ಕನಸಿನ ಮನೆಗೆ ಅರಮನೆಯ ನೋಟ
Team Udayavani, Nov 30, 2019, 4:08 AM IST
ಮನೆ ಸುಂದರವಾಗಿ ಕಾಣುವಂತೆ ಮಾಡುವುದು ಪ್ರತಿಯೊಬ್ಬರ ಆಸೆ. ಕನಸಿನ ಮನೆ ಸದಾ ಅಲಂಕಾರದಿಂದ ಶೋಭಿತವಾಗಿರಬೇಕು, ಅರಮನೆಯಂತೆ ಅಂತೆ ಕಂಗೊಳಿಸುತ್ತಿರಬೇಕು ಎಂದು ಎಲ್ಲರು ಇಷ್ಟ ಪಡುತ್ತಾರೆ. ಆದರೆ ಇಂತಹ ಆಸೆ-ಕನಸುಗಳಿಗೆ ಸಾಕಷ್ಟು ಹಣ ವ್ಯಯಿಸಬೇಕೆಂಬುವುದೇ ಹಲವರ ಚಿಂತೆ. ಆದರೆ ನಿಮ್ಮ ಜೇಬಿಗೆ ಕತ್ತರಿ ಹಾಕಿಕೊಳ್ಳದೇ ಚಿಕ್ಕ-ಚೊಕ್ಕ ಮನೆಯನ್ನು ಹೇಗೆ ಅರಮನೆಯಂತೆ ಶೃಂಗರಿಸುವುದು ಎಂಬ ಸಮಸ್ಯೆಗೆ ಪರಿಹಾರ ಇಲ್ಲಿದ್ದು, ಅರಮನೆಯಂತೆ ವಿನ್ಯಾಸಗೊಳಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಮನೆಯ ಅಂದ ಅಡಗಿರುವುದು ಬಣ್ಣದಲ್ಲಿ ಹಾಗಾಗಿ ನಿಮ್ಮ ಮನೆಗೆ ಬಣ್ಣ ನೀಡುವ ಮುನ್ನ ಹಲವಾರು ಬಾರಿ ಯೋಚಿಸಿ ಆಯ್ಕೆ ಮಾಡಬೇಕಾಗುತ್ತದೆ. ಈ ಹಿನ್ನೆಲೆ ಶ್ರೀಮಂತ ಬಣ್ಣಗಳೆಂದೇ ಹೆಸರು ಪಡೆದುಕೊಂಡಿರುವ ಕೆಂಪು, ನೀಲಿ ಅಥವಾ ತಿಳಿ ಬಿಳಿ, ಕ್ರೀಂ, ಮಸುಕಾದ ಹಳದಿ, ತಿಳಿ ಗುಲಾಬಿ ಬಣ್ಣ ವನ್ನು ಆಯ್ದುಕೊಂಡು ಅದರ ವಾರ್ಲಿ ಕಲೆಯನ್ನು ಅದರ ಮೇಲೆ ಬಿಡಿಸಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯ ರಂಗು ಹೆಚ್ಚುವುದರೊಂದಿಗೆ ಅರಮನೆಯಂತೆಯೂ ಕಾಣುತ್ತದೆ.
ಪ್ರಾಚ್ಯ ಕಲಾಕೃತಿಗಳ ಬಳಕೆ
ನಾವು ಸಂಸ್ಕೃತಿ-ಆಚಾರ ವಿಚಾರಗಳಲ್ಲಿ ಮುಂಚೂಣಿಯಲ್ಲಿರುವ ದೇಶದಲ್ಲಿ ಆಶ್ರಯ ಪಡೆದಿದ್ದೇವೆ. ನಮ್ಮಲ್ಲಿ ಪ್ರಾಚೀನ ಕಲಾಕೃತಿಗಳ ಚಿತ್ರಣಗಳು, ಛಾಯಾಚಿತ್ರಗಳು ಹೇರಳವಾಗಿದ್ದು, ನಿಮ್ಮ ಮನೆಯ ಗೋಡೆಗಳಲ್ಲಿ ಆಥವಾ ಮನೆಯ ಮೂಲೆಗಳಲ್ಲಿ ಪ್ರಾಚೀನ ಕಲಾಕೃತಿಗಳನ್ನು ಇಡುವುದರಿಂದ ಮನೆಯ ಚೆಂದ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ಜತೆಗೆ ಇಂತಹ ಚಿತ್ರಪಟಗಳು ಅಥವಾ ಕಲಾಕೃತಿಗಳು ನಮ್ಮ ಆಚಾರ-ವಿಚಾರದ ಪ್ರತೀಕವಾಗಿದ್ದು, ಅವುಗಳನ್ನು ಪೋಷಿಸಿದಂತಾಗುತ್ತದೆ ಕೂಡ.
ಹೂಗಳು ಮತ್ತು ಅಲಂಕಾರಿಕ ಸಸ್ಯಗಳು
ಹೂಗಳಿಂದಲೂ ನಿಮ್ಮ ಮನೆಯನ್ನು ಕಲರ್‌ಫುಲ್ ಆಗಿರುವಂತೆ ನೋಡಿಕೊಳ್ಳಬಹುದು. ಹಸಿರು ಸಸ್ಯಗಳು ಮತ್ತು ಬಣ್ಣಬಣ್ಣದ ಹೂಗಳು ಸ್ವಾಭಾವಿಕ ಬಣ್ಣವನ್ನು ಹೊಂದಿದ್ದು ಅವುಗಳನ್ನು ಅಲಂಕಾರಕ್ಕೆ ಬಳಸಿಕೊಂಡರೆ ಕೊಠಡಿಯ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ. ಹೂಕುಂಡಗಳ ಮೂಲಕ ಗಿಡಗಳನ್ನು ಬೆಳಸಿ, ಆಗ ನಿಮ್ಮ ಮನೆ ಅರಮನೆಯ ಹಾಗೇ ಲಕ್ಷಣವಾಗಿ ಕಾಣುತ್ತದೆ.
ಕಂಗೊಳಿಸುವ (ನೆಲಹಾಸು)
ಈ ಆಧುನಿಕ ಜೀವನ ಶೈಲಿ ನಮ್ಮ ಯಾಂತ್ರಿಕರನ್ನಾಗಿ ಮಾಡಿ ಬಿಟ್ಟಿದ್ದು, ನಾವು ಕೂಡ ಕೃತಕ ಸೌಂದರ್ಯಕ್ಕೆ ಮೊರೆಹೋಗುತ್ತಿದ್ದೇವೆ. ಕರಕುಶಲ ಕರ್ಮಿಗಳಿಂದ ಮಾಡಲ್ಪಟ್ಟ ಕಂಬಳಿಗಳು ಇಂದು ಮರೆಗೆ ಸರಿಯುತ್ತಿವೆ. ಆದರೆ ಈ ವಸ್ತುಗಳಲ್ಲಿ ಮನೆಯ ಲಕ್ಷಣವನ್ನು ಹೆಚ್ಚಿಸುವ ಗುಣ ಅಡಗಿದ್ದು, ರತ್ನಗಂಬಳಿ ಅಥವಾ ನೆಲಹಾಸನ್ನು ಬಳಸಿಕೊಳ್ಳುವಾಗ ಗಾಢ ಬಣ್ಣದ ನೆಲಹಾಸನ್ನು ಆಯ್ಕೆ ಮಾಡಿಕೊಳ್ಳಿ. ಮೆರೂನ್, ಆಲಿವ್ ಗ್ರೀನ್, ಕಂದು, ಗಾಢ ನೀಲಿ ಬಣ್ಣದ ನೆಲಹಾಸುಗಳು ಕೊಠಡಿಯ ಸೌಂದರ್ಯ ಕಂಗೊಳಿಸುವಂತೆ ಮಾಡುತ್ತದೆ.
- ಸುಶ್ಮಿತಾ ಜೈನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.