ಸಂಬಂಧಗಳನ್ನು ಉಳಿಸುವ ಮೌನ
Team Udayavani, Jul 8, 2019, 5:55 AM IST
ಮೌನ ಅದೊಂದು ಸುಂದರ ಭಾವ. ಅದರ ಸುಂದರತೆ ಅದೆಷ್ಟೋ ಜನರಿಗೆ ತಿಳಿದಿಲ್ಲ. ಮಾತಿನಲ್ಲೇ ಎಲ್ಲವನ್ನು ಜಯಿಸಬಹುದು ಎಂಬ ಅಹಂಕಾರ ಬಹಳಷ್ಟು ವ್ಯಕ್ತಿಗಳಲ್ಲಿರುತ್ತೆ. ಆದರೆ ಅದೇ ಮಾತು ಅದೆಷ್ಟೋ ಮನೆ, ಮನಗಳನ್ನು ಒಡೆದು ಹಾಕುತ್ತವೆ. ಸಂಬಂಧಗಳ ನಡುವೆ ಬಿರುಕು ಬೀಳುವುದೇ ಮಾತುಗಳ ಭರಾಟೆಯಲ್ಲಿ. ಸಂಬಂಧಗಳ ವಿಷಯದಲ್ಲಿ ಮೌನದ ಪ್ರಾತ ಬಹುದೊಡ್ಡದು. ಸಂಬಂಧಗಳ ಬಾಳಿಕೆಗೆ ಅಲ್ಲಿ ಮೌನ ಸಂದೇಶಗಳು ರವಾನೆಯಾಗುತ್ತಿರುಬೇಕು. ಸಂಬಂಧಗಳಲ್ಲಿ ಮೌನ ಹೇಗೆ ಮಹತ್ತರ ಪಾತ್ರವಹಿಸುತ್ತದೆ ಎಂಬುದನ್ನು ದೃಷ್ಠಾಂತದೊಂದಿಗೆ ವಿವರಿಸುತ್ತೇನೆ ಓದಿ.
ಒಂದು ಊರಿನಲ್ಲಿ ಇಬ್ಬರು ಆತ್ಮೀಯ ಸ್ನೇಹಿತರು. ಎಲ್ಲ ಕೆಲಸಗಳನ್ನು ಜತೆಯಾಗಿ ಮಾಡುತ್ತಿದ್ದರು. ಇವರಿಬ್ಬರ ಸ್ನೇಹವನ್ನು ನೋಡಿ ಊರಿನ ಜನತೆ ಹೆಮ್ಮೆಪಡುತ್ತಿದ್ದರು. ಆದರೆ ಕೆಲವರು ಹೊಟ್ಟೆಯುರಿ ಪಡುತ್ತಿದ್ದರು. ಆ ಆತ್ಮೀಯ ಸ್ನೇಹಿತರ ನಡುವೆ ಅದೆಷ್ಟೋ ಜನರು ಹುಳಿ ಹಿಂಡಲು ಯತ್ನಿಸಿದರೂ ಅವರನ್ನು ಬೇರ್ಪಡಿಸಲು ಸಾಧ್ಯವಾಗುತ್ತಿರಲ್ಲ. ಇವರಿಬ್ಬರ ನಡುವೆ ಯಾವುದೇ ಮನಸ್ತಾಪ ಗಳಿರಲಿಲ್ಲ. ಏನೇ ಕೆಲಸಗಳಿದ್ದರೂ ಇಬ್ಬರಲ್ಲಿದ್ದ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಗುಣ ಎಲ್ಲ ಕೆಲಸಗಳನ್ನು ಸುಗಮಗೊಳಿಸುತ್ತಿತ್ತು. ಅವರಿಬ್ಬರ ಆಲೋಚನಾ ಲಹರಿ ಸಮವಾಗಿದ್ದ ಕಾರಣ ಅಲ್ಲಿ ದೊಡ್ಡ ಪ್ರಮಾಣದ ಮನಸ್ತಾಪ, ಕೋಪ, ಸಿಟ್ಟಿಗೆ ಅವಕಾಶವಿರಲಿಲ್ಲ.
ಇವರಿಬ್ಬರ ನಡುವೆ ಯಾಕೆ ಮನಸ್ತಾಪಗಳಾಗುತ್ತಿರಲಿಲ್ಲ ಎಂಬುದಕ್ಕೆ ಒಂದು ಕಾರಣವಿದೆ. ಇವರಿಬ್ಬರು ಪರಿಚಿತರಾಗಿ ಸ್ನೇಹ ಮೂಡಿ ಆತ್ಮೀಯರು ಎಂದೆನಿಸಿಕೊಂಡ ಇವರಿಬ್ಬರ ನಡುವೆ ಒಂದು ಒಪ್ಪಂದವಾಗಿತ್ತು. ಒಂದು ವೇಳೆ ಯಾವುದೇ ಸಂದರ್ಭದಲ್ಲಿ ಯಾರಾದರೊಬ್ಬರು ಕೋಪಗೊಂಡುಯಾವುದೇ ಕಾರಣಕ್ಕೂ ಮಾತಿಗೆ ಮಾತು ಬೆಳೆಸದಿರುವುದು. ಹೀಗಾಗಿ ಸಣ್ಣ ಪುಟ್ಟ ಮನಸ್ತಾಪಗಳು ಬಂದಾಗ ಅವರಿಬ್ಬರು ಅದರ ಬಗ್ಗೆ ಚರ್ಚೆಸದೇ ಕೊಂಚ ಹೊತ್ತು ತಮ್ಮ ಪಾಡಿಗಿದ್ದು ಬಿಡುತ್ತಿದ್ದರು. ಆಗ ಅಲ್ಲಿ ಮನಸ್ತಾಪಕ್ಕೆ ತಾರಕಕ್ಕೇರುವ ಪ್ರಮೇಯವೇ ಇರಲಿಲ್ಲ. ಇಬ್ಬರ ಕೋಪ ತಣ್ಣಗಾದಾಗ ಪರಸ್ಪರ ಮಾತುಕತೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಮನಸ್ತಾಪದ ವಿಷಯವನ್ನು ಮತ್ತೆ ಚರ್ಚಿಸುತ್ತಲೇ ಇರಲಿಲ್ಲ. ಅದನ್ನು ಅಲ್ಲೇ ಬಿಟ್ಟು ಮುಂದಿನ ಯೋಜನೆಯ ಬಗ್ಗೆ ಕಾರ್ಯಗತಗೊಳ್ಳುತ್ತಿದ್ದರು. ಇದು ಅವರ ನಡುವಿನ ಒಪ್ಪಂದ.
ಇವರಿಬ್ಬರ ಈ ಒಪ್ಪಂದಕ್ಕೆ ಪೂರಕವಾಗಿದ್ದು ಮೌನ ಎಂಬ ಮುತ್ತು. ಒಂದು ವೇಳೆ ಮನಸ್ತಾಪದ ಸಂದರ್ಭದಲ್ಲಿ ಇಬ್ಬರು ಮೌನ ತಾಳದೇ ಮಾತಿಗೆ ಮಾತು ಬೆಳದು ಜಗಳ ಮಾಡಿಕೊಳ್ಳುತ್ತಿದ್ದರೆ ಸುಂದರವಾದ ಸ್ನೇಹದಲ್ಲಿ ಬಿರುಕು ಬೀಳುವ ಸಾಧ್ಯತೆಗಳು ದಟ್ಟವಾಗಿತ್ತು. ಅದು ಅವರು ಮಾಡದೇ ಇದ್ದ ತಪ್ಪು. ಏನೋ ಸಮಸ್ಯೆ ಯಾಗಿದೆ ಎಂದಾ ದಾಗ ಇಬ್ಬರ ಆ ಸಮಸ್ಯೆ ಗಳ ಬಗ್ಗೆ ಮಾತು ಮುಂದು ವರಿಸದೆ ಮೌನಕ್ಕೆ ಶರಣಾದಾಗ ಅಲ್ಲಿ ಸಂಬಂಧದ ಬೇರು ತುಂಡಾಗದೇ ಇನ್ನಷ್ಟು ಬಲಿಷ್ಠವಾ ಗತೊಡಗಿತು. ಅದಕ್ಕೆ ಮೌನಕ್ಕೆ ಹೆಚ್ಚಿನ ಮೌಲ್ಯವಿದೆ ಎಂದು ಹೇಳು ವುದು. ಈ ಮೌನ ಎಲ್ಲ ಸಂಬಂಧ ಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
•ರಮ್ಯಾ ಕೆದಿಲಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.