ಹೀಗಿರಲಿ ನಿಮ್ಮ ಮನೆಯ ಅಡುಗೆ ಕೋಣೆ
Team Udayavani, Feb 8, 2020, 5:46 AM IST
ಮನೆಯಲ್ಲಿ ಮೊದಲ ಪ್ರಾಶಸ್ತ್ಯ ಇರೋದು ಅಡುಗೆ ಮನೆಗೆ. ಸುಂದರವಾದ ಮನೆಗೆ ನಿರ್ಮಿಸುವಾಗ ನಾವು ಹೆಚ್ಚು ಅಡುಗೆ ಆದ್ಯತೆ ನೀಡುತ್ತೇವೆ. ಮನೆಯಲ್ಲಿ ಹೆಚ್ಚಿನ ಕೆಲಸ ಅಡುಗೆ ಮನೆಯಲ್ಲೇ ಆಗುವುದರಿಂದ ನಾವು ಅಡುಗೆ ಮನೆಯ ಸ್ವತ್ಛತೆಗೆ ಹೆಚ್ಚಿನ ಗಮನನೀಡಬೇಕಾಗುತ್ತದೆ. ಅಡುಗೆ ಮನೆಯೊಂದು ಸ್ವತ್ಛವಾಗಿದ್ದರೆ ನಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ನೀವು ಅಡುಗೆ ಮನೆಯ ಕಾಳಜಿ ಹೇಗೆ ವಹಿಸಬೇಕು. ಹೀಗಾಗಿ ಕೆಲವೊಂದು ಗಮನಹರಿಸಬೇಕಾದ ಅಂಶಗಳು ಕೂಡ ಇಲ್ಲಿವೆ.
ವಸ್ತುಗಳನ್ನು ಕನಿಷ್ಠವಾಗಿಡಿ
ಅಡುಗೆ ಕೋಣೆಯ ವಸ್ತುಗಳು, ಪಾತ್ರೆಗಳು ಇತ್ಯಾದಿ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಸುವ್ಯವಸ್ಥಿತವಾಗಿ ಇಡಬೇಕು. ಒಂದು ವೇಳೆ ಸುವ್ಯವಸ್ಥಿತವಾಗಿ ಇಡದಿದ್ದರೇ ಅದು ಅಡುಗೆ ಕೋಣೆಯ ಅಂದವನ್ನು ಕೆಡಿಸುತ್ತದೆ. ಇದಕ್ಕಾಗಿ ನೀವು ಈ ಎಲ್ಲ ವಸ್ತುಗಳನ್ನು ಇಡಲು ಒಂದು ಬೀರುವನ್ನು ಇಟ್ಟುಕೊಳ್ಳುವುದು ಉತ್ತಮ. ನಿಮಗೆ ದಿನನಿತ್ಯಕ್ಕೆ ಬಳಸುವ ಅಗತ್ಯವಿರುವ ಪಾತ್ರೆಗಳು ಬೇಕಾದರೆ ನೀವು ಒಂದು ಕೌಂಟರ್‌ವೊಂದನ್ನು ನಿರ್ಮಿಸಿ ಅಲ್ಲಿ ಇಟ್ಟುಕೊಳ್ಳಿ. ಏಕೆಂದರೆ ನಿಮ್ಮ ಬೀರುಗಳಲ್ಲಿ ದಿನಾ ಪಾತ್ರೆ ತೆಗೆದುಕೊಳ್ಳಲು ಕಷ್ಟವಾಗಬಹುದು.
ಸಿಂಕ್‌ನಿಂದಲೇ ನೀರನ್ನು ಬಿಡಿ
ನೀವು ಅಡುಗೆ ಮಾಡುವಾಗ ಸಿಂಕ್‌ನಲ್ಲಿ ತರಕಾರಿ, ಇನ್ನಿತರ ವಸ್ತಗಳನ್ನು ತೊಳೆಯುತ್ತೀರಿ. ಆಗ ಸಿಂಕ್‌ನಲ್ಲಿ ಎಣ್ಣೆ ಜಿಡ್ಡಿನಂಶ ಉಳಿದಿರುತ್ತದೆ. ಹಾಗಾಗಿ ನೀವು ಸಿಂಕ್‌ನಲ್ಲಿ ಯಾವುದೇ ವಸ್ತುವನ್ನು ತೊಳೆದರೂ ಸ್ವಲ್ಪ ಹೊತ್ತು ಸಿಂಕ್ ಆನ್‌ನಲ್ಲಿ ಇಡಿ. ಇದರಿಂದ ಬೇಸಿನ್‌ಗೆ ಅಂಟಿಕೊಂಡಿರುವ ಜಿಡ್ಡಿನಾಂಶ ಹೋಗಲಾಡಿಸಲು ಸುಲಭವಾಗುತ್ತದೆ.
ಮನೆಗೆಲಸಕ್ಕೆ ದಿನ ನಿಗದಿ ಮಾಡಿ
ಕೆಲವು ಕೆಲಸಗಳನ್ನು ಮಾಡದಿರಲು ಮರೆವು ನನ್ನ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಕೆಲವು ಕೆಲಸಗಳನ್ನು ಮಾಡಲು ನೀವು ದಿನಗಳನ್ನು ನಿಗದಿಪಡಿಸಿದಾಗ, ಅವುಗಳನ್ನು ಮಾಡಲು ನೆನಪಿಟ್ಟುಕೊಳ್ಳುವುದು ತುಂಬಾ ಸುಲಭ. ವಾರದಲ್ಲಿ ಒಂದು ದಿನ ಗ್ಯಾಸ್ ಸ್ಟವ್ ಸ್ವತ್ಛ ಮಾಡಲು ದಿನ ನಿಗದಿಪಡಿಸಿಕೊಳ್ಳಿ.
ಎಲ್ಲದಕ್ಕೂ ಒಂದು ಸ್ಥಳ
ನಿಮ್ಮ ಅಡುಗೆ ಮನೆಯಲ್ಲಿ ಎಲ್ಲದಕ್ಕೂ ಒಂದು ಸ್ಥಳವನ್ನು ಹೊಂದಿಸಿಕೊಳ್ಳಿ.
ನಿಮ್ಮ ಅಡುಗೆಮನೆಯಲ್ಲಿ ಅಲ್ಲಲ್ಲಿ ಚದುರಿಸುವ ವಸ್ತುಗಳನ್ನು ಒಂದೇ ಸ್ಥಳದಲ್ಲಿ ಒಂದೇ ರೀತಿಯ ವಸ್ತುಗಳನ್ನು ಇಡುವುದು ಉತ್ತಮ.
ಅಡುಗೆ ಮನೆ ಸ್ವಚ್ಛಗೊಳಿಸಿ
ನೀವು ಅಡುಗೆ ಮಾಡಲು ಪ್ರಾರಂಭಿಸಿದರೆ ಮತ್ತು ನಿಮ್ಮ ಅಡುಗೆಮನೆ ಈಗಾಗಲೇ ಸ್ವಚ್ಛತೆ ಇರದಿದ್ದರೆ, ವಿಪತ್ತು ಆಗಿದ್ದರೆ, ನೀವು ಖನ್ನತೆಗೆ ಒಳಗಾಗುತ್ತೀರಿ. ಇದಕ್ಕಾಗಿ ಮೊದಲು ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ನೀಟಾಗಿ ಇಟ್ಟ ಮೇಲೆ ಅಡುಗೆ ಮಾಡಲು ಶುರುವಿಡಿ. ಇದು ನಿಮಗೆ ಅಡುಗೆ ಮಾಡಲು ಹೆಚ್ಚು ಪ್ರೇರೇಪಿಸುತ್ತದೆ.
-ಪೂರ್ಣಿಮಾ ಪೆರ್ಣಂಕಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.