ವ್ಯಾನಿಟಿ ಬ್ಯಾಗ್ ಖರೀದಿಸುವ ಮುನ್ನ ತಿಳಿದಿರಬೇಕಾದ ಸಂಗತಿಗಳು
ಲಲನೆಯರ ಆಪ್ತಸಂಗಾತಿ
Team Udayavani, Feb 7, 2020, 4:48 AM IST
ಮಹಿಳೆಯರ ಆಪ್ತ ಸಂಗಾತಿಯಾದ ವ್ಯಾನಿಟಿ ಬ್ಯಾಗ್ ಎಲ್ಲರಿಗೂ ಇಷ್ಟವಾದದ್ದೇ. ಅವರ ಜಂಬದ ಚೀಲವೆಂದೇ ಖ್ಯಾತಿಪಡೆದ ಬ್ಯಾಗ್ ಅದು. ಆಕೆ ಎಲ್ಲಿಗೇ ಹೋಗಲಿ ಅವಳ ಹೆಗಲೇರಿ ಕುಳಿತು ಬಿಡುತ್ತದೆ.
ದಿನನಿತ್ಯದ ಬಳಕೆಗೆ ಬೇಕಾಗುವ ಕೈಚೀಲಗಳಿಂದ ಹಿಡಿದು ಮದುವೆ ಮನೆಯಲ್ಲಿ ಲಲನೆಯರ ಕೈಯಲ್ಲಿ ಝಗಮಗಿಸುವ ತರಹೇವಾರಿ ಬ್ಯಾಗ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ತಮ್ಮ ಬೇಕು ಬೇಡ ಎಲ್ಲವನ್ನೂ ವ್ಯಾನಿಟಿ ಬ್ಯಾಗಿನೊಳಗೆ ತುಂಬಿಕೊಳ್ಳುವ ಹೆಂಗಳೆಯರಿಗೆ ಸೂಕ್ತ ಎನ್ನಿಸುವ ವಿಭಿನ್ನ ಶೈಲಿಯ ಬ್ಯಾಗ್‌ಗಳ ಮಾಹಿತಿ ಸೇರಿದಂತೆ ವ್ಯಾನಿಟಿ ಬ್ಯಾಗ್ ಖರೀದಿ ಮಾಡುವಾಗ ಗಮನಿಸಬೇಕಾದ ಅಂಶಗಳು ಬಹಳಷ್ಟಿವೆ.
ಶೋಲ್ಡರ್ ವ್ಯಾನಿಟಿ ಬ್ಯಾಗ್
ಒಂದು ಕಡೆ ಭುಜಕ್ಕೆ ನೇತು ಹಾಕಿಕೊಳ್ಳಬಹು ದಾದ ಈ ಬ್ಯಾಗ್ ಒಂದು ದಿನದ ತಿರುಗಾಟಕ್ಕೆ ಸೂಕ್ತವಾಗಿದ್ದು, ಅಗತ್ಯವೆನ್ನಿಸುವ ವಸ್ತುಗಳನ್ನು ಜೋಡಿಸಿಟ್ಟುಕೊಳ್ಳಬಹುದು. ಜತೆಗೆ ನಿತ್ಯ ಬಳಕೆಗೂ ಈ ಬ್ಯಾಗ್ ಸೂಟ್ ಆಗಲಿದ್ದು, ಜೀನ್ಸ್, ಕುರ್ತಾ ಟಾಪ್ ಡ್ರೆಸ್‌ಗಳಿಗೆ ಹಾಕಿಕೊಂಡರೆ ಚೆನ್ನಾಗಿ ಒಪ್ಪುತ್ತದೆ.
ಸ್ಲಿಂಗ್ ಬ್ಯಾಗ್‌ಗಳು
ಇತ್ತೀಚೆಗೆ ದೊಡ್ಡದೊಡ್ಡ ವ್ಯಾನಿಟಿ ಬ್ಯಾಗ್‌ಗಳ ಸ್ಥಾನವನ್ನು ಪುಟ್ಟದಾಗಿ ನೋಡಲು ಮುದ್ದುಮುದ್ದಾಗಿರುವ ಸ್ಲಿಂಗ್ ಬ್ಯಾಗ್‌ಗಳು ಆವರಿಸಿವೆ. ಕೈಗೆ ಭಾರವಾಗಿ ಜೋತುಬೀಳದ, ಕಂಡಕ್ಟರ್ ಶೈಲಿಯಲ್ಲಿ ಕ್ರಾಸ್ ಆಗಿ ನೇತು ಹಾಕಿಕೊಳ್ಳಬಹುದಾದ ಈ ಬ್ಯಾಗ್‌ಗಳು ಕಾಲೇಜು ಯುವತಿಯರಿಂದ ಹಿಡಿದು ಗೃಹಿಣಿಯರ ತನಕ ಮೆಚ್ಚುಗೆಗೆ ಪಾತ್ರವಾಗಿವೆ. ಮೊಬೈಲ್, ವಾಹನ ಕೀ ಚೈನ್‌ಗಳು ಸಹಿತ ಹಲವಾರು ಸಣ್ಣಪುಟ್ಟ ವಸ್ತುಗಳನ್ನು ಇಡಬಹುದಾಗಿದ್ದು, ಇದರಲ್ಲಿ ಹತ್ತಾರು ಸಣ್ಣ ಪ್ಯಾಕೇಟ್‌ಗಳಿರುತ್ತವೆ. ಜೀನ್ಸ್, ಫಾರ್ಮಲ್, ಚೂಡಿದಾರ್, ಜುಬ್ಟಾ, ಸೀರೆ, ಲೆಹಂಗಾ ಹೀಗೆ ಯಾವ ಉಡುಪಿಗೂ ಈ ಸ್ಲಿಂಗ್ ಬ್ಯಾಗ್‌ಗಳು ಹೊಂದುತ್ತವೆ.
ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಬಹಳ ಸುದ್ದಿ ಮಾಡುತ್ತಿರುವ ಟ್ರೆಂಡ್ ಎಂದರೆ ಮೈಕ್ರೋಬ್ಯಾಗ್ ಮತ್ತು ಮೈಕ್ರೋಪರ್ಸ್. ಕ್ಲಚ್‌ಗಿಂತ ದೊಡ್ಡದಾದ ಮತ್ತು ಹ್ಯಾಂಡ್ ಬ್ಯಾಗ್‌ಗಿಂತ ಚಿಕ್ಕದಾದ ಈ ಮೈಕ್ರೋ ಬ್ಯಾಗ್ ಅನ್ನು ಕ್ಲಚ್ ಅಂತೆಯೇ ಅಂಗೈಯಲ್ಲಿ ಹಿಡಿದುಕೊಂಡು ಹೋಗಬಹುದು. ಅಥವಾ ಉದ್ದನೆಯ ಸ್ಟ್ರಾಪ್ ಬಳಸಿ, ಶೋಲ್ಡರ್ ರಿಂಗ್‌ನಂತೆಯೂ ನೇತಾಡಿಸಿಕೊಂಡು ಹೋಗಬಹುದು. ಈ ಚಿಕ್ಕದಾದ ಪರ್ಸ್‌ನಲ್ಲಿ ಮೊಬೈಲ್ ಫೋನ್, ಮನೆ ಅಥವಾ ಗಾಡಿ ಕೀ ಇಡಬಹುದಾಗಿದ್ದು, ಆಗಾಗ ಟಚ್‌ಆಪ್ ಮಾಡ ಬಯಸುವ ಹೆಂಗಳೆಯರು ಮೇಕಪ್ ಐಟಂಗಳಾದ ಲಿಪ್ಸ್‌ಟ್ಟಿಕ್, ಕಣಪ್ಪು, ನೈಲ್ ಪಾಲಿಶ್ ಅಥವಾ ಚಿಕ್ಕ ಪರ್ಫ್ಯೂಮ್ ಅನ್ನು ಇಟ್ಟುಕೊಳ್ಳಬಹುದು.
ಬ್ಯಾಗ್‌ಗಳನ್ನು ಖರೀದಿ ಮಾಡುವಾಗ ಪಾಲಿಸ ಬೇಕಾದ ಅಗತ್ಯ ಟಿಪ್ಸ್
– ನಿಮಗೆ ಹೊಂದುವ ವ್ಯಾನಿಟಿ ಬ್ಯಾಗ್‌ಗಳನ್ನು ಖರೀದಿಸಿ. ಬ್ಯಾಗ್‌ನ ಗಾತ್ರ, ಬಣ್ಣ, ಆಕಾರ ನಿಮ್ಮ ಸೌಂದರ್ಯಕ್ಕೆ ಸಾಥ್ ನೀಡುತ್ತದೆಯೇ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
– ಬ್ಯಾಗ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಕನ್ನಡಿ ಮುಂದೆ ನಿಂತು, ಬ್ಯಾಗುಗಳನ್ನು ಹೆಗಲಿಗೇರಿಸಿ ನೋಡಿ. ನಿಮಗೆ ಖುಷಿ ಎನಿಸಿದರೆ ಖರೀದಿಸಿ.
– ಬ್ಯಾಗ್‌ಗಳನ್ನು ಖರೀದಿಸುವಾಗ ಪಾಕೆಟ್, ಜಿಪ್ ಸರಿಯಿದೆಯೇ
ಎಂದು ಪರೀಕ್ಷಿಸಿ ಖರೀದಿಸಿ.
– ಕಚೇರಿಗೇ ಇರಲಿ, ಪಾರ್ಟಿ, ಸಮಾರಂಭಗಳಿಗೆಂದೇ ಸಿದ್ಧಪಡಿಸಿದ ಬ್ಯಾಗ್‌ಗಳಿವೆ. ಸಂದರ್ಭಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಿ.
– ಬ್ರಾಂಡೆಡ್ ಬ್ಯಾಗ್‌ಗಳನ್ನೆ ಖರೀದಿಸಿ. ಹೆಚ್ಚು ಕಾಲ ಬಾಳಿಕೆ ಬರುತ್ತವೆ.
– ಧರಿಸುವ ಉಡುಗೆಗೆ ಅನುಗುಣವಾಗಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.