ಪಾರ್ಕ್‌ ಗಳಲ್ಲಿ ನಿರ್ಮಾಣವಾಗಲಿ “ಸ್ಟ್ರೇಂಜರ್‌ ಎಕ್ಸೇಂಜ್‌’


Team Udayavani, Jul 28, 2019, 5:37 AM IST

q-21

ನಗರವಾಸಿಗಳು ತಮ್ಮ ಯಾಂತ್ರಿಕ ಜೀವನದಿಂದ ಹೊರಬರಲು, ಮನಸ್ಸಿನ ವಿಶ್ರಾಂತಿಗಾಗಿ ಸದ್ದು ಗದ್ದಲವಿಲ್ಲದ ಪ್ರಶಾಂತ ಸ್ಥಳವನ್ನು ಆಯ್ಕೆ ಮಾಡುತ್ತಾರೆ. ಸಾಮಾನ್ಯವಾಗಿ ನಗರ ಜೀವನಕ್ಕೆ ಒಗ್ಗಿಕೊಂಡವರು ಪಾರ್ಕ್‌ಗಳನ್ನು ತುಂಬಾ ನೆಚ್ಚಿಕೊಂಡಿರುತ್ತಾರೆ. ಪಾರ್ಕ್‌ ಕೂಡ ಅಷ್ಟೇ ವಿಶ್ರಾಂತಿ ಎಂದು ಬರುವ ಜನರಿಗೆ ಪ್ರಶಾಂತ ವಾತಾವರಣವನ್ನು ಕಲ್ಪಿಸುತ್ತದೆ. ಪಾರ್ಕ್‌ಗಳನ್ನೂ ಕೂಡ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಪಡಿಸಿ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತದೆ.

ಇದರಂತೆ ಜಾನ್‌ ವಿಲ್ಸನ್‌ ಬೋಸ್ಟನ್‌ ರಸ್ತೆ ಪ್ರವಾಸ ಕೈಗೊಂಡಾಗ ಚಿಕಾಗೋದಲ್ಲಿ ಪಾರ್ಕ್‌ಗೆ ಬರುವ ಜನರಿಗೆ ಹೊಸತನ್ನು ಕೊಡಲು ನಿರ್ಧರಿಸುತ್ತಾರೆ ಹಾಗೂ ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ ಕೂಡ. ಡ್ರಾಪ್‌ ಬಾಕ್ಸ್‌ ಅನ್ನು ಕಂಡ ಅವರು ಅದನ್ನು ವಿನೂತನವಾಗಿ “ಸ್ಟ್ರೇಂಜರ್‌ ಎಕ್ಸೇಂಜ್‌’ ಎಂದು ಹೆಸರಿಸಿ ನೂತನ ಪ್ರಯೋಗವನ್ನು ಮಾಡಿದ್ದಾರೆ. ಹೆಸರೇ ಹೇಳುವಂತೆ ಇದು ಪರಿಚಯಿಲ್ಲದವರೊಂದಿಗಿನ ಸಂವಹನ. ಇಲ್ಲಿ ವಸ್ತುಗಳು ವಿನಿಮಯವಾಗಬಹುದು ಹಾಗೂ ಸ್ನೇಹ ಸಂಬಂಧಗಳು ಬೆಳೆಯಬಹುದು. ನಮಗೆ ಅಗತ್ಯವಿಲ್ಲದ ಹಾಗೂ ಇನ್ನೊಬ್ಬರಿಗೆ ಅಗತ್ಯವಿರುವ ವಸ್ತುಗಳನ್ನು ಉಚಿತವಾಗಿ ಒಂದು ಕಡೆ ಇಡುವುದೇ ಈ ‘ಸ್ಟ್ರೇಂಜರ್ ಎಕ್ಸೇಂಜ್‌’ ನ ಉಪಯೋಗ.

ಸ್ಟ್ರೇಂಜರ್‌ ಎಕ್ಸೇಂಜ್‌
ಈ ಮೊದಲು ಇದೇ ರೀತಿಯ ಒಂದು ಬುಕ್‌ ಬಾಕ್ಸ್‌ ಅನ್ನು ಪರಿಚಯಿಸಿದ್ದೇವೆ. ಆದರೆ ಈ ಸ್ಟ್ರೇಂಜರ್‌ ಎಕ್ಸೇಂಜ್‌ ಅದಕ್ಕಿಂತ ಸ್ವಲ್ಪ ವಿಭಿನ್ನ. ಇದರಲ್ಲಿ ಉಪಯೋಗಿಸಬಹುದಾದ ವಸ್ತುಗಳನ್ನು ಉಚಿತವಾಗಿ ಅಪರಿಚಿತರಿಗೆ ಅಂದರೆ ಅದರ ಅಗತ್ಯ ಇರುವವರಿಗೆ ಕೊಡುವುದಾಗಿದೆ. ಅದು ನೇರವಾಗಿ ಕೊಡುವುದಲ್ಲ . ಪಾರ್ಕ್‌ನ ಕೆಲವು ಕಡೆ ಇರುವಂತಹ ಸ್ಟ್ರೇಂಜರ್‌ ಬಾಕ್ಸ್‌ ನೊಳಗೆ ವಸ್ತುಗಳನ್ನು ಹಾಕಬಹುದು. ಆ ಪಾರ್ಕ್‌ ಗೆ ಬರುವ ಅಪರಿಚಿತ ವ್ಯಕ್ತಿ ಅದರಲ್ಲಿನ ವಸ್ತುಗಳನ್ನು ತೆಗೆಯಬಹುದಾಗಿದೆ. ಕೊಟ್ಟ ವ್ಯಕ್ತಿಯ ಹೆಸರು ಮತ್ತು ಸಂಪರ್ಕ ಸಾಧಿಸುವುದಾದರೆ ಸ್ಟ್ರೇಂಜರ್‌ ಎಕ್ಸೇಂಜ್‌ನ ವೆಬ್‌ ಸೈಟ್‌ಗಳು ಇಲ್ಲಿವೆ . ಇದರಲ್ಲಿ ಸಿನೆಮಾ ಡಿ.ವಿಡಿ ಗಳು. ಪುಸ್ತಕಗಳು, ಚಿತ್ರಗಳು, ಕಲಾಕೃತಿಗಳು ಕಾಣ ಸಿಗುತ್ತವೆ. ನಮ್ಮಲ್ಲಿರುವ ಉತ್ತಮವಾದುದನ್ನು ಹಂಚಿಕೊಂಡು ಅದರಲ್ಲಿ ಖುಷಿಪಡುವವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ ಮತ್ತು ಬೇರೆಯವರಿಗೂ ಇಂತಹ ಸಂಹ‌ನ ಉತ್ತಮ ಸಂದೇಶವಾಗಿದೆ.

ಮಂಗಳೂರಿಗೂ ಬರಲಿ
ವಿದೇಶದಲ್ಲಿನ ಈ ಹೊಸ ಹೊಸ ವಿನೂತನ ಆಲೋಚನೆಗಳನ್ನು ನಮ್ಮಲ್ಲಿಯೂ ಅಳವಡಿಸಬಹುದು. ಖರ್ಚು, ವೆಚ್ಚವಿಲ್ಲದೆ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಂಗಳೂರನ್ನು ನೋಡಲು ಬರುವವರಿಗೆ ವಾವ್‌ ಅನ್ನಿಸುವಂತಹ ಉದ್ಘಾರಗಳು ನಮ್ಮಲ್ಲಿ ನಿರ್ಮಾಣವಾಗಬೇಕಿದೆ. ಈ ಸ್ಟ್ರೇಂಜರ್‌ ಬಾಕ್ಸ್‌ ಅನ್ನು ಮಂಗಳೂರಿನ ಕದ್ರಿ ಪಾರ್ಕ್‌, ತಣ್ಣೀರು ಬಾವಿಯಲ್ಲಿ ಟ್ರೀ ಪಾರ್ಕ್‌, ಬಾವುಟಗುಡ್ಡೆಯಲ್ಲಿನ ಠಾಗೋರ್‌ ಪಾರ್ಕ್‌ ಮೊದಲಾದವುಗಳಲ್ಲಿ ಇಂತಹ ಸ್ಟ್ರೇಂಜರ್‌ ಎಕ್ಸೇಂಜ್‌ಗಳನ್ನು ಪಾರ್ಕ್‌ಗಳಲ್ಲಿ ನಿರ್ಮಿಸಬಹುದಾಗಿದೆ.

•ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.