆ ನಾವು ಕುಸಿದು ಬೀಳುತ್ತೇವೆ. ಮತ್ತೆ ಹೋರಾಡಲು ನಮ್ಮಲ್ಲಿ ಚೈತನ್ಯವೇ ಇಲ್ಲ ಎಂದುಕೊಳ್ಳುತ್ತೇವೆ. ಆದರೆ ಅನಿವಾರ್ಯ ಪರಿಸ್ಥಿತಿಯೊಂದು ನಮ್ಮನ್ನು ಪ್ರತಿ ಸಂಕಷ್ಟದ ಪರಿಸ್ಥಿತಿಯಿಂದಲೂ ಪಾರು ಮಾಡುವ ಶಕ್ತಿ ಹೊಂದಿದೆ. ಇದೇ ಕಥೆಯನ್ನು ಆಧರಿಸಿ ‘ದಿ 33’ಚಿತ್ರ ನಿರ್ಮಿಸಿದ್ದಾರೆ ಪ್ಯಾಟ್ರಿಸಿಯಾ ರಿಗ್ಗೆನ್‌.

ಏನಾಗ್ತಿದೆ ಅಂತ ತಿರುಗಿ ನೋಡೋದ್ರೊಳಗೆ ಆ ಗಣಿಯೊಳಗೆ ದೊಡ್ಡ ಬಂಡೆ ಕುಸಿದಾಗಿತ್ತು. ಕ್ಷಣದÇ್ಲೇ ಕರೆಂಟ್ ಕೈಕೊಟ್ಟಿತು. ಒಳಗೆ ಸಿಲುಕಿದ್ದ 33 ಗಣಿ ಕಾರ್ಮಿಕರು ಕಂಗಾಲಾಗಿ ಕುಳಿತರು. ಅತ್ತರು, ಕೂಗಿದರು. ಆ ಧ್ವನಿಯನ್ನೂ ಗಣಿ ತನ್ನೊಳಗೆ ಹೂತು ಹಾಕಿತು. ಕುಡಿಯುವ ನೀರು, ತಿನ್ನುವ ಆಹಾರ, ನಾಲ್ಕೈದು ದಿನಕ್ಕೆ ಮಾತ್ರವೇ ಇತ್ತು. ರೇಡಿಯೋ ಸಿಗ್ನಲ್‌ಗ‌ಳು ಕೈಕೊಟ್ಟಿದ್ದರಿಂದ, ಇವರ ಆಕ್ರಂದನ ಮೇಲ್ಭಾಗದ ಕೇಂದ್ರವನ್ನೂ ತಲುಪದೆ ಹೋಯಿತು. ಹೆಡ್‌ಲೈಟ್ಗಳ ಮೂಲಕ ತಮ್ಮ ಅಸಹಾಯಕ ಮುಖಗಳನ್ನು ನೋಡಿಕೊಳ್ಳುತ್ತಾ, ಸಾವಿನ ಆಗಮನವನ್ನು ನೆನೆದು ಸಣ್ಣಗಾದರು.

‘ದಿ 33’ ಎಂಬ ಈ ಚಿತ್ರ ನೋಡುವಾಗ, ಗಣಿಯೊಳಗೆ ನಾವೇ ಅಡಗಿದ್ದೇವೇನೋ ಎಂಬ ಕತ್ತಲು, ಭಯಗಳು ಏಕಕಾಲಕ್ಕೆ ಆವರಿಸುತ್ತವೆ. ಚಿಲಿಯ ಸ್ಯಾನ್‌ ಜೋಸ್‌ ಗಣಿಯಲ್ಲಿ ನಡೆದ ನೈಜ ದುರಂತಕ್ಕೆ ಈ ಚಿತ್ರ ಕೆಮರಾ ಹಿಡಿದಿದೆ.

33 ಕಾರ್ಮಿಕರನ್ನು ಮೇಲೆತ್ತುವುದು ತನ್ನ ಕೆಲಸವಲ್ಲವೆಂದು ಗಣಿ ಕಂಪೆನಿ ನಿರ್ಲಕ್ಷ್ಯ ತೋರಿದಾಗ, ಚಿಲಿ ಸರಕಾರ ಕಾರ್ಯಾಚರಣೆಗೆ ಮುಂದಾಗುತ್ತದೆ. ಬೇರೆ ಬೇರೆ ಭಾಗಗಳಲ್ಲಿ ಬೋರ್‌ ಪಾಯಿಂಟ್ ಹೊಡೆದರೂ, ಪ್ರಯೋಜನಕ್ಕೆ ಬರಲಿಲ್ಲ. ಕೊನೆಗೊಂದು ನಿರ್ದಿಷ್ಟ ಪಾಯಿಂಟ್‌ನಲ್ಲಿ ಬೋರ್‌ ಕೊರೆದಾಗ, ಕೆಳಗಿದ್ದ ಕಾರ್ಮಿಕನೊಬ್ಬ ನಾವೆಲ್ಲ ಜೀವಂತವಿದ್ದೇವೆ, ದಯವಿಟ್ಟು ಕಾಪಾಡಿ… ಎಂದು ಒಂದು ಚೀಟಿಯನ್ನು ಅಂಟಿಸಿ ಕಳಿಸಿದ. ಮಿಲಿಟರಿ ಸಿಬಂದಿ ಆಹಾರದ ಪಾಕೆಟ್‌ಗಳನ್ನು ಕೆಳಗಿಳಿಸಿ, ಬರೋಬ್ಬರಿ 2 ತಿಂಗಳು ಉಪವಾಸವಿದ್ದ, ಜೀವಗಳಿಗೆ ದೇವರೇ ಆದರು. ಕೊನೆಗೆ, ಅಷ್ಟೂ ಕಾರ್ಮಿಕರನ್ನೂ ಸುರಕ್ಷಿತವಾಗಿ ರಕ್ಷಿಸಲಾಗುತ್ತದೆ.

ಪ್ಯಾಟ್ರಿಸಿಯಾ ರಿಗ್ಗೆನ್‌ ನಿರ್ಮಾಣದ ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಭಾಷೆಯಲ್ಲಿ ನಿರ್ಮಿಸಿರುವ ಈ ಚಿತ್ರ ಕ್ಷಣ ಕ್ಷಣಕ್ಕೂ ಕುತೂಹಲವನ್ನು ಕೆರಳಿಸುತ್ತಲೇ ಹೋಗುತ್ತದೆ. ಚಿತ್ರದ ಕೊನೆಯವರೆಗೂ ಸ್ವಾರಸ್ಯವನ್ನು ಹಿಡಿದಿಟ್ಟಿರುವ ಈ ಸಿನೆಮಾದ ಪ್ರತಿಯೊಂದು ಕ್ಷಣವೂ ಮನದಂಚಿನಲ್ಲಿ ಶಾಶ್ವತವಾಗಿ ನಿಲ್ಲುವಂತೆ ಮಾಡಿದೆ.

ಟಾಪ್ ನ್ಯೂಸ್

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

de

Kundapura: ಗುಲ್ವಾಡಿ; ಗಾಯಾಳು ಸಾವು

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.