ಅಂದದ ಕೈಗೆ ಚೆಂದದ ಬ್ರೇಸ್‌ಲೆಟ್‌


Team Udayavani, Feb 7, 2020, 5:33 AM IST

shell-bracelet

ಕುಂದಾಪುರದ ರಾಧಿಕಾ ಹೇಳುವ ಪ್ರಕಾರ, ಬ್ರೇಸ್‌ಲೆಟ್‌ ಸದ್ಯ ಹೆಂಗಳೆಯರ ಮೆಚ್ಚಿನ ಆಭರಣ. ಇಂದು ತರಹೇವಾರಿ ಬ್ರೇಸ್‌ಲೆಟ್‌ ಲಭ್ಯವಿದ್ದು, ನಮಗೊಪ್ಪುವುದನ್ನು ಆಯ್ಕೆ ಮಾಡಿಕೊಳ್ಳುವುದೇ ಸವಾಲು ಎನ್ನುತ್ತಾರೆ

ಮಹಿಳೆಯರಿಗೂ ಒಡವೆಗೂ ಅವಿನಾಭಾವ ಸಂಬಂಧ. ಇತರರ ಮುಂದೆ ಹೆಚ್ಚು ಆಕರ್ಷಕವಾಗಿ ಕಾಣಲು ಆಭರಣದ ಸಹಾಯವೂ ಬೇಕು. ಆಭರಣಗಳು ಅನೇಕ; ಅಂತೆಯೇ ಅದರ ವೈವಿಧ್ಯ ಕೂಡ. ಇಂದು ಘಲ್ಲೆನ್ನುವ ಕೈ ಬಳೆಗಿಂತಲೂ ಸದ್ದಿಲ್ಲದೆ ಕೈಯ ಮೆರಗನ್ನು ಹೆಚ್ಚಿಸುವ ಬ್ರೇಸ್‌ಲೆಟ್‌ ಹೆಂಗಳೆಯರ ನೆಚ್ಚಿನ ಆಭರಣ ಎನ್ನಬಹುದು. ಕೈಬಳೆಗಳಿಗೆ ಸಂವಾದಿಯಾಗುವ ಬ್ರೇಸ್‌ಲೆಟ್‌ ತರತರದ ವಿನ್ಯಾಸದೊಂದಿಗೆ ರೂಪಿಸಲಾಗಿದ್ದು, ಕೈಯ ಅಂದಕ್ಕೆ ಸಾಟಿ. ಎಲ್ಲ ಬಟ್ಟೆಗೊಪ್ಪುವ ಈ ಬ್ರೇಸ್‌ಲೆಟ್‌ ಹೆಂಗಳೆಯರ ಮೆಚ್ಚಿನ ಆಭರಣ.

ವಿನ್ಯಾಸ
ಬಹಳ ಹಿಂದಿನಿಂದಲೂ ಬ್ರೇಸ್‌ಲೆಟ್‌ ಆಭರಣ ತೊಡುವ ಆಚರಣೆಯಿತ್ತು. ರಾಜರ‌ ಕಾಲದಲ್ಲಿ ಕೈಕಡಗ ವನ್ನು ತೊಡುತ್ತಿದ್ದು, ಭಾರ ಕಡಿಮೆಯಾಗಿಸಲು ಚೈನ್‌ ಮಾದರಿ ಪರಿಚಿತವಾಯಿತಂತೆ. ಅಂದರೆ ಚಿನ್ನ, ಬೆಳ್ಳಿ, ಲೋಹದ ಚೈನ್‌ಗೆ ಸೂಕ್ಷ್ಮ ವಿನ್ಯಾಸದಿಂದ ಅವುಗಳನ್ನು ತಯಾರಿಸುತ್ತಿದ್ದು ಬಹಳ ಕಾಲ ಬಳಸುತ್ತಿದ್ದರಂತೆ. ಇಂದು ಅಂತಹ ವಿನ್ಯಾಸಗಳೇ ಮರು ಆವಿಷ್ಕಾರಕ್ಕೆ ಒಳಪಟ್ಟು ತಾಮ್ರ, ನೈಲನ್‌ದಾರ, ರಬ್ಬರ್‌, ಚರ್ಮ, ಹಕ್ಕಿ ಪುಕ್ಕ, ಆನೆ ಕೂದಲು, ಹವಳವನ್ನು ಇಂದಿಗೂ ಬ್ರೇಸ್‌ಲೆಟ್‌ ವಿನ್ಯಾಸಕ್ಕೆ ಅತಿ ಹೆಚ್ಚು ಬಳಸುತ್ತಿರುವುದನ್ನು ಕಾಣಬಹುದು.

ಇಷ್ಟವಾಗಲು ಕಾರಣವೇನು?
ಇದು ತೀರಾ ಸರಳ ವಿನ್ಯಾಸವನ್ನು ಹೊಂದಿದ್ದರೂ ಬೇರೆ ಯವರ ಗಮನವನ್ನು ನಮ್ಮತ್ತ ಸೆಳೆಯುವಂಥ‌ ಆಭರಣ. ವಿನ್ಯಾಸದಲ್ಲಿ ಬಹು ಆಯ್ಕೆಯನ್ನು ಹೊಂದಿರುವುದರಿಂದ ಈ ಆಭರಣವು ಸ್ತ್ರೀಗೆ ಮಾತ್ರವಲ್ಲದೇ ಪುರುಷರಿಗೂ ಚೆನ್ನಾಗಿ ಒಪ್ಪುತ್ತದೆ. ಬಹುತೇಕರ ಫ್ಯಾಷನ್‌ ಸಹ. ಎಲ್ಲ ಬಟ್ಟೆಗೂ ಹೋಲುವಂತೆ ನಿತ್ಯದ ಬಳಕೆಗೂ ಸಾಧ್ಯವಿರುವುದರಿಂದ ಎಲ್ಲರ ಅಚ್ಚುಮೆಚ್ಚು.

ಇತ್ತೀಚಿನ ಟ್ರೆಂಡ್‌
ಇತ್ತೀಚಿನ ದಿನಗಳಲ್ಲಿ ಬ್ರೇಸ್‌ಲೆಟ್‌ನಲ್ಲಿ ಕೆಲವೊಂದು ಅಕ್ಷರಗಳನ್ನು ಅಳವಡಿಸಲಾಗುತ್ತಿದೆ. ರಬ್ಬರ್‌ ವಿನ್ಯಾಸದಲ್ಲಿ ಸ್ನೇಹ, ಪ್ರೀತಿ ಸಂಬಂಧಗಳ ಕುರಿತ ಸಂದೇಶವನ್ನು ಬಳಸಲಾಗುತ್ತಿದೆ. ಜೋತುಬೀಳುವ ಹೂ, ಸರಳ ಮಣಿಗಳ ಪೋಣಿಸುವಿಕೆ, ಕಪ್ಪೆ ಚಿಪ್ಪು ವಿನ್ಯಾಸ ಹೆಚ್ಚು ಜನಪ್ರಿಯವಾಗುತ್ತಿದೆ. ತಮ್ಮ ಹೆಸರಿನ ಬ್ರೇಸ್‌ಲೆಟ್‌ ಆಯ್ಕೆ ಮಾಡುವವರಲ್ಲಿ ಕಾಲೇಜು ಕನ್ಯೆಯರೇ ಅತಿ ಹೆಚ್ಚು. ಕಪ್ಪು, ಕೆಂಪು ನೂಲಿಗೆ ಬೆಳ್ಳಿಯ ಚೂರನ್ನು ಅಡ್ಡಕಟ್ಟಿದ ವಿನ್ಯಾಸ ಆಭರಣ ಮಳಿಗೆಯಲ್ಲಿ ಲಭ್ಯವಿದ್ದು ಕೈಗೆ ಮಾತ್ರವಲ್ಲದೇ ಕಾಲಿಗೂ ಇದನ್ನು ತೊಡುತ್ತಿರುವುದು ವಿಶೇಷ.

ನಂಬಿಕೆಯೊಂದಿಗೆ ಆರೋಗ್ಯಕ್ಕೂ ಬಳಕೆ
ಇಂದು ತಮ್ಮ ಗ್ರಹಫ‌ಲಕ್ಕೆ ಅನುಗುಣವಾಗಿ ಹರಳನ್ನು ಆಯ್ಕೆಮಾಡುವುದು ಇಲ್ಲವೇ ಆನೆ ಬಾಲದ ಕೂದಲಿನ ಬ್ರೇಸ್‌ಲೆಟ್‌ ತೊಡುವುದು ಒಳ್ಳೆಯದು ಎನ್ನುವ ಒಂದು ನಂಬಿಕೆ ಇದೆ. ಆದರೆ ಈ ನಂಬಿಕೆಗೂ ಒಂದು ತರ್ಕವಿದೆ. ಲೋಹದ ಆಭರಣಕ್ಕೆ ದೇಹದ ಉಷ್ಣಾಂಶ ನಿಯಂತ್ರಿಸುವ ಸಾಮರ್ಥ್ಯವಿದೆ ಎಂಬ ನಂಬಿಕೆ ಇದ್ದು, ಅದು ಆರೋಗ್ಯವೃದ್ಧಿಗೂ ಪೂರಕ ಎಂಬ ಅಭಿಪ್ರಾಯವಿರುವುದು ಸುಳ್ಳಲ್ಲ.

ಇರಲಿ
ನಿಮ್ಮ ಆಯ್ಕೆ
-ಬ್ರೇಸ್‌ಲೆಟ್‌ ತೊಡುವ ಮುನ್ನ ನಿಮ್ಮ ಕೈಗೆ ಯಾವ ರೀತಿ ವಿನ್ಯಾಸ, ಯಾವ ರೀತಿ ಲೋಹ ಸೂಕ್ತವೆಂಬುವುದನ್ನು ಅರಿತಿರಬೇಕು.
-ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸಬಂದಿದೆ, ಸುಂದರವಾಗಿದೆ ಎಂಬ ಮಾತ್ರಕ್ಕೆ ತೊಡಲು ಪ್ರಯತ್ನಿಸಿ ಆಭಾಸಕ್ಕೆ ಗುರಿಯಾಗದಿರಿ.
-ಎಷ್ಟೇ ಚಂದದ ವಿನ್ಯಾಸವಿದ್ದರೂ ನಿಮಗೆ ಅದು ಹೋಲದಿದ್ದರೆ ವ್ಯರ್ಥವಷ್ಟೇ. ಜತೆಗೆ ಖರೀದಿಸಿದ ಎರಡು ದಿನದ ಬಳಿಕ ಬೇಸರವಾಗಿ ಮೂಲೆಗೆಸೆಯಬೇಕಾದೀತು.
-ಪಾಶ್ಚಾತ್ಯ ಬಟ್ಟೆ ತೊಡುವವರು ಹೆಚ್ಚಾಗಿ ರಬ್ಬರ್‌ ಮತ್ತು ಲೆದರ್‌ (ಚರ್ಮ)ದ ಬ್ರೇಸ್‌ಲೆಟ್‌ ತೊಡುವುದು ಸಾಮಾನ್ಯ.
-ಸಾಂಪ್ರದಾಯಿಕ ಸಲ್ವಾರ್‌, ಸೀರೆ ಇತರ ಉಡುಗೆಗೆ ಚಿನ್ನ, ಬೆಳ್ಳಿ ಬ್ರೇಸ್‌ಲೆಟ್‌ ಹೆಚ್ಚು ಶೋಭೆ.
-ನೀವು ವಾಚ್‌ ತೊಡುವವರಾಗಿದ್ದರೆ ಬ್ರೇಸ್‌ಲೆಟ್‌ ವಾಚ್‌ವಿನ್ಯಾಸಕ್ಕಿಂತಲೂ ವಿಭಿನ್ನವಾಗಿರುವಂತೆ ಆಯ್ಕೆ ಮಾಡಿ.
-ನಿತ್ಯದ ಬಳಕೆಗೆ ಸರಳ ವಿನ್ಯಾಸವಿರುವ ಬ್ರೇಸ್‌ಲೆಟ್‌ ಸೂಕ್ತ. ಹಬ್ಬ ಆಚರಣೆಗೆ ತೊಡಲಿಚ್ಛಿಸುವವರು ಸ್ವಲ್ಪ ಮಟ್ಟಿನ ರಾರಾಜಿಸುವ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಿ.

ಟಾಪ್ ನ್ಯೂಸ್

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.