ಮದುವೆ ಸಮಾರಂಭಗಳಿಗೆ ಲೇಟೆಸ್ಟ್ ಫ್ಯಾಷನ್ ಟಚ್
Team Udayavani, Oct 11, 2019, 10:31 AM IST
ನೆಚ್ಚಿನ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಿದ ಜನ ಇದೀಗ ಮದುವೆ ಸೀಸನ್‌ಗಳಿಗೆ ಸಿದ್ಧರಾಗುತ್ತಿದ್ದಾರೆ. ಹಬ್ಬದ ಸಡಗರ ಇದೀಗ ಮದುವೆ ಮನೆಗಳಿಗೆ ಶಿಫ್ಟ್ ಆಗಿದೆ. ಮದುವೆ ಮೊದಲಾದ ಶುಭ ಸಮಾರಂಭಗಳು ಆರಂಭವಾಗಿರುವುದರಿಂದ ಜನರು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಏನಿದೆ ಎಂಬ ಹುಡುಕಾಟದಲ್ಲಿದ್ದಾರೆ. ತಿಂಗಳ ಮುಂಚೆಯೇ ಮದುವೆಗೆ ಹೇಗೆ ಸಿದ್ದವಾಗಲಿ ಎಂಬ ಲೆಕ್ಕಾಚಾರವನ್ನು ಅನೇಕರು ಹಾಕಿಕೊಳ್ಳುತ್ತಿದ್ದಾರೆ.
ಎಲ್ಲರ ಜೀವನದಲ್ಲೂ ಮದುವೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮೂರು ಅಕ್ಷರದ ಪದ, ಎರಡು ಮನಸ್ಸು ಹಾಗೂ ಮನೆಗಳನ್ನು ಒಂದುಗೂಡಿಸುತ್ತದೆ. ಮದುವೆ ಅಂದರೆ ಸಂಭ್ರಮ, ಸಂತೋಷ. ಒಂದು ದಿನ ನಡೆಯುವ ಸಮಾರಂಭಕ್ಕೆ ಹಲವು ತಿಂಗಳುಗಳಿಂದಲೇ ತಯಾರಿ ಶುರುವಾಗಿರುತ್ತದೆ. ಆ ದಿನ ಇಡೀ ಸಮಾರಂಭದ ಕೇಂದ್ರ ಬಿಂದುವಾಗಿರುವ ಮದುಮಕ್ಕಳು ಸಿನೆಮಾಗಳಲ್ಲಿ ಸಿಂಗಾರಗೊಳ್ಳುವ ವಧು, ವರರಂತೆ ತಾವು ಕಾಣಿಸಬೇಕು ಎಂಬುದಾಗಿ ಬಯಸುತ್ತಾರೆ. ಸದ್ಯ ಮದುವೆ ಸಮಾರಂಭಕ್ಕೆ ಮದುಮಕ್ಕಳ ಜತೆಗೆ ಇಡೀ ಕುಟುಂಬವೇ ವಿಭಿನ್ನವಾಗಿ ಸಿದ್ಧತೆ ನಡೆಸುತ್ತದೆ.
ಕೆಲವು ವರ್ಷಗಳ ಹಿಂದೆ ಮದುಮಗಳು ಇದೇ ಬಣ್ಣದ ಸೀರೆ, ಮದುಮಗ ಇದೇ ವಿನ್ಯಾಸ, ಬಟ್ಟೆಯನ್ನು ಧರಿಸಬೇಕು ಎಂಬ ನಿಯಮ ಕಡ್ಡಾಯವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಮದುಮಕ್ಕಳು ಅವರವರ ಆಸೆಗಳಿಗೆ ತಕ್ಕುದಾಗಿ ಬಟ್ಟೆಯನ್ನು ಸಿದ್ಧಪಡಿಸಿ, ಧರಿಸಿ ಸಂಭ್ರಮಿಸುತ್ತಾರೆ. ಕೆಂಪು, ಗುಲಾಬಿ ಬಣ್ಣದಲ್ಲೇ ಕಾಣಿಸಿಕೊಳ್ಳುತ್ತಿದ್ದ ಮದುಮಗಳೀಗ ಬಣ್ಣ ಬಣ್ಣದ ಸೀರೆ, ಲೆಹೆಂಗಾ, ಹಾಫ್ ಸಾರಿಗಳಲ್ಲಿ ಮಿನುಗುತ್ತಿದ್ದಾಳೆ. ಪಂಚೆ, ಶರ್ಟ್, ಕೋಟ್‌ಗಳ ಬದಲಾಗಿ ಮದುಮಗನಿಗೂ ವಿಭಿನ್ನ ಬಟ್ಟೆಗಳು ಸಿದ್ಧಗೊಳ್ಳುತ್ತಿದೆ.
ಸಿಂಪಲ್ ಸೀರೆಗೆ ಗ್ರ್ಯಾಂಡ್ ಬ್ಲೌಸ್ ಡಿಸೈನ್
ಉಡಲು ಕಂಫರ್ಟ್‌ಟೇಬಲ್ ಫೀಲ್ ನೀಡುವ ವಿಭಿನ್ನ ಸೀರೆಯನ್ನು ಖರೀದಿಸುವ ಮದುಮಗಳು ಅದಕ್ಕೆ ಗ್ರ್ಯಾಂಡ್ ಬ್ಲೌಸ್ ಡಿಸೈನ್ ಮಾಡಿಸುತ್ತಾಳೆ. ಇದು ಮದುವೆಯ ಕೇಂದ್ರಬಿಂದುವಾಗಿರುವ ಮದುಮಗಳಿಗೆ ರಿಚ್ ಟಚ್ ನೀಡುತ್ತದೆ. ರೇಷ್ಮೆ , ಸಿಂಧೇರಿ, ಪ್ಯೂರ್ ಸಿಲ್ಕ್ , ಕಾಂಜಿವರಂ, ಬನಾರಸ್ ಸೀರೆಗಳಲ್ಲಿ ಡಾರ್ಕ್ ಬಣ್ಣದ ಸುಂದರ ಸೀರೆಗಳಿಗೆ ಅದಕ್ಕೊಪ್ಪುವ ಮಿಕ್ಸೆಡ್ ಗ್ರ್ಯಾಂಡ್ ಬ್ಲೌಸ್ ಹೊಲಿಸಿ ಸಂಭ್ರಮಿಸಲಾಗುತ್ತದೆ.
ವರನಿಗೂ ವಿಭಿನ್ನ ಸಂಗ್ರಹಗಳು
ಹಬ್ಬ ಹರಿದಿನ, ಮದುವೆ ಸೀಸನ್‌ಗಳು ಬಂತೆಂದರೆ ವಸ್ತ್ರಗಳಲ್ಲಿ ಹಲವಾರು ವಿಭಿನ್ನತೆಗಳು ಹುಟ್ಟಿಕೊಳ್ಳುತ್ತದೆ. ಅದರಲ್ಲೂ ಮದುವೆ ಸೀಸನ್‌ಗೆ ವರ್ಷದಿಂದ ವರ್ಷಕ್ಕೆ ಆಯಾಯಾ ಸಮಯಕ್ಕೆ ಸರಿಯಾದ ಟ್ರೆಂಡಿ ಔಟ್‌ಫಿಟ್‌ಗಳು ಮಾರುಕಟ್ಟೆಗಳಿಗೆ ಲಗ್ಗೆ ಇಡುತ್ತದೆ. ಹೆಣ್ಣುಮಕ್ಕಳ ವಸ್ತ್ರದಲ್ಲಿ ಹಲವಾರು ಹೊಸ ವಿನ್ಯಾಸಗಳು ಬಂದರೆ ಪುರುಷರ ಬಟ್ಟೆಗಳಲ್ಲಿ ಆಯ್ಕೆಗಳು ಕಡಿಮೆ. ಆದರೆ ಸದ್ಯ ಮದುವೆಗಳಲ್ಲಿ ಮದುಮಗ ಸೂಟ್, ಶರ್ವಾನಿ, ಕುರ್ತಾ ಸ್ಟ್ರೈಟ್ ಕಟ್ ಪ್ಯಾಂಟ್ ಹಾಕುವುದು ಹೆಚ್ಚು. ಹಾಗಾಗಿ ಅದರಲ್ಲೇ ವಿಭಿನ್ನವಾದ ಆಕರ್ಷಕ ಸೂಟ್, ಶಾರ್ವಾನಿ, ಕುರ್ತಾ ಡಿಸೈನ್‌ಗಳು ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿವೆ. ಸೂಟ್, ಶರ್ವಾನಿ, ಕುರ್ತಾಗಳಲ್ಲಿ ಹೆಚ್ಚು ಡಿಸೈನ್ ಇರುವ ಸಿಂಪಲ್ ಆಗಿ ಗ್ರ್ಯಾಂಡ್ ಲುಕ್ ನೀಡುವ ವಿನ್ಯಾಸಗಳಿವೆ.
ಒಪ್ಪುವ ಬಟ್ಟೆಗಳ ಆಯ್ಕೆಯಾಗಲಿ
ಸೀರೆ ಇರಲಿ ಗೌನ್ ಇರಲಿ ಅಥವಾ ಕುರ್ತಾ, ಶರ್ವಾನಿ ಇರಲಿ ನಮ್ಮ ಬಣ್ಣಕ್ಕೆ ಒಪ್ಪುವಂತಹ ಬಟ್ಟೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಸಾವಿರಾರು ರೂ. ಕೊಟ್ಟು ಬಟ್ಟೆ ಖರೀದಿಸಿದರೂ ಮುಖಕ್ಕೆ ಒಪ್ಪದೆ ಇದ್ದರೆ ಅವೆಲ್ಲವೂ ವ್ಯರ್ಥ ಆ ಕಾರಣಕ್ಕಾಗಿ ಸಮಾರಂಭಗಳಿಗಾಗಿ ಹಾಕುವ ಬಟ್ಟೆಗಳು ನಮ್ಮ ದೇಹಕ್ಕೆ ಒಪ್ಪುತ್ತದೆಯೇ ಎಂದು ಪರಿಶೀಲಿಸಿಕೊಳ್ಳಿ.
ರಿಸೆಪ್ಶನ್‌ಗಳಿಗೆ ಹೆಚ್ಚು ಪ್ರಮುಖ್ಯತೆ
ಸಾಂಪ್ರಾದಾಯಿಕ ಶೈಲಿಯ ಮದುವೆಗಳಿಗೆ ಹೆಚ್ಚು ಒತ್ತು ನೀಡುವ ಜನರು ಮದುವೆಯನ್ನು ಸಂಪ್ರದಾಯಬದ್ಧವಾಗಿ ಮಾಡುತ್ತಾರೆ. ಆದರೆ ರಿಸೆಪ್ಶನ್ ಅನ್ನು ಅದ್ದೂರಿಯಾಗಿ ಮಾಡುತ್ತಾರೆ. ಸೀರೆಯಲ್ಲಿ ಕಂಗೊಳಿಸುವ ವಧು ರಿಸೆಪ್ಶನ್‌ನಲ್ಲಿ ಲೆಹಂಗಾ, ಗೌನ್ ಮೊದಲಾದ ಫ್ಯಾಷನೇಬಲ್ ಬಟ್ಟೆಗಳನ್ನು ತೊಟ್ಟರೆ, ವರ ಕೋಟ್, ಸ್ಟೇಲಿಶ್ ಕುರ್ತಾಗಳನ್ನು ಹಾಕಿ ಮಿಂಚುತ್ತಾರೆ. ಅಚ್ಚರಿ ಎಂದರೆ ವಧುವರರು ಸೀರೆಗಳಿಗಿಂತ ದುಬಾರಿ ಬೆಲೆ ತೆತ್ತು ಡ್ರೆಸ್‌ಗಳನ್ನು ಖರೀದಿಸಿ ರಿಸೆಪ್ಯಶನ್‌ಗೆ ಹಾಕುತ್ತಾರೆ.
ಬಣ್ಣ ಬಣ್ಣದ ಹಗುರ ಸೀರೆ
ಸಂಪ್ರದಾಯಕ್ಕೆ ಹೆಚ್ಚು ಒತ್ತು ನೀಡುವ ಕುಟುಂಬಗಳು ಈಗಲೂ ಮದುವೆಗೆ ಸೀರೆಯನ್ನು ಉಡಲು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಆ ಕಾರಣದಿಂದಲೇ ಕರಾವಳಿಯಲ್ಲಿ ಮದುವೆಗೆ ಸೀರೆ ಉಟ್ಟು ರಿಸೆಪ್ಯನ್‌ಗೆ ಲೆಹಂಗಾ, ಗೌನ್ ಧರಿಸುತ್ತಾರೆ. ಪ್ರಸ್ತುತ ಅತಿ ಭಾರದ ಸಾಂಪ್ರದಾಯಿಕ ಸೀರೆಗಳ ಬದಲು ಎಲ್ಲ ಸಮಾರಂಭಗಳಿಗೆ ಸರಿಹೊಂದುವ ಹಗುರ ರೇಷ್ಮೆ ಸೀರೆಗಳನ್ನು ಖರೀದಿಸಲಾಗುತ್ತದೆ. ಸಾಫ್ಟ್ ಸಿಲ್ಕ್, ರೇಷ್ಮೆಯಲ್ಲಿ ಸಾಫ್ಟ್ ಸೀರೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಡಾರ್ಕ್ ಬಣ್ಣಗಳಾದ ನೀಲಿ, ಕೆಂಪು, ಪಿಂಕ್ ಬಣ್ಣಗಳಿಗೆ ಮದುಮಗಳು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾಳೆ.
- ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.