ಯೋಗ ಮುದ್ರೆ ಮಹತ್ವ
ಆರೋಗ್ಯ ವೃದ್ಧಿಗೆ ಯೋಗ ಮುದ್ರಾ
Team Udayavani, Jan 14, 2020, 5:07 AM IST
ಯೋಗ ಮುದ್ರಾಗಳಿಂದಲೂ ಆರೋಗ್ಯ ವೃದ್ಧಿಸಲಿದ್ದು, ಪ್ರತಿಯೊಂದು ಯೋಗ ಮುದ್ರೆಗೂ ವಿಶೇಷ ಪ್ರಾಮುಖ್ಯತೆ ಇದೆ. ಈ ಹಿನ್ನಲೆ ಪ್ರಮುಖ ಯೋಗ ಮುದ್ರೆಗಳು ಮತ್ತು ಅದರಿಂದ ದೇಹಕ್ಕಾಗುವ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿವೆ. ಈ ಪೈಕಿ ಮೊದಲ ನಾಲ್ಕರ ಬಗ್ಗೆ ಮಾಹಿತಿ ನೀಡಲಾಗಿದೆ. ಉಳಿದದ್ದು ಮುಂದಿನ ಸಂಚಿಕೆಯಲ್ಲಿ.
ಜ್ಞಾನ ಮುದ್ರಾ
ಜ್ಞಾನ ಮತ್ತು ಏಕಾಗ್ರತೆಗೆ ಇರುವ ಅತ್ಯಂತ ಸಾಮಾನ್ಯ ಯೋಗ ಮುದ್ರೆ ಇದು. ಪದ್ಮಾಸನ ಹಾಕಿಕೊಂಡು ಬೆಳಗ್ಗೆ ಈ ಜ್ಞಾನ ಮುದ್ರಾ ವನ್ನು ಅಭ್ಯಾಸ ಮಾಡಬೇಕು. ಇದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಜತೆಗೆ ನಿದ್ರಾಹೀನತೆ ಸಮಸ್ಯೆಯನ್ನೂ ಇದು ಪರಿಹರಿಸಲಿದೆ. ಅಷ್ಟೇ ಅಲ್ಲ, ಕೋಪದ ಸಮಸ್ಯೆಯನ್ನೂ ನಿಭಾಯಿಸಬಹುದು.
ವಾಯು ಮುದ್ರಾ
ಈ ಮುದ್ರೆಯು ದೇಹದ ಗಾಳಿಯನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಈ ಮುದ್ರಾವನ್ನು ನಿಂತು, ಕುಳಿತು ಅಥವಾ ಮಲಗಿದ ಭಂಗಿಯಲ್ಲೂ ಮಾಡಬಹುದು. ಇದಕ್ಕೆ ಸಮಯದ ನಿರ್ದಿಷ್ಟತೆ ಇಲ್ಲ. ಇದು ದೇಹದಲ್ಲಿರುವ ಹೆಚ್ಚುವರಿ ಗಾಳಿಯನ್ನು ಹೊರಹಾಕಿ ಗ್ಯಾಸ್ ನಿಂದ ಉಂಟಾಗುವ ಎದೆನೋವನ್ನು ಕಡಿಮೆ ಮಾಡುತ್ತದೆ.
ಅಗ್ನಿಮುದ್ರಾ
ಇದು ದೇಹದಲ್ಲಿನ ಅಗ್ನಿಯ ಅಂಶವನ್ನು ಸಮತೋಲನದಲ್ಲಿಡವಲ್ಲಿ ಸಹಕಾರಿ. ಈ ಮುದ್ರಾವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಇದು ತೂಕ ಇಳಿಸುವ ಮುದ್ರಾ ಸಹ. ಈ ಮುದ್ರೆಯನ್ನು ನಿಯಮಿತವಾಗಿ ಮಾಡುವುದರಿಂದ ಕೊಬ್ಬಿನಾಂಶ ಕರಗಲಿದ್ದು, ಜೀರ್ಣಕ್ರಿಯೆ ಹೆಚ್ಚುತ್ತದೆ.
ವರುಣ ಮುದ್ರಾ
ಈ ಮುದ್ರಾವು ದೇಹದಲ್ಲಿರುವ ನೀರಿನ ಅಂಶವನ್ನು ಸಮತೋಲನದಲ್ಲಿಡುತ್ತದೆ. ಜತೆಗೆ ದೇಹದ ಸೌಂದರ್ಯ, ಚರ್ಮಕ್ಕೆ ಕಾಂತಿ ತುಂಬುತ್ತದೆ. ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುವ ಶಕ್ತಿ ಈ ಮುದ್ರೆಗಿದ್ದು, ದೇಹದಲ್ಲಿನ ನೀರಿನ ಅಂಶವನ್ನು ಸುಸ್ಥಿತಿಯಲ್ಲಿಟ್ಟು ಚರ್ಮವನ್ನು ಪೋಷಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.