ಸದ್ಗುಣಗಳಿದ್ದಾಗ ಭೂಮಿಯೇ ಸ್ವರ್ಗ
Team Udayavani, Mar 16, 2020, 5:41 AM IST
ಬಟ್ಟೆಯಲ್ಲಿನ ಗಾಢ ಕೊಳೆಯ ಮುಂದೆ ಸಾಬೂನು ಸೋಲುವಂತೆ ದುರ್ಗುಣಗಳ ಮುಂದೆ ಸದ್ಗುಣಗಳು ಸೋಲುತ್ತವೆ. ಬಣ್ಣದ ಮಾತುಗಳ ಮುಂದೆ ಸತ್ಯ ವಾಕ್ಯಗಳು ಧ್ವನಿ ಕಳೆದುಕೊಳ್ಳುತ್ತವೆ. ಕುಕರ್ಮಗಳ ಮುಂದೆ ಸತ್ಕರ್ಮಗಳು ಗೌಣವಾಗುತ್ತವೆ. ಆದರೂ ಸುದೈವವಶಾತ್ ಅಂತಿಮ ವಿಜಯವು ವಿರುದ್ಧ ರೀತಿಯದ್ದಾಗಿರುತ್ತದೆ. ಏಕೆಂದರೆ, ಸಾಬೂನು ಸೋತರೂ ಕಲೆ, ಕೊಳೆಯ ಅಸ್ತಿತ್ವವು ಅತ್ಯಲ್ಪ ಕಾಲದ್ದು. ಹಾಗೆಯೇ ದುರ್ಗುಣಗಳು, ಕುಕರ್ಮಗಳು, ಬಣ್ಣದ ಮಾತುಗಳು. ಒಳಿತಿಗೆ ಬಾಳಿಕೆ ಹೆಚ್ಚು.
ಡಿ.ವಿ.ಜಿ. ಹೇಳುತ್ತಾರೆ:
ಸತ್ಯವಂತನನರಸಲೆನುತ ಪೇಟೆಗಳೊಳಗೆ |
ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು ||
ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು |
ತಾತ್ತಿÌಕ ಡಯೋಜೆನಿಸ್-ಮಂಕುತಿಮ್ಮ ||
ಕ್ರಿ.ಶ. 412-322 ರ ಕಾಲದಲ್ಲಿ ಗ್ರೀಸ್ ದೇಶದ ಡಯೋಜೆನಿಸ್ ಎಂಬವನು ಸತ್ಯವಂತನಾದವನನ್ನು ಕಾಣಬೇಕೆಂದು ನಡುಹಗಲಿನಲ್ಲಿ ದೀವಟಿಗೆ ಹಿಡಿದು ಹುಡುಕಾಡಿ, ಸತ್ಯವಂತರು ಎಲ್ಲೂ ಕಾಣ ಸಿಗಲಿಲ್ಲ, ಇಂತಹ ಈ ಲೋಕದ ಸಹವಾಸ ನನಗೆ ಬೇಡ ಎಂದು ಲೋಕಸಂಪರ್ಕದಿಂದ ದೂರವಾಗುವುದಕ್ಕಾಗಿ ಒಂದು ತೊಟ್ಟಿಯ ಒಳಗೆ ವಾಸ ಮಾಡಿದನಂತೆ.
ಆ ಕಾಲದಲ್ಲಿಯೇ ಸತ್ಯವಂತರು ಆತನಿಗೆ ಕಾಣಸಿಗಲಿಲ್ಲ. ಆದರೂ ಕಾಲ ಪೂರ್ತಿ ಕೆಟ್ಟುಹೋಗಿಲ್ಲ. ಒಳಿತು ಅಲ್ಲೊ ಇಲ್ಲೊ ಆದರೆ ಎಲ್ಲೆಲ್ಲೂ ಇದೆ. ಸತ್ಯವಂತರು ಭರವಸೆ ಕಳೆದುಕೊಳ್ಳಬೇಕಾಗಿಲ್ಲ. ದೀವಟಿಗೆ ಹಿಡಿದು ಹುಡುಕಿದರೆ ಸತ್ಯವಂತರು ಸಿಗುತ್ತಾರೋ ಇಲ್ಲವೋ; ಅಂತರಂಗದ ಕಣ್ಣು ತೆರೆದು ನೋಡಿದರೆ ಸತ್ಯವಂತರೇ ಏಕೆ? ಸತ್ಯವೇ ಗೋಚರಿಸುತ್ತದೆ. ಸದ್ಗುಣಗಳು, ನಮಗೆ ಒಳಿತನ್ನೇ ನೀಡುತ್ತವೆ. ಸತ್ಕರ್ಮಗಳನ್ನು ಮಾಡುವುದು ನಮ್ಮ ಸ್ವಭಾವವಾಗಬೇಕು.
ನರಕ ತಪ್ಪಿತು ಧರ್ಮಜಂಗೆ, ದಿಟ, ಆದೊಡೇಂ |
ನರಕದರ್ಶನದುಃಖ ತಪ್ಪದಾಯಿತಲ? ||
ದುರಿತತರುವಾರು ನೆಟ್ಟುದೊ, ನಿನಗಮುಂಟು ಫಲ |
ಚಿರಋಣದ ಲೆಕ್ಕವದು-ಮಂಕುತಿಮ್ಮ ||
ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣ “ಹತೋಶ್ವತ್ಥಾಮೋ ನಾಮ ಕುಂಜರಃ’ ಎಂದು ಧರ್ಮರಾಜನ ಬಾಯಿಯಿಂದ ಕೂಗಿಸಿ, “ಹತೋಶ್ವತ್ಥಾಮೋ..’ ಎಂದ ಕೂಡಲೇ ಪಾಂಚಜನ್ಯ ಮೊಳಗಿಸಿದ್ದರಿಂದ ದ್ರೋಣರು ತನ್ನ ಮಗ ಅಶ್ವತ್ಥಾಮನೇ ಸತ್ತನೆಂದು ಭ್ರಮಿಸಿ ಶಸ್ತ್ರಸಂನ್ಯಾಸ ಮಾಡಿ ಶತ್ರುಗಳಿಂದ ಹತನಾಗುತ್ತಾನೆ. ಇದರಿಂದ ಧರ್ಮರಾಜನಿಗೆ ಮೊದಲು ನರಕದರ್ಶನ ಮಾಡಿ ಬಳಿಕ ಸ್ವರ್ಗಕ್ಕೆ ಹೋಗಬೇಕಾಯಿತು. ಜೀವನ ಪೂರ್ತಿ ಸತ್ಯಸಂಧನಾಗಿದ್ದು, ಇಲ್ಲಿ ಪೂರ್ತಿ ಸತ್ಯವೂ ಅಲ್ಲದ, ಪೂರ್ತಿ ಸುಳ್ಳೂ ಅಲ್ಲದ ಮಾತನ್ನು ಆಡಿದುದಕ್ಕಾಗಿ ಈ ಪ್ರಮೇಯ ಎದುರಾಯಿತು. ಹಾಗಾಗಿ ಸ್ವರ್ಗ ಸಿಗುತ್ತದೆಯೋ ಇಲ್ಲವೋ, ಸತ್ಯ, ಸದ್ಗುಣಗಳಿದ್ದಾಗ ಜೀವನವೇ ಸ್ವರ್ಗ.
- ಕುದ್ಯಾಡಿ ಸಂದೇಶ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.