ಡೈನಿಂಗ್ ಹಾಲ್ ಅಲಂಕಾರಕ್ಕೆ ಟಿಪ್ಸ್
Team Udayavani, Jan 19, 2019, 7:35 AM IST
ಡೈನಿಂಗ್ ಹಾಲ್ ಎಲ್ಲ ಮನೆಗಳಲ್ಲೂ ಇಂದು ಸರ್ವ ಸಾಮಾನ್ಯ. ಮನೆ ದೊಡ್ಡದಿರಲಿ ಅಥವಾ ಸಣ್ಣದೇ ಇರಲಿ ಡೈನಿಂಗ್ ಹಾಲ್ ಅಂತೂ ಇದ್ದೇ ಇರುತ್ತದೆ. ಅತಿಥಿಗಳ ಸತ್ಕಾರವನ್ನು ವಿಶೇಷವಾಗಿಸುವುದರಲ್ಲಿಯೂ ಡೈನಿಂಗ್ ಹಾಲ್ ನ ಪಾತ್ರ ಮಹತ್ವದ್ದು.
ಒಂದು ಟೇಬಲ್ ಮತ್ತು ನಾಲ್ಕು ಕುರ್ಚಿಗಳಿರುವ ಒಂದು ಕೋಣೆಯನ್ನು ಡೈನಿಂಗ್ ಹಾಲ್ ಎಂದು ಕರೆಯುವ ಕಾಲ ಬದಲಾಗಿದೆ. ಹಾಲ್‌ನೊಂದಿಗೆ ಅಥವಾ ಕಿಚನ್ ನೊಂದಿಗೆ ಕೂಡಿಕೊಂಡಿ ರುವ ಡೈನಿಂಗ್ ಹಾಲ್‌ನ ಟೇಬಲ್, ಕುರ್ಚಿ, ಕರ್ಟನ್, ಪಾತ್ರೆ, ಸಿಂಕ್ ಎಲ್ಲವೂ ವೈಶಿಷ್ಟ್ಯದಿಂದ ಕೂಡಿದೆ. ಹೀಗಾಗಿ ಅಲ್ಲಿ ಅಲಂಕಾ ರಕ್ಕೆ ಹೆಚ್ಚಿನ ಪ್ರಾಮುಖ್ಯ ಸಿಗುತ್ತಿದೆ.
ನೆಲ ಹಾಸು ಇರಲಿ
ಡೈನಿಂಗ್ ಹಾಲ್‌ನಲ್ಲಿ ನೆಲ ಹಾಸುಗಳು ಬೇಕೋ ಬೇಡವೋ ಎಂಬುದು ಬಹು ದೊಡ್ಡ ಪ್ರಶ್ನೆಯಾಗಿದೆ. ನೆಲ ಹಾಸುಗಳನ್ನು ಬಳಸಿದರೆ ಕುರ್ಚಿಗಳನ್ನು ಸರಿಸಲು ಸಮಸ್ಯೆ, ಆಹಾರ ಚೆಲ್ಲಿದರೆ ಶುಚಿಗೊಳಿಸಲು ಸಮಸ್ಯೆ ಎಂದೆಲ್ಲ ಹೇಳುವವರಿದ್ದಾರೆ. ಆದರೆ ನೆಲ ಹಾಸುಗಳು ಊಟದ ಕೋಣೆಗೆ ಒಂದು ಗ್ರ್ಯಾಂಡ್ ಲುಕ್ ಕೊಡು ತ್ತದೆ. ವಿಶೇಷ ಸಂದರ್ಭದಲ್ಲಿ ಈ ನೆಲ ಹಾಸುಗಳನ್ನು ಬಳಸಬಹುದು. ಕುರ್ಚಿ, ಟೇಬಲ್ ಗಳನ್ನು ಎಳೆಯುವಾಗ ನೆಲದ ಮೇಲಾಗುವ ಹಾನಿಯನ್ನು ಇದು ತಪ್ಪಿಸುತ್ತದೆ. ನೆಲ ಹಾಸುಗಳನ್ನು ಖರೀದಿಸುವಾಗ ಎಚ್ಚರವಿರಲಿ ಆದಷ್ಟು ಮೃದು ಹಾಸುಗಳನ್ನು ಖರೀದಿಸಬೇಕು. ಟೇಬಲ್‌ಗಿಂತ ಹಾಸು ದೊಡ್ಡದಿರಲಿ.
ಕನ್ನಡಿ, ಸಿಂಕ್
ಡೈನಿಂಗ್ ಹಾಲ್‌ನಲ್ಲಿ ಒಂದು ಅಥವಾ ಎರಡು ಕನ್ನಡಿ ಇದ್ದರೆ ಉತ್ತಮ. ಸಿಂಕ್‌ನ ಬಳಿ ಹಾಗೂ ಖಾಲಿ ಇರುವ ಗೋಡೆಯಲ್ಲಿ ಡಿಸೈನರ್ ಕನ್ನಡಿಗಳನ್ನು ನೇತು ಹಾಕುವುದರಿಂದ ಹಾಲ್‌ನ ಅಂದ ಹೆಚ್ಚಾಗುವ ಜತೆಗೆ ಊಟ ಮಾಡುವಾಗ ಉಂಟಾದ ಆಹಾರದ ಕಲೆಗಳನ್ನು ನೋಡಲು ಸುಲಭವಾಗುತ್ತದೆ.
ಕೈ ತೊಳೆಯುವ ಸಿಂಕ್‌ನ ಬಳಿ ಡಿಸೈನರ್ ಹೂ ಅಥವಾ ಬೊಕ್ಕೆ ಗಳಿಂದ ಅಲಂಕರಿಸಬೇಕು. ಸಾಬೂನ್, ಹ್ಯಾಂಡ್‌ವಾಶ್, ಟಿಶ್ಯೂ ಪೇಪರ್, ಟವೆಲ್‌ಗಳನ್ನು ಜೋಡಿಸಿಡಲು ಸಿಂಕ್‌ನ ಬಳಿಯೇ ಗಾಜಿನ ಅಥವಾ ಮರದ ಸ್ಟಾಂಡ್ ಗಳನ್ನು ಜೋಡಿಸಬೇಕು. ವಸ್ತುಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗುವುದನ್ನು ತಪ್ಪಿಸಲು ಇದು ಸಹಕಾರಿ. ಸ್ಟಾಂಡ್ ಸ್ವಲ್ಪ ದೊಡ್ಡದಾಗಿದ್ದರೆ ಪಾತ್ರೆಗಳನ್ನು ಇದರಲ್ಲಿಡಬಹುದು.
ಫೋಟೋ ಗ್ಯಾಲರಿ
ಡೈನಿಂಗ್ ಹಾಲ್ ನಲ್ಲಿ ಗೋಡೆಗಳು ಖಾಲಿ ಇದ್ದರೆ ಚೆನ್ನಾಗಿರುವುದಿಲ್ಲ. ಅದಕ್ಕಾಗಿ ಖಾಲಿ ಇರುವ ಗೋಡೆಗಳಲ್ಲಿ ಯಾವುದಾದರೂ ಕಲಾಕೃತಿಗಳನ್ನು ಜೋಡಿಸಿ. ಇಲ್ಲವೇ ನಿಮ್ಮ ಜೀವನದ ಅತ್ಯತ್ತಮ ಕ್ಷಣಗಳು ಎಂದೆಣಿಸುವ ಫೋಟೋಗಳಿಗೆ ಫ್ರೆàಮ್ ಮಾಡಿಸಿ ಅಲ್ಲಿ ತೂಗು ಹಾಕಿ.
ಕರ್ಟನ್ ಆಯ್ಕೆಯಲ್ಲಿರಲಿ ಎಚ್ಚರ
ಡೈನಿಂಗ್ ಹಾಲ್‌ಗಳಿಗೆ ಕರ್ಟನ್ ಗಳನ್ನು ಆಯ್ಕೆ ಮಾಡುವಾಗ ಎಚ್ಚರವಿರಲಿ. ತೀರಾ ಸಿಂಪಲ್ ಆದ ಕರ್ಟನ್‌ಗಳು ಬೇಡ. ಬಣ್ಣ ಹಾಲ್‌ಗೆ ಹೊಂದಿಕೆಯಾಗುವಂತಿರಲಿ. ಊಟದ ಕೋಣೆಯಲ್ಲಿ ಬೆಳಕು ಚೆನ್ನಾಗಿರಬೇಕು.
ಬಲ್ಬ್, ಕ್ಯಾಂಡಲ್ ಗಳನ್ನು ಜೋಡಿಸಿ
ಟೇಬಲ್‌ನ ಮೇಲೆ ಅಂದವಾದ ಬಲ್ಬ್ಗಳನ್ನು ಅಥವಾ ಕ್ಯಾಂಡಲ್ ಸ್ಟಾಂಡ್ ಇಟ್ಟು ಕ್ಯಾಂಡ ಲ್ ಗಳನ್ನು ಜೋಡಿಸಿ. ಮನೆ ಸಿಂಪಲ್ ಆಗಿದ್ದರೆ ಸಿಂಪಲ್ಲಾಗಿ ಹೂವಿನಿಂದ ಅಲಂಕರಿಸಿ.
ಸುಶ್ಮಿತಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.