ಸಾಧನೆಗಾಗಿ ನಮ್ಮಲ್ಲೇ ಇವೆ ಹಲವು ಅಸ್ತ್ರಗಳು
Team Udayavani, Aug 20, 2018, 3:11 PM IST
ಜೀವನದಲ್ಲಿ ಯಶಸ್ಸುಗಳಿಸಬೇಕು ಎನ್ನುವುದು ಪ್ರತಿಯೊಬ್ಬರ ನಾಡಿಯಲ್ಲಿನ ತುಡಿತವೇ ಆಗಿರುತ್ತದೆ. ಆ ಕನಸನ್ನು ನೆರವೇರಿಸುವ ಪಥದಲ್ಲಿ ಅನೇಕ ಅಡಚಣೆಗಳು ಎದುರಾಗುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಿದರೆ ಮಾತ್ರ ಗೆಲುವಿನ ಸನಿಹ ತಲುಪಲು ಸಾಧ್ಯ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಸಾಕಷ್ಟು ಬಾರಿ ನಾವು ನಮ್ಮ ಗುಣಗಳಿಂದಾಗಿಯೇ ಉನ್ನತಿಯಿಂದ ವಂಚಿತರಾಗುತ್ತಿದ್ದೇವೆ. ಈ ಕಾರಣದಿಂದಾಗಿ ಗೆಲುವೆಂಬುದು ನಮ್ಮಿಂದ ಸ್ವಲ್ಪ ದೂರವಾಗಿಯೇ ಉಳಿಯುತ್ತದೆ. ಜೀವನದ ಸವಾಲುಗಳನ್ನು ಸುಲಭವಾಗಿ ಎದುರಿಸಿದರೆ ಜೀವನದಲ್ಲಿ ಬಯಸಿದ ಘಟ್ಟವನ್ನು ತಲುಪಬಹುದು.
ಸ್ವಂತಿಕೆಯನ್ನು ಪಾಲಿಸಿ ಬೇರೆಯವರು ಹೇಳುವ ಮಾತಿಗಿಂತ ನಮ್ಮ ನಿರ್ಧಾರವೇ ಗಟ್ಟಿಯಾಗಿರಬೇಕು. ಇತರರು ಮಂಡಿಸುವ ಅಭಿಪ್ರಾಯಕ್ಕೆ ಬೆಲೆ ಕೊಡಬೇಕು. ಆದರೆ ನಿಮ್ಮ ಗುರಿ ಮುಟ್ಟಲು ಏನು ಮಾಡಬೇಕು ಎಂಬುದನ್ನು ನೀವೇ ಇನ್ನೊಬ್ಬರಿಗಿಂತ ಚೆನ್ನಾಗಿ ಬಲ್ಲವರಾಗಿದ್ದೇವೆ. ಆದ್ದರಿಂದ ನಿಮ್ಮ ನಿರ್ಧಾರದಂತೆ ನಡೆಯುವ ಧೈರ್ಯ ತೋರಿಸಬೇಕು.
ಹೃದಯದ ಮಾತು ಅರಿಯೋಣ
ಬೇರೆಯವರ ಮಾತು ನಮ್ಮನ್ನು ತುಂಬಾ ಪ್ರಭಾವಿಸುತ್ತದೆ. ಆದರೆ ಬೇರೆಯವರ ಮಾತುಗಳಿಗಿಂತ ನಿಮ್ಮ ಹೃದಯದ ಮಾತುಗಳನ್ನು ಕೇಳಿ. ಅದರಂತೆ ನಡೆದುಕೊಳ್ಳಿ.
ಸೋಲು ಒಳ್ಳೆಯದೇ
ಸೋಲಿನ ಕಹಿ ಗೊತ್ತಿರದಿದ್ದರೆ ಗೆಲುವಿನ ಸಿಹಿ ತಿಳಿಯುವುದಾದರೂ ಹೇಗೆ? ಜಯ ಗಳಿಸಬೇಕೆಂದರೆ ಸೋಲನ್ನು ಸವಾಲಾಗಿ ತೆಗೆದುಕೊಳ್ಳಬೇಕು. ಸೋಲು ನಮ್ಮನ್ನು ಅತಂತ್ರನಾಗಿ ಮಾಡಬಹುದು, ಆದರೆ ಮಾನಸಿಕ ಧೈರ್ಯ ತೆಗೆದುಕೊಳ್ಳಬೇಕು. ಸೋಲಿನಿಂದ ಪಾಠ ಕಲಿಯುವವ ಜೀವನದಲ್ಲಿ ಗೆಲುವಿನ ಮೆಟ್ಟಿಲನ್ನು ಬಹು ಬೇಗನೆ ತಲುಪುತ್ತಾನೆ.
ಸೋಮಾರಿತನ
ಬೇರೆಯೆಲ್ಲ ಶತ್ರುವಿಗಿಂತ ಸೋಮರಿತನ ದೊಡ್ಡ ಶತ್ರು. ಗುರಿ ಮುಟ್ಟುತ್ತೇನೆ ಎಂಬ ಛಲ ಇರಬೇಕು. ಈ ಗುಣಗಳನ್ನು ಮೈಗೂಡಿಸಿಕೊಂಡರೆ ಜಯ ನಿಮ್ಮದಾಗಿರುತ್ತದೆ.
ವೈಯಕ್ತಿಕವಾಗಿ ತಗೋಬಾರದು
ಮನಸ್ಸಿಗೆ ನೋವಾಗುವ ಹಾಗೆ ಏನಾದರೂ ಕಮೆಂಟುಗಳು, ಅಥವಾ ಮಾತುಗಳು ಬಂದರೆ ಅದನ್ನು ತುಂಬಾ ವೈಯಕ್ತಿಕವಾಗಿ ಸ್ವೀಕರಿಸಬಾರದು. ಏಕೆಂದರೆ ಅದರ ಬಗ್ಗೆ ಯೋಚನೆ ಮಾಡಿದಷ್ಟು ಮನಸ್ಸಿನ ನೆಮ್ಮದಿ ಹಾಳಾಗುವುದು. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟು ಕೆಲಸದ ಕಡೆ ಗಮನ ಕೊಡಬೇಕು.
ಆತ್ಮವಿಶ್ವಾಸ ಕಳೆದುಕೊಳ್ಳಬಾರದು
ಕೆಲವೊಮ್ಮೆ ಬೇರೆಯವರು ಟೀಕೆ ಮಾಡಿದರೆ ಅದು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿ ಬಿಡುತ್ತದೆ. ನಿಮ್ಮ ಸಾಮರ್ಥ್ಯ ಬೇರೆಯವರಿಗಿಂತ ನಿಮಗೆ ಗೊತ್ತಿರುತ್ತದೆ.
ಕೋಪ ನಿಯಂತ್ರಣದಲ್ಲಿರಲಿ
ಕೋಪ ಮಾಡಿಕೊಂಡಷ್ಟು ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ. ಆದ್ದರಿಂದ ತತ್‌ಕ್ಷಣವೇ ಪ್ರತಿಕ್ರಿಯೆ ನೀಡದೆ ಸಾವಧಾನವಾಗಿರಿ. ನಿಮ್ಮ ಕೆಲಸದತ್ತ ಗಮನ ಹರಿಸಿ. ಟೀಕೆಗೆ ಹೆದರಿಕೊಂಡರೆ ಆತ್ಮವಿಶ್ವಾಸ ಕಳೆದುಕೊಂಡು ನಮ್ಮ ಜೀವನ ನಾವೇ ಹಾಳು ಮಾಡುಕೊಳ್ಳುವುದು ಸಮಂಜಸವಾದ ನಡೆಯಲ್ಲ.
ಟೀಕೆಗೆ ಹೆದರಿದರೆ ಜೀವನದಲ್ಲಿ ಸೋಲು
ನಮ್ಮನ್ನು ಹೊಗಳುವವರು ಇರುವ ಹಾಗೇ ನಮ್ಮ ಏಳಿಗೆಯನ್ನು ಸಹಿಸದವರು ಜತೆಗೆ ಇರುತ್ತಾರೆ. ನಮಗೆ ಜೀವನದಲ್ಲಿ ಜಿಗುಪ್ಸೆ ಬರುವ ರೀತಿ ಮಾಡಿ ಬಿಡುತ್ತಾರೆ. ಆದರೆ ಅವರೆಲ್ಲ ಅ ರೀತಿ ವರ್ತಿಸುತ್ತಾರೆ ಎಂದು ತಾಳ್ಮೆ ಕಳೆದುಕೊಂಡರೆ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗುತ್ತದೆ. ಇದ್ದ ಮಾನಸಿಕ ನೆಮ್ಮದಿ ಕೂಡ ಹಾಳಾಗುತ್ತೆ
ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.